3 ಕ್ರಿಮಿನಲ್ ಕಾನೂನು ಮಸೂದೆ ವಾಪಾಸು ಪಡೆದ ಕೇಂದ್ರ ಸರ್ಕಾರ!

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಮೂರು ಕ್ರಿಮಿನಲ್ ಕಾನೂನು ಮಸೂದೆಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆ-2023 ಅನ್ನು ಸೋಮವಾರ ಹಿಂಪಡೆದಿದೆ. ಸಂಸತ್ತಿನ ಸ್ಥಾಯಿ ಸಮಿತಿ ಶಿಫಾರಸು ಮಾಡಿದ ನಂತರ ಮಸೂದೆಗಳನ್ನು ಮರು ಮಂಡಿಸಲಾಗುವುದು ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

1860 ರ ಭಾರತೀಯ ದಂಡ ಸಂಹಿತೆ (IPC), 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸಲು ಹೊಸ ಕ್ರಿಮಿನಲ್ ಕಾನೂನು ಮಸೂದೆಗಳನ್ನು ಆಗಸ್ಟ್‌ನಲ್ಲಿ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪರಿಚಯಿಸಲಾಗಿತ್ತು.

ಇದನ್ನೂ ಓದಿ: ಲೋಕಸಭೆಗೆ ಪ್ರವೇಶಿಸಿ ಅಶ್ರುವಾಯು ಎಸೆದ ಅಪರಿಚಿತರು; ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ಪಡೆದಿದ್ದ ಆರೋಪಿಗಳು

ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮೂರು ಕಾನೂನುಗಳ ರಚನೆಗೆ 18 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು, 22 ಕಾನೂನು ವಿಶ್ವವಿದ್ಯಾಲಯಗಳು, 142 ಸಂಸದರು, 270 ಶಾಸಕರು ಮತ್ತು ಹಲವಾರು ಸಾರ್ವಜನಿಕ ಸದಸ್ಯರೊಂದಿಗೆ ಸಮಾಲೋಚನೆಗಳನ್ನು ಮಾಡಲಾಗಿತ್ತು ಎಂದು ಹೇಳಿದ್ದಾರೆ. ಈ ಪ್ರಯತ್ನವು ನಾಲ್ಕು ವರ್ಷಗಳ ಕಾಲ ನಡೆದಿದ್ದು, ಒಟ್ಟು 158 ಸಭೆಗಳನ್ನು ಸೇರಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾವು 356 ವಿಭಾಗಗಳನ್ನು ಒಳಗೊಂಡಿದ್ದು, 175 IPC ಮೂಲಗಳು ಬದಲಾವಣೆಗೆ ಒಳಗಾಗಿವೆ, 22 ಕಾನೂನನ್ನು ರದ್ದುಗೊಳಿಸಲಾಗಿದ್ದು, 8 ಹೊಸ ವಿಭಾಗಗಳನ್ನು ಪರಿಚಯಿಸಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾವು 533 ವಿಭಾಗಗಳನ್ನು ಒಳಗೊಂಡಿದೆ, ಅದರಲ್ಲಿ 150 CrPC ಯಿಂದ ಮೂಲವನ್ನು ಪರಿಷ್ಕರಿಸಲಾಗಿದೆ, 22 ರದ್ದುಗೊಳಿಸಲಾಗಿದೆ ಮತ್ತು 9 ಹೊಸದಾಗಿ ಸೇರಿಸಲಾಗಿದೆ.

ಭಾರತೀಯ ಸಾಕ್ಷಿ ಮಸೂದೆಯು 170 ವಿಭಾಗಗಳನ್ನು ಹೊಂದಿದೆ. ಇವುಗಳಲ್ಲಿ, ಸಾಕ್ಷ್ಯಾಧಾರ ಕಾಯ್ದೆಯಿಂದ ಪಡೆದ 23 ಸೆಕ್ಷನ್‌ಗಳನ್ನು ತಿದ್ದುಪಡಿ ಮಾಡಲಾಗಿದೆ, 1 ಸೆಕ್ಷನ್ ಸಂಪೂರ್ಣವಾಗಿ ಹೊಸದಾಗಿ ಮತ್ತು 5 ವಿಭಾಗಗಳನ್ನು ತೆಗೆದುಹಾಕಲಾಗಿದೆ.

ವಿಡಿಯೊ ನೋಡಿ: ಲೋಕಸಭೆಗೆ ನುಗ್ಗಿದ ಇಬ್ಬರು ಅಪರಿಚಿತರು! ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದ ಆರೋಪ #ParliamentAttack

Donate Janashakthi Media

Leave a Reply

Your email address will not be published. Required fields are marked *