ಆಗಸ್ಟ್ 30, 1659 ರಲ್ಲಿ, ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಮಗ ದಾರಾ ಶಿಕೋನನ್ನು ಅವನ ತಮ್ಮ ಔರಂಗಜೇಬನು ಹತ್ಯೆ ಮಾಡಿದ ದಿನ. ಮೊಘಲ್ ಚಕ್ರವರ್ತಿ ಷಹಜಹಾನ್ಗೆ ದಾರಾ ಶಿಕೋಹ್, ಶಾ ಶೂಜ, ಮುರಾದ್ ಮತ್ತು ಔರಂಗಜೇಬ್ ನಾಲ್ಕು ಗಂಡು ಮಕ್ಕಳಿದ್ದು, ಅವರಲ್ಲಿ ದಾರಾ ಶಿಕೋಹ್ ಅವರ ದೊಡ್ಡ ಮಗ ಹಾಗೂ ಷಹಜಹಾನ್ ನ ನೆಚ್ಚಿನ ಮಗನಾಗಿದ್ದನು. ಶಹಜಹಾನ್ ಗೆ ದಾರಾ ಶಿಕೋಹ್ ಮೇಲಿಟಿದ್ದ ಈ ಒಲವು, ಉಳಿದ ಸಹೋದರರಲ್ಲಿ ದಾರಾ ಮೇಲೆ ದ್ವೇಷವನ್ನು ಹುಟ್ಟುಸಿತ್ತು.
ಮೊಘಲ್ ಸಿಂಹಾಸನದ ಉತ್ತರಾಧಿಕಾರವು, ಕಾನೂನು ಪದ್ಧತಿಯ ಮೂಲಕ ಸಿಂಹಾಸನ ಪಡೆಯುವುದಾಗಲಿ ಅಥವಾ ಕುಟುಂಬದ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವಂತಹ ಯಾವುದೇ ಕಾನೂನುಗಳನ್ನು ಆಧರಿಸಿರಲಿಲ್ಲ, ಆದರೆ ಸೈನ್ಯದ ಯಶಸ್ಸಿಗೆ ಶಹಜಾನ್ ನ ಮಕ್ಕಳು ಸ್ಪರ್ಧಿಸುವಂತ ಅಗತ್ಯವಿತ್ತು. ಷಹಜಹಾನ್ನ ಎಲ್ಲಾ ನಾಲ್ವರು ಪುತ್ರರು ತಮ್ಮ ತಂದೆಯ ಆಳ್ವಿಕೆಯಲ್ಲಿ ದೇಶದ ವಿವಿಧ ಭಾಗಗಳ ರಾಜ್ಯಪಾಲರಾಗಿದ್ದು, ಸ್ಪರ್ಧೆಯು ತೀವ್ರವಾಗಿತ್ತು.
ನಾಲ್ಕು ಪುತ್ರರು ತಮ್ಮದೇ ಆದ ರೀತಿಯಲ್ಲಿ ಸಮರ್ಥರಾಗಿದ್ದರೂ ಸಹ, ದಾರಾ ಶಿಕೋ ಮತ್ತು ಔರಂಗಜೇಬ್ ಹೆಚ್ಚು ಪ್ರಭಾವಶಾಲಿಗಳಾಗಿದ್ದು, ವಿಶೇಷವಾಗಿ ದಾರಾ ಶಿಕೋ ಮತ್ತು ಅವನ ಸಹೋದರ ಔರಂಗಜೇಬ್ ನಡುವೆ ಸ್ಪರ್ದೆ ಜೋರಿತ್ತು.ಸರ್ವಧರ್ಮಸಮತ್ವಯಿ ಆಗಿದ್ದ ದಾರಾ ಶಿಕೋ ಬೌದ್ಧಿಕ ಮತ್ತು ಧರ್ಮದ ವಿಷಯಗಳಲ್ಲಿ ಉದಾರವಾದಿಯಾಗಿದ್ದನು. ಇದಕ್ಕೆ ತದ್ವಿರುದ್ದವಾಗಿ ಧರ್ಮದ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬುದು ಔರಂಗಜೇಬ್ ನ ವಾದವಾಗಿತ್ತು.
ದಾರಾ ಶಿಕೋನನ್ನು ತನ್ನ ಉತ್ತರಧಿಕಾರಿಯಾಗಿ ಶಹಜಹಾನ್ ಘೋಶಿಸುತ್ತಾನೆ. ಔರಂಗಜೇಬ್ ಸೇರಿದಂತೆ ಇನ್ನಿಬ್ಬರು ಸಹೋದರರಿಗೆ ಇದನ್ನು ಸಹಿಸಲಾಗದಿದ್ದು, ಇದೇ ಸಮಯದಲ್ಲಿ ಶಹಜಹಾನ್ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಇದೆ ಸಮಯಕ್ಕೆ ಕಾಯುತ್ತಿದ್ದ ಮೂವರು ಸಹೋದರರು ಶಹಜಹಾನ್ ಸತ್ತಿದ್ದಾನೆಂದು ಪುಕಾರು ಅಬ್ಬಿಸಿ ತಮ್ಮ ಸ್ವಂತಕ್ಕೆ ರಾಜ್ಯಬಾರ ಮಾಡಲು ಶುರು ಮಾಡುತ್ತಾರೆ. ಬಂಗಾಳದ ಪಾಲನೆ ಮಾಡುತ್ತಿದ್ದ ಶಾ ಶುಜಾ, ಮುರಾದ್ ಗುಜರಾತ್ನಿಂದ ಮತ್ತು ಔರಂಗಜೇಬ್ ಡೆಕ್ಕನ್ನಿಂದ, ಅಲ್ಲಿಂದಲೇ ಸಿಂಹಾಸನಕ್ಕೆ ಸ್ಪರ್ಧಿಸಲು ಪ್ರಾರಂಭಿಸಿದರು.
ಈ ವೇಳೆಗೆ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಶಹಜಹಾನ್ ಆಗ್ರಾಗೆ ತೆರಳುತ್ತಾನೆ, ದಾರಾ ಶಿಕೋ ಗೆ ಷಾ ಶುಜಾ ಮತ್ತು ಮುರಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾನೆ. ಈ ಮಧ್ಯೆ ಮೂರು ಸಹೋದರರು ತಮ್ಮ ಸ್ವಂತ ಪ್ರಾಂತ್ಯಗಳಲ್ಲಿ ತಮ್ಮನ್ನು ತಾವೇ ರಜರೆಂದು ಘೋಷಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಯುದ್ದ ಶುರುವಾಗಿ, ಫೆಬ್ರವರಿ 1658 ರಲ್ಲಿ, ದಾರಾ ಶಿಕೋಹ್ ನಿಂದ ಷಾ ಶುಜಾ ಬನಾರಸ್ನಲ್ಲಿ ಸೋಲಿಗೀಡಾಗುತಾನೆ, ಆದರೆ ಮುರಾದ್ ಅನ್ನು ಎದುರಿಸಲು ಕಳುಹಿಸಲಾಗಿದ್ದ ಸೈನ್ಯವು ಔರಂಗಜೇಬ್ ಮತ್ತು ಮುರಾದ್ ಪಡೆಗಳನ್ನು ಸೇರಿಕೊಂಡು ಮೋಸ ಮಾಡಿದ ಕಾರಣದಿಂದ ದಾರಾ ಶಕೋಹ್ ಸೋಲು ಅನುಭವಿಸುತ್ತಾನೆ.
ಆಗ್ರಾದ ಮೇಲೆ ಹಿಡಿತ ಸಾಧಿಸಿದ ನಂತರ, ಔರಂಗಜೇಬನು ಮುರಾದ್ ಬಕ್ಷ್ ಗೆ ಸಹ ಮೋಸ ಮಾಡಿ ಅವನನ್ನು ಗ್ವಾಲಿಯರ್ ಕೋಟೆಯಲ್ಲಿ ಬಂಧಿಸುತ್ತಾನೆ. 1661 ರ ಡಿಸೆಂಬರ್ 4 ರಂದು ಮುರಾದ್ ನನ್ನು ಮೋಸಗೋಳಿಸಿ, ಅವನನ್ನು ಗಲ್ಲಿಗೇರಿಸುತ್ತಾನೆ. ಈ ಮಧ್ಯೆ ದಾರಾ ಶಿಕೋ ತನ್ನ ಸೇನೆಯನ್ನು ತೆಗೆದುಕೊಂಡು ಪಂಜಾಬಿಗೆ ಓಡಿ ಹೋಗಿರುತ್ತಾನೆ. ಎಲ್ಲರಿಂದಲೂ ಮೋಸಕ್ಕೀಡಾದ ದಾರಾ ಶಕೋಹ್ ಯಾರ ಬೆಂಬಲವೂ ಸಿಗದೆ ಕೊನೆಯಲ್ಲಿ ಔರಂರಜೇಬ್ ಕೈಕೆಳಗೆ ಬಂಧಿಯಾಗುತ್ತಾನೆ. 1658 ರಲ್ಲಿ, ಔರಂಗಜೇಬ್ ದೆಹಲಿಯಲ್ಲಿ ತನ್ನ ಪಟ್ಟಾಭಿಷೇಕವನ್ನು ಮಾಡಿಕೊಂಡು ಸಿಂಹಾಸನ ಏರುತ್ತಾನೆ. ದಾರಾ ಶಿಕೋನನ್ನು ಸರಪಳಿಗಳಲ್ಲಿ ಬಂಧಿಸಿ ದೆಹಲಿಯ ಉದ್ದಕ್ಕೂ ಬೀದಿಗಳಲ್ಲಿ ಮೆರವಣಿಗೆ ಮಾಡಿ, 30 ಆಗಸ್ಟ್ 1659 ರಂದು ಗಲ್ಲಿಗೇರಿಸಲಾಯಿತು. ಸಿಂಹಾಸನವನ್ನು ಗಳಿಸಿ ಚಕ್ರವರ್ತಿಯಾದ ನಂತರವೂ ಕೂಡ ಔರಂಗಜೇಬ್ ತನ್ನ ತಂದೆಯನ್ನು ಜೈಲಿನಲ್ಲಿರಿಸಿರುತ್ತಾನೆ. ಸಹಜಹಾನ್ ತನ್ನ ಕೊನೆ ಉಸಿರಿನವರೆಗೂ ಜೈಲಿನಲ್ಲೇ ಇದ್ದು, ಅವನ ಮಗಳಾದ ಜಹನರ ಶಹಜಹಾನ್ ನ ಸೇವೆ ಮಾಡುತ್ತಾಳೆ .