ವಂಚಿತ ಸಮುದಾಯಗಳಿಗೆ ಕಾನೂನಿನ ರಕ್ಷಣೆ ಇಂದಿನ‌ ಅಗತ್ಯ – ಡಾ ಸುರೇಶ ವಿ.ನಾಡಗೌಡರ್ ಅಭಿಮತ

ತುಮಕೂರು : ಕಾನೂನಾತ್ಮಕವಾಗಿ ದೊರೆಯಬೇಕಾದ ಸೌಲಭ್ಯಗಳಿಂದ ವಂಚಿತರವಾಗಿರುವ ಸಮುದಾಯಗಳನ್ನು ಗುರುತಿಸಿ,ಅವರಿಗೆ ಸರಕಾರದ ಸೌಲಭ್ಯಗಳು ದೊರೆಯುವಂತೆ ಮಾಡುವ ಗುರುತರ ಜವಾಬ್ದಾರಿ ಕಾನೂನು ಸೇವಾ ಪ್ರಾಧಿಕಾರಗಳ ಮೇಲಿದ್ದು,ಈ ನಿಟ್ಟಿನಲ್ಲಿ ಕಾನೂನು ಕಾಲೇಜುಗಳು ತಮ್ಮಲ್ಲಿರುವ ಕಾನೂನು ಸೇವಾ ವಿಭಾಗಗಳಿಂದ ಸಮರ್ಪಕವಾಗಿ ರಚಿಸಬೇಕಾಗಿದೆ ಎಂದು ಬೆಂಗಳೂರು ಯೂನಿರ್ವಸಿಟಿ ಲಾ ಕಾಲೇಜಿನ ಪ್ರಾಂಶುಪಾಲ ಮತ್ತು ಡೀನ್ ಡಾ.ಸುರೇಶ ವ್ಹಿ ನಾಡಗೌಡರ್ ತಿಳಿಸಿದರು

ಅವರು ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಶನ್ (ರಿ) ಆಯೋಜಿಸಿದ್ದ ನಾಲ್ಕನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,ನ್ಯಾಯಾಲಯಕ್ಕೆ ಬರುವ ಪ್ರಕರಣಗಳಲ್ಲಷ್ಟೇ ಕಾನೂನು ಸೇವೆ ಒದಗಿಸಿದರೆ ಸಾಲದು, ಕಾನೂನು ರೀತಿ ರೈತರಿಗೆ, ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಸಿಗಬೇಕಿರುವ ಸವಲತ್ತುಗಳನ್ನು ದೊರೆಯುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಕೇಂದ್ರ ಸರಕಾರ ಕಾರ್ಮಿಕರ ಹೋರಾಟದಿಂದ ಜಾರಿಗೆ ಬಂದ ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಸಿದೆ.ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ನಿಗಧಿಯಾಗಿದ್ದ 8 ಗಂಟೆ ಕೆಲಸವನ್ನು 12 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ ವಾರದಲ್ಲಿ 4 ದಿನ ಕೆಲಸ ಮಾಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ಸರಕಾರ ಬಂದಂತಿದೆ. ಇದರ ವಿರುದ್ದ ಪ್ರತಿಯೊಬ್ಬ ಕಾರ್ಮಿಕನ್ನು ಹೋರಾಡಬೇಕಿದೆ.ಅಲ್ಲದೆ ಮೊದಲು 100 ಜನಕ್ಕಿಂತ ಮೇಲ್ಪಟ್ಟ ಕಾರ್ಮಿಕರನ್ನು ಹೊಂದಿರುವ ಕಂಪನಿ ಮುಚ್ಚಲು ಇಲಾಖೆಯ ಅನುಮತಿ ಅಗತ್ಯವಿತ್ತು. ಇದನ್ನು ಈಗ 300 ಕ್ಕು ಹೆಚ್ಚಿಸಲಾಗಿದೆ. ಇದರಿಂದ ಬಹುತೇಕ ಕಂಪನಿಗಳು ಕಾರ್ಮಿಕ ಕಾಯ್ದೆಯಿಂದ ಹೊರಗೆ ಉಳಿಯುವುದರಿಂದ ಅವರಿಗೆ ಕೆಲಸದ ಅಭದ್ರತೆ ಕಾಡಲಿದೆ ಎಂದು ಡಾ.ಸುರೇಶ ವ್ಹಿ ನಾಡಗೌಡರ್ ನುಡಿದರು.

ಕಾರ್ಮಿಕರು ಕೇವಲ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ಸಾಲದು,ತಮ್ಮ ಕರ್ತವ್ಯಗಳನ್ನು ಚಾಚು ತಪ್ಪದೆ ಮಾಡಬೇಕು. ಕಂಪನಿ ಉಳಿದರೆ ನಾವು ಉಳಿದಂತೆ. ಹಾಗಾಗಿ ನಮ್ಮ ಕರ್ತವ್ಯವನ್ನು ಮಾಡಿ, ಕಂಪನಿಯಿಂದ ತಮಗೆ ಬರಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಮಿಕರು ಸನ್ನದ್ದರಾಗಬೇಕು. ಅಂತಹ ಹೋರಾಟಕ್ಕೆ ಈ ನಾಲ್ಕನೇ ಕಟ್ಟಡ ಕಾರ್ಮಿಕರ ಸಮ್ಮೇಳನ ನಾಂದಿ ಹಾಡಲಿ ಎಂದು ಶುಭ ಹಾರೈಸಿದರು.

ಕಟ್ಟಡ ಮತ್ತುಇತರೆ ನಿರ್ಮಾಣ ಕಾರ್ಮಿಕರಫೆಡರೇಷನ್‌(CWFI) ಕೇಂದ್ರ ಸಮಿತಿ ಉಪಾಧ್ಯಕ್ಷ ದೇಬಂಜನ್ ಚಕ್ರವರ್ತಿ ಮಾತನಾಡಿ,ನಮ್ಮ ಸಂವಿಧಾನದ ಕಲಂ 14 ದೇಶದ ಎಲ್ಲಾ ಪ್ರಜೆಗಳು ಸಮಾನರು ಎಂದು ಹೇಳುತ್ತದೆ. ಆದರೆ ಉದ್ಯಮಿಗಳು, ರಾಜಕಾರಣಗಳ ರೀತಿ ಕಾರ್ಮಿಕರು ಬದುಕಲು ಇಂದಿಗೂ ಸಾಧ್ಯವಾಗಿಲ್ಲ. ಸಂವಿಧಾನದ ಕಲಂ 19(1) ರ ಅಡಿಯಲ್ಲಿ ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳಲು ಅವಕಾಶವಿದೆ. ಆದರೆ ಕೇಂದ್ರದ ನರೇಂದ್ರಮೋದಿ ನೇತೃತ್ವದ ಸರಕಾರ ಇದಕ್ಕೆ ಅವಕಾಶ ನೀಡುತ್ತಿಲ್ಲ.ಬದಲಾಗಿ ಕಾರ್ಮಿಕರ ಮುಷ್ಕರ ನಡೆಸುವಂತಿಲ್ಲ ಎಂಬ ಕಾಯ್ದೆಯನ್ನು ತಂದಿದೆ.ಇದರ ವಿರುದ್ದ ಹೋರಾಟ ಅನಿರ್ವಾಯ ಎಂದರು.
ಈ ದೇಶದಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ತೀವ್ರಗೊಂಡಿದೆ.ಕೋರೋನ ಸಂದರ್ಭದಲ್ಲಿ ಸರಕಾರವೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 45.37 ಕೋಟಿ ವಲಸೆ ಕಾರ್ಮಿಕರಿದ್ದಾರೆ. ಅವರಿಗೆ ಅವರು ಇರುವ ಜಾಗದಲ್ಲಿಯೇ ಉದ್ಯೋಗ ದೊರಕಿಸುವಂತಹ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಆಳುವ ಸರಕಾರಗಳು ವಿಫಲವಾಗಿ ರುವುದೇ ವಲಸೆ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಲು ಕಾರಣವಾಗಿದ್ದು,ಇದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಈ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವ, ಆ ಮೂಲಕ ಸರಕಾರದ ಮೇಲೆ ಒತ್ತಡ ತರುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ದೇಬಂಜನ್ ಚಕ್ರವರ್ತಿ ತಿಳಿಸಿದರು.


ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷರಾದ ಎನ್.ವರಲಕ್ಷ್ಮಿ ಮಾತನಾಡಿ,ಇಂದಿನ ಸರಕಾರ ಪ್ರಜಾಪ್ರಭುತ್ವದ ಪ್ರಕಾರ ನಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಪ್ರತಿಪಾದಿಸುವವರನ್ನು ಭಯೋತ್ಪಾಧಕರಂತೆ ಕಾಣುತ್ತಿದೆ.ಇದು ಪ್ರಜಾಪ್ರಭುತ್ವದ ದುರಂತ. ಇಂದಿಗೂ ಹಲವಾರು ಹೋರಾಟಗಾರರು ಯಾವುದೇ ವಿಚಾರಣೆ ಇಲ್ಲದೆ,ದೋಷಾರೋಪಣಾ ಪಟ್ಟಿಯಿಲ್ಲದೆ ಜೈಲಿನಲ್ಲಿ ಕೊಳೆಯುವಂತಾಗಿದೆ.ನಿರ್ಮಾಣ ಕ್ಷೇತ್ರವನ್ನು ಉತ್ಪಾದನಾ ವಲಯಲದಲ್ಲಿ ತರುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಕ್ರಮವಿಲ್ಲ.ಮಹಿಳಾ ಮತ್ತು ಪುರುಷ ಕಾರ್ಮಿಕರ ನಡುವೆ ಪಡೆಯುವ ಕೂಲಿಯಲ್ಲಿಯೂ ತಾರತಮ್ಯ ಹೋಗಲಾಡಿಸುವುದು ಅತಿ ಅವಶ್ಯಕ ಎಂದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೇಡರೇಷನ್‌ನ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರಾಸ್ತಾವಿಕ ನುಡಿ ಸಂಘಟನೆ ಕಾರ್ಮಿಕರ ಹಕ್ಕುಬಾಧ್ಯತೆಗಾಗಿ ಹೋರಾಡುತ್ತಲೆ- ಕಲ್ಯಾಣ ನಿಧಿಯ ಕವಾಲುಗಾರ ಕೆಲಸಮಾಡುತ್ತಿದೆ ಎಂದರು.

ರಾಜ್ಯಾಧ್ಯಕ್ಷ ಎನ್.ವೀರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ ಬಿ.ಕಮಲ, cwfi ಜಿಲ್ಲಾಧ್ಯಕ್ಷ ಬಿ.ಉಮೇಶ್, ಸ್ವಾಗತಿಸಿ, ಲಿಂಗರಾಜು ಮಳವಳ್ಳಿ ಅವರು ನಿರೂಪಿಸಿ. ಸುರೇಶ್ ಕಲ್ಲಾಗಾರ್ ಅವರು ವಂದಿಸಿದರು. ವೃದಿಕೆಯಲ್ಲಿ ಮುಖಂಡರಾದ ಗೋವಿಂದರಾಜು, ಖಲೀಲ್, ಗಂಗಾಧರ್, ಎನ್.ಕೆ ಸುಬ್ರಮಣ್ಯ ಮತ್ತಿತರರು ವೇದಿಕೆಯಲ್ಲಿದ್ದರು.

ಇದೇ ವೇಳೆ 75 ವರ್ಷ ತುಂಬಿದ ಹಿರಿಯ ಚಿಂತಕ, ಕೆ.ದೊರೆರಾಜು, CWFI ರಾಜ್ಯಾಧ್ಯಕ್ಷ ಎನ್.ವೀರಸ್ವಾಮಿ ಅವರನ್ನು ಸಮ್ಮೇಳನದಲ್ಲಿ ಅಭಿನಂದಿಸಲಾಯಿತು.
ದೇಶದ ಸೌರ್ಹಾದತೆ- ಸಹಬಾಳ್ವೆ- ಸಮರಸ್ಯವನ್ನು ಹಾಳು ಮಾಡುತ್ತಿರುವ ಶಕ್ತಿಗಳನ್ನು ವಿರುದ್ದ – ಸೌರ್ಹಾರ್ಧತೆ ಸಾರುವ ಮಹಾನೀಯರ ಭಿತ್ತಿಪತ್ರವನ್ನು ಹಿಡಿದು ಸೌರ್ಹಾರ್ಧತಾ ಸಂದೇಶವನ್ನು ಸಾರಲಾಯಿತು.

ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ದಾವಣಗೆರೆ ರಂಗನಿರಂತರ ತಂಡದ ದಿಂದ “ಇವಾ ನಿಮ್ಮವ” ನಾಟಕವನ್ನು ಪ್ರದರ್ಶಿಸಿಸಿದರು.

Donate Janashakthi Media

Leave a Reply

Your email address will not be published. Required fields are marked *