“ಯುಎಸ್‍ ಜಗಳಗಂಟ ಪುಂಡನಂತೆ ವರ್ತಿಸುತ್ತಿದೆ”- ಇರಾನ್‍ ಮೇಲೆ ದಾಳಿಗೆ ಸಿಪಿಐ(ಎಂ) ಖಂಡನೆ

ನವದೆಹಲಿ: ಯುಎಸ್ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿರುವ ದಾಳಿಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಇರಾನ್‌ನ ರಾಷ್ಟ್ರೀಯ ಸಾರ್ವಭೌಮತ್ವ, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಎಲ್ಲಾ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅದು ಹೇಳಿದೆ. ಜಗಳ

ಇರಾನ್‌ನೊಂದಿಗೆ ನಡೆಯುತ್ತಿರುವ ಮಾತುಕತೆಗಳನ್ನು ನಿರ್ಲಕ್ಷಿಸಿ ಯುಎಸ್‍ ಮತ್ತು ಇಸ್ರೇಲ್ ಈ ದಾಳಿಗಳನ್ನು ನಡೆಸಿವೆ. ಈ ದಾಳಿಗಳು ಮತ್ತು ಯುಎಸ್‍ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಂದ ಅವರುಗಳಿಗೆ ಈ ಮಾತುಕತೆಗಳಲ್ಲಿ ಎಂದಿಗೂ ನಂಬಿಕೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ನ್ಯಾ. ಯಶವಂತ್‌ ವರ್ಮಾ ವಿರುದ್ಧದ ತನಿಖಾ ಸಮಿತಿ ಮರು ರಚಿಸಿದ ಲೋಕಸಭಾ ಸ್ಪೀಕರ್‌

ಯುಎಸ್‍ ಸಾರ್ವಭೌಮ ರಾಷ್ಟ್ರಗಳ ಮೇಲೆ ಮನಬಂದಂತೆ ದಾಳಿ ಮಾಡುವ ಜಗಳಗಂಟ ಪುಂಡನಂತೆ ವರ್ತಿಸುತ್ತಿದೆ. ವೆನೆಜುವೆಲಾ ಮೇಲಿನ ಇತ್ತೀಚಿನ ದಾಳಿ ಮತ್ತು ಕ್ಯೂಬಾಗೆ ನೀಡಲಾದ ಬೆದರಿಕೆಗಳ ನಂತರ ಇರಾನ್ ಮೇಲೆ ಈ ದಾಳಿ ನಡೆದಿದೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಸ್ರೇಲ್‌ ಭೇಟಿಯನ್ನು ಮುಗಿಸಿದ ಕೂಡಲೇ ಇರಾನ್ ಮೇಲಿನ ಈ ದಾಳಿ ನಡೆದಿದೆ. ಭಾರತ ಸರ್ಕಾರವು ತನ್ನ ಮಿತ್ರರಾಷ್ಟ್ರ ಇರಾನ್ ಮೇಲಿನ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಮತ್ತು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದನ್ನೂ ನೋಡಿ: “ಯು.ಎಸ್. ಸಾಮ್ರಾಜ್ಯಶಾಹಿ: ಓದುಗರ ಅಲೆ ಎಬ್ಬಿಸಿದ ಪುಸ್ತಕ” Janashakthi Media

Donate Janashakthi Media

Leave a Reply

Your email address will not be published. Required fields are marked *