ಕರೋನಾ ಕಾಲದಲ್ಲಿ ಜೀವನದ ಮತ್ತು ಜೀವನೋಪಾಯದ ಹಕ್ಕಿನ ಮೇಲೆ ದಾಳಿ

ಪ್ರತಿರೋಧ ಮತ್ತು ಪರಿಹಾರ ಕುರಿತು ವೆಬಿನಾರ್ –  ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆಯ ವೆಬಿನಾರ್ ಸರಣಿ

ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆ ಭಾಗವಾಗಿ “ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ” ಥೀಮ್ ಅಡಿಯಲ್ಲಿ ‘ಕೊರೋನಾ ಕಾಲದಲ್ಲಿ ಜೀವನದ ಮತ್ತು ಜೀವನೋಪಾಯದ ಹಕ್ಕಿನ ಮೇಲೆ ದಾಳಿ, ಪ್ರತಿರೋಧ ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತು ಅಕ್ಟೋಬರ್ 10 ಸಂಜೆ 5 ಗಂಟೆಗೆ ವೆಬಿನಾರ್ ನಡೆಯಿತು.

ಈ ವೆಬಿನಾರ್ ನ  ದಿಕ್ಸೂಚಿ ಭಾಷಣವನ್ನು ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿಯಾದ ತೀಸ್ತಾ ಸೆಟಲ್‍ವಾಡ್ ರವರು ಮಾಡಿದರು.  ಜೀವನೋಪಾಯದ ಹಕ್ಕಿನ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಸಂವಿಧಾನಿಕ ಹಕ್ಕು, ಪ್ರಜಾಪ್ರಭುತ್ವ ಹಕ್ಕಿಗಳನ್ನು ದಮನಗೊಳಿಸುತ್ತಿರುವುದು ಆತಂಕದ ಸಂಗತಿ. ವಿಶ್ವಸಂಸ್ಥೆಯೂ ಕೂಡ ನಮ್ಮ ಆರ್ಥಿಕತೆ ಹಾಗೂ ನಮ್ಮ ಹಕ್ಕಿನ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಕಳವಳವ್ಯಕ್ತ ಪಡಿಸಿದೆ. ಕೊರೊನಾ ಸಮಯದಲ್ಲಂತೂ ಜೀವನೋಪಾಯದ ಹಕ್ಕುಗಳನ್ನು ರಕ್ಷಿಸುವಲ್ಲಿ ಮೊದಿ ಸರಕಾರ ವಿಫಲವಾಯಿತು. ಅಸಂಘಟಿತ ಕಾರ್ಮಿರ ಜೊತೆ ಕ್ರೂರವಾಗಿ ನಡೆದುಕೊಳ್ಳಲಾಯಿತು. ರೈತ- ಕಾರ್ಮಿಕ ವಿರೊಧಿ ಕಾನೂನುಗಳ ಮೂಲಕ ಜೀವನವನ್ನು ನಾಶ ಪಡಿಸಲಾಗುತ್ತಿದೆ. ಶಿಕ್ಷಣದ ಮೇಲೆಯೂ ದಾಳಿ ಮಾಡಿ ಜನರ ಜೀವನವನ್ನು ಗುಲಾಮಗಿರಿಯತ್ತ ಕೊಂಡೊಯ್ಯಲಾಗುತ್ತಿದೆ. ಅಂಬಾನಿ ಮತ್ತು ಅಬಾನಿ ಮಾತ್ರ ಕೇಂದ್ರ ಸರಕಾರದಿಂದ ಲಾಬ ಪಡೆದರೆ ಹೊರತು ಸಾರ್ವಜನಿಕರ ಹಿತವನ್ನು ಕಾಪಾಡಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ವೆಬಿನಾರ್ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ಹೆಚ್.ಎನ್. ನಾಗಮೋಹನ ದಾಸ್ ರವರು ಮಾತನಾಡುತ್ತಾ ಈಗಿನ ಪತ್ರಿಕ್ಯೋದ್ಯಮಗಳು ಸೇವಾಕ್ಷೇತ್ರವಾಗಿ ಉಳಿದಿಲ್ಲ ಅದೊಂದು ವ್ಯಾಪಾರಿ ಕ್ಷೇತ್ರವಾಗಿದೆ. ಇದರಲ್ಲಿ ಬಂಡವಾಳ ಹೂಡಿ ಲಾಭ ಗಳಿಸಬಹುದು, ಇದರಲ್ಲಿ ಟ್ರಾನ್ಸ್ ನ್ಯಾಷನಲ್ ಕಂಪನಿ, ಮಲ್ಟಿ ನ್ಯಾಷನಲ್ ಕಂಪನಿ, ಖಾಸಗಿ ಸಂಸ್ಥೆಗಳು, ರಾಜಕೀಯ ವ್ಯಕ್ತಿಗಳು, ರಾಜಕೀಯ ಪಕ್ಷಗಳು ಈ ಕ್ಷೇತ್ರದಲ್ಲಿ  ಹಸ್ತಕ್ಷೇಪ ಮಾಡುತ್ತಿರುವುದರಿಂದ ಮಾಧ್ಯಮ ವ್ಯಾಪಾರಿ ಕ್ಷೇತ್ರವಾಗಿದೆ ಎಂದು ಅಸಮಧಾನ ವ್ಯಕ್ತ ಪಡಿಸಿದರು. ಹೆಚ್ಚು ಲಾಭಗಳಿಸಬೇಕು, ಹೆಚ್ಚ ಪ್ರಸರಣ ಮಾಡಬೇಕು,  ಪ್ರಸರಣಕ್ಕಾಗಿಯೇ ಕ್ರೈಂ ಸುದ್ದಿ, ಸೆಕ್ಸ್ ಸುದ್ದಿಗಳು, ರೋಚಕ ಸುದ್ದಿಗಳನ್ನೇ ನೀಡುವುದೇ ಇಂದಿನ ಮಾಧ್ಯವಮಗಳು ಕಂಡುಕೊಂಡ ದಾರಿಗಳಾಗಿವೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಪತ್ರಿಕ್ಯೋದ್ಯಮಗಳು ಬಣ್ಣ ಬಳಿದು, ಸತ್ವ ಕಳೆದುಕೊಂಡ ಸುದ್ದಿಗಳನ್ನು ನೀಡುತ್ತಿವೆ. ಈಗಿನ ಮಾಧ್ಯಮಗಳಲ್ಲಿ, ವೃತ್ತಿಪರತೆಯೂ ಇಲ್ಲ ಮೌಲ್ಯಗಳನ್ನು ಕೂಡ ಕಾಣದಂತಾಗಿದೆ.  ಈಗಿನ ಪತ್ರಿಕೆಗಳು ಕೂಡ ಸುದ್ದಿಗಳ ಬದಲಾಗಿ ಹೆಚ್ಚು ಜಾಹೀರಾತುಗಳಿಗೆ ಆಧ್ಯತೆ ನೀಡುತ್ತಿದೆ. ಲಾಭಗಳನ್ನೇ ನೋಡುತ್ತಿವೆ. ಲಾಕ್ ಡೌನ್ ಹೆರಿಕೆಯಿಂದ ಎಷ್ಟು ಸಾವು ನೋವುಗಳು ಆಗಿವೆ. ಮಹಿಳಾ ಪರಿಸ್ಥಿತಿ ಮತ್ತು ಮಕ್ಕಳ ಸ್ಥಿತಿಗತಿ ಗಂಭೀರವಾಗಿವೆ. ಮುಂದೇನು ಎಂಬ ಭಯ ಭೀತಿ ಜನರಿಗೆ ಎದುರಾಗಿದೆ. ಯಾಕೆ ಸರ್ಕಾರಗಳು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರೌಢಶಾಲೆ ಕಟ್ಟಬಾರದು, ಯಾಕೆ ಆಸ್ಪತ್ರೆಗಳನ್ನು ಹೆಚ್ಚಿಸಬಾರದು?  ಇದರಿಂದ ಉದ್ಯೋಗ ಹೆಚ್ಚಾಗುತ್ತೆ, ಜೊತೆಗೆ ಆರೋಗ್ಯವೂ ಹೆಚ್ಚುತ್ತದೆ. ರಸ್ತೆ ನಿರ್ಮಾಣ, ಮತ್ತು ಶ್ರೀಮಂತರಿಂದ ಹೆಚ್ಚು ಟ್ಯಾಕ್ಸ್ ಹೆರಿಕೆ ಮಾಡಬೇಕು. ಹೊರದೇಶದಿಂದ ಸಾಲ ಪಡೆಯಬೇಕು. ಆದರೆ ಸರ್ಕಾರ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ. ಹಾಗಾಗೀ ಈ ಸಂಕಷ್ಟ ಪರಿಸ್ಥಿತಿಯಲ್ಲಿ ನಮಗೆ ಜನಪರ ಕಾಳಜಿಯುಳ್ಳ, ಸಮನ್ವಯತೆಯುಳ್ಳ ಪರ್ಯಾಯ ಮಾಧ್ಯಮಗಳ ಅವಶ್ಯ ಕತೆ ಇದೆ. ಜನಶಕ್ತಿ ಮೀಡಿಯಾ ಅದನ್ನು ಪೂರ್ಣಗೊಳಿಸಲಿ ಎಂದು ಶುಭ ಕೋರಿದರು.

 ಈ ವೆಬಿನಾರ್ ನಲ್ಲಿ ‘ಜಿಡಿಪಿ ಕುಸಿತ‘ ಕುರಿತಾಗಿ ಹಂಪಿ ವಿ.ವಿ. ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಚಂದ್ರಪೂಜಾರಿ ರವರು ಮಾತನಾಡುತ್ತಾ ಜಿಡಿಪಿ ಕುಸಿತಕ್ಕೆ ಲಾಕ್ ಡೌನ್ ಕೋರೊನಾ ಕಾರಣವಲ್ಲ. 2016 ರ ನಂತರದ ಕೇಂದ್ರ ಸರ್ಕಾರ ಸ್ವಯಂಕೃತ ಅಪರಾಧಗಲೇ ಇವತ್ತಿನ ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ. ಅವುಗಳಲ್ಲಿ ನೋಟು ಅಮಾನೀಕರಣ. 2017 ರ ಜಿಎಸ್ ಟಿ, ಿದರಿಂದಾಗಿ 20 ಲಕ್ಷದ ವ್ಯಾಪರಿಯೂ ಕೂಡ ಜಿಎಸ್ ಟಿಗೆ ಒಳಪಡುತ್ತಾನೆ. ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯೋಮಿಗಳು  ನಷ್ಟಕ್ಕೆ ಒಳಗಾದರು. 2019ರಲ್ಲೇ ಜಿಎಸ್ ಟಿ 5.02ಕ್ಕೆ ಇಳಿಕೆಯಾಗಿತ್ತು. ಕೆಂದ್ರ ಸರ್ಕಾರ ಜಾರಿಗೆ ತಂದು ಈ ಯೋಜನೆಗಳಿಂದ ಸಣ್ಣ ಪುಟ್ಟ ವ್ಯಾಪಾರಿ, ಉದ್ಯೋಮಿಗಳು ಮಿಚ್ಚಿ ಹೋಗಿವೆ ಎಂದು ಆಲ್ ಇಂಡಿಯಾ ಅಸೂಷಿಯಷೇನ್  ಮ್ಯಾನಿಪ್ಯಾಚರ್ ತಿಳಿಸಿದೆ.

ಅವೈಜ್ಞಾನಿ ಲಾಕ್ ಡೌನ್ ಲಾಕ್ ನಿಂದಾಗಿ ಅಸಂಘಟಿತ ವಲಯದಲ್ಲಿ 90% ಜನ ಕೆಲಸ ಮಾಡುತ್ತಿದ್ದರು. ಇವರೆಲ್ಲರ ಮೇಲೆ ದೊಡ್ಡ ಹೊಡೆತ ಬಿದ್ದಿದೆ ಎಂದು ALO ವರದಿ ಮಾಡಿದೆ. ಜುಲೈ ನಲ್ಲಿ 5 ಮಿಲಿಯನ್ ನಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. 70% ಕೇಳಸ್ಥರದ ಜನದ ಬದುಕು ಮತ್ತಷ್ಟು ಹೀನವಾಗಿದೆ. ಇದರ ನಡುವೆ ಕೃಷಿ ಕಾಯ್ದೆ ತರುತ್ತಿರುವುದು ಇವೆಲ್ಲವೂ ಕೇಂದ್ರ ಸರ್ಕಾರದ ಬೇಜಾವಬ್ದಾರಿತನ. ಒಂದು ಆರ್ಥಿಕ ಕ್ಷೇತ್ರ ಅಭಿವೃದ್ದಿಯಾಗಬೇಕಾದರೆ ಪ್ರಜಾಪ್ರಭುತ್ವ, ನ್ಯಾಯಾಂಗ, ಮಾಧ್ಯಮ ಕ್ಷೇತ್ರ ರಾಜಕೀಯ ಎಲ್ಲವೂ ಒಳಗೊಂಡಿರಬೇಕು ಮತ್ತು ಬಲವಾಗಿರಬೇಕು ಎಂದು ತಿಳಿಸಿದ್ದಾರೆ.

ಈ ವೆಬಿನಾರ್ ನಲ್ಲಿ ‘ನಾಗರಿಕ ಜೀವನದ ಹಕ್ಕು‘ ಈ ವಿಷಯದ ಕುರಿತು ಚಿಂತಕರಾದ ಶಿವಸುಂದರ್ ರವರು ಮಾತನಾಡುತ್ತಾ ಸರ್ಕಾರಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಅಡ್ಡಿಯುಂಟು ಮಾಡಬಾರದು, ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾಗಿ ಬದುಕುವ ಹಕ್ಕು ಇದೇ. ಸೌಹಾರ್ದತೆ, ಘನತೆ, ಮೂಲಕ ಮೂಲಭೂತ ಶಿಕ್ಷಣ, ಆರೋಗ್ಯ ಮುಂತಾದವುಗಳು ಸಿಗಬೇಕು,  ಆದರೆ ಈಗ ಕೋವಿಡ್ ಹೆಸರಿನಲ್ಲಿ ಹಗರಣಗಳು ನಡೆಯುತ್ತಿವೆ. ನಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸಿದರೆ ದೇಶದ್ರೋಹಿಗಳೆಂದು ಜೈಲಿಗಟ್ಟುತ್ತಿದ್ದಾರೆ.  ಪ್ರತಿ ಹಂತದಲ್ಲೂ ಜನರ ಹಕ್ಕಿನ ಮೇಲೆ ದಾಳಿ ನಡೆಸುತ್ತಿದೆ. ಬರೀ ಸುಳ್ಳು ಭರವಸೆಗಳೆ ಹೆಚ್ಚಾಗುತ್ತಿವೆ. ಈ ಸಂಕಷ್ಟ ಸ್ಥಿತಿಯಲ್ಲಿ ಸಮಾಜಮುಖಯಾಗಿ ಸಮಾಲೋಚನೆಯ ಚರ್ಚೆ ಅವಶ್ಯಕತೆ ಇದೆ ಎಂದು ಶಿವಸುಂದರ್ ತಿಳಿಸಿದರು.

‘ರೈತರ ಹಕ್ಕು‘ ಕುರಿತಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾದ ಯು.ಬಸವರಾಜ ಮಾತನಾಡತ್ತಾ,  ಕೃಷಿ ಉತ್ಪನಗಳ ಖರೀದಿಯ ಹಿಡಿತವನ್ನು ವ್ಯಾಪಾರಸ್ಥರ ಕೈಯಲ್ಲಿ ಸರ್ಕಾರ ನೀಡಿದೆ. ಉತ್ಪನ್ನವನ್ನು ಹೆಚ್ಚಿಸಬೇಕು ಎಂದು ಹೇಳುತ್ತಿದ್ದಾರೆ ಯಾರಿಗಾಗಿ ಉತ್ಪನ್ನ ಹೆಚ್ಚಿಸಬೇಕು, ಯಾರಿಗಾಗಿ ಈ ಬೆಳವಣಿಗೆ ಕಾರ್ಪೂರೇಟ್ ಗಳಿಗಾಗಿ ಸರ್ಕಾರ ಹೆಚ್ಚಳದಂತಹ ಕಾರ್ಯದಲ್ಲಿ ಮುಂದಾಗುತ್ತಿದೆ ವಿನಹ ರೈತನ ಬದುಕಿಗಲ್ಲ. ಬೇವರು ಸುರಿಸಿ ದುಡಿದ ರೈತನಿಗೆ ತಾನು ಬೆಳೆದ ಬೆಳಗೆ ಬೆಲೆ ನಿಗದಿ ಮಾಡುವಂತಹ ಹಕ್ಕಿಲ್ಲ. ಈ ಕೋರೊನಾ ಮತ್ತು ಲಾಕ್ ಡೌನ್ ಪರಿಸ್ಥಿತಿಯಲ್ಲಿ ಕೃಷಿ ಮಸೂದೆಗಳ ತಿದ್ದುಪಡಿ ತಂದು ಮತ್ತಷ್ಟು ಅವರ ಜೀವನವನ್ನು ಕೆಳಸ್ಥರಕ್ಕ ಕರೆದುಕೊಂಡು ಹೋಗುತ್ತಿದೆ. ಕೃತಕ ಬೆಲೆ ನಿರ್ಮಾಣ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ಸಾರ್ವಜನಿಕ ಬಂಡವಾಳ ಹೂಡಿಕೆ ಮಾಡಬೇಕು, ಬೇಸಾಯದಲ್ಲಿ ತಂತ್ರಜ್ಞಾವನ್ನು ಅಳವಡಿಸಬೇಕು, ಆಧುನಿಕ ಯಂತ್ರಗಳನ್ನು ಅಳವಡಿಸಬೇಕು. ರೈತರ ಹಕ್ಕುಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಬೇಕು ಎಂದರು.

 ‘ಕಾರ್ಮಿಕ ಹಕ್ಕು‘ ಕುರಿತು ಸಿಐಟಿಯುನ ರಾಜ್ಯ ಕಾರ್ಯದರ್ಶಿಯಾದ ಕೆ.ಎನ್ ಉಮೇಶರವರು ಮಾತನಾಡುತ್ತಾ ಕಾರ್ಮಿಕರು ಈ ದೇಶವನ್ನು ಕಟ್ಟಿದವರು. ಆದರೆ ಈ ಕಾರ್ಮಿಕರಿಗೆ ಈ ದೇಶದಲ್ಲಿ ಗೌರವಯುತವಾಗಿ ಬಹುಕುವ ಹಕ್ಕಗಳನ್ನು ಹತ್ತಿಕ್ಕಲಾಗುತ್ತಿದೆ. ಕಾರ್ಮಿಕರು ಹೋರಾಟ ಮಾಡುವಂತಿಲ್ಲ, ತಮ್ಮ ಹಕ್ಕುಗಳನ್ನು ಕೇಳವಂತಿಲ್ಲ ಎಂಬ ಸ್ಥಿತಿ ಎದುರಾಗಿದೆ. ಕೊರೊನಾ ಮತ್ತು ಲಾಕ್ ಡೌನ್ ಹೇರಿಕೆಯಿಂದ ಎಷ್ಟೊ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.  ಜೀವನದ ಹಕ್ಕು ನಮ್ಮ ಮೂಲಭೂತು ಹಕ್ಕು. ನಾನು ಕೆಲಸ ಮಾಡಲು ಸಿದ್ದನಿದ್ದು ಲಾಕ್ ಡೌನ್ ನೆಪ ಹೇಳಿ ಲೇ ಆಪ್ ಮಾಡಿ ಅರ್ಧ ಸಂಬಳ ನೀಡಿದ್ದಾರೆ.  ಕೆಲವು ಕಡೆ ಕೆಸಲ ಮಾಡಿಸಿಕೊಂಡು ಸಂಬಳ ಕೂಡದೇ ಹೋಗಿದ್ದಾರೆ. 80%  ಕಾರ್ಮಿಕರಿಗೆ ಲಾಕ್ ಡೌನ್ ವೇಳೆ ಸಂಬಳ ನೀಡಿಲ್ಲ ಎಂದೇ ಮಾಲೀಕರ ಸಂಘದವರೇ ಹೇಳುತ್ತಿದ್ದಾರೆ. ನಾವು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ? ನಮ್ಮ ಹಕ್ಕುಗಳನ್ನು ನಾವು ಪ್ರತಿಭಟಿಸಿ ಕೇಳುವವರೆಗೂ ಸರ್ಕಾರ ಕಾರ್ಮಿಕರಿಗಾಗಿ ನೀಡುತ್ತಿಲ್ಲ. ಅವರು ಮಾಲೀಕರ ಪರವಾಗಿಯೇ ಇದ್ದಾರೆ. ಇದು ನಮ್ಮ ದುರಾದೃಷ್ಟ. ಇನ್ನಾದರು ಕಾರ್ಮಿಕ ಹಕ್ಕುಗಳನ್ನು ಬಲಪಡಿಸಿ ಅವರಿಗೆ ಬದ್ರತೆ ಹೆಚ್ಚಸಬೇಕು ಎಂದು ಹೇಳಿದರು.

ಈ ವೆಬಿನಾರ್ ನಲ್ಲಿ ‘ಉದ್ಯೋಗದ ಹಕ್ಕು‘ ಕುರಿತಾಗಿ ಡಿವೈಎಫ್‍ಐನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ರವರು ಮಾತನಾಡುತ್ತಾ . ನಿರುದ್ಯೋಗ ಮತ್ತು ನಿರುದ್ಯೋಗ ಭತ್ಯೆಗಾಗಿ ಹಿಂದಿನಿಂದಲ್ಲೂ ಹೋರಾಟಗಳು ನಡೆದಿವೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರದಲ್ಲಿ ನಿರುದ್ಯೋಗ ಹೆಚ್ಚಳ ಜಾಸ್ತಿಯಾಗಿದೆ.  ಮೋದಿಯವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಆಕ್ರೋಶದಿಂದ ಜನ ಆಚರಣೆ ಮಾಡಿದ್ದಾರೆ. ಕೊರೊನಾ ಮತ್ತು ಲಾಕ್ ಡೌನ್ ವೇಳೆ ಎಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರಧಾನಿಯವರು ಪಕೋಡಾ ಮಾರುವುದು ಉದ್ಯೋಗ ಎಂದು ಹೇಳುತ್ತಾರೆ. ಇದು ಯಾವ ರೀತಿಯಲ್ಲಿ ಸರಿ? ಸಾರ್ವಜನಿಕ ಸಂಸ್ಥೆಗಳನ್ನು ಕ್ರಮೇಣ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಜನರಿಗೆ ಉದ್ಯೋಗ ಇಲ್ಲ, ಖಾಲಿ ಇರುವ ಸ್ಥಾನಗಳು ಬರ್ತಿಯಾಗಿಲ್ಲ. ಗೌರವ ಧನ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಉದ್ಯೋಗ ನಷ್ಟಕ್ಕೆ ಅವೈಕ್ಞಾನಿಕ ಲಾಕ್ ಡೌನ್ ಕಾರಣ. ಲಾಕ್ ಡೌನ್ ಅವಧಿಯಲ್ಲಿ 1.80ಲಕ್ಷಕ್ಕೂ ಅಧಿಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಭದ್ರತೆ ಇಲ್ಲದೆ ಜನ ಹತಾಶೆಯಾಗಿದ್ದಾರೆ. ಸಮಾನ ಅವಕಾಶ, ಜೀವನ ಬದ್ರತೆ ಮತ್ತು ಆತನ ಕುಟುಂಬವನ್ನು ಗೌರವಯುತವಾಗಿ ನಡೆಸಲು ಉತ್ತಮ ಸಂಬಳ ಬೇಕು ಎಂದು ಒತ್ತಾಯಿಸಿದ್ದಾರೆ.

ಈ ವೆಬಿನಾರ್ ನ ‘ಸಾಮಾಜಿಕ ಭದ್ರತೆ’ ಯ ಕುರಿತಾಗಿ ಸಿವಿಕ್ ಸಂಸ್ಥೆಯ ಮುಖ್ಯಸ್ಥರಾದ ಕಾತ್ಯಾಯಿನಿ ಚಾಮರಾಜ್ ರವರು ಮಾತನಾಡುತ್ತಾ, ಅವೈಜ್ಞಾನಿಕ ಲಾಕ್ಡೌನ್ ನಿಂದ ಕಾರ್ಮಿಕರು, ಜನಸಾಮಾನ್ಯರು ಹಸಿವಿನಿಂದ ಸಾಯುವಂತಾಯಿತು. ಆರೋಗ್ಯದ ಸಮಸ್ಯೆಗಳು ಉಲ್ಬಣಗೊಂಡಾಗಿ ಅವರಿಗೆ ರಕ್ಷಣೆ ಕೊಡುವಲ್ಲಿ ಸರಕಾರ ವಿಫಲಗೊಂಡಿತ್ತು. ಈಗಲು ಸರಕಾರ ೆಚ್ಚೆತ್ತುಕೊಂಡಿಲ್ಲ, ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದ್ದರು ಇತ್ತ ಇದನ್ನು ನಿಯಂತ್ರಿಸುತ್ತಿಲ್ಲ. ಇತ್ತ ಜನರ ಕಷ್ಟಗಳಿಗೆ ನೆರವಾಗುತ್ತಿಲ್ಲ  ಎಂದರು.

ಜನಶಕ್ತಿ ಮೀಡಿಯಾ ಹಮ್ಮಿ ಕೊಂಡಿದ್ದ ಕಥಾ ಸ್ಪರ್ಧೆಯ ಫಲಿತಾಂಶವನ್ನು ಜ.ಮೀ ಬಳಗದ ಕೆ. ಮಹಾಂತೇಶ್ ಪ್ರಕಟಿಸಿದರು. ಸಂಗನಗೌಡ ಹೀರೇಗೌಡ  ಕಲಬುರ್ಗಿ ಯವರ  “ಭೃಂಗನಾಗೋ ನೀ ” ಮೊದಲ ಬಹುಮಾನ, ದಾದಾಪೀರ್ ಜೈಮನ್ ರವರ  “ಮೆಟ್ಟಿಲುಗಳು” ಎರಡನೇ ಬಹುಮಾನ.  ನರೇಂದ್ರ ಎಸ್ ಗಂಗೊಳ್ಳಿಯವರ ಬದುಕು ಮಾಯೆಯ ಮಾಟ  ಮೋರನೇ ಬಹುಮಾನ ಪಡೆಯಿತು. ಉಡುಪಿ ಪ್ರವೀಣ್ ಕುಮಾರ್ ಜಿ, ಬಳ್ಳಾರಿ ಬರೆದ ದುರುಗ ಹಾಗೂ ಮಸಿಯಣ್ಣ ಅರನಕಟ್ಟೆ ಯವರು ಬರೆದ ನಡತೆಯ ಹಿಂದಿನ‌ ನಡತೆ  ತೀರ್ಪುಗಾರರ  ಮೆಚ್ಚುಗೆ ಪಡೆದ ಕಥೆಗಳಾಗಿವೆ.

ಕಾರ್ಯಕ್ರಮದ ನಿರೂಪಣೆಯನ್ನು ಜನಶಕ್ತಿ ಮೀಡಿಯಾ ಬಳಗದ ಎಸ್.ವೈ, ಗುರುಶಾಂತ್ ಮಾಡಿದರು.  ವೆಬಿನಾರ್ ನ ಆಶಯವನ್ನು ಕೆ. ನೀಲಾ ತಿಳಿಸಿದರೆ ವಂದನಾರ್ಪಣೆಯನ್ನು ಗುರುರಾಜ ದೇಸಾಯಿ ಮಾಡಿದರು.

 

 

 

Donate Janashakthi Media

Leave a Reply

Your email address will not be published. Required fields are marked *