ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ : ಆಮೆಗತಿಯಲ್ಲಿ ಸರ್ಕಾರದ ಕ್ರಮ

ಭಾರತದಲ್ಲಿ ಕೊರೊನಾ ಕರಿನೆರಳು ದಿನೆ ದಿನೆ ಹೆಚ್ಚಾಗುತ್ತಿದ್ದು ಜನರ ನೆಮ್ಮದಿಯನ್ನು ಕಡೆಸುತ್ತಿದೆ. 24 ಗಂಟಯಲ್ಲಿ 63, 509 ಪ್ರಕರಣಗಳು ಪತ್ತೆಯಾಗಿದ್ದು 730 ಜನ ಮೃತ ಪಟ್ಟಿದ್ದಾರೆ. ಸದ್ಯ ಭಾರತದಲ್ಲಿ 72, 41, 517  ಪ್ರಕರಣಗಳು ಪತ್ತೆಯಾಗಿದ್ದು, 8, 28, 945  ಸಕ್ರೀಯ ಪ್ರಕರಣಗಳು ಇವೆ. 63, 01, 928 ಜನ ಗುಣಮುಖರಾಗಿದ್ದು, 1, 10, 645 ಜನ ಮೃತ ಪಟ್ಟಿದ್ದಾರೆ. ಕರ್ನಾಟಕದಲ್ಲಿ 7, 26, 106 ಪ್ರಕರಣಗಳು ಪತ್ತೆಯಾಗಿದ್ದು 1, 13, 459 ಸಕ್ರೀಯ ಪ್ರಕರಣಗಳು ಇವೆ. 6, 0,2505 ಜನ ಗುಣ ಮುಖರಾಗಿದ್ದು 10,142  ಜನ ಮೃತಪಟ್ಟಿದ್ದಾರೆ. ಮುನ್ನೆಚ್ಚರಿಕಾ ಕ್ರಮ ವಹಿಸುವಲ್ಲಿ ಸರಕಾರಗಳು ವಿಫಲವಾಗುತ್ತಿರುವ ಹಿನ್ನಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ  ಎಂಬ ಆರೋಪಗಳು ಕೇಳಿ ಬರುತ್ತಿವೆ.

ಜಗತ್ತಿನ ಕೊರೊನಾ ಮೀಟರ್ ಈ ರಿತಿ ಇದೆ. ಅಮೇರಿಕಾ 80,  93, 600 ಪ್ರಕರಣಗಳು ಪತ್ತೆಯಾಗಿದ್ದು 2. 20, 900 ಜನ ಮೃತ ಪಟ್ಟಿದ್ದಾರೆ. ಈ ಮೂಲಕ ಅಮೇರಿಕ ಮೊದಲ ಸ್ಥಾನದಲ್ಲಿ ಇದೆ. ಇನ್ನೂ ಭಾರತದಲ್ಲಿ 72, 41, 517 ಪ್ರಕರಣಗಳು ಪತ್ತೆಯಾಗಿದ್ದು 1, 10, 645 ಜನ ಮೃತ ಪಟ್ಟಿದ್ದಾರೆ. ಪಟ್ಟಿಯಲ್ಲಿ ಭಾರತ ಎರಡನೆ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 51, 14, 823 ಇದ್ದು, ಮೃತಪಟ್ಟವರ ಸಂಖ್ಯೆ 1, 51, 063 ಇದೆ.  ಭಾರತ ಮತ್ತು ರಷ್ಯಾದಲ್ಲಿ ಹೊಸ ಪ್ರಕರಣಗಳ  ಪ್ರಮಾಣ ದಿನೆ ದಿನೆ ಹೆಚ್ಚಾಗುತ್ತಿದೆ.  ಭಾರತದಲ್ಲಿ ಕೊವೀಡ್ ಸೊಂಕಿತರಲ್ಲಿ 9944 ಜನರ ಸ್ಥಿತಿ ಗಂಭೀರವಾಗಿದೆ.

ಮಹಾರಾಷ್ಟ್ರದಲ್ಲಿ 15, 43,  837 ಪ್ರಕರಣಗಳು ಪತ್ತೆಯಾಗಿವೆ. 41, 170 ಜನ ಸಾವನ್ನಪ್ಪಿದ್ದಾರೆ. ಕೊವೀಡ್ ಸೋಂಕಿತರ  ಪಟ್ಟಿಯಲ್ಲಿ  ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ ಇದೆ.  ಆಂದ್ರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 7,63, 573 ಇದೆ. 6291 ಜನ ಸಾವನ್ನಪ್ಪಿದ್ದಾರೆ. ಪಟ್ಟಿಯಲ್ಲಿ ಆಂದ್ರ ಎರಡನೇ ಸ್ಥಾನದಲ್ಲಿ ಇದೆ. ಕರ್ನಾಟಕದಲ್ಲಿ  7, 26, 106 ಪ್ರಕರಣಗಳು ಪತ್ತೆಯಾಗಿದ್ದು, 10,142 ಜನ ಮೃತ ಪಟ್ಟಿದ್ದಾರೆ. ಪಟ್ಟಿಯಲ್ಲಿ ಕರ್ನಾಟಕ ಎರಡನೇ  ಸ್ಥಾನದಲ್ಲಿ ಇದೆ. ತಮಿಳುನಾಡಿನಲ್ಲಿ 6,65,930 ಪ್ರಕರಣಗಳು ಪತ್ತೆಯಾಗಿದ್ದು 10,371 ಜನ ಮೃತ ಪಟ್ಟಿದ್ದಾರೆ. ತಮಿಳುನಾಡು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದೆ. ನಾಲ್ಕನೆ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 4,42, 382 ಪ್ರಕರಣಗಳು ಪತ್ತೆಯಾಗಿದ್ದು, 6467 ಜನ ಮೃತ ಪಟ್ಟಿದ್ದಾರೆ. ಐದನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಸೋಂಕಿತರ ಪ್ರಮಾಣ  3, 14, 224 ಇದ್ದು  5854  ಜನ ಮೃತ ಪಟ್ಟಿದ್ದಾರೆ.

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ತೀವ್ರ ನಿಗಾ ಘಟಕಕ್ಕೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಆತಂಕವನ್ನು ಮೂಡಿಸಿದೆ. ಬೆಂಗಳೂರಿನಲ್ಲಿ ಕೋವಿಡ್​​ನಿಂದ ಆಸ್ಪತ್ರೆಗಳ ತೀವ್ರ ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ತಿಂಗಳ ಆರಂಭದ ದಿನಗಳಲ್ಲಿ ತೀವ್ರ ನಿಗಾ ಘಟಕ (ಐಸಿಯು)ಕ್ಕೆ ದಾಖಲಾದವರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.  ಸದ್ಯ ಐಸಿಯು ನಲ್ಲಿ 923 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವೆಂಬರ್, ಡಿಸೆಂಬರ್​ನಲ್ಲಿ ಇನ್ನಷ್ಟು ಜನರನ್ನು ಕೊರೊನಾ ಬಾಧಿಸುವ ಆತಂಕ ಎದುರಾಗಿದೆ. ಅಸ್ತಮಾ, ಉಸಿರಾಟದ ಸಮಸ್ಯೆ ಇರುವವರಿಗೆ ಕೊರೊನಾ ಬಾಧಿಸಿದರೆ, ಐಸಿಯು ಸೇರಿದಂತೆ ಬೆಡ್ ಸಮಸ್ಯೆ ಕೂಡ ಶುರುವಾಗಲಿದೆ. ಹೋಮ್‌ ಐಸೋಲೇಷನ್​​​ನಲ್ಲಿ ಇರುವವರ ಆರೋಗ್ಯ ಉತ್ತಮ ರೀತಿಯಲ್ಲಿ ನಿರ್ವಹಣೆ ಆಗದೆ ಇರುವುದು ಒಂದೆಡೆಯಾದ್ರೆ, ಹೃದಯ ಸಂಬಂಧಿ ಸಮಸ್ಯೆಗಳಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿರೋದು ಆತಂಕದ ಸಂಗತಿಯಾಗಿದೆ.

ರಾಜ್ಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸದಿರುವುದು ಮತ್ತು  ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆಗೆ ಇಳಿದಿರುವುದ ಜನರನ್ನು ಆತಂಕಕ್ಕೆ ತಳ್ಳಿದೆ. ಸರಕಾರದ ನಿರ್ಲಕ್ಷದಿಂದಾಗಿ ರಾಜ್ಯ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೆ ಬರಲು ಕಾರಣ  ಎಂದು ಸಿಐಟಿಯು ಮುಖಂಡ ಲಿಂಗರಾಜ್ ರವರು ಆರೋಪಿಸಿದ್ದಾರೆ.

ರಾಜ್ಯದ ಆರೋಗ್ಯ ಇಲಾಖೆಯನ್ನು ಕೇರಳ ಮಾದರಿಯಲ್ಲಿ ಸುಧಾರಣೆ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.  ಕೊರೊನಾ ಸಂದರ್ಭದಲ್ಲಿ ಕೇರಳದ ಆರೋಗ್ಯ ಇಲಾಖೆ ಕಾರ್ಯವನ್ನು ಕರ್ನಾಟಕದಲ್ಲಿ ರಚನಾತ್ಮಕವಾಗಿ ಜಾರಿ ಮಾಡಲಿದ್ದೇವೆ ಎಂದು ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊವೀಡ್ ಪರೀಕ್ಷೆಯನ್ನು ಹೆಚ್ಚಿನ ರೀತಿಯಲ್ಲಿ ನಡೆಸಲಾಗುತ್ತಿದೆ. ಆದರೆ ವರದಿ ಬರಲು ಕೆಲವೆಡೆ ವಿಳಂಬವಾಗುತ್ತಿದೆ. ಅಗತ್ಯ ಮುನ್ನೆಚರಿಕೆಗಳನ್ನು ಪಡೆಯುವಲ್ಲಿ ಸರಕಾರ ಪದೆ ಪದೆ ಎಡವುತ್ತಿದ್ದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ವೈದ್ಯರು, ಕೊರೊನಾ ವಾರಿಯರ್ಸ್, ಶಿಕ್ಷಕರು, ಸಾರಿಗೆ ಸಿಬ್ಬಂದಿ, ಅಧಿಕಾರಿಗಳು ಸುರಕ್ಷತಾ ಪರಿಕರಗಳಿಲ್ಲದೆ ಸಾವನ್ನಪ್ಪುತ್ತಿದ್ದಾರೆ.

ತನ್ನ ವೈಫಲ್ಯವನ್ನು ಮರೆ ಮಾಚಲು ಸರಕಾರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಬಹಳಷ್ಟು ಜನ ಸಚಿವರು ಮಾಸ್ಕ ಧರಿಸದೆ, ದೈಹಿಕ ಅಂತರ ಕಾಪಾಡದೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.  ಆರೋಗ್ಯ ಸಚಿವರ ಸ್ಥಾನವನ್ನು ಬದಲಾಯಿಸುವ ಮೂಲಕ ಸರಕಾರ ತನ್ನ ವೈಫಲ್ಯವನ್ನು ಖಚಿತ ಪಡಿಸಿಕೊಂಡಿದೆ. ಇನ್ನಾದರು ಸರಕಾರ ಎಚ್ಚತ್ತು ಕೊಳ್ಳಬೇಕಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಪ್ರಕರಣಗಳು ಹೆಚ್ಚಾಗಬಹುದು ಎಂದು ತಜ್ಙರು ಹೇಳುತ್ತಿದ್ದಾರೆ. ಅದಕ್ಕೆ ಬೇಕಾದ ಅಗತ್ಯ ಸೌಲಭ್ಯವನ್ನುಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ  ಜನರ ಆರೋಗ್ಯವನ್ನು ಕಾಪಾಡಲು ಮುಂದೆ ಬರಬೇಕಿದೆ.

Donate Janashakthi Media

Leave a Reply

Your email address will not be published. Required fields are marked *