ಕೊರೊನಾ ಸಾಂಕ್ರಾಮಿಕ ಇನ್ನೂ ಚಲನಶೀಲವಾಗಿದೆ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ: ‘ ಕೊರೊನಾ ಸಾಂಕ್ರಾಮಿಕ ಇನ್ನೂ ಚಲನಶೀಲವಾಗಿದ್ದು, ಕೋವಿಡ್ ಪ್ರಮಾಣ ಕಡಿಮೆಯಾಗುವ ಮೊದಲು ಹೆಚ್ಚಿನ ತೊಂದರೆಯನ್ನುಂಟು ಮಾಡುವ ಸಾಧ್ಯತೆಯಿದೆ ‘ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಕಳೆದ ಒಂದು ತಿಂಗಳಲ್ಲಿ 23 ಸಾವಿರದಷ್ಟು ಜನ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಸುಮಾರು 3 ಲಕ್ಷ ಜನರು ಕೋವಿಡ್‌ಗೆ ತುತ್ತಾಗಿದ್ದಾರೆ’ ಎಂದು ಕೋವಿಡ್ ಸಂಬಂಧಿ ತಪಾಸಣೆ ಕಡಿಮೆಯಾದ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಕೋವಿಡ್ ಪರೀಕ್ಷೆಗಳು ಕಡಿಮೆಯಾದ ಕಾರಣ ಅದರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಆದರೆ ಸಾಂಕ್ರಾಮಿಕವು ನಮ್ಮ ನಡುವೆಯೇ ಇದೆ. ವಾಸ್ತವದಲ್ಲಿ ವೈರಸ್‌ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ವಿಭಾಗದ ನಿರ್ದೇಶಕರಾದ ಮೈಕಲ್ ರಯಾನ್ ಅವರು ತಿಳಿಸಿದರು.

ಇದನ್ನೂ ಓದಿ : ದೇಶದಲ್ಲಿ 444 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆ

‘ಶ್ವಾಸಕೋಶಕ್ಕೆ ಸಂಬಂಧಿಸಿದ ವೈರಸ್ ಸಾಂಕ್ರಾಮಿಕ ಹಂತದಿಂದ ಎಂಡಮಿಕ್ ಹಂತಕ್ಕೆ ಹೋಗುವುದಿಲ್ಲ. ಬದಲಾಗಿ, ಕಾಲಕ್ಕೆ ತಕ್ಕಂತೆ ಕಡಿಮೆ ಚಟುವಟಿಕೆಯನ್ನು ತೋರಿಸುವುದರ ಜೊತೆಗೆ ಹೆಚ್ಚಿನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ’ ಎಂದು ಹೇಳಿದರು.

‘ಕೊರೊನಾವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಾಗೂ, ದುರ್ಬಲ ಆರೋಗ್ಯ ಹೊಂದಿರುವ ಜನರ ಶ್ವಾಸಕೋಶಕ್ಕೆ ಇದು ಹೆಚ್ಚಿನ ಘಾಸಿ ಉಂಟುಮಾಡಬಹುದು’ ಎಂದು ರಯಾನ್ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *