ತುಮಕೂರು: ದಲಿತ ಹಕ್ಕುಗಳ ಸಮಿತಿ(ಡಿಹೆಚ್‌ಎಸ್) ಕುಣಿಗಲ್ ತಾಲೂಕು ಎರಡನೇ ಸಮ್ಮೇಳನ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಹೊರಟು ಕೊತ್ತಿಗೆರೆ ಬಳಿ ಇರುವ ಅಂಬೇಡ್ಕರ್ ಭವನದ ವರೆಗೆ ಬೃಹತ್ ಮೆರವಣಿಗೆ ನಡೆಯಿತು.
ಸುಮಾರು ನಾಲ್ಕು ಕಿಲೋ ಮೀಟರ್ ನಡೆದ ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ನಂತರ ಸಮ್ಮೇಳನ ಪ್ರಾರಂಭವಾಯಿತು.
ಸಮ್ಮೇಳನವನ್ನು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಉದ್ಘಾಟಿಸಿದರು.
ರಾಜ್ಯ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಡಿಹೆಚ್‌ಎಸ್ ನ ಮುಖಂಡ ಗೌಡಗೆರೆ ಮಾಯಾಶ್ರೀ ಹಾಗೂ ರಾಜ್ಯ ಸಮಿತಿ ಸದಸ್ಯ ಎಚ್‌ಜಿ ನಾಗಣ್ಣ ಮುಂತಾದವರು ಸಭೆಯಲ್ಲಿ ಹಾಜರಿದ್ದರು.
ಜಿಲ್ಲೆಯ ಕಾರ್ಮಿಕ ಮುಖಂಡ ಎನ್ ಕೆ ಸುಬ್ರಹ್ಮಣ್ಯ ಹಾಗೂ ಮುನ್ನಾಫ್ ಸೇರಿದಂತೆ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ, ತಾಲ್ಲೂಕು, ಗ್ರಾಮ-ಪಟ್ಟಣ ಮಟ್ಟದ ಮುಖಂಡರುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.