ವೇದರಾಜ ಎನ್.ಕೆ.
ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪಟ್ಟಕ್ಕೆ ಬಂದು ಇದೇ ಮೇ 26ಕ್ಕೆ ಎಂಟು ವರ್ಷಗಳು ಪೂರ್ಣಗೊಂಡವು. ಇದರ ಭವ್ಯ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ. ಆಳುವ ಪಕ್ಷದ ಪ್ರಕಾರ ಇದು “ಸೇವಾ, ಸುಶಾಸನ್, ಗರೀಬ್ ಕಲ್ಯಾಣ್” ನ ಅವಧಿ. “ಥ್ಯಾಂಕ್ಯು ಮೋದೀಜೀ” ಎನ್ನಬೇಕಾದ ಸಮಯ. ಆದರೆ ದೇಶದ ವ್ಯಂಗ್ಯಚಿತ್ರಕಾರರಿಗೆ ಈ ಬಗ್ಗೆ ಏನೇನೂ ಸಹಾನುಭೂತಿ ಇದ್ದಂತಿಲ್ಲ.
“ಈ ಎಂಟು ವರ್ಷಗಳಲ್ಲಿ ನಿಮ್ಮ ಅತ್ಯುತ್ತಮ ಸಾಧನೆಯೇನು?”
“ಇದು…………….” “ಆಲ್ ಈಸ್ ವೆಲ್”
(ಅಲೋಕ್ ನಿರಂತರ್, ಫೇಸ್‍ಬುಕ್)
ಜಿಎಸ್‍ಟಿ, ನೋಟುರದ್ಧತಿ, ಲಾಕ್‌ಡೌನ್, ಕಾರ್ಮಿಕ ಸಂಹಿತೆಗಳು, ಕೃಷಿ ಕಾಯ್ದೆಗಳು ಇತ್ಯಾದಿಗಳ ನಂತರವೂ “ಎಲ್ಲವೂ ಚೆನ್ನಾಗಿದೆ” ಎಂದು ಜನಸಾಮಾನ್ಯರು ಹೇಳುತ್ತಿರುವುದು – ಇದೇ ಅವರ ಅತ್ಯುತ್ತಮ ಸಾಧನೆ!
***
ಆದರೆ , ಅದೇಕೋ 8 ಎಂದರೆ ಹಲವರಿಗೆ ನೆನಪಾಗುವುದೇ ಬೇರೆ….
‘ಎಂಟು’ ಎಂದರೆ ನನಗೆ ನವೆಂಬರ್ 8 ರ 8 ಗಂಟೆ ಏಕೆ ನೆನಪಾಗುತ್ತದೆ?
(ಸತೀಶ ಆಚಾರ್ಯ, ಫೇಸ್‍ಬುಕ್)
***
ಇನ್ನು ಕೆಲವರಿಗೆ ಬಹುಶ: ತಮ್ಮ ಪಾಕೇಟಿನಲ್ಲಾದ ಎರಡು ತೂತುಗಳು ನೆನಪಾಗುತ್ತಿವೆ.
ಎನ್‍ಡಿಎ ಸರಕಾರದ 8 ವರ್ಷಗಳು!
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಅದೇನೇ ಇರಲಿ,…
ಈ ಎಂಟು ವರ್ಷಗಳಲ್ಲಿ ತಲೆ ತಗ್ಗಿಸುವಂತದ್ದೇನನ್ನೂ ಮಾಡಿಲ್ಲ
ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
(ಇರ್ಫಾನ್, ನ್ಯೂಸ್ ಕ್ಲಿಕ್)
ನಿಜ, ಜಿಎಸ್‍ಟಿ, ನೋಟುರದ್ಧತಿ, ಲಾಕ್‍ಡೌನ್ ಅಲ್ಲದೆ ಬೆಲೆಯೇರಿಕೆ, ನಿರುದ್ಯೋಗ, ಶೋಚನೀಯ ಅರ್ಥವ್ಯವಸ್ಥೆ, ದ್ವೇಷ, ಕಾಶ್ಮೀರ ಸಮಸ್ಯೆ ಇವೆಲ್ಲವುಗಳ ನಡುವೆಯೂ ಪ್ರಧಾನಿಗಳು ತಲೆಯೆತ್ತಿ ನಡೆದು ಬಂದಿದ್ದಾರೆ!
ಆದರೆ ಇವೆಲ್ಲವುಗಳಿಂದ ತಲೆಯೆತ್ತದಂತಾಗಿರುವುದು ಯಾರಿಗೆ? ……..
(ಪಿ.ಮಹಮ್ಮದ್, ಫೇಸ್‍ಬುಕ್)
***
ಇವೆಲ್ಲ ಸುಳ್ಳು, ಇವು ‘ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್’ನ ಎಂಟು ವರ್ಷಗಳು ಎಂದು ಉತ್ಸವ ಆಚರಿಸಲು ಆಳುವ ಪಕ್ಷ ನಿರ್ಧರಿಸಿದೆಯಂತೆ. ಅದಕ್ಕೆ ಅನುಗುಣವಾಗಿ ಅದರ ‘ಥ‍್ಯಾಂಕ್ಯು ಮೋದೀಜೀ’ ಜಾಹೀರಾತುಗಳು ದೇಶದ ಎಲ್ಲ ಭಾಷೆಗಳಲ್ಲೂ ಪ್ರಕಟವಾಗುತ್ತಿವೆ.
(ಪಿ.ಮಹಮ್ಮದ್, ವಾರ್ತಾಭಾರತಿ) (ಸತೀಶ ಆಚಾರ್ಯ, ಫೇಸ್ ಬುಕ್)
***
ಆದರೂ ಇಂತಹ ಉತ್ಸವಗಳಲ್ಲಿ ಆಳುವ ಪಕ್ಷದ ಕೆಲವರಿಗೂ ಪ್ರಶ್ನೆಯೆದ್ದಿದೆಯಂತೆ……….
“ಎಲ್ಲಿಂದಲೋ ಬಚಾವೋ ಬಚಾವೋ ಎಂಬ ಕೂಗು
ಕೇಳುತ್ತಿದೆ ಎಂದೇಕೆ ನನಗೆ ಅನಿಸುತ್ತಿದೆ?”
(ರಾಜೇಂದ್ರ ಧೋಡಪ್ ಕರ್, ಫೇಸ್ ಬುಕ್)
***
ಸರಿ, ಕೊನೆಗೂ ಈ ಎಂಟು ವರ್ಷಗಳಲ್ಲಿ ಸಾಧಿಸಿದ್ದೇನು?
ಬಾಬ್ರಿಮಸೀದಿ-ರಾಮಮಂದಿರ-ಜ್ಞಾನವಾಪಿ ಮಸೀದಿ-ಶಿವಲಿಂಗ….? ಈ ಚಕ್ರದಲ್ಲಿ ಸುತ್ತುತ್ತಿರುವುದು?
8ವರ್ಷಗಳು……….(ಸುಭಾನಿ, ಡೆಕ್ಕನ್ ಕ್ರಾನಿಕಲ್)
***
ಅಥವ …
“ನಾವು” – “ಅವರು”-ಎಂದು ವಿಂಗಡಿಸಿದ್ದು!
8 ವರ್ಷಗಳು! (ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಅಥವ….8ನೇ ವರ್ಷದ ಕೊನೆಯಲ್ಲಿ ಬುಲ್‍ಡೋಜರ್ ರಾಜಕೀಯ ಆರಂಭಿಸಿದ್ದು…?
“ಸರಕಾರೀ ಕರ್ತವ್ಯದ ಮೇಲೆ” (ಮಂಜುಲ್, ನ್ಯೂಸ್9ಲೈವ್.ಕಾಂ)
***
ಅಥವ,,,, ಅದರ ಮುಂದುವರಿಕೆಯಾಗಿಯೋ ಎಂಬಂತೆ ಜ್ಞಾನವಾಪಿ, ತಾಜಮಹಲ್, ಕುತುಬ್ ಮೀನಾರ್, ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಚರಿತ್ರೆ ‘ಅಗೆಯುವ’ ಆಂದೋಲನ ಆರಂಭವಾದದ್ದು…?
“ಪ್ರತಿಯೊಂದು ಮಸೀದಿಯಲ್ಲಿ ಶಿವಲಿಂಗವನ್ನು ಹುಡಕುವ ಅಗತ್ಯವಿಲ್ಲ” ಎಂದು ಈಗ ಆರೆಸ್ಸೆಸ್ ಮುಖ್ಯಸ್ಥರೇ ಹೇಳಿರುವುದಾಗಿ ವರದಿಯಾಗಿದೆ.
ಇದಕ್ಕೆ “ಅಗೆಯುವ” ಪಡೆಗಳು ಕಿವಿಗೊಡುತ್ತಾರೆಯೇ?
ನಿಜ, ಈ ಅಗೆಯುವ ಆಂದೋಲನವನ್ನು ನಿಲ್ಲಿಸಬೇಕೆಂದು ಅವರೇನೂ ಕರೆ ನೀಡಿಲ್ಲ. ಆದ್ದರಿಂದ ಅದಕ್ಕೆ ಕಿವಿಗೊಡಬೇಕೆಂಬುದು ಅವರ ಇರಾದೆಯೂ ಆಗಿರಲಿಕ್ಕಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ದ್ರೋಣ್‍ಗಳ ಮೂಲಕ ದೇಶದಲ್ಲಾಗುತ್ತಿರುವುದನ್ನು ಪರೀಕ್ಷಿಸುತ್ತಾ ಇದ್ದೇನೆ ಎಂದಿರುವ ಪ್ರಧಾನಿಗಳೂ ಈ ಬಗ್ಗೆ ತಮ್ಮ ದಿವ್ಯಮೌನವನ್ನು ಮುರಿದಿಲ್ಲ.
***
ಅದೇನೇ ಇರಲಿ, ಈ 8 ವರ್ಷಗಳ ಒಂದು ಅತ್ಯಂತ ದೊಡ್ಡ ಸಾಧನೆಯ ಬಗ್ಗೆ ಮಾತ್ರ ಯಾರಿಗೂ ಭಿನ್ನಾಭಿಪ್ರಾಯವಿಲ್ಲ!
ಅದೆಂದರೆ ಒಂದು ‘ಗೋದೀ ಮೀಡಿಯಾ’ದ ನಿರ್ಮಾಣದ ಚಾರಿತ್ರಿಕ ಕೆಲಸ!
8 ವರ್ಷಗಳ ರಿಪೋರ್ಟ್ ಕಾರ್ಡ್: 10 ರಲ್ಲಿ 10 ಮಾರ್ಕುಗಳು (ಮಂಜುಲ್, ನ್ಯೂಸ್9ಲೈವ್.ಕಾಂ)
ಸಮಸಮಾಜ ನಿರ್ಮಾಣಕ್ಕಾಗಿ