ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ ವೃದ್ಧನ ತಲೆಯಲ್ಲಿ ರಕ್ತ? ಕಾರಣವೇನು??

ಶಿರಸಿ: ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ ವೃದ್ಧನ ತಲೆಗೆ ಏಟು ಬಿದ್ದಿದೆ, ಕಾರಣ ಏನೆಂದು ಗೊತ್ತಿಲ್ಲ, ಆದರೆ ಪಿಪಿಇ ಕಿಟ್ ತೆರೆಯಬೇಡಿ, ಇವರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ವೈಧ್ಯರು ಹೇಳಿದ್ದಾರೆ. ವೈಧ್ಯರ ಈ ನಡೆ ಹಲವು ಅನುಮಾನಗಳನ್ನು ಸೃಷ್ಟಿಸಿದೆ.

“ನನ್ನ ಅಪ್ಪನಿಗೆ ತಲೆ ಮೇಲೆ ಹೊಡೆದು ಸಾಯ್ಸಿದ್ದಾರೆ, ರಕ್ತ ನೋಡಿ ಈ ಕಿಟ್‌ನಲ್ಲಿ, ಕೊರೋನಾ ಬಂದು ಸತ್ತಿದ್ದರೆ ತಲೆಯಲ್ಲಿ ರಕ್ತ ಹೇಗೆ ಬರ್ತದೆ” ಸ್ಮಶಾನದಲ್ಲಿ ಸೋಂಕಿತ ವೃದ್ಧರೊಬ್ಬರ ಶವದ ಅಂತ್ಯಸಸ್ಕಾರಕ್ಕೆ ಬಂದವರು ಮಾಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ಈ ರೀತಿಯ ಮಾತುಗಳು ಕೇಳಿಬರುತ್ತವೆ.

ಶಿರಸಿ ಸಾರ್ವಜನಿಕ ಆಸ್ಪತ್ರೆಯಲ್ಲಾದ ಘಟನೆ ಎಂದು ಕೂಡ ಹೇಳಿರುವುದು ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ದೇಶ, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಜನರನ್ನು ಕಿತ್ತು ತಿನ್ನುತ್ತಿದೆ. ಈ ನಡುವೆ ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ತಲೆಯ ಮೇಲೆ ಹೊಡೆದು ಸಾಯಿಸಿ, ಬಳಿಕ ಸೋಂಕಿತನೆಂದು ಕಿಟ್‌ನಲ್ಲಿ ತುಂಬಿ ಕಳುಹಿಸಿಕೊಟ್ಟಿರುವುದಾಗಿ ವೈರಲ್ ಆಗಿರುವ ವಿಡಿಯೋದಿಂದಾಗಿ ಜನತೆ ಇನ್ನಷ್ಟು ಭಯಭೀತರಾಗಿದ್ದಾರೆ. ಆಸ್ಪತ್ರೆ, ವೈದ್ಯರುಗಳ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಹಾಗಿದ್ದರೆ ಅಸಲಿಗೆ ಈ ವಿಡಿಯೋದಲ್ಲಿ ಹೇಳಿದಂತೆ ನಡೆದಿರುವುದು ನಿಜವೇ? ಎಂಬ ಪ್ರಶ್ನೆ ಮೂಡುತ್ತಿದೆ.

ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ್ ಭಟ್ ಪ್ರತಿಕ್ರಿಯೆ ನೀಡಿದ್ದು, ‘ವಿಡಿಯೋದಲ್ಲಿ ಹೇಳಿದಂತೆ ವೈದ್ಯರುಗಳು ಹೊಡೆದು ತಲೆಯಿಂದ ರಕ್ತ ಸುರಿಯುತ್ತಿರುವುದಲ್ಲ. ನಮ್ಮ ವೈದ್ಯರುಗಳು ಹಗಲಿರುಳು ಸೋಂಕಿತರ ಸೇವೆಗೆ ಶ್ರಮಿಸುತ್ತಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ರೀತಿ ನಮ್ಮ ಯಾವ ವೈದ್ಯರೂ ಮಾಡುವುದಿಲ್ಲ’ ಎಂದು ಡಾ.ಗಜಾನನ್ ಭಟ್ ತಿಳಿಸಿದ್ದಾರೆ. ‘ನಿನ್ನೆ (ಏ.27) ಮಧ್ಯಾಹ್ನ ನಡೆದ ಘಟನೆಯಿದು. ಅಂದು ನಾನಿರಲಿಲ್ಲ. ಇತರ ಕೋವಿಡ್ ಚಿಕಿತ್ಸೆಗೆ ನಿಯೋಜಿತ ವೈದ್ಯರು ವೃದ್ಧರಿಗೆ ಚಿಕಿತ್ಸೆ ನೀಡುತ್ತಿದ್ದರು. ವೈದ್ಧ ಶಿರಸಿ ತಾಲೂಕಿನ ಅಮಿನಳ್ಳಿ ಭಾಗದವರಾಗಿದ್ದು, 70- 72 ವರ್ಷ ವಯಸ್ಸಾಗಿದೆ. ಅವರು ಫೀವರ್ ಕ್ಲಿನಿಕ್‌ಗೆ ಬರುವಾಗ ಶೇ 70ರಷ್ಟು ಸ್ಯಾಚುರೇಶನ್ ಇತ್ತು. ಆ ಸಂದರ್ಭದಲ್ಲಿ ಆಂಟಿಜೆನ್ ರ‍್ಯಾಪಿಡ್ ಪರೀಕ್ಷೆಗೊಳಪಡಿಸಿದ್ದು, ಸೋಂಕು ಇರುವುದಾಗಿ ದೃಢಪಟ್ಟಿದೆ. ಬಳಿಕ ಆಸ್ಪತ್ರೆಯ ವಾರ್ಡ್ ಗೆ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ವಿವರಿಸಿದರು.

‘ವೃದ್ಧನಿಗೆ ರೆಮ್‌ಡಿಸಿವಿರ್ ಕೊಡಲಾಗಿದೆ. ಆಕ್ಸಿಜನ್ ಅನ್ನು ಕೂಡ ನೀಡಲಾಗುತ್ತಿತ್ತು. ಕೋವಿಡ್ ಸೋಂಕಿತರಿಗೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ, ಆ ರೀತಿ ಆಗದಂತೆ ತಡೆಯಲು ಅವರಿಗೆ ಹಿಪೆರಿನ್ ಇಂಜೆಕ್ಷನ್ ನೀಡಲಾಗಿದೆ. ಇಂಜೆಕ್ಷನ್ ಪಡೆದ ಬಳಿಕ ಅವರು ಮೂತ್ರ ಮಾಡಿ ಬರುತ್ತೇನೆಂದು ಶೌಚಾಲಯಕ್ಕೆ ಹೊರಟಿದ್ದಾರೆ. ಅಲ್ಲಿದ್ದ ನರ್ಸ್ಗಳು ಬೇರೆ ಸೋಂಕಿತರಿಗೆ ಇಂಜೆಕ್ಷನ್‌ಗಳನ್ನು ಕೊಡಲು ಹೋದಾಗ ಶೌಚಕ್ಕೆ ತೆರಳಿದ್ದ ಸೋಂಕಿತ ವೃದ್ಧ ಕುಸಿದಿದ್ದಾರೆ (ಕೊಲ್ಯಾಪ್ಸ್). ಆ ವೇಳೆಯಲ್ಲಿ ತಕ್ಷಣ ಅವರನ್ನು ಎತ್ತುಕೊಂಡು ಬಂದು ಮರುಜೀವ ಕೊಡಲು ಪ್ರಯತ್ನಿಸಿದ್ದಾರೆ. ಆದರೆ ಅವರು ಬದುಕುಳಿಯಲಿಲ್ಲ. ಕೋವಿಡ್ ಸೋಂಕಿತರಾಗಿದ್ದರಿಂದ ಅವರು ಸೋಂಕಿನಿಂದ ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ’ ಎಂದು ಗಜಾನನ್ ತಿಳಿಸಿದ್ದಾರೆ.

ಇದರ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸುವ ಅಗತ್ಯವಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವೈರಲ್ ಆದ ವಿಡಿಯೋ

Donate Janashakthi Media

2 thoughts on “ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ ವೃದ್ಧನ ತಲೆಯಲ್ಲಿ ರಕ್ತ? ಕಾರಣವೇನು??

  1. Government is not providing inj.remedisevier and stocks are not available then why the goverment is saying all reqirement products are available

  2. Government is not providing inj.remedisevier and stocks are not available then why the goverment is saying all reqirement products are available the karnataka govt. Is not responsing to public people

Leave a Reply

Your email address will not be published. Required fields are marked *