ಕೋವಿಡ್ ಪರಿಹಾರ ನಿಧಿ ಹೆಚ್ಚಳಕ್ಕೆ ಕೆಪಿಆರ್‌ಎಸ್ ಆಗ್ರಹ

ಕೋಲಾರ: ರಾಜ್ಯ ಸರಕಾರದ ಕೋವಿಡ್‌ ಪರಿಹಾರ ಘೋಷಣೆಯು ರೈತ ಹಾಗೂ ಕೂಲಿಕಾರರನ್ನು ಅಪಹಾಸ್ಯಕ್ಕೀಡು ಮಾಡುವ ಕುಹಕದಂತಿದೆ. ಇದು ಜನತೆಗೆ ಕನಿಷ್ಠ ನೆರವನ್ನುದರೂ ನೀಡಬೇಕು. ಕೋವಿಡ್-19 ಕಳೆದ 2020 ಮಾರ್ಚ್‌ನಿಂದಲೇ ಜನತೆಯನ್ನು ತೀವ್ರವಾಗಿ ಬಾಧಿಸುತ್ತಿದೆ. ಈಗಲೂ ಅದರ ಬಾಧೆ ಮುಂದುವರೆದರೂ ಸಹ ಸರಕಾರದ ಘೋಷಿತ ಪರಿಹಾರ ಏನೇನನ್ನು ಸಾಲದು ಎಂದು ರೈತ ಕೂಲಿಕಾರರು ಆಗ್ರಹಿಸಿದ್ದಾರೆ.

ಇಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿಯು ತಾಲೂಕು ಆಡಳಿತದ ಮೂಲಕ ರಾಜ್ಯದ ಬಿಜೆಪಿ ಸರಕಾರ ರೈತರು ಹಾಗೂ ಕೃಷಿಕೂಲಿಕಾರರಿಗೆ ಕೋವಿಡ್ ಪರಿಹಾರ ನಿಧಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಜ್ಞರು ಹೇಳುವ ಪ್ರಕಾರ ಸೆಪ್ಟಂಬರ್ ನಂತರ ಅದು ಮೂರನೇ ಅಲೆಯಾಗಿ ಬಾಧಿಸಲಿದೆ. ಹೀಗಾಗಿ, ಈ ಅವಧಿಯಲ್ಲಿ, ರಾಜ್ಯದ ಬಹುತೇಕ ರೈತರು, ತಮ್ಮ ಕೃಷಿ ಉತ್ಪನ್ನಗಳನ್ನು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಮತ್ತು ಸಗಟು ವರ್ತಕರು ಕೃಷಿ ಉತ್ಪನ್ನಗಳ ಬೆಲೆಗಳನ್ನು ಕೃತಕವಾಗಿ ಕುಸಿಯುವಂತೆ ಮಾಡಿದ ಲೂಟಿಗೆ ಒಳಗಾಗಿದ್ದಾರೆ. ಈ ಲೂಟಿಕೋಟಿ ಕೋರ ಕಂಪನಿಗಳು ರಾಜ್ಯದ  ರೈತರಿಂದ  ಲಕ್ಷಾಂತರ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿವೆ ಆದರೆ ಕಷ್ಟದಲ್ಲಿ ಇರುವ ರೈತರಿಗೆ ನೆರವುವಾಗುತ್ತಾ ಎಂದು ಸಂಘಟನೆಗಳು ಪ್ರಶ್ನಿಸಿದರು.

ಇದನ್ನು ಓದಿ: ರೈತ-ಕೂಲಿಕಾರರ ಕೋವಿಡ್‌ ಪರಿಹಾರ ಹೆಚ್ಚಳಕ್ಕೆ ಕೆಪಿಆರ್‌ಎಸ್‌ ಆಗ್ರಹ

ಕೋವಿಡ್ ಆತಂಕ ಹೆಚ್ಚಳಗೊಂಡಿದ್ದರಿಂದ ಮತ್ತು ಮುಂಜಾಗರೂಕ ಕ್ರಮವಹಿಸದ ಸರಕಾರದ ಬೇಜವಾಬ್ದಾರಿಯುತ ಲಾಕ್‌ಡೌನ್ ಗಳ ಕಾರಣಗಳಿಂದ ಈ ಎಲ್ಲರ ಜೊತೆ, ದಶ ಲಕ್ಷಾಂತರ ಎಕರೆ ಪ್ರದೇಶದ ಮಲ್ಲಿಗೆ ಮುಂತಾದ ಹೂಗಳ ಹಾಗೂ ಅಂಜೂರಾ, ದ್ರಾಕ್ಷಿ, ದಾಳಿಂಬೆ ಮುಂತಾದ ಹಣ್ಣುಗಳ ಮತ್ತು ವಿವಿಧ ತರಕಾರಿಗಳ ಬೆಳೆಗಾರರೂ, ಮಾರುಕಟ್ಟೆಯ ತೀವ್ರ ಕೊರತೆಯಿಂದ, ಅವುಗಳನ್ನು ಹೊಲ ಗದ್ದೆಗಳಲ್ಲಿಯೇ ಕೊಳೆಯಲು ಬಿಡುವಂತಾಗಿದೆ. ಈ ಬೆಳೆಗಳಿಗಾಗಿ ತಲಾ ಎಕರೆಗೆ ಲಕ್ಷಾಂತರ ರೂಪಾಯಿಗಳನ್ನು ರೈತರು ವೆಚ್ಚಿಸಿದ್ದರೇ, ಕೇವಲ ಕೆಲವರಿಗೆ ಎಂಬಂತೆ ತಲಾ ಎಕರೆಗೆ 4,000 ರೂ ಘೋಷಿಸಿದ್ದಾರೆ ಇದೀಗ ಹಾಲು ಉತ್ಪಾದಕರೂ ಪ್ರೋತ್ಸಾಹ ಧನವಿಲ್ಲದೇ ನಷ್ಟಕ್ಕೆ ಮಾರಾಟ ಮಾಡಿಕೊಳ್ಳತ್ತಿದ್ದಾರೆ ಎಂದು ವಿವರಿಸಿದರು.

ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ವಿವಿಧ ತರಕಾರಿ ಬೆಳೆಗಳಿಗೆ ತಲಾ ಎಕರೆಗೆ ಕನಿಷ್ಠ 25,000 ರೂಗಳನ್ನು ಒದಗಿಸಬೇಕು ಮತ್ತು ರಾಜ್ಯದ ಎಲ್ಲಾ ರೈತರು, ಕೂಲಿಕಾರರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಒಂದು ಬಾರಿ ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು. ಕೋವಿಡ್ ಪರಿಹಾರ ಆಗಿ ಯಥಾಸ್ಥಿತಿ ನಿರ್ಮಾಣವಾಗುವವರೆಗೆ, ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 10 ಕೆಜಿ ಸಮಗ್ರ ಆಹಾರ ಧಾನ್ಯಗಳ ಪೊಟ್ಟಣವನ್ನು ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು. ಪ್ರತಿ ಗ್ರಾಮ, ನಗರಗಳ ದಲಿತರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ವಿಸ್ತರಿಸಬೇಕು ಮತ್ತು ಅವುಗಳನ್ನು ಬಲಗೊಳಿಸಬೇಕು. ಅದೇ ರೀತಿ, ಕೇಂದ್ರ ಸರಕಾರದ ಸಹಾಯದೊಂದಿಗೆ ಈ ಎಲ್ಲಾ ಕುಟುಂಬಗಳಿಗೆ ಮಾಸಿಕ 10,000 ರೂಗಳ ನೆರವು ನೀಡಬೇಕು ಎಂದರು

ವೃದ್ಧಾಪ್ಯ, ಅಂಗವಿಕಲ, ವಿಧವಾ, ದೇವದಾಸಿ ಮಹಿಳೆಯರು ಮುಂತಾದವರಿಗೆ ನೀಡುವ ಮಾಸಿಕ ಸಹಾಯಧನ ಅಥವಾ ಪಿಂಚಣಿಯನ್ನು ಕನಿಷ್ಟ 3,000 ರೂಗಳಿಗೆ ಹೆಚ್ಚಿಸಿ, ಹಳೇ ಬಾಕಿಯೂ ಸೇರಿದಂತೆ ಮುಂದಿನ ಮೂರು ತಿಂಗಳ ನೆರವನ್ನು ಮುಂಗಡವಾಗಿ ನೀಡಬೇಕು. ಎಲ್ಲಾ ಶಿಕ್ಷಣಾರ್ಥಿಗಳ ವಿದ್ಯಾರ್ಥಿ ವೇತನ ಮತ್ತು ಆಹಾರಧಾನ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಕನಿಷ್ಟ ಬೆಂಬಲ ಬೆಲೆಯ ಖಾತ್ರಿ ಪಡಿಸಲು ಬೆಂಬಲ ಬೆಲೆ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಮನದ ರೈತರನ್ನು ಸಂರಕ್ಷಿಸಲು ಕೇರಳ ಮಾದರಿಯ ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು.

ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಬಡ ಬಗರ್ ಹುಕುಂ ಸಾಗುವಳಿ ಸಾರ ರಿಗೆ ಹಕ್ಕು ಪತ್ರ ನೀಡಲು ಅಗತ್ಯ ಕ್ರಮವಹಿಸಬೇಕು. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಗೆ ತಿದ್ದುಪಡಿ ಮಾಡಿ ಬಡ ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದರು ಈ ಸಂದರ್ಭದಲ್ಲಿ ಕೆಪಿಆರ್ ಎಸ್ ಮುಖಂಡರಾದ ಎನ್.ಎನ್.ಶ್ರೀರಾಮ್, ವಿ.ನಾರಾಯಣರೆಡ್ಡಿ, ಆಲಹಳ್ಳಿ ವೆಂಕಟೇಶ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *