ನವದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಎರಡನೆ ಅಲೆಯು ಅತ್ಯಧಿಕ ಜನರನ್ನು ಬಾಧಿಸಿರುವುದನ್ನು ಗಮನಿಸುವಾಗಲೇ ಇದರ ಪರಿಣಾಮವಾಗಿ ಜನರು ತೀವ್ರರೀತಿಯಲ್ಲಿ ಬಾಧೆಗೆ ಒಳಗಾಗಬಾರದೆಂದು ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಎಂಬ ಒಂದೇ ಅಸ್ತ್ರವನ್ನು ಉಪಯೋಗಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ದಿನವೊಂದಕ್ಕೆ ಒಟ್ಟು ಸೋಂಕಿತರ ಸಂಖ್ಯೆ ೨-೩ ಲಕ್ಷದಷ್ಟು ದಾಟುತ್ತಿದ್ದ ಪ್ರಕರಣಗಳು ನೆನ್ನೆ (ಜೂನ್ 10ರ ಬೆಳಿಗ್ಗೆ 8 ಗಂಟೆಯ ವರದಿಯಂತೆ) ಸೋಂಕಿತ ಹೊಸ ಪ್ರಕರಣಗಳು 94,052 ಆಗಿದೆ. ಇದೇ ಸಂದರ್ಭದಲ್ಲಿ 1,51,367 ಸೋಂಕಿತರು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ.
ಕೋವಿಡ್ ಸಾವಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ, ನೆನ್ನೆ ಒಂದೇ ದಿನ 6,148 ಆಗಿದೆ. ಇದುವರೆಗೆ ಸಾವಿಗೀಡಾದವರ ಸಂಖ್ಯೆ 3,59,676 (ಶೇಕಡಾ 1.23ರಷ್ಟು) ಆಗಿದೆ.
➡️India reports less than 1 lakh Daily New Cases for the 3rd successive day.
➡️94,052 New Cases reported in the last 24 hours.#Unite2FightCorona #StaySafe
1/6 pic.twitter.com/17RwyJbTjJ
— #IndiaFightsCorona (@COVIDNewsByMIB) June 10, 2021
ದೇಶದಲ್ಲಿ ಇದುವರೆಗೆ ಒಟ್ಟು 2,91,83,121 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಇದರಲ್ಲಿ ಶೇಕಡಾ 94.77ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು ಸಂಖ್ಯೆ 11,67,952 (ಶೇಕಡಾ 4ರಷ್ಟು) ಇದೆ.
ಸೋಂಕಿತರಲ್ಲಿ ಮೊದಲ ಸ್ಥಾನದಲ್ಲಿರುವ ಮಹರಾಷ್ಟ್ರ ರಾಜ್ಯದಲ್ಲಿ ಇದುವರೆಗೆ 58,63,880 ಕೋವಿಡ್ ಪ್ರಕರಣಗಳು ದಾಖಲಾಗಿದ್ದು 1,01,833 ಮಂದಿ ನಿಧನ ಹೊಂದಿದ್ದಾರೆ. ಸದ್ಯ ಒಟ್ಟು ಸಕ್ರಿಯ ಪ್ರಕರಣಗಳು ಶೇಕಡಾ 3ರಷ್ಟು ಇದೆ.
ಇದನ್ನು ಓದಿ: ಮುಂಬಯಿಯಲ್ಲಿ ಭರ್ಜರಿ ಮಳೆ: ರೆಡ್ ಅಲರ್ಟ್ ಘೋಷಣೆ
ಎರಡನೇ ಸ್ಥಾನವನ್ನು ಅಲಂಕರಿಸಿರುವ ಕರ್ನಾಟಕದಲ್ಲಿ ಇದುವರೆಗೆ 27,28,248 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 24,80,411 (ಶೇಕಡಾ 91ರಷ್ಟು) ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಸಾವಿನ ದರ 32,291 (ಶೇಕಡಾ 1.2) ಆಗಿದೆ. ಶೇಕಡಾ 8ರಷ್ಟು ಪ್ರಕರಣಗಳಾದ 2,15,546 ಸಕ್ರಿಯ ಪ್ರಕರಣಗಳು ಕರ್ನಾಟಕದಲ್ಲಿ ಸಕ್ರಿಯವಾಗಿವೆ. ನೆನ್ನೆ ಒಂದೇ ದಿನ 10,959 ಸೋಂಕು ದೃಢಪಟ್ಟಿದೆ ಮತ್ತು 192 ಮಂದಿ ನಿಧನರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಬೆಂಗಳೂರು ನಗರ ಜಿಲ್ಲೆಯೇ ಅಧಿಕವಾಗಿದ್ದರೂ ಒಟ್ಟು ದಾಖಲಾತಿ ವರದಿಗಳನ್ನು ಗಮನಿಸುವುದಾದರೆ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುವಿಕೆ ಮುಂದುವರೆದಿದೆ. ಕೆಲವು ಜಿಲ್ಲೆಗಳಲ್ಲಿ 500 ಹೆಚ್ಚಿನ ಹೊಸ ಪ್ರಕರಣಗಳು ದೃಢಪಟ್ಟಿವೆ.
ಮೂರನೇ ಸ್ಥಾನವನ್ನು ಅಲಂಕರಿಸಿರುವ ಕೇರಳದಲ್ಲಿ 26,74,166 ಒಟ್ಟು ಸೋಂಕಿತರು ದೃಢಪಟ್ಟಿದ್ದು ಇದುವರೆಗೆ 25,24,248 (ಶೇಕಡಾ 94ರಷ್ಟು) ಮಂದಿ ಗುಣಮುಖರಾಗಿದ್ದಾರೆ. ಆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,39,481 (ಶೇಕಡಾ 5ರಷ್ಟು) ಇದೆ. ಮತ್ತು ಒಟ್ಟು ಸಾವಿನ ಮರಣದ ದರ 10,437 (ಶೇಕಡಾ 0.4ರಷ್ಟು) ಆಗಿದೆ.
ಇದೇ ಮಾದರಿಯಲ್ಲಿ ವಿವಿಧ ರಾಜ್ಯಗಳ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಖಚಿತಪಡಿಸಿರುವ ವಿವಿಧ ರಾಜ್ಯಗಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು ಇದ್ದರೆ, ಕೆಲವು ರಾಜ್ಯಗಳಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ.
ಇದನ್ನು ಓದಿ: ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಬಿ ಎಸ್ ಯಡಿಯೂರಪ್ಪ
ದೇಶದ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಸಂಪೂರ್ಣವಾಗಿ ನಿಯಂತ್ರಣಗೊಂಡಿದೆ ಎಂಬ ಅಂಶಗಳಿವೆ. ದೆಹಲಿಯಲ್ಲಿ ಇರುವರೆಗೆ ಒಟ್ಟು 14,30128 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಮತ್ತು 14,00913 (ಶೇಕಡಾ 98ರಷ್ಟು) ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 24,704 ಮಂದಿ ನಿಧನ ಹೊಂದಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,511 (ಶೇಕಡಾ 0) ಇವೆ. ನೆನ್ನೆ 337 ಹೊಸ ಪ್ರಕರಣಗಳು ದಾಖಲಾಗಿದ್ದವು.
ಮೇಲೆ ದಾಖಲಾದ ಕೆಲವು ರಾಜ್ಯಗಳಲ್ಲದೆ ತಮಿಳುನಾಡು ಶೇಕಡಾ 9ರಷ್ಟು, ಆಂಧ್ರ ಪ್ರದೇಶ ಶೇಕಡಾ 6ರಷ್ಟು, ಓಡಿಶಾ ಶೇಕಡಾ 8ರಷ್ಟು, ತೆಲಂಗಾಣ ಶೇಕಡಾ 4ರಷ್ಟು, ಅಸ್ಸಾಂ ಶೇಕಡಾ 11ರಷ್ಟು ಸಕ್ರಿಯ ಪ್ರಕರಣಗಳು ಇವೆ. ಉಳಿದ ರಾಜ್ಯಗಳಲ್ಲಿ ಶೇಕಡಾ 3ಕ್ಕಿಂತ ಕಡಿಮೆ ಪ್ರಕರಣಗಳು ಸಕ್ರಿಯವಾಗಿವೆ.
ಇದನ್ನು ಓದಿ: ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಕಛೇರಿಗಳ ಮುಂದೆ ಪ್ರತಿಭಟನೆ: ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕರೆ
ಒಟ್ಟಾರೆ ದೇಶದಲ್ಲಿ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಅಲ್ಲದೆ ಇನ್ನತರೆ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದ ಪರಿಣಾಮವಾಗಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವುದನ್ನು ನೋಡಬಹುದು. ಸೋಂಕಿತರ ಆರೋಗ್ಯದಲ್ಲಿ ಅತಿಹೆಚ್ಚಿನ ಏರುಪೇರು ಆಗದಂತೆ ಶೀಘ್ರದಲ್ಲಿ ಕ್ರಮವಹಿಸಿದ್ದೆ ಆದಲ್ಲಿ ಕೋವಿಡ್ ಸೋಂಕನ್ನು ತಡೆಗಟ್ಟಬಹುದಾಗಿದೆ.
ಇತ್ತೀಚಿಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಹ ಅಪನಂಬಿಕೆಗಳಿಂದ ಹಾಗೂ ತಿಳುವಳಿಕೆ ಕೊರತೆಯಿಂದಾಗಿ ವೈದ್ಯರ ಮೇಲೆ ಹಲ್ಲೆ, ಕೋವಿಡ್ ನಿವಾರಣೆಗಾಗಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸಿರುಸುವ ಬಗ್ಗೆ ಮತ್ತು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಂಬಂಧಿಸಿದಂತೆ ಮತ್ತು ವೈದ್ಯ ಪದ್ದತಿಗೆ ಸಂಬಂಧಿಸಿದಂತೆ ಹರಡಲಾಗುತ್ತಿರುವು ಸುಳ್ಳುಸುದ್ದಿಗಳನ್ನು ತಡೆಯಬೇಕೆಂದು ಸರಕಾರವನ್ನು ಪತ್ರದ ಮೂಲಕ ಆಗ್ರಹಿಸಿದ್ದರು.
ಸದ್ಯ ಇರುವ ಸವಾಲು ಎಂದರೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗದಂತೆ ಗಮನಹರಿಸುವುದು ಮತ್ತು ಅದರಿಂದ ಸಾವಿನ ಪ್ರಮಾಣವು ಹೆಚ್ಚಾಗದಂತೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆರೋಗ್ಯ ಕ್ಷೇತ್ರ ಹಾಗೂ ಲಾಕ್‌ಡೌನ್ ಪರಿಹಾರ ವಿಶೇಷ ಪ್ಯಾಕೇಜ್‌ಗಳ ಘೋಷಣೆಯಿಂದಾಗಿ ಜನರ ಅವಶ್ಯಕತೆಗಳನ್ನು ಪೂರೈಸಿದ್ದಲ್ಲೇ ಆದಲ್ಲಿ ಕೋವಿಡ್ ತಡೆಗಟ್ಟಬಹುದಾಗಿದೆ.
ವರದಿ: ವಿನೋದ ಶ್ರೀರಾಮಪುರ