ಪ್ರಧಾನಿಗಳ ಇಸ್ರೇಲ್‍ ಭೇಟಿಗೆ ಸಿಪಿಐ(ಎಂ) ವಿರೋಧ

“ಪಶ್ಚಿಮ ಏಷ್ಯಾದಲ್ಲಿ ಯುಎಸ್‍-ಇಸ್ರೇಲ್ ಕೂಟಕ್ಕೆ ನಾಚಿಕೆಹೀನ ಬದ್ಧತೆಯ ಪ್ರದರ್ಶನ” ಪ್ರಧಾನಿ
ನವದೆಹಲಿ :ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸಿದೆ.

ಗಾಜಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯಾಕಾಂಡದ ಯುದ್ಧವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಬರುತ್ತಿದೆ. ಕದನ ವಿರಾಮವಿದ್ದರೂ, ಇಸ್ರೇಲ್ ಪ್ರತಿದಿನ ಅದರ ಉಲ್ಲಂಘನೆಗಳನ್ನು ನಡೆಸುತ್ತಿದೆ. ಅದು ಪ್ರಹಾರಗಳನ್ನು ನಡೆಸುತ್ತಿದ್ದು, ಇದರಲ್ಲಿ ಹತ್ತಾರು ಪ್ಯಾಲೆಸ್ಟೀನಿಯನ್ನರನ್ನು ಕೊಲ್ಲುತ್ತಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ, ಪ್ಯಾಲೆಸ್ಟೀನಿಯನ್ನರ ಮೇಲೆ ದಾಳಿಗಳು ಹೆಚ್ಚುತ್ತಿವೆ ಮತ್ತು ಅಕ್ರಮವಾಗಿ ನೆಲೆಗೊಳಿಸುವ ಕ್ರಿಯೆ ಇನ್ನಷ್ಟು ಬಿರುಸುಗೊಂಡಿದೆ.

ಇದನ್ನೂ ಓದಿ: ಎ.ಐ ಅಂತರ್ರಾಷ್ಟ್ರೀಯ ಶೃಂಗ: ಗಾಲಗೋಟಿಯಾ ವಿಶ್ವವಿದ್ಯಾಲಯದ ರೊಬೋನಾಯಿ ವಿವಾದ ಪ್ರಧಾನಿ

ಹೀಗಾಗಿ ಮೋದಿ ಭೇಟಿಯು ಪ್ಯಾಲೆಸ್ಟೀನಿಯನ್ ಉದ್ದೇಶಕ್ಕೆ ದ್ರೋಹ ಬಗೆದಂತಾಗಿದೆ ಮತ್ತು ಕೊಲೆಗಡುಕ ನೆತನ್ಯಾಹು ಆಡಳಿತವನ್ನು ಕಾನೂನುಬದ್ಧಗೊಳಿಸುತ್ತದೆ. ಯುಎಸ್ ಸಹಾಯದಿಂದ ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವ ಒಂದು ಜಿಯೋನಿಸ್ಟ್ ವಿಸ್ತರಣಾವಾದಿ ಆಡಳಿತದೊಂದಿಗೆ ಆಯಕಟ್ಟಿನ, ಮಿಲಿಟರಿ ಮತ್ತು ಆರ್ಥಿಕ ಸಂಬಂಧಗಳನ್ನು ಗಾಢವಾಗಿಸುವುದು ಈ ಭೇಟಿಯ ಘೋಷಿತ ಉದ್ದೇಶವಾಗಿದೆ.

ಈ ಭೇಟಿ ಇಸ್ರೇಲ್‌ನ ಪ್ರಚೋದನೆಯ ಮೇರೆಗೆ ಯುಎಸ್ ಇರಾನ್ ಮೇಲೆ ಮಿಲಿಟರಿ ದಾಳಿ ಮಾಡಲು ತಯಾರಿ ನಡೆಸುತ್ತಿರುವ ಸಮಯದಲ್ಲಿ ನಡೆಯುತ್ತಿರುವುದರಿಂದ ಇನ್ನಷ್ಟು ಅನುಚಿತವಾಗಿದೆ.

ಈ ಭೇಟಿಯ ಮೂಲಕ, ಬಿಜೆಪಿ ಸರ್ಕಾರವು ಪಶ್ಚಿಮ ಏಷ್ಯಾದಲ್ಲಿ ಯುಎಸ್-ಇಸ್ರೇಲಿ ಕೂಟಕ್ಕೆ ತನ್ನ ನಾಚಿಕೆಹೀನ ಬದ್ಧತೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಇದನ್ನು ವಿರೋಧಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದನ್ನೂ ನೋಡಿ : “ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ಪ್ರಚಾರ: ನಿಜವೇ, ರಾಜಕೀಯ ಆಟವೇ?” – ಶಿವಸುಂದರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *