ಶ್ರೀರಾಮನ ದೇಗುಲಕ್ಕೆ ಭೇಟಿ ನೀಡಿದ್ದ ದಲಿತ ಕುಟುಂಬದ ಮೇಲೆ 20 ಜನರಿಂದ ಹಲ್ಲೆ, ಬೆಳೆ ನಾಶ ಪಡಿಸಿದ ಧುರುಳರು

ಅಹಮದಾಬಾದ್‌ :  ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿದ ದಲಿತರ ಮೇಲೆ ಸುಮಾರು 20 ಜನರು ಸೇರಿ ಹಲ್ಲೆ ನಡೆಸಿದ್ದಾರೆ. 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್​ ಅಧಿಕಾರಿ ಕಿಶೋರಸಿಂಹ ಝಲಾ ಹೇಳಿದ್ದಾರೆ.

ಈ ದುರ್ಘಟನೆ ನಡೆದಿದ್ದು ಗುಜರಾತ್​​ನ ಕಚ್​ ಜಿಲ್ಲೆಯಲ್ಲಿ. ಗಾಂಧಿಧಾಮ ಎಂಬ ಪಟ್ಟಣದ ಬಳಿ ಇರುವ ಹಳ್ಳಿಯ ದೇಗುಲಕ್ಕೆ ದಲಿತ ಕುಟುಂಬದ ಆರು ಮಂದಿ ಭೇಟಿ ನೀಡಿದ್ದರು.  ದಲಿತರು ಎಂಬ ಕಾರಣಕ್ಕೆ ಸುಮಾರು 20 ಮಂದಿ ಅವರ ಮೇಲೆ ದಾಳಿ ನಡೆಸಿದ್ದಾರೆ.  ಹಲ್ಲೆಗೊಳಗಾದ ಗೋವಿಂದ್​ ವಾಘೇಲಾ ಮತ್ತು ಅವರ ತಂದೆ ಜಗಭಾಯ್​ ಎಂಬುವರಿಂದ ಪ್ರತ್ಯೇಕ ದೂರು ದಾಖಲಾಗಿದೆ. ಇವರಿಬ್ಬರೂ ಒಂದೇ ತರಹದಲ್ಲಿ ದೂರು ನೀಡಿದ್ದಾರೆ. ಸುಮಾರು 20 ಜನರು ಬಂದು ನಮ್ಮ ಮೇಲೆ ದಾಳಿ ನಡೆಸಿದರು ಎಂದು ಹೇಳಿದ್ದಾರೆ. ಆ 20 ಮಂದಿಯನ್ನು ಹಿಡಿಯಲು ನಾವು ಎಂಟು ತಂಡಗಳನ್ನು ರಚಿಸಿದ್ದೇವೆ ಎಂದು ಝಲಾ ಮಾಹಿತಿ ನೀಡಿದ್ದಾರೆ.

ಗೋವಿಂದ್​ ವಾಘೇಲಾ ಮತ್ತು ಅವರ ಕುಟುಂಬದವರು ನೆರ್​ ಎಂಬ ಗ್ರಾಮದ ಶ್ರೀರಾಮನ ದೇವ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಪ್ರಾಣ ಪ್ರತಿಷ್ಠಾ ಆಚರಣೆ ನಡೆಸಿದ್ದರು. ಅಕ್ಟೋಬರ್​ 20ರಂದು ಇವರೆಲ್ಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದಾದ ನಂತರ ಅಕ್ಟೋಬರ್​ 26ರಂದು ವಾಘೇಲಾ ಅವರ ಅಂಗಡಿಯಲ್ಲಿ ಇದ್ದಾಗ, ಸುಮಾರು 20 ಜನರು ಅವರ ಹೊಲಕ್ಕೆ ಹೋಗಿ ಬೆಳೆ ನಾಶ ಮಾಡಿದ್ದಾರೆ. ಅಲ್ಲಿಗೆ ಜಾನುವಾರುಗಳನ್ನು ಬಿಟ್ಟಿದ್ದಾರೆ ಎಂದೂ ಕೂಡ ಸಂತ್ರಸ್ತ ಕುಟುಂಬ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.  ಗೋವಿಂದ್​ ವಾಘೇಲಾ ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಬಿಜೆಪಿ ಆಡಳಿತ ಈರುವ ರಾಜ್ಯಗಳಲ್ಲೆ ದಲಿತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಹಿಂದು ನಾವೆಲ್ಲ ಒಂದು ಎಂದು ಹೇಳುವ ಸಂಘಪರಿವಾರದರು ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ. ಶ್ರೀರಾಮ ದಲಿತರಿಗೆ ಸಂಬಂಧವಿಲ್ಲವೆ?  ನಿಮ್ಮ ಆಟಗಳನ್ನು ನಿಲ್ಲಿಸಿ, ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಿ ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.

Donate Janashakthi Media

Leave a Reply

Your email address will not be published. Required fields are marked *