ನವದೆಹಲಿ: ಕೆಮ್ಮು ಸಿರಪ್‌ಗಳನ್ನು ತಯಾರಿಸುವ ಭಾರತದಲ್ಲಿನ 50 ಕ್ಕೂ ಹೆಚ್ಚು ಕಂಪನಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಸರ್ಕಾರದ ವರದಿಯೊಂದು ಹೇಳಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಬಿಡುಗಡೆ ಮಾಡಿದ ವರದಿಯು 2,104 ಪರೀಕ್ಷಾ ವರದಿಗಳಲ್ಲಿ 54 ಸಂಸ್ಥೆಗಳ 128 (6%) ಪರೀಕ್ಷಾ ವರದಿಗಳು ಪ್ರಮಾಣಿತ ಗುಣಮಟ್ಟದ ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದು ಹೇಳಿದೆ.
ದೇಶದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳಿಂದ ವಿಶ್ವದಾದ್ಯಂತ 141 ಮಕ್ಕಳ ಸಾವು ಪ್ರಕರಣದ ನಂತರ ವಿವಿಧ ರಾಜ್ಯಗಳಲ್ಲಿ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಕೆಮ್ಮು ಸಿರಪ್ ಮಾದರಿಗಳು ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ನಿರ್ದಿಷ್ಟ ಪ್ರಕರಣಗಳನ್ನು ಎತ್ತಿ ತೋರಿಸಿದೆ ಎಂದು ವರದಿಯ ಹೇಳಿದೆ.
ಇದನ್ನೂ ಓದಿ: ಪುಸ್ತಕದ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ | ಡಾ. ಕಫೀಲ್ ಖಾನ್ ವಿರುದ್ಧ ಎಫ್ಐಆರ್!
ಉದಾಹರಣೆಗೆ, ಗುಜರಾತ್ ಆಹಾರ ಮತ್ತು ಔಷಧ ಪ್ರಯೋಗಾಲಯವು 385 ಮಾದರಿಗಳನ್ನು ವಿಶ್ಲೇಷಿಸಿದ್ದು, ಅದರಲ್ಲಿ 20 ತಯಾರಕರ 51 ಸಿರಪ್‌ಗಳು ಗುಣಮಟ್ಟ ಪರೀಕ್ಷೆಗಳಲ್ಲಿ ವಿಫಲವಾಗಿದೆ. ಅದೇ ರೀತಿ ಮುಂಬೈನಲ್ಲಿರುವ ಸೆಂಟ್ರಲ್ ಡ್ರಗ್ಸ್ ಟೆಸ್ಟಿಂಗ್ ಲ್ಯಾಬೊರೇಟರಿಯು 523 ಮಾದರಿಗಳನ್ನು ವಿಶ್ಲೇಷಿಸಿದ್ದು, ಅದರಲ್ಲಿ 10 ಸಂಸ್ಥೆಗಳ 18 ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ.
ಚಂಡೀಗಢದ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯವು 284 ಪರೀಕ್ಷಾ ವರದಿಗಳನ್ನು ಬಿಡುಗಡೆ ಮಾಡಿದ್ದು, 10 ಸಂಸ್ಥೆಗಳ 23 ಮಾದರಿಗಳು ಗುಣಮಟ್ಟದಲ್ಲಿಲ್ಲ ಎಂದು ಕಂಡುಬಂದಿದೆ. ಅದೇ ರೀತಿ ಗಾಜಿಯಾಬಾದ್‌ನಲ್ಲಿರುವ ಭಾರತೀಯ ಔಷಧೀಯ ಆಯೋಗವು 502 ವರದಿಗಳನ್ನು ಬಿಡುಗಡೆ ಮಾಡಿದ್ದು, ಒಂಬತ್ತು ಸಂಸ್ಥೆಗಳ 29 ಮಾದರಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಹೇಳಿದೆ.
ಗ್ಯಾಂಬಿಯಾದಲ್ಲಿ ಸುಮಾರು 70 ಮಕ್ಕಳು ತೀವ್ರ ಮೂತ್ರಪಿಂಡದ ಗಾಯದಿಂದ (ಎಕೆಐ) ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಹೇಳಿತ್ತು. ಈ ಸಾವು ಭಾರತೀಯ ಔಷಧಿ ತಯಾರಕರಾದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಉತ್ಪಾದಿಸುವ ಕೆಮ್ಮು ಮತ್ತು ಶೀತ ಸಿರಪ್‌ಗಳಿಂದ ಆಗಿದೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಧಾರಾವಿ ಯೋಜನೆ | ಅದಾನಿ ಗ್ರೂಪ್ ವಿರುದ್ಧ ರ‍್ಯಾಲಿ ನಡೆಸಲಿರುವ ಉದ್ಧವ್ ಠಾಕ್ರೆ
WHO ವರದಿಗೆ ಪ್ರತಿಕ್ರಿಯೆಯಾಗಿ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರಫ್ತು ಉದ್ದೇಶಗಳಿಗಾಗಿ ಕೆಮ್ಮು ಸಿರಪ್ ತಯಾರಕರಿಂದ ಪಡೆದ ಮಾದರಿಗಳ ವಿಶ್ಲೇಷಣೆಗೆ ಆದ್ಯತೆ ನೀಡುವಂತೆ ರಾಜ್ಯ ಔಷಧ ನಿಯಂತ್ರಕರಿಗೆ ಸೂಚನೆ ನೀಡಿದೆ. ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು (DGFT) ರಫ್ತುದಾರರು ತಮ್ಮ ಕೆಮ್ಮಿನ ಸಿರಪ್‌ಗಳನ್ನು ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲು ಮತ್ತು ರಫ್ತು ಮಾಡುವ ಮೊದಲು ವಿಶ್ಲೇಷಣೆಯ ಪ್ರಮಾಣಪತ್ರವನ್ನು (CoA) ಪಡೆಯುವುದನ್ನು ಕಡ್ಡಾಯಗೊಳಿಸಿದ್ದು, ಇದು ಜೂನ್ 1 ರಿಂದ ಪ್ರಾರಂಭವಾಗುತ್ತದೆ.
ಆದಾಗ್ಯೂ, ಭಾರತ ಸರ್ಕಾರವು WHO ಯ ಸಂಶೋಧನೆಗಳನ್ನು ಅಲ್ಲಗೆಳೆದಿದ್ದು, ಮೇಡನ್ ಫಾರ್ಮಾಸ್ಯುಟಿಕಲ್ಸ್‌ನ ಮಾದರಿಗಳ ಮೇಲೆ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಿದ CDL, ಉತ್ಪನ್ನಗಳು ನಿಗದಿತ ವಿಶೇಷಣಗಳಿಗೆ ಅನುಗುಣವಾಗಿದೆ ಎಂದು ಹೇಳಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರವನ್ನು ಕಳುಹಿಸಿದ್ದು, ಆರೋಪಗಳನ್ನು ತೀವ್ರವಾಗಿ ನಿರಾಕರಿಸಿದೆ. ಅಲ್ಲದೆ ಈ ಉತ್ಪನ್ನಗಳನ್ನು ಪರೀಕ್ಷಿಸಲಾಗಿದ್ದು, ಔಷಧವೂ ಯಾವುದೇ ಹಾನಿಕಾರಕ ವಸ್ತುಗಳಿಂದ ಮುಕ್ತವಾಗಿದೆ ಎಂದು ಒತ್ತಿಹೇಳಿದೆ.
ವಿಡಿಯೊ ನೋಡಿ: ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media