ನವೆಂಬರ್ 1 ರಿಂದ ಡಿಸೆಂಬರ್ 15ರವರೆಗೆ ರಾಜ್ಯಾದ್ಯಂತ ಲಕ್ಷಾಂತರ ಮನೆ ಮನೆ ಭೇಟಿ ಅಭಿಯಾನ
ಬೆಂಗಳೂರು: ಇದೇ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸಮಿತಿಯು “ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ‍್ಯಾಲಿ” ಎನ್ನುವ ಬೃಹತ್ ಪ್ರತಿಭಟನಾ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಡಾ. ಪ್ರಕಾಶ್ ಕೆ ತಿಳಿಸಿದರು.ಪರ್ಯಾಯ
ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಮಧ್ಯಮ ಹಾಗೂ ಬಡ ರೈತರು, ಬಗರಹುಕುಂ ಸಾಗುವಳಿದಾರರು, ಭೂ ಸ್ವಾಧೀನ ವಿರೋಧಿ ಹೋರಾಟ ನಿರತ ಸಂತ್ರಸ್ತ ರೈತರು, ಸಂಘಟಿತ ಅಸಂಘಟಿತ ವಲಯದ ಕಾರ್ಮಿಕರು, ವಿವಿಧ ಸರ್ಕಾರಿ ವಲಯದ ಯೋಜನಾ ಕಾರ್ಮಿಕರು, ಖಾಸಗಿ ಸರ್ಕಾರಿ ವಲಯಗಳ ಗುತ್ತಿಗೆ ನೌಕರರು, ಗ್ರಾಮೀಣ ವಲಯದ ಉದ್ಯೋಗ ಖಾತ್ರಿ ಹಾಗೂ ಕೃಷಿಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿ ಮತ್ತು ಯುವಜನರು ಭಾಗವಹಿಸಲಿದ್ದಾರೆ ಎಂದರು. ಪರ್ಯಾಯ
ರಾಜ್ಯಾದ್ಯಂತ ಇರುವ ಸಿಪಿಐ(ಎಂ) ಶಾಖೆಗಳ ನೇತೃತ್ವದಲ್ಲಿ ಈಗಾಗಲೇ ನವೆಂಬರ್ 1 ರಿಂದ ಡಿಸೆಂಬರ್ 15ರ ವರೆಗೆ ರಾಜ್ಯದ ಉದ್ದಗಲಕ್ಕೂ ನಿತ್ಯ ಸಾವಿರಾರು ಕಾರ್ಯಕರ್ತರು ಕರಪತ್ರ, ಕಿರುಪಸ್ತಕಗಳ ವಿತರಣೆ ಮೂಲಕ ಲಕ್ಷಾಂತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳು ಹೇಗೆ ಜನಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿವೆ ಹಾಗೂ ಇದಕ್ಕೆ ಪರ್ಯಾಯವಾಗಿ ಸಿಪಿಎಂ ನೇತೃತ್ವದ ಕೇರಳ ಹಾಗೂ ಹಿಂದಿನ ಪ.ಬಂಗಾಳ, ತ್ರಿಪುರ ಸರ್ಕಾರಗಳು ಜಾರಿಮಾಡಿದ ಹಾಗೂ ಮಾಡುತ್ತಿರುವ ಜನಪರ ನೀತಿಗಳು ಹೇಗೆ ಜನರ ಬದುಕನ್ನು ಉತ್ತಮಪಡಿಸಲು ಸಹಾಯವಾಗಿವೆ ಮತ್ತು ರಾಜ್ಯದಲ್ಲೂ ಸಿಪಿಐ(ಎಂ) ಹಾಗೂ ಇತರೆ ಎಡ ಶಕ್ತಿಗಳ ನಡೆಸುತ್ತಿರುವ ಪರ್ಯಾಯ ರಾಜಕಾರಣ ಅದನ್ನು ಜನರು ಬೆಂಬಲಿಸಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಲಾಗುತ್ತಿದೆ ಎಂದರು. ಪರ್ಯಾಯ
ಇದನ್ನೂ ಓದಿ: ವಿಮಾನ ಪ್ರಯಾಣದಲ್ಲಿ ಗೊಂದಲಮಯ ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸಬೇಕು- ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ
ರಾಜ್ಯದ ಜನರ ಎದುರಿಸುತ್ತಿರುವ ಸುಮಾರು ೨೦ ಅಧಿಕ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಹಿಸಬೇಕೆಂದು ಸಾರ್ವಜನಿಕರಿಂದ ಸಹಿಸಂಗ್ರಹಗಳನ್ನು ನಡೆಸಲಾಗುತ್ತಿದ್ದು ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 45 ದಿನಗಳ ಮನೆ ಮನೆ ಪ್ರಚಾರದ ಸಮಾರೋಪವಾಗಿ ಡಿಸೆಂಬರ್ 21 ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನಾ ಬಹಿರಂಗ ಸಭೆಯಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯೂರೊ ಸದಸ್ಯರಾದ ಯು.ವಾಸುಕಿ ಹಾಗೂ ರಾಜ್ಯದ ಸಿಪಿಐ(ಎಂ) ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಚಂದ್ರಪ್ಪ ಹೊಸ್ಕೇರಾ, ಗೋಪಾಲಕೃಷ್ಣ ಅರಳಹಳ್ಳಿ, ಸೈಯದ್ ಮುಜೀಬ್ ಹಾಜರಿದ್ದರು.
ಹಕ್ಕೊತ್ತಾಯಗಳು
1. ಕೃಷಿ ಬಿಕ್ಕಟ್ಟು: ಎಲ್ಲಾ ಬೆಳೆಗಳಿಗೆ ಒಟ್ಟಾರೆ ಉತ್ಪಾದನಾ ವೆಚ್ಚಕ್ಕೆ ಶೇ.೫೦ ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ರೈತಾಧಾರಿತ ಕೃಷಿ ರಕ್ಷಿಸಬೇಕು, ಕಾರ್ಪೊರೇಟ್ ಲಾಭದ ಕೃಷಿ ಕೈಬಿಡಬೇಕು.
2. ಭೂಮಿ ಪ್ರಶ್ನೆ: ಬಲವಂತದ, ಅನಗತ್ಯವಾದ ಭೂಸ್ವಾಧೀನ ನಿಲ್ಲಿಸಬೇಕು. ಬಿಜೆಪಿ ಸರ್ಕಾರದ ಕಾಲದಲ್ಲಿ ಜಾರಿಗೊಳಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರ ಭೂಮಿಯನ್ನು ರಕ್ಷಿಸಬೇಕು, ಬಡವರಿಗೆ ದಲಿತರಿಗೆ ಭೂಮಿಗಳನ್ನು ನೀಡಬೇಕು. ಬಗರ್‌ಹುಕುಂ ಮತ್ತು ಅರಣ್ಯ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು.
3. ಕಾರ್ಮಿಕರ ಹಕ್ಕುಗಳು: ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಅವುಗಳನ್ನು ಜಾರಿ ಮಾಡಬಾರದು. ಗುತ್ತಿಗೆ, ಹೊರಗುತ್ತಿಗೆ ಮುಂತಾದ ಅಸ್ಥಿರ ಅತಂತ್ರ ಸ್ವರೂಪದ ಕೆಲಸಗಳನ್ನು ಖಾಯಂ ಮಾಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು. ಕನಿಷ್ಟ ವೇತನ ಮಾಸಿಕ ರೂ.೩೬,೦೦೦ ಮತ್ತು ಎಲ್ಲಾ ನಿವೃತ್ತರಿಗೂ ಕನಿಷ್ಟ ಪಿಂಚಣಿ ರೂ.೯,೦೦೦ ಜಾರಿಗೊಳಿಸಬೇಕು. ಕಟ್ಟಡ, ಸಾರಿಗೆ, ಮುಂತಾದ ಕಾರ್ಮಿಕರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು ಮತ್ತು ಭ್ರಷ್ಟಾಚಾರ ತಡೆಗಟ್ಟಬೇಕು.
4. ನಿರುದ್ಯೋಗ: ಎಲ್ಲ ಅರ್ಹ ಯುವಜನರಿಗೂ ಉದ್ಯೋಗದ ಭದ್ರತೆ ನೀಡಬೇಕು. ಯುವನಿಧಿಯನ್ನು ಕನಿಷ್ಟ ೫,೦೦೦ ರೂಗಳಿಗೆ ಹೆಚ್ಚಿಸಿ ಎಲ್ಲಾ ವಿದ್ಯಾವಂತ ನಿರುದ್ಯೋಗಿಗಳಿಗೆ ವಿಸ್ತರಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಸಗಿ ರಂಗದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕು ಮತ್ತು ಕೂಲಿಯನ್ನು ೬೦೦ಕ್ಕೆ ಹೆಚ್ಚಿಸಿ ೨೦೦ ದಿನ ಕೆಲಸ ನೀಡಬೇಕು. ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸಂಪರ್ಕ ಮತ್ತು ಸಂವಹನವನ್ನು ಕನ್ನಡದಲ್ಲಿ ಮಾಡಬೇಕು. ಯುವಜನರಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಜಾಲ, ಜೂಜು, ಗೇಮಿಂಗ್ ಇತ್ಯಾದಿಗಳನ್ನು ತಡೆಗಟ್ಟಲು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರ್ಯಾಯ’

5. ಭ್ರಷ್ಟಾಚಾರ: ತಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಜನ ಸೇವೆಗಳೂ ಲಂಚವಿಲ್ಲದೆ ನಡೆಯುವುದೇ ಇಲ್ಲವೆನ್ನುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದ ಮತ್ತು ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಬಂಡವಾಳದಾರರಿಗೆ ವರ್ಗಾವಣೆ ಮಾಡುವ ಬೃಹತ್ ಭ್ರಷ್ಟಾಚಾರ ನಡೆಯುತ್ತಿದೆ. ಇವುಗಳ ವಿರುದ್ಧ ಜನತೆ ತೀವ್ರ ಪ್ರತಿರೋಧ ಮಾಡಬೇಕಾಗಿದೆ.
6. ಶಿಕ್ಷಣ: ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ ತೀವ್ರಗೊಂಡಿದೆ. ಬಡವರು, ಮಧ್ಯಮ ವರ್ಗಗಳು ದುಬಾರಿ ವೆಚ್ಚಗಳನ್ನು ಭರಿಸಲಾಗಿದೆ ತತ್ತರಿಸುವಂತಾಗಿದೆ. ಸರ್ಕಾರಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ಮುಚ್ಚುತ್ತಾ, ಖಾಸಗಿ ಶಿಕ್ಷಣ ಪಡೆಯಿರಿ ಅಥವಾ ಶಿಕ್ಷಣವನ್ನು ತ್ಯಜಿಸಿರಿ ಎಂದು ಸರ್ಕಾರಗಳು ಮಾಡುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಸದೃಢಗೊಳಿಸಿರುವ ಕೇರಳದ ಮಾದರಿಯನ್ನು ಅನುಸರಿಸಬೇಕು.
7. ಆರೋಗ್ಯ: ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ಮತ್ತು ಕಾರ್ಪೊರೇಟೀಕರಣದಿಂದಾಗಿ ಸಾಮಾನ್ಯ ಜನರಿಂದ ಆರೋಗ್ಯ ದೂರವಾಗುತ್ತಿದೆ. ಹಣವುಳ್ಳವರು ಬದುಕಬಹುದು ಇಲ್ಲದವರು ಬದುಕನ್ನು ಮುಗಿಸಿಕೊಳ್ಳಬಹುದು ಎಂಬ ವಾತಾವರಣ ಸೃಷ್ಟಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಸಿಬ್ಬಂದಿಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಸಕಲ ಸಜ್ಜಿತ ಆಧುನಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು.
8. ರೇಷನ್ ವ್ಯವಸ್ಥೆ: ಬಿಪಿಎಲ್ ಕಾರ್ಡುಗಳನ್ನು ಕಡಿತಗೊಳಿಸಲು ಬಿಜೆಪಿ ಸರ್ಕಾರ ಸೂಚಿಸಿದೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡುತ್ತಿದೆ. ಇದರಿಂದ ಬಡವರು ರೇಷನ್ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ. ಬಿಪಿಎಲ್ ಕಾರ್ಡನ್ನು ರಿಯಾಯಿತಿ/ಉಚಿತ ಆರೋಗ್ಯ ಸೇವೆಗೆ ಆಧಾರವಾಗಿ ಬಳಸುವ ಅವಕಾಶ ತಪ್ಪಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಬಿಪಿಎಲ್ ಮಾನದಂಡಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಿ, ಆದಾಯ ಮಿತಿಗಳನ್ನು ಸಮಕಾಲೀನಗೊಳಿಸಿ, ಎಲ್ಲಾ ಅರ್ಹ ಬಡವರಿಗೂ ಬಿಪಿಎಲ್ ಕಾರ್ಡುಗಳನ್ನು ನೀಡಬೇಕು. ಪರ್ಯಾಯ
9. ವಸತಿ-ನಿವೇಶನ: ನಿವೇಶನ ರಹಿತರಿಗೆ ನಿವೇಶನ, ಮನೆ ನೀಡುವ ಮಾತುಗಳು ಪೇಪರಿನಲ್ಲೇ ಉಳಿದಿವೆ. ಲಕ್ಷಾಂತರ ಅರ್ಜಿಗಳು ವಿಲೇವಾರಿ ಆಗದೆ ನಿಂತಿವೆ. ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನಗಳನ್ನು ಹಂಚಬೇಕು. ಕೇರಳದ ಮಾದರಿಯಲ್ಲಿ ಸಮರೋಪಾದಿಯಲ್ಲಿ ಅಗತ್ಯವಿರುವ ಎಲ್ಲರಿಗೂ ನಿವೇಶನಗಳನ್ನು ಒದಗಿಸಬೇಕು.
10. ಮಹಿಳೆಯರು: ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಕುಟುಂಬಗಳ ಹೆಚ್ಚುತ್ತಿರುವ ಸಂಕಷ್ಟದಿAದಾಗಿ ಮಹಿಳೆಯರ ಮೇಲಿನ ಒತ್ತಡ ಹೆಚ್ಚುತ್ತಿದೆ. ಮೈಕ್ರೋಫೈನಾನ್ಸ್ ಕಿರುಕುಳಗಳು, ಉದ್ಯೋಗ ಖಾತ್ರಿ ಕೆಲಸಗಳ ಕಡಿತದಿಂದ ಸಂಕಷ್ಟ ಹೆಚ್ಚಾಗುತ್ತಿದೆ.
11. ದಲಿತರು: ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಮೀಸಲಾತಿ ವಿಷಯಗಳು ಗೊಂದಲಗಳನ್ನು ಉಂಟು ಮಾಡುತ್ತಿವೆ. ಸರ್ಕಾರಿ ಮತ್ತು ಸಾರ್ವಜನಿಕ ಉದ್ಯೋಗಗಳು ನಾಶವಾಗುತ್ತಿವೆ. ಖಾಸಗೀಕರಣದ ದಾಳಿಯು ಭೂಮಿಯನ್ನು ಮತ್ತು ಸಂಪನ್ಮೂಲಗಳನ್ನು ದಲಿತರಿಂದ ದೂರ ಮಾಡುತ್ತಿದೆ. ಸಂಪತ್ತು ಮತ್ತು ಅಧಿಕಾರದ ವಂಚನೆಯು ಹೆಚ್ಚುತ್ತಿದೆ. ದಲಿತರ ಸ್ಥಿತಿಗತಿಗಳ ಸಮೀಕ್ಷೆ ಆಧರಿಸಿ ಭೂಮಿ, ಆಸ್ತಿ ಮತ್ತು ಅಧಿಕಾರಗಳ ಸಮರ್ಪಕ ಹಂಚಿಕೆಯಾಗಬೇಕು.
12. ಅಲ್ಪಸಂಖ್ಯಾತರು: ಆರ್.ಎಸ್.ಎಸ್.ನ ಮತೀಯ ದಾಳಿಗಳಿಂದಾಗಿ ಅಲ್ಪಸಂಖ್ಯಾತರು ಆತಂಕಿತರಾಗಿದ್ದಾರೆ. ನಿರಂತರ ಅಪಪ್ರಚಾರ, ಸುಳ್ಳುಗಳನ್ನು ಹೇಳುವ ಮೂಲಕ ಅಲ್ಪಸಂಖ್ಯಾತರಲ್ಲಿ ಪರಕೀಯತೆ, ಆತಂಕ, ಅಭದ್ರತೆಗಳನ್ನು ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಬದುಕಿನ ಪ್ರಶ್ನೆಗಳನ್ನು ಬಗೆಹರಿಸಬೇಕಾಗಿದೆ. ಪರ್ಯಾಯ
13. ಕೋಮುವಾದ-ಜಾತೀವಾದ: ಸಮಾಜದಲ್ಲಿ ಕೋಮುವಾದ ಮತ್ತು ಜಾತಿವಾದ ವ್ಯಾಪಕಗೊಂಡಿದೆ. ಪರಸ್ಪರ ಸಹಬಾಳ್ವೆಯನ್ನು ನಾಶ ಮಾಡಿ, ಅಪನಂಬಿಕೆಗಳನ್ನು ಹೆಚ್ಚು ಮಾಡಲಾಗಿದೆ. ಮತೀಯ ಮತ್ತು ಜಾತಿಯ ಅಸ್ಮಿತೆಗಳನ್ನು ಮನಸ್ಸಿನಾಳಕ್ಕೆ ಇಳಿಸಲಾಗುತ್ತಿದೆ. ಕೋಮುವಾದವನ್ನು ಜಾತಿವಾದವನ್ನು ಸೋಲಿಸದಿದ್ದರೆ ಜನರ ಬದುಕು ತೀವ್ರವಾಗಿ ತೊಂದರೆಗೆ ಒಳಗಾಗಲಿದೆ.
14. ಸೇವೆಗಳ ಖಾಸಗೀಕರಣ: ವಿದ್ಯುತ್, ಸಾರಿಗೆ, ನೀರು, ರಸ್ತೆ, ಮುಂತಾದ ಸೇವೆಗಳ ಖಾಸಗೀಕರಣವನ್ನು ಮಾಡಲಾಗುತ್ತಿದೆ. ಎಲ್ಲಾ ಸೇವೆಗಳಿಗೂ ಜನರೇ ಪೂರ್ಣವಾಗಿ ಹಣ ಪಾವತಿಸಿಬೇಕೆಂಬ ಕಾರ್ಪೊರೇಟ್ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇವುಗಳನ್ನು ತಡೆಯದಿದ್ದರೆ ಮುಂದೆ ಸಾಮಾನ್ಯರಿಗೆ ಯಾವುದೂ ಸಿಗುವುದಿಲ್ಲ.
15. ಹೆಚ್ಚುತ್ತಿರುವ ಬಡವ-ಶ್ರೀಮಂತ ಅಸಮಾನತೆ: ದೇಶವನ್ನು ಮುನ್ನಡೆಸುವ ಕಾರ್ಮಿಕರ ಶ್ರಮ, ನೆಲ, ಜಲ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಲೂಟಿ ಹೊಡೆಯುವ ನೀತಿಗಳಿಂದಾಗಿ ಬಿಲಿಯಾಧಿಪತಿಗಳು ಭಾರತವನ್ನು ಕಬ್ಜ ಮಾಡಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಅಗಾಧವಾಗಿ ಬೆಳೆದಿದೆ. ಈ ಅಸಮಾನತೆಯನ್ನು ಇಲ್ಲವಾಗಿಸಬೇಕು.
16. ಬಯಲು ಸೀಮೆಯ ನೀರಾವರಿ ಪ್ರಶ್ನೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮುಂತಾದ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕೃಷ್ಣಾ ನೀರಿನಲ್ಲಿ ಈ ಭಾಗಕ್ಕೆ ನೀರನ್ನು ಒದಗಿಸಬೇಕು.
17. ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ: ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಗಳ ಹಣಕಾಸು, ಶಾಸನಾತ್ಮಕ ಮತ್ತು ಆಡಳಿತಾತ್ಮಕ ಹಕ್ಕುಗಳ ಮೇಲೆ ತೀವ್ರವಾದ ದಾಳಿಗಳನ್ನು ಮಾಡುತ್ತಿದೆ. ಸಂವಿಧಾನದ ಒಕ್ಕೂಟ ತತ್ವದ ಅಡಿಪಾಯವನ್ನು ದುರ್ಬಗೊಳಿಸುತ್ತಿದೆ. ರಾಜ್ಯಗಳು ಈ ದಾಳಿಗಳ ವಿರುದ್ಧ ಪ್ರಬಲವಾಗಿ ನಿಲ್ಲಬೇಕಾಗಿದೆ.
18. ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು: ರಾಜ್ಯ ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಮೆರವಣಿಗೆ, ಹೋರಾಟಗಳನ್ನು ನಡೆಸುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲು, ಕೇಂದ್ರ ಸರ್ಕಾರದ ವಿಧಾನಗಳನ್ನೇ ಬಳಸುತ್ತಿರುವುದು ಸರಿಯಲ್ಲ. ಜನ ವಿರೋಧಿ ನೀತಿಗಳ ವಿರುದ್ಧ ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿರೋಧವನ್ನು ಒಡ್ಡಲು ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಬೇಕು.
19. ಧರ್ಮಸ್ಥಳದಲ್ಲಿನ ಎಲ್ಲಾ ಅಸಹಜ ಸಾವುಗಳು, ಭೂಕಬಳಿಕೆ, ಮೈಕ್ರೋಫೈನಾನ್ಸ್ ಕುರಿತು ಸಮಗ್ರ ತನಿಖೆ ನಡೆಯಬೇಕು.
ಇದನ್ನೂ ನೋಡಿ: ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ಹೋರಾಟ | ಕೇಂದ್ರ ಸರಕಾರ ಕೊಟ್ಟ ಭರವಸೆ ಏನು? Janashakthi Media
