ರಾಂಚಿ: ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಸಿಡಿಲು ಬಡಿದು ಒಬ್ಬ ಸಿಆರ್ಪಿಎಫ್ ಅಧಿಕಾರಿ ಸಾವನ್ನಪ್ಪಿರುವ ಘಟನೆ ಮೇ 15 ಗುರುವಾರದಂದು ಜಾರ್ಖಂಡ್ನಲ್ಲಿ ನಡೆದಿದ್ದೂ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 10.30 ರ ಸುಮಾರಿಗೆ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಕೆರಿಬುರು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ ಗೌರವಧನದಲ್ಲಿ ₹2,000 ಹೆಚ್ಚಳ
26 ನೇ ಬೆಟಾಲಿಯನ್ಗೆ ಸೇರಿದ ಎರಡನೇ ಕಮಾಂಡ್ ಶ್ರೇಣಿಯ ಅಧಿಕಾರಿ ಎಂ. ಪ್ರಬೋ ಸಿಂಗ್ ಅವರು ಮಿಂಚಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಸಹಾಯಕ ಕಮಾಂಡೆಂಟ್ ಎಸ್. ಕೆ. ಮಂಡಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳು ಕಾರ್ಯಾಚರಣೆಗಾಗಿ ಕಾಡಿನ ಪ್ರದೇಶದಲ್ಲಿದ್ದರು ಎಂದು ಅವರು ಹೇಳಿದರು.
ಇದನ್ನೂ ನೋಡಿ: ದೇಶದ ಜನರಿಗೆ ತಣ್ಣೀರು ಎರಚುತ್ತಿರುವ ಮೋದಿ Janashakthi Media