ಏ.10ರಿಂದ ಕೋವಿಶೀಲ್ಡ್ ಬೂಸ್ಟರ್ ಡೋಸ್- ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯ!

ನವದೆಹಲಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆಯ ಮೂರನೇ ಬಾರಿ ನೀಡುವ ಬೂಸ್ಟರ್‌ ಡೋಸ್ ಆರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಈವರೆಗೆ ಕೇವಲ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್‌ ಪಡೆಯಲು ಅರ್ಹರಾಗಿದ್ದರು.

18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಎರಡನೇ ಡೋಸ್ ಲಸಿಕೆ ಪಡೆದ 9 ತಿಂಗಳು ಪೂರೈಸಿದವರಷ್ಟೇ ಈ ಬೂಸ್ಟರ್‌ ಡೋಸ್‌ಗೆ ಅರ್ಹರಾಗಿರುತ್ತಾರೆ. ಮೊದಲ ಮತ್ತು ಎರಡನೇ ಡೋಸ್‌ಗಾಗಿ ಸರ್ಕಾರಿ ಲಸಿಕೆ ಕೇಂದ್ರಗಳ ಮೂಲಕ ನಡೆಯುತ್ತಿರುವ ಉಚಿತ ಲಸಿಕೆ ಕಾರ್ಯಕ್ರಮ ಮತ್ತು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60+ ಜನಸಂಖ್ಯೆಗೆ ನೀಡುತ್ತಿರುವ ಮುನ್ನೆಚ್ಚರಿಕೆ ಡೋಸ್ ಮುಂದುವರಿಯುತ್ತದೆ. ಅಲ್ಲದೇ ಈ ಅಭಿಯಾನ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

ಬೂಸ್ಟರ್‌ ಡೋಸ್‌ ಮೊದಲ ಮತ್ತು ಎರಡನೇ ಡೋಸ್‌ನಂತೆಯೇ ಇರುತ್ತದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕೋವಾಕ್ಸಿನ್ ಪಡೆದವರಿಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದವರಿಗೆ ಕೋವಿಶೀಲ್ಡ್ ನೀಡಲಾಗುತ್ತದೆ.

ಇಲ್ಲಿಯವರೆಗೆ, ದೇಶದ ಎಲ್ಲಾ 15+ ಜನಸಂಖ್ಯೆಯಲ್ಲಿ ಸುಮಾರು 96% ಜನರು ಕನಿಷ್ಠ ಒಂದು ಕೋವಿಡ್ -19 ಲಸಿಕೆ ಡೋಸ್ ಅನ್ನು ಪಡೆದಿದ್ದಾರೆ ಮತ್ತು 15+ ಜನಸಂಖ್ಯೆಯ ಸುಮಾರು 83% ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ.

ಇಲ್ಲಿಯವರೆಗೆ 2.4 ಕೋಟಿ ಜನರಿಗೆ ಬೂಸ್ಟರ್‌ ಡೋಸ್

ಇಲ್ಲಿಯವರೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಅಂದರೆ, ಸುಮಾರು 2.4 ಕೋಟಿಗೂ ಹೆಚ್ಚು ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದೆ.‌‌

185.38 ಕೋಟಿ ದಾಟಿದ ಕೊರೊನಾ ಲಸಿಕೆ ನೀಡಿಕೆ

ವಾಸ್ತವವಾಗಿ, ಭಾರತದಲ್ಲಿ ಕೊರೋನಾ ಲಸಿಕೆಗಳ ಸಂಖ್ಯೆ ಏಪ್ರಿಲ್ 8 ರ ಹೊತ್ತಿಗೆ 185.38 ಕೋಟಿಗಳನ್ನು ದಾಟಿದೆ. 12 ರಿಂದ 14 ವರ್ಷ ವಯಸ್ಸಿನ ಹದಿಹರೆಯದವರಿಗೆ ಕೋವಿಡ್ ಲಸಿಕೆಯನ್ನು ಮಾರ್ಚ್ 16, 2022 ರಂದು ಪರಿಚಯಿಸಲಾಯಿತು. ಇದುವರೆಗೆ 2.11 ಕೋಟಿಗೂ ಹೆಚ್ಚು ಹದಿಹರೆಯದವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ತೆರಿಗೆ ಹೊರತುಪಡಿಸಿ 600 ರೂ.- ಸೀರಂ ಸಂಸ್ಥೆ

ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಭಾನುವಾರದಿಂದ ಎಲ್ಲಾ ವಯಸ್ಕರಿಗೆ ಕೊರೊನಾ ವೈರಸ್‌ ಬೂಸ್ಟರ್‌ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಅನುಮತಿಸಿದ ಬೆನ್ನಲ್ಲೇ ಲಸಿಕೆಯ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಸೀರಂ ಇನ್‌ಸ್ಟಿಟ್ಯೂಟ್‌ ಉತ್ತರಿಸಿದೆ.

ಸರ್ಕಾರದ ನಿರ್ಧಾರವನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಿಇಒ ಅದರ್‌ ಪೂನಾವಾಲಾ ಸ್ಥಾಗತಿಸಿದ್ದಾರೆ. ಇದು ನಿರ್ಣಾಯಕ ಮತ್ತು ಸಮಯೋಚಿತ ನಿರ್ಧಾರ ಎಂದಿರುವ ಲಸಿಕೆ ಉದ್ಯಮಿ, ಹಲವಾರು ದೇಶಗಳು ಬೂಸ್ಟರ್‌ ಡೋಸ್‌ ತೆಗೆದುಕೊಳ್ಳದವರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದರಿಂದ, ವಿದೇಶಕ್ಕೆ ಪ್ರಯಾಣಿಸಲು ಬಯಸುವ ಜನರು ಮೂರನೇ ಡೋಸ್‌ ಪಡೆದುಕೊಳ್ಳದಿರುವುದರಿಂದ ಕಷ್ಟಕ್ಕೆಈಡಾಗಿದ್ದಾರೆ.

ಸೀರಂ ಸಂಸ್ಥೆಯ ಕೋವಿಶೀಲ್ಡ್‌ ಗೇ ಈ ಹಿಂದಿನ ತೆರಿಗೆ ದರದ ಜೊತೆಗೆ ರೂ. 600 ಆಗಲಿದೆ  ಎಂದಿದ್ದಾರೆ.

ಕೋವೋವ್ಯಾಕ್ಸ್‌ ಅನ್ನು ಬೂಸ್ಟರ್‌ ಡೋಸ್‌ ಆಗಿ ನೀಡಲು ಅನುಮತಿ ಸಿಕ್ಕಲ್ಲಿ ಈ ಹಿಂದಿನ ತೆರಿಗೆ ದರದ ಜೊತೆಗೆ ರೂ. 900 ರೂಪಾಯಿಗೆ ಖಾಸಗಿ ಕ್ಲಿನಿಕ್‌ಗಳಲ್ಲಿ ಲಭ್ಯವಿರಲಿದೆ ಎಂದು ಪೂನಾವಾಲಾ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *