ಬಾಗಲಕೋಟೆ: ಚುನಾವಣಾ ಕರ್ತವ್ಯಕ್ಕೆಂದು ತೆರಳುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.
ಮೃತ ಪಟ್ಟವರು ಗೋವಿಂದಪ್ಪ ಎಂದು ಗುರುತಿಸಲಾಗಿದೆ. ಗೋವಿಂದಪ್ಪ ಮುಧೋಳ ಬಿದರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ನಾಳೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿರುವ ಜಮಖಂಡಿ ತಾಲೂಕಿನ ಮೈಗೂರು ಪ್ರಾಥಮಿಕ ಶಾಲೆ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಇದನ್ನು ಓದಿ : ಬಿರಿಯಾನಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚಿನ ಮಂದಿ ಆಸ್ಪತ್ರೆಗೆ ದಾಖಲು
ಅಂತೆಯೇ ಮತದಾನದ ಹಿಂದಿನ ದಿನವಾದ ಇಂದು ಸೋಮವಾರ ಚುನಾವಣಾ ಕರ್ತವ್ಯಕ್ಕೆಂದು ತೆರಳುತ್ತಿದ್ದ ವೇಳೆ ಬಸ್ ನಿಲ್ದಾಣದ ಗೇಟ್ ಬಳಿ ಅವರಿಗೆ ಹೃದಯಾಘಾತವಾಗಿದೆ. ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಇದನ್ನು ನೋಡಿ : ಜೀವನೋಪಾಯದ ಸಮಸ್ಯೆಗಳಿಗಿಂತ ರಾಮಮಂದಿರದಂತಹ ಭಾವನಾತ್ಮಕ ಸಮಸ್ಯೆಗೆ ಯಾಕಿಷ್ಟು ಪ್ರಾಮುಖ್ಯತೆ – ಎಂ.ಎ. ಬೇಬಿ