ಚುನಾವಣಾ ಪ್ರಜಾಪ್ರಭುತ್ವದ ಭವಿಷ್ಯದ ಮೇಲೆ ಕರಾಳ ಮೋಡಗಳು

ವಿಶೇಷ ತೀವ್ರ ಪರಿಷ್ಕರಣೆಯು (SIR) ಸಂಬಂಧಿತ ಶಾಸನಬದ್ಧ ನಿಬಂಧನೆಗಳು ಅಥವಾ ನಿಯಮಗಳಲ್ಲಿ ಆಧಾರವನ್ನು ಹೊಂದಿಲ್ಲ. ಇದು ರಾಷ್ಟ್ರೀಯ ಪೌರತ್ವ ರಿಜಿಸ್ಟರ್ (NRC) ನ ಅಜೆಂಡಾವನ್ನು ಹಿಂಬಾಗಿಲಿನಿಂದ ಮತ್ತೆ ತರುವ ಪ್ರಯತ್ನದಂತೆ ಕಾಣುತ್ತದೆ. ಇದರ ಪರಿಣಾಮವಾಗಿ ಬಹಳ ದೊಡ್ಡ ಸಂಖ್ಯೆಯ ಜನರನ್ನು, ವಿಶೇಷವಾಗಿ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಅಂಚಿನಲ್ಲಿರುವವರನ್ನು ಮತ್ತು ಡಿಜಿಟಲ್ ಶಕ್ತಿಯಿಂದ ವಂಚಿತರಾಗಿ ಇರುವವರನ್ನು ಮತದಾನದ ಹಕ್ಕುಗಳಿಂದ ವಂಚಿತಗೊಳಿಸುವ ನಿಜವಾದ ಅಪಾಯವಿದೆ. ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ SIR ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು ಎಂದು ECI ಸೂಚಿಸಿರುವುದರಿಂದ, ಈ ಪ್ರಶ್ನೆಗಳನ್ನು ತರ್ಕಬದ್ಧ ಮತ್ತು ತಾರ್ಕಿಕ ರೀತಿಯಲ್ಲಿ ಇತ್ಯರ್ಥಪಡಿಸಬೇಕು – ಇಲ್ಲದಿದ್ದರೆ ಚುನಾವಣಾ ಪ್ರಜಾಪ್ರಭುತ್ವದ ಭವಿಷ್ಯವೇ ಅಪಾಯದಲ್ಲಿರಬಹುದು. 

“ಬಿಹಾರ ಪಟ್ಟಿಯಲ್ಲಿ ವಿದೇಶಿಯರ ಪತ್ತೆಯಾಗಿದೆ ಎಂದ ಚುನಾವಣಾ ಆಯೋಗ; ಇಂಡಿಯಾ ಕೂಟ ಇದನ್ನು ಪ್ರಶ್ನಿಸಿದೆ” ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಯೊಂದರ ಮುಖಪುಟದಲ್ಲಿನ ಪ್ರಧಾನ ಶೀರ್ಷಿಕೆ ಇದು. ಇದು ಖಂಡಿತ ನಂಬುವಂತದ್ದಲ್ಲ ಎಂದು ತೋರುತ್ತದೆ.

ಜೂನ್ 24 ರ ಪತ್ರಿಕಾ ಪ್ರಕಟಣೆಯಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಪ್ರಕಟಿಸಿರುವ ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision – SIR) ಸಂಪೂರ್ಣ ವೇಳಾಪಟ್ಟಿಯನ್ನು ನಾವು ಹಿಂದಿನ ಸಂಪಾದಕೀಯದಲ್ಲಿ ವಿವರಿಸಿದ್ದೇವೆ. ನಮ್ಮ ಓದುಗರ ಅನುಕೂಲಕ್ಕಾಗಿ, ನಾವು ಪ್ರಕ್ರಿಯೆಯನ್ನು ನೆನಪಿಸಿಕೊಳ್ಳೋಣ: “ಬಿಎಲ್‌ಒಗಳು (ಬೂತ್ ಲೆವೆಲ್ ಆಫೀಸರ್‌ಗಳು) ಪ್ರತಿಯಾಗಿ, ಫಾರ್ಮ್‌ಗಳನ್ನು ಮನೆ ಮನೆಗೆ ವಿತರಿಸಬೇಕು, ಭರ್ತಿ ಮಾಡಿದ ಫಾರ್ಮ್‌ಗಳನ್ನು ಸಂಗ್ರಹಿಸಬೇಕು ಮತ್ತು ಅವುಗಳನ್ನು ಪರಿಶೀಲಿಸಬೇಕು. ಇದಲ್ಲದೆ, ಉನ್ನತ ಅಧಿಕಾರಿಗಳು ಮತಗಟ್ಟೆಗಳ ಪ್ರಸ್ತಾವಿತ ತರ್ಕಬದ್ಧಗೊಳಿಸುವಿಕೆ, ಮರುಜೋಡಣೆಯನ್ನು ಮತ್ತು ಪರಿಷ್ಕರಣೆಯನ್ನು ಕೈಗೊಳ್ಳಬೇಕು, ಅಂತಿಮಗೊಳಿಸಬೇಕು, ಮತಗಟ್ಟೆಗಳ ಪಟ್ಟಿಗೆ ಅನುಮೋದನೆ ಪಡೆಯಬೇಕು ಮತ್ತು ಆಗಸ್ಟ್ 1, 2025 ರೊಳಗೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು, ನಂತರ ಸೆಪ್ಟೆಂಬರ್ 30, 2025 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು.”

ಇದನ್ನೂ ಓದಿ: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ನ್ಯಾಯ ಒದಗಿಸಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮನವಿ

ಹಾಗಿದ್ದಲ್ಲಿ, ಬಿಹಾರದ ಪಟ್ಟಿಯಲ್ಲಿ ವಿದೇಶಿಗರು ಕಂಡುಬಂದಿದ್ದಾರೆ ಎಂದು ಚುನಾವಣಾ ಆಯೋಗ (ಇಸಿ) ಹೇಗೆ ಹೇಳಲು ಸಾಧ್ಯ? ಸೆಪ್ಟೆಂಬರ್ 30 ರ ಮೊದಲು ಚುನಾವಣಾ ಆಯೋಗದಿಂದ ಯಾವುದೇ ಔಪಚಾರಿಕ ಹೇಳಿಕೆ ಬರಲು ಸಾಧ್ಯವಿಲ್ಲದ ಕಾರಣ, ಆಯೋಗದ ಅಧಿಕಾರಿಗಳ ಒಂದು ವಿಭಾಗವು ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪೂರ್ವಾಗ್ರಹ ಮೂಡಿಸಲು ಈ ತಪ್ಪು ಮಾಹಿತಿಯನ್ನು ಹರಡುತ್ತಿದೆ. ಮತ್ತು ಜುಲೈ 28 ಮುಂದಿನ ವಿಚಾರಣೆಯ ದಿನಾಂಕದ ಸಾಕಷ್ಟು
ಮೊದಲು ಈ ಪ್ರಯತ್ನ ಉದ್ದೇಶಪೂರ್ವಕವಾಗಿ ನಡೆಯುತ್ತಿದೆ, ಎಂದು ಅರ್ಥೈಸಬಹುದು ಸೋರಿಕೆ ಅಧಿಕೃತವಾಗಿರಲಿ ಅಥವಾ ರಹಸ್ಯವಾಗಿರಲಿ, ಆಯೋಗವು ಅಧಿಕೃತ ನಿರಾಕರಣೆ ನೀಡದಿದ್ದರೆ, ಇದರ ಹೊಣೆಗಾರಿಕೆ ಆಯೋಗದ ಮೇಲಿರುತ್ತದೆ.

ಪೌರತ್ವದ ಜವಾಬ್ದಾರಿ, ಚುನಾವಣಾ ಆಯೋಗದ್ದಲ್ಲ, ಗೃಹ ಸಚಿವಾಲಯದ್ದು

ಔಚಿತ್ಯದ ಪ್ರಶ್ನೆಯು ಇನ್ನಷ್ಟು ತುರ್ತು ಆಗುತ್ತದೆ. ಏಕೆಂದರೆ, ಸುಪ್ರೀಂ ಕೋರ್ಟ್ ಪೀಠವು ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯನ್ನು ನಿಲ್ಲಿಸುವ ಯಾವುದೇ ನಿರ್ದಿಷ್ಟ ಆದೇಶವನ್ನು ನೀಡಿಲ್ಲವಾದ್ದರಿಂದ (ಅರ್ಜಿದಾರರು ಅಂತಹ ಪರಿಹಾರವನ್ನು ಕೇಳಲಿಲ್ಲ), ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಚುನಾವಣಾ ಆಯೋಗದಿಂದ ಇನ್ನೂ ಸ್ಪಷ್ಟವಾದ ಉತ್ತರಗಳ ಅಗತ್ಯವಿದೆ.

ಮೊದಲ ಪ್ರಶ್ನೆ: ಮತದಾರನ ಪೌರತ್ವ ಸ್ಥಿತಿಯನ್ನು ನಿರ್ಧರಿಸುವ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆಯೇ? ಈ ವಿಷಯದ ಬಗ್ಗೆ, ಒಬ್ಬ ವ್ಯಕ್ತಿಯು ಪೌರತ್ವವನ್ನು ನಿರ್ಧರಿಸುವುದು ಗೃಹ ಸಚಿವಾಲಯದ (MHA) ಅಧಿಕಾರ ಎಂದು ಪೀಠವು ಗಮನಿಸಿತು. ಆಧಾರ್ ಅನ್ನು ಮಾನ್ಯವಾದ ದಾಖಲೆಯಿಂದ ಹೊರಗಿಡುವ ನಿರ್ಧಾರವನ್ನು ಚುನಾವಣಾ ಆಯೋಗ ಸಮರ್ಥಿಸಿಕೊಂಡಾಗ ಪೀಠವು ಹೀಗೆ ಹೇಳಿದೆ “…ಪೌರತ್ವವು ಭಾರತದ ಚುನಾವಣಾ ಆಯೋಗದಿಂದಲ್ಲ, ಬದಲಾಗಿ ಗೃಹ ಸಚಿವಾಲಯದಿಂದ ನಿರ್ಧರಿಸಲ್ಪಡುವ ವಿಷಯವಾಗಿದೆ. ”

“ತಕ್ಷಣ ಕೇಳಿದರೆ, ನಾನು ಸಹ ಈಗ ಅವುಗಳನ್ನು ತೋರಿಸಲು ಸಾಧ್ಯವಾಗುವುದಿಲ್ಲ”

ಎರಡನೇ ಪ್ರಶ್ನೆ: ಈ ಸಮಯ ಏಕೆ? ಮತದಾರರ ಪಟ್ಟಿಯಲ್ಲಿ ಪೌರತ್ವ ಹೊಂದಿದವರು ಮಾತ್ರ ಉಳಿಯುವಂತೆ ಚುನಾವಣಾ ಆಯೋಗವು ಖಚಿತಪಡಿಸಿಕೊಳ್ಳಲು ಬಯಸಿದರೆ, ಇದು “ಪ್ರಕ್ರಿಯೆಯನ್ನು ಬಹಳ ಮುಂಚೆಯೇ ಪ್ರಾರಂಭಿಸಬೇಕಿತ್ತು.” ಎಂಬುದನ್ನು ಪೀಠವು ಗಮನಿಸಿದೆ. ನ್ಯಾಯಾಲಯವು ಮೂಲಭೂತವಾಗಿ ಈ ಕ್ರಮದ ಸಮಯವನ್ನು ಪ್ರಶ್ನಿಸಿತು ಮತ್ತು ಈ ಪ್ರಕ್ರಿಯೆಯನ್ನು ಬಿಹಾರ ಚುನಾವಣೆಯಿಂದ ಬೇರ್ಪಡಿಸಬಹುದೇ ಎಂದು ಕೇಳಿತು.

ನ್ಯಾಯಮೂರ್ತಿ ಧುಲಿಯಾ ಅವರು ಪ್ರಾಯೋಗಿಕ ಪರಿಣಾಮಗಳನ್ನು ಒತ್ತಿಹೇಳಿದರು: “2025 ರಲ್ಲಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ವ್ಯಕ್ತಿಯನ್ನು ಅಮಾನ್ಯಗೊಳಿಸುವ ನಿಮ್ಮ ನಿರ್ಧಾರವು, ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮತ್ತು ಸಂಪೂರ್ಣ ವ್ಯರ್ಥ ಪ್ರಲಾಪದ ಮೂಲಕ ಹೋಗಲು ಆ ವ್ಯಕ್ತಿಯನ್ನು ಒತ್ತಾಯಿಸುತ್ತದೆ ಮತ್ತು ಆ ಮೂಲಕ ಮುಂದಿನ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ನಿರಾಕರಿಸಲಾಗುತ್ತದೆ. ಪೌರತ್ವವಿಲ್ಲದವರು ಪಟ್ಟಿಯಲ್ಲಿ ಉಳಿಯದಂತೆ ನೋಡಿಕೊಳ್ಳಲು ತೀವ್ರವಾದ ಕಾರ್ಯಾಚರಣೆಗಳ ಮೂಲಕ ನೀವು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪ್ರಸ್ತಾವಿತ ಚುನಾವಣೆಗೆ ಕೇವಲ ಒಂದೆರಡು ತಿಂಗಳ ಮೊದಲು ನೀವು ನಿರ್ಧರಿಸಿದರೆ…”.

”NRC ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಹೋಲುವ ಅವಶ್ಯಕತೆಗಳಾದ ಚುನಾವಣಾ ಆಯೋಗವು ಒತ್ತಾಯಿಸಿದ ದಾಖಲೆಗಳ ವಿಸ್ತಾರವಾದ ಸೆಟ್ ಅನ್ನು ಉಲ್ಲೇಖಿಸುತ್ತಾ ಅವರು, ಮೊನಚಾದ, ವಾಸ್ತವಿಕ ಎಚ್ಚರಿಕೆಯನ್ನು ಸೇರಿಸಿದರು: “ನೀವು ಈ ದಾಖಲೆಗಳನ್ನು ತಕ್ಷಣ ಕೇಳಿದರೆ, ನಾನು ಸಹ ಈಗ ಅವುಗಳನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಪ್ರಾಯೋಗಿಕವಾಗಿ ನೋಡಿ; ವೇಳಾಪಟ್ಟಿಯನ್ನು ನೋಡಿ.

ಮೌಖಿಕ ವಿಚಾರಣೆಗೆ ಕರೆ ನೀಡುವ ಪ್ರಕ್ರಿಯೆ ಯಾಕಿಲ್ಲ?

ಕೊನೆಯದಾಗಿ, ಮೂರನೇ ಪ್ರಶ್ನೆ: ಚುನಾವಣಾ ಆಯೋಗ ಯಾವ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ? ಮತದಾರರು ಮತದಾನದಿಂದ ವಂಚಿತರಾಗುವ ಪ್ರಕರಣಗಳಲ್ಲಿ ಅನುಸರಿಸುವ ಪ್ರಕ್ರಿಯೆಯನ್ನು ಸ್ಪಷ್ಟಪಡಿಸುವಂತೆ ನ್ಯಾಯಾಧೀಶರು ಚುನಾವಣಾ ಆಯೋಗವನ್ನು (EC) ಕೇಳಿದರು.

ನ್ಯಾಯಮೂರ್ತಿ ಧುಲಿಯಾ ಅವರು ತೀಕ್ಷ್ಣವಾದ ಪ್ರಶ್ನೆಯನ್ನು ಮುಂದಿಟ್ಟರು: “ಜನ ಪ್ರಾತಿನಿಧ್ಯ ಕಾಯಿದೆಯ ಅಡಿಯಲ್ಲಿ ಒಂದು ‘ಸಾರಾಂಶ ಪರಿಷ್ಕರಣೆ’ಯು, ಮತದಾರರ ಪಟ್ಟಿಯಿಂದ ಮತದಾರರನ್ನು ಅಳಿಸುವ ಮೊದಲು ಮೌಖಿಕ ವಿಚಾರಣೆಗೆ ಕರೆ ನೀಡಿದರೆ, ‘ತೀವ್ರ’ ಪರಿಷ್ಕರಣೆಯು ಆ ಪ್ರಕ್ರಿಯೆಯನ್ನು ಹೊಂದಿರುವುದಿಲ್ಲ ಎಂದು ಹೇಳಬಹುದೇ?”

ಆಧಾರ್, ಪಡಿತರ ಚೀಟಿಯನ್ನು ಮಾನ್ಯ ದಾಖಲೆಗಳಾಗಿ ಏಕೆ ಸ್ವೀಕರಿಸಲಾಗುವುದಿಲ್ಲ?

ಆರ್‌ಪಿಎ ನಿಯಮಗಳ (ಜನತಾ ಪ್ರಾತಿನಿಧ್ಯ ಕಾಯ್ದೆ) ಅಡಿಯಲ್ಲಿ, ದೃಢಪಡಿಸಿದ ಸಾವಿನ ಪ್ರಕರಣಗಳನ್ನು ಹೊರತುಪಡಿಸಿ, ಪ್ರಸ್ತಾವಿತ ಮತದಾರರ ಅಳಿಸುವಿಕೆಯ ಎಲ್ಲಾ ಪ್ರಕರಣಗಳಲ್ಲಿ, ಮತದಾರರಿಗೆ ನೋಟಿಸ್ ನೀಡಬೇಕು, ಇದು ಅವರ ಅಭಿಪ್ರಾಯವನ್ನು ಕೇಳಲು ಸಮಂಜಸವಾದ ಅವಕಾಶವನ್ನು ನೀಡುತ್ತದೆ. ಈ ಪ್ರಶ್ನಾವಳಿಯ ಭಾಗವಾಗಿ, ಪೀಠವು ಕೆಲವು ದಾಖಲೆಗಳ ಸ್ವೀಕಾರಾರ್ಹತೆಯನ್ನು ಸಹ ಎತ್ತಿತು.

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಆಧಾರ್, ಚುನಾವಣಾ ಫೋಟೋ ಗುರುತಿನ ಚೀಟಿ (EPIC) ಮತ್ತು ಪಡಿತರ ಚೀಟಿಯನ್ನು ಮಾನ್ಯ ದಾಖಲೆಗಳಾಗಿ ಏಕೆ ಸ್ವೀಕರಿಸಲಾಗುವುದಿಲ್ಲ ಎಂಬುದನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಚುನಾವಣಾ ಆಯೋಗವನ್ನು ಕೇಳಿದೆ. ಇದು ಈಗಾಗಲೇ ತಳಮಟ್ಟದಲ್ಲಿ ವ್ಯಾಪಕವಾದ ಆತಂಕ ಮತ್ತು ಗೊಂದಲವನ್ನು ಉಂಟುಮಾಡಿರುವ ಕಿರಿದಾದ 11 ದಾಖಲುಗಳ ಪಟ್ಟಿಯನ್ನು ಸಂಭಾವ್ಯವಾಗಿ ವಿಸ್ತರಿಸುತ್ತದೆ.

NRC ಅಜೆಂಡಾವನ್ನು ಹಿಂಬಾಗಿಲಿನಿಂದ ಮತ್ತೆ ತರುವ ಪ್ರಯತ್ನ

ಇವು ಜನರನ್ನು ಕಾಡುತ್ತಿರುವ ನಿಖರ ಪ್ರಶ್ನೆಗಳಾಗಿವೆ. ಎಲ್ಲ ಪಕ್ಷಗಳಿಗೆ ಸಮಾತಟ್ಟಾದ ಮೈದಾನ ಖಚಿತಪಡಿಸುವ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲವನ್ನೂ ಮಾಡಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ ಎಂಬುದರ ಬಗ್ಗೆ ಯಾರಿಗೂ ಆಕ್ಷೇಪವಿಲ್ಲ. ಆದರೆ ಜೂನ್ 24 ರ ಆದೇಶ ಮತ್ತು ಆಯೋಗವು ನಿಗದಿಪಡಿಸಿದ ವಿಧಾನ ಮತ್ತು ವೇಳಾಪಟ್ಟಿ – ಇವೆಲ್ಲವೂ ಹಿಂದೆ ಅನುಸರಿಸಿದ ಕ್ರಮಗಳಿಂದ ಅಭೂತಪೂರ್ವ ಚ್ಯುತಿಗಳಾಗಿವೆ.

ವಿಶೇಷ ತೀವ್ರ ಪರಿಷ್ಕರಣೆಯು (Special Intensive Revision – SIR) ಸಂಬಂಧಿತ ಶಾಸನಬದ್ಧ ನಿಬಂಧನೆಗಳು ಅಥವಾ ನಿಯಮಗಳಲ್ಲಿ ಆಧಾರವನ್ನು ಹೊಂದಿಲ್ಲ. ಇದು ರಾಷ್ಟ್ರೀಯ ಪೌರತ್ವ ರಿಜಿಸ್ಟರ್ (NRC) ನ ಅಜೆಂಡಾವನ್ನು ಹಿಂಬಾಗಿಲಿನಿಂದ ಮತ್ತೆ ತರುವ ಪ್ರಯತ್ನದಂತೆ ಕಾಣುತ್ತದೆ. ಇದರ ಪರಿಣಾಮವಾಗಿ ಬಹಳ ದೊಡ್ಡ ಸಂಖ್ಯೆಯ ಜನರನ್ನು, ವಿಶೇಷವಾಗಿ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಅಂಚಿನಲ್ಲಿರುವವರನ್ನು ಮತ್ತು ಡಿಜಿಟಲ್ ಶಕ್ತಿಯಿಂದ ವಂಚಿತರಾಗಿರುವವರನ್ನು ಮತದಾನದ ಹಕ್ಕುಗಳಿಂದ ವಂಚಿತಗೊಳಿಸುವ ನಿಜವಾದ ಅಪಾಯವಿದೆ.

ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ SIR ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು ಎಂದು ECI ಸೂಚಿಸಿರುವುದರಿಂದ, ಈ ಪ್ರಶ್ನೆಗಳನ್ನು ತರ್ಕಬದ್ಧ ಮತ್ತು ತಾರ್ಕಿಕ ರೀತಿಯಲ್ಲಿ ಇತ್ಯರ್ಥಪಡಿಸಬೇಕು – ಇಲ್ಲದಿದ್ದರೆ ಚುನಾವಣಾ ಪ್ರಜಾಪ್ರಭುತ್ವದ ಭವಿಷ್ಯವೇ ಅಪಾಯದಲ್ಲಿರಬಹುದು.

ಇದನ್ನೂ ನೋಡಿ: ಜೀವನಾಂಶ ಅಂದರೇನು? ಅದನ್ನು ಪಡೆಯುವುದು ಹೇಗೆ?Janashakthi Media

Donate Janashakthi Media

Leave a Reply

Your email address will not be published. Required fields are marked *