ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನಲ್ಲಿರುವ 81.5 ಕೋಟಿ ಭಾರತೀಯರ ಡೇಟಾ ಮಾರಾಟವಾಗಿವೆ ಎಂದು ನ್ಯೂಸ್18 ಸೋಮವಾರ ವರದಿ ಮಾಡಿದೆ. ಕೋವಿಡ್-19 ಟೆಸ್ಟ್‌ಗಾಗಿ ಭಾರತದಾದ್ಯಂತ ನೀಡಲಾಗಿರುವ ಡೇಟಾವನ್ನು ಸೋರಿಕೆ ಮಾಡಲಾಗಿದ್ದು, ದೇಶದಲ್ಲಿ ಇದುವರೆಗೆ ನಡೆದ ಅತಿ ದೊಡ್ಡ ಡೇಟಾ ಸೋರಿಕೆ ಪ್ರಕರಣ ಎಂದು ಶಂಕಿಸಲಾಗಿದೆ.
ಈ ಬೃಹತ್ ಡೇಟಾ ಸೋರಿಕೆಯಲ್ಲಿ ICMR ನಲ್ಲಿರುವ 81.5 ಕೋಟಿ ಭಾರತೀಯರ ಹೆಸರುಗಳು, ಆಧಾರ್, ಪಾಸ್‌ಪೋರ್ಟ್ ಮಾಹಿತಿ, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳು ಸೇರಿದಂತೆ COVID-19 ಪರೀಕ್ಷಾ ವಿವರಗಳನ್ನು ಡಾರ್ಕ್ ವೆಬ್‌ನಲ್ಲಿ ಜಾಹೀರಾತು ಮಾಡಲಾಗಿದೆ ಎಂದು ವರದಿಯು ಉಲ್ಲೇಖಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರ | ಮರಾಠ ಮೀಸಲಾತಿ ಹೋರಾಟ – ಆಡಳಿತರೂಢ ಪಕ್ಷದ ಶಾಸಕನ ಮನೆಗೆ ಬೆಂಕಿ ಹಚ್ಚಿ ದ್ವಂಸ
ಅಮೇರಿಕನ್ ಸೈಬರ್ ಸೆಕ್ಯುರಿಟಿ ಮತ್ತು ಗುಪ್ತಚರ ಸಂಸ್ಥೆ ರೆಸೆಕ್ಯುರಿಟಿ ಅಕ್ಟೋಬರ್ 9 ರಂದು ಸೋರಿಕೆಯನ್ನು ಗಮನಿಸಿದೆ ಎಂದು ವರದಿಯು ಉಲ್ಲೇಖಿಸಿದೆ.
ಬ್ರೀಚ್ ಫೋರಮ್ ಎಂಬ ಹ್ಯಾಕರ್ ವೆಬ್‌ಸೈಟ್‌ನಲ್ಲಿ ‘pwn0001’ ಎಂಬ ಹ್ಯಾಕರ್ ಖಾತೆಯು ಭಾರತೀಯರ ಆಧಾರ್ ಮತ್ತು ಪಾಸ್‌ಪೋರ್ಟ್ ದಾಖಲೆಗಳ ಹಲವು ಪೋಸ್ಟ್‌ಗಳನ್ನು ಮಾಡಿದೆ. ತನ್ನಲ್ಲಿ ಮಾಹಿತಿ ಎಂಬ ಪುರಾವೆಯಾಗಿ ಆಧಾರ್ ಡೇಟಾದ ತುಣುಕುಗಳೊಂದಿಗೆ ನಾಲ್ಕು ದೊಡ್ಡ ಸೋರಿಕೆ ಮಾದರಿಗಳನ್ನು ಹೊಂದಿರುವ ಸ್ಪ್ರೆಡ್‌ಶೀಟ್‌ಗಳನ್ನು ಖಾತೆಯು ಹಂಚಿಕೊಂಡಿದೆ.
“ಸೋರಿಕೆಯಾದ ಮಾದರಿಯೊಂದರಲ್ಲಿ ಭಾರತೀಯ ನಿವಾಸಿಗಳಿಗೆ ಸಂಬಂಧಿಸಿದ ‘ವೈಯಕ್ತಿಕ ಗುರುತಿಸಬಹುದಾದ ಮಾಹಿತಿ'(PII)ಯ 1 ಲಕ್ಷ ದಾಖಲೆಗಳನ್ನು ಒಳಗೊಂಡಿದೆ. ಈ ಮಾದರಿ ಸೋರಿಕೆಯಲ್ಲಿ ವಿಶ್ಲೇಷಕರು ಸರಿಯಾದ ಆಧಾರ್ ಕಾರ್ಡ್ ಐಡಿಗಳನ್ನು ಗುರುತಿಸಿದ್ದಾರೆ” ರೆಸೆಕ್ಯುರಿಟಿ ಹೇಳಿದೆ.
ಇದನ್ನೂ ಓದಿ: ಅಗ್ನಿ ದುರಂತಗಳ ಬಗ್ಗೆ ಅಗ್ನಿಶಾಮಕ ದಳ ಮುಂಜಾಗ್ರತಾ ಕ್ರಮ ವಹಿಸಬೇಕು| ಸಚಿವ ಕೃಷ್ಣ ಬೈರೇಗೌಡ
ಕೋವಿಡ್-19 ಪರೀಕ್ಷಾ ವಿವರಗಳಿಂದ ತೆಗೆದ ಡೇಟಾವನ್ನು ಐಸಿಎಂಆರ್‌ನಿಂದ ಪಡೆಯಲಾಗಿದೆ ಎಂದು Pwn0001 ಹೇಳಿಕೊಂಡಿದೆ.
ಪರೀಕ್ಷಾ ಮಾಹಿತಿಯ ಭಾಗಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ, ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯಕ್ಕೆ ಕಳುಹಿಸಲಾಗಿರುವುದರಿಂದ ಈ ಮಾಹಿತಿ ಎಲ್ಲಿ ಸೋರಿಕೆಯಾಗಿದೆ ಎಂಬುವುದು ಗುರುತಿಸಲಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ICMR ನ ಮಹಾನಿರ್ದೇಶಕರನ್ನು ಸಂಪರ್ಕಿಸಲಾಗಿತ್ತಾದರೂ, ಯಾವುದೆ ಪ್ರತಿಕ್ರಿಯೆ ಬಂದಿಲ್ಲ ಎಂದು News18 ಹೇಳಿದೆ.
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ(CERT-In) ಐಸಿಎಂಆರ್‌ಗೆ ಮಾಹಿತಿ ಸೋರಿಕೆ ಮತ್ತು ಮಾದರಿ ಡೇಟಾದ ಪರಿಶೀಲನೆಯ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ ಸೋರಿಕೆಯಾದ ಡೇಟಾವು ICMR ನ ನೈಜ ಡೇಟಾದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಮೂಲಗಳು ಹೇಳಿವೆ ಎಂದು ನ್ಯೂಸ್18 ವರದಿಗಳು ಹೇಳಿವೆ. ಸೋರಿಕೆಯ ನಂತರ ಸರ್ಕಾರವು ವಿವಿಧ ಏಜೆನ್ಸಿಗಳು ಮತ್ತು ಸಚಿವಾಲಯಗಳ ಉನ್ನತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಕರ್ನಾಟಕದ ಮೇಲೆ ಪ್ರೀತಿ ಏಕಿಲ್ಲ| ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಸೋರಿಕೆಯಲ್ಲಿ ವಿದೇಶಿ ಹ್ಯಾಕರ್‌ಗಳು ಭಾಗಿಯಾಗಿರುವುದರಿಂದ, ಅದನ್ನು ದೇಶದ ಪ್ರಮುಖ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದ್ದು, ಐಸಿಎಂಆರ್ ದೂರು ದಾಖಲಿಸಿದ ನಂತರ ಸಿಬಿಐ ತನಿಖೆ ನಡೆಸಲಿದೆ ಎಂದು ಮೂಲವು ತಿಳಿಸಿದೆ. ಪ್ರಸ್ತುತ, ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಹಾನಿಯನ್ನು ನಿಯಂತ್ರಿಸಲು ಅಗತ್ಯವಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ಫೆಬ್ರವರಿಯಿಂದ ಐಸಿಎಂಆರ್ ಡೇಟಾವನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳು ಹಲವು ಬಾರಿ ಪ್ರಯತ್ನಿಸಿದ್ದಾರೆ. ಕೇಂದ್ರೀಯ ಸಂಸ್ಥೆಗಳು ಮತ್ತು ಪರಿಷತ್ತಿಗೆ ಇದು ತಿಳಿದಿದೆ. ಕಳೆದ ವರ್ಷ, ICMR ಸರ್ವರ್‌ಗಳನ್ನು ಹ್ಯಾಕ್ ಮಾಡಲು 6,000 ಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಲಾಗಿದೆ. ಡೇಟಾ ಸೋರಿಕೆಯನ್ನು ತಪ್ಪಿಸಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಏಜೆನ್ಸಿಗಳು ಐಸಿಎಂಆರ್ ಅನ್ನು ಕೇಳಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ದೇಶದ ಆರೋಗ್ಯ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನಡೆದ ಸೈಬರ್ ದಾಳಿಯು ವಿವಿಧ AIIMS ಸೇವೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಿತು. ಡೇಟಾ ಸೋರಿಕೆ
ವಿಡಿಯೊ ನೋಡಿ: ಕಾರ್ನಾಡ್ ನೆನಪು : ಜನಪರ ಗಾಯಕ ಜನ್ನಿಯವರಿಂದ ರಂಗಗೀತೆಗಳು.