ಬೆಂಗಳೂರು : ನಕ್ಸಲ್ ವಾದಿ ವಿಕ್ರಂಗೌಡರ ಎನ್ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೊಳಪಡಿಸಿಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ”
ನೆನ್ನೆ ದಿನ ನಡೆದ ಪೋಲಿಸ್ ದಾಳಿಯಲ್ಲಿ ನಕ್ಸಲ್ವಾದಿ ವಿಕ್ರಂ ಗೌಡರ ಹತ್ಯೆಯಾಗಿದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.
ಗುಂಡಿನ ಚಕಮಕಿಯಲ್ಲಿ ಈ ಹತ್ಯೆಯಾಗಿದೆ ಎಂದು ವಿವರಿಸಲಾಗಿದೆ. ಆದರೆ 50-60 ಜನರ ಸಶಸ್ತ್ರ ಪೋಲೀಸರ ತಂಡಕ್ಕೆ ನಾಲ್ಕು ಜನ ನಕ್ಸಲರ ತಂಡವನ್ನು ಬಂಧಿಸಲಾಗಲಿಲ್ಲ ಎನ್ನುವುದು ಮತ್ತು ಎನ್ಕೌಂಟರ್ ಹೆಸರಲ್ಲಿ ಕೊಂದಿರುವುದು ಅನುಮಾನಗಳನ್ನು ಮೂಡಿಸುತ್ತದೆ. ಆದ್ದರಿಂದ ರಾಜ್ಯದ ಜನತೆ ನಿಜವನ್ನು ತಿಳಿಯುವಂತಾಗಲು ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೊಳಪಡಿಸ ಬೇಕೆಂದು ಆಗ್ರಹಿಸಿದ್ದಾರೆ.
ಬಂದಿಸಲು ಅವಕಾಶವಿರುವಾಗ ಎನ್ ಕೌಂಟರ್ ಹೆಸರಲ್ಲಿ ಯಾವುದೇ ವ್ಯಕ್ತಿಯ ಹತ್ಯೆ ಮಾಡುವುದನ್ನು ಸಿಪಿಐಎಂ ವಿರೋಧಿಸುತ್ತದೆ ಮತ್ತು ಅಂತಹ ದುಷ್ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ ಎಂದಿದ್ದಾರೆ.