ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ 28 ಪ್ರವಾಸಿಗರ ಬರ್ಬರ ಹತ್ಯೆಯನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ ಅಮಾಯಕ ಜನಗಳ ಕುಟುಂಬಗಳಿಗೆ ಅದು ಆಳವಾದ ಸಂತಾಪಗಳನ್ನು ವ್ಯಕ್ತಪಡಿಸಿದೆ. ಈ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅವರೆಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಅದು ಹಾರೈಸಿದೆ. ಹತ್ಯಾ
ಈ ಭೀಕರ ಅಪರಾಧವನ್ನು ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದಿರುವ ಸಿಪಿಐ(ಎಂ), ಪೊಲಿಸ್ ಮತ್ತು ಭದ್ರತಾ ಪಡೆಗಳು ಕೇಂದ್ರ ಸರಕಾರದ ಅಡಿಯಲ್ಲಿರುವುದರಿಂದ, ಅದು ಈ ಖೂಳ ಕೃತ್ಯಕ್ಕೆ ಹೊಣೆಗಾರರಾಗಿರುವ ಶಕ್ತಿಗಳನ್ನು ಶಿಕ್ಷಿಸಲು ಕೈಲಾದ್ದನ್ನೆಲ್ಲವನ್ನೂ ಮಾಡಬೇಕು ಎಂದು ಆಗ್ರಹಿಸಿದೆ. ಹತ್ಯಾ
ಇದನ್ನೂ ಓದಿ: ರೈತರ ಕೃಷಿಭೂಮಿ ರಿಯಲ್ ಎಸ್ಟೇಟ್ ದಂಧೆಕೋರರ ಪಾಲಾಗುತ್ತಿದೆ – ಕೆ ಯಾದವ ಶೆಟ್ಟಿ
ಈ ಅಪರಾಧವನ್ನು ಎಸಗಿದವರು ದೇಶದ ಶತ್ರುಗಳು, ಅದಕ್ಕಿಂತಲೂ ಹೆಚ್ಚಾಗಿ ಕಾಶ್ಮೀರದ ಜನತೆಯ ಶತ್ರುಗಳು. ಕೇಂದ್ರ ಸರಕಾರ ದಾಳಿಯ ಬಗ್ಗೆ ಎಲ್ಲಾ ಕೋನಗಳಿಂದಲೂ, ಜನನಿಬಿಡ ಪ್ರವಾಸಿ ತಾಣಗಳಲ್ಲಿ ಭದ್ರತೆಯ ಲೋಪವನ್ನೂ ತನಿಖೆಗೆ ಒಳಪಡಿಸಬೇಕಾಗಿದೆ ಎಂದಿರುವ ಪೊಲಿಟ್‍ಬ್ಯುರೊ ಈ ದುರಂತದ ಸಮಯದಲ್ಲಿ ಉಗ್ರಗಾಮಿ ಮೂಲಭೂತವಾದಿ ಶಕ್ತಿಗಳ ವಿರುದ್ಧ ಸಿಪಿಐ(ಎಂ) ಭಾರತದ ಜನತೆಯೊಂದಿಗೆ ಒಟ್ಟಾಗಿ ನಿಲ್ಲುತ್ತದೆ ಎಂದು ಹೇಳಿದೆ.
ಇದನ್ನೂ ನೋಡಿ: ಮಿಲ್ಲರ್ ಆಯೋಗದಿಂದ ಕಾಂತರಾಜ ಆಯೋಗದವರೆಗೆ: ಮೀಸಲಾತಿ, ಒಳ ಮೀಸಲಾತಿ ಪರವಾದ ದೀರ್ಘ ಪಯಣJanashakthi Media