ಕೊರೊನಾ ಹಿನ್ನಲೆ ಹಂಪಿ ಉತ್ಸವ ಒಂದು ದಿನಕ್ಕೆ ನಿಗದಿ

ಬಳ್ಳಾರಿ : ವಿಜಯ ನಗರದ ವೈಭವನ್ನು ಸಾರುವ ಹಂಪಿ ಉತ್ಸವದ ಆಚರಣೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಕೊರೊನಾ ಸಂಕ್ರಾಮಿಕ ಮಹಾಮಾರಿಯಿಂದಾಗಿ ಈ ಬಾರಿಯ ಹಂಪಿ ಉತ್ಸವನ್ನು ಸರಳವಾಗಿ ಒಂದು ದಿನಕ್ಕೆ ಆಚರಣೆ ಮಾಡುವುದಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಈ ಬಾರಿಯ ಹಂಪಿ ಉತ್ಸವವನ್ನು ಸರಳವಾಗಿಯೇ ಒಂದು ದಿನದ ಮಟ್ಟಿಗೆ ಆಚರಿಸಲು ನಿರ್ಧಾರ ಮಾಡುದಾಗಿ ಬಳ್ಳಾರಿಯಲ್ಲಿ ಮಾಧ್ಯಮದವರನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ನ.05 ರವರೆಗೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ನೀತಿ ಸಂಹಿತೆ ಮುಗಿದ ನಂತರ ಹಂಪಿಯ ಸ್ವಾಮೀಜಿ ಅವರ  ಬಳಿ ಚರ್ಚಿಸಿ ದಿನಾಂಕ ನಿಗದಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ಮೈಸೂರು ದಸರಾ ಮಾಡಿದ್ದಾರೆ ಇಲ್ಲಿ ಯಾಕೆ ಅನ್ನುವ ಪ್ರಶ್ನೆಗಳು ಮೂಡಬಹುದು ಆದರೆ ಕೊರೊನಾ ಇರುವ ಕಾರಣ ಹೆಚ್ಚು ಜನರು ಸೇರಬಹುದು. ಆರೋಗ್ಯದ ದೃಷ್ಟಿಯಿಂದ ಒಂದು ದಿನದ ಸರಳ ಉತ್ಸವ ಮಾಡುತ್ತೇವೆ. ಈ ಸಾಂಕ್ರಾಮಿಕ ವೈರಾಣುವಿಗೆ ವ್ಯಾಕ್ಸಿನ್ ಸಿಗುವವರೆಗೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಅನಿರ್ವಾಯ ಕೂಡ. ಹಾಗಾಗಿ ಉತ್ಸವ ಒಂದು ದಿನಕ್ಕೆ ಸೀಮಿತ ಮಾಡಿದ್ದೇವೆ ನಂತರ ದಿನಾಕವನ್ನು ಚರ್ಚಿಸಿ ಘೋಷಿಸಲಾಗುವುದು ಎಂದು ಆನಂದ್ ಸಿಂಗ್ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡುತ್ತಾ ಅವರು ಮಹಾನಗರ ಪಾಲಿಕೆ ಆಯುಕ್ತೆ ತುಷಾರಾಮಣಿ ಅಮಾನತ್ತು ವಿಚಾರವಾಗಿ ಸರ್ಕಾರ ಅಮಾನತ್ತು ಮಾಡಲು ಆದೇಶ ಹೊರಡಿಸಿದೆ. ಅವರು ಲಂಚ ತಗೊಬೇಕಾದಾಗ ಸಚಿವರ ಹೆಸರು ಪ್ರಸ್ತಾಪ ಆಗಿದೆ. ತನಿಖೆ ನಡೆಯಲಿ, ಸರಿಯಾಗಿ ಉತ್ತರ ಕೊಡಲಿಲ್ಲ ಅಂದ್ರೆ ಡಿಸ್ಮಿಸ್ ಕೂಡ ಆಗಬಹುದು. ತಪ್ಪು ತಪ್ಪೆ ಅದು ತನಿಖೆಯಾಗುತ್ತಿದೆ. ಆಗಲಿ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *