ಏಷ್ಯಾದ ನೊಬೆಲ್‌ ಎಂದೇ ಖ್ಯಾತಿ ಹೊಂದಿರುವ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಶೈಲಜಾ ಟೀಚರ್

ತಿರುವನಂತಪುರಂ: ಕೇರಳದ ಮಾಜಿ ಆರೋಗ್ಯ ಮಂತ್ರಿ ಕೆ ಕೆ ಶೈಲಜಾ (ಶೈಲಜಾ ಟೀಚರ್‌) ಅವರಿಗೆ ಏಷಿಯಾ ಖಂಡದ ನೊಬೆಲ್‌ ಪ್ರಶಸ್ತಿ ಎಂದೇ ಕರೆಯಲಾಗುವ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿ ಘೋಷಣೆಯಾಗಿದ್ದು, ಈ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದಾರೆ.

ಅಚ್ಚರಿ ಎಂಬಂತೆ ಶೈಲಜಾ ಟೀಚರ್‌ ಅವರಿಗೆ ತಮಗೆ ಒಲಿದು ಬಂದಿದ್ದ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಕುರಿತು ಅವರು, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ನಾಯಕರೊಂದಿಗೆ ಚರ್ಚಿಸಿದ ಬಳಿಕ ಅದನ್ನು ಸ್ವೀರಿಸುವುದಿಲ್ಲವೆಂದು ತೀರ್ಮಾನಕ್ಕೆ ಬಂದಿರುವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನನಗೆ ಮ್ಯಾಗೆಸ್ಸೆ ಪ್ರಶಸ್ತಿ ಸಮಿತಿಯಿಂದ ಪತ್ರ ಬಂದಿತ್ತು. ಸಿಪಿಐ(ಎಂ)ನ ಸದಸ್ಯಳಾಗಿ ನಾನು ಪತ್ರದ ಕುರಿತು ನನ್ನ ಪಕ್ಷದ‌ಲ್ಲಿ ಚರ್ಚಿಸಿದೇನು. ನಂತರ ನನಗೆ ಬಂದಿರುವ ಈ  ಮ್ಯಾಗೆಸ್ಸೆ ಪ್ರಶಸ್ತಿಯನ್ನು ಸ್ವೀಕಾರ ಮಾಡಬಾರದು ಎಂದು  ತೀರ್ಮಾನಕ್ಕೆ ಬಂದಿದ್ದೇವೆ” ಎಂದಿದ್ದಾರೆ.

ಕೊವಿಡ್-‌19 ದಾಳಿಯ ಸಂದರ್ಭದಲ್ಲಿ ಕೇರಳದ ಎಡರಂಗ ಸರ್ಕಾರದಲ್ಲಿ ರಾಜ್ಯದ ಆರೋಗ್ಯ ಸಚಿವರಾಗಿ ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಶ್ರಮವಹಿಸಿದ ಕೆ ಕೆ ಶೈಲಜಾ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದರು. ಅದಕ್ಕಿಂತಲೂ ಮುಂಚೆ ನಿಫಾ ವೈರಸ್‌ ದಾಳಿಯ ಸಂದರ್ಭದಲ್ಲಿಯೂ ಆರೋಗ್ಯ ಸಚಿವೆಯಾಗಿ ಶ್ರಮಿಸಿದ್ದಕ್ಕೆ ಎಲ್ಲರ ಪ್ರಶಂಸೆಗೆ ಒಳಗಾಗಿದ್ದರು. ಕೇರಳ ಎಡರಂಗ ಸರ್ಕಾರ ಬಹಳ ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಿದ ರೀತಿ ಜನಮನ್ನಣೆ ಗಳಿಸಿತ್ತು. ಕೇರಳ ರಾಜ್ಯವು ಜಾಗತಿಕ ಮನ್ನಣೆಯನ್ನು ಗಳಿಸಿತು. ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದ ಅವರ ನಾಯಕತ್ವಕ್ಕೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮ್ಯಾಗ್ಸೆಸೆ ಸಮಿತಿಯು ಅವರ ಹೆಸರನ್ನು ಅಂತಿಮಗೊಳಿಸಿ ಇಮೇಲ್‌ ಮೂಲಕ ಅವರಿಗೆ ತಿಳಿಸಿತ್ತು. ಆದರೆ ಸಿಪಿಐ(ಎಂ) ಪಕ್ಷದ ತೀರ್ಮಾನದಂತೆ ಶೈಲಜಾ ಟೀಚರ್‌ ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಏಷಿಯಾ ಖಂಡದ ನೊಬೆಲ್‌ ಪ್ರಶಸ್ತಿ ಎಂದೇ ಕರೆಯಲಾಗುವ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಫಿಲಿಪ್ಪೀನ್ಸ್‌ ಸರ್ಕಾರದ ಸಹಯೋಗದಲ್ಲಿ ಅಮೆರಿಕದ ರಾಕಫೆಲ್ಲರ್‌ ಫೌಂಡೇಶನ್‌ 1957ರಲ್ಲಿ ಸ್ಥಾಪಿಸಿದರು. ಮುಖ್ಯವಾಗಿ ಸರ್ಕಾರದ ಸೇವೆ, ಸಾರ್ವಜನಿಕ ಸೇವೆ, ಸಮುದಾಯ ನಾಯಕತ್ವ, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸೃಜನಶೀಲ ಸಂವಹನ ಕಲೆ ಹಾಗೂ ಶಾಂತಿ ಮತ್ತು ಅಂತರರಾಷ್ಟ್ರೀಯ ಗ್ರಹಿಕೆ ವಿಭಾಗಗಳಲ್ಲಿ ಉತ್ತಮ ಸಾಧನೆಗೈದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಇತ್ತೀಚೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತೀಯರಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿರುವ ಟಿ ಎಂ ಕೃಷ್ಣ, ಮಲ ಹೊರುವ ಪದ್ಧತಿ ವಿರುದ್ಧ ಹೋರಾಟಕ್ಕೆ ತಮ್ಮ ಜೀವನವನ್ನೇ ಸವೆಸಿರುವ ಸಫಾಯಿ ಕರ್ಮಚಾರಿ ಚಳವಳಿಗಾರ ಬೆಜವಾಡಾ ವಿಲ್ಸನ್‌ ಪ್ರಮುಖರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *