ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ. ರೇವಣ್ಣ ನಡೆಸಿದ್ದಾರೆನ್ನಲಾದ ಲೈಂಗಿಕ ಹಗರಣದ ಕುರಿತು ಎಸ್‌ಐಟಿ ತನಿಖೆ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ ) ಕರ್ನಾಟಕ ರಾಜ್ಯ ಮಂಡಳಿ ಸ್ವಾಗತಿಸಿದೆ. ಸಿಪಿಐ
ಇದನ್ನು ಓದಿ : ಪೆನ್‌ಡ್ರೈವ್ ಪ್ರಕರಣ : ಪ್ರಜ್ವಲ್ ರೇವಣ್ಣ ಉಚ್ಛಾಟನೆ ಸಾಧ್ಯತೆ?
ಜನರನ್ನು ರಕ್ಷಿಸಬೇಕಾದ ಜನಪ್ರತಿನಿಧಿಗಳೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಹೀನ ಕೃತ್ಯವು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಸಾವಿರಾರು ಮಹಿಳೆಯರ ಮೇಲೆ ಎಸಗಿದ್ದಾರೆನ್ನಲಾದ ದೊಡ್ಡ ಪ್ರಮಾಣದ ಲೈಂಗಿಕ ಹಗರಣದ ಸಂತ್ರಸ್ಥರಾಗಿರುವ ಮಹಿಳೆಯರ ರಕ್ಷಣೆಗೆ ವಿಶೇಷ ಭದ್ರತೆ ಒದಗಿಸಬೇಕು ಹಾಗೂ ಲೈಂಗಿಕ ಹಗರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆಗ್ರಹಿಸಿದ್ದಾರೆ. ಸಿಪಿಐ
ಇದನ್ನು ನೋಡಿ : ಹತ್ತು ವರ್ಷದಲ್ಲಿ ಹೆಣ್ಣುಮಕ್ಕಳ ಸಂಕಟ ಮೋದಿಗೆ ತಾಗಲಿಲ್ಲವೆ? Janashakthi Media