ಬೆಂಗಳೂರು: ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಗೆ 20 ಸಾವಿರ ಕೋಟಿ ಅಧಿಕ ಮೊತ್ತ ಪಾವತಿಯಾಗದೆ ಬಾಕಿ ಇದೆ.ತನಿಖೆಯ ಹೆಸರಿನಲ್ಲಿ ಹಣ ಪಾವತಿಯಾಗದಂತೆ ತಡೆ ಹಿಡಿಯಲಾಗಿದೆ. ಇದು ಯಾವ ರೀತಿಯ ನ್ಯಾಯ. ಒಂದು ತಿಂಗಳ ಒಳಗೆ ಬಾಕಿ ಹಣ ಪಾವತಿಯಾಗದೆ ಇದ್ದರೆ ಹೋರಾಟ ಮಾಡ್ತಿವಿ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ. ಕೋಟಿ
ಈ ಕುರಿತಾಗಿ ಶುಕ್ರವಾರ (ಅಕ್ಟೋಬರ್-13) ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯುವುದಕ್ಕೆ ಬದಲಾಗಿ ಹೊಸದಾಗಿ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ. ಹಣ ಬಾಕಿ ಬಿಡುಗಡೆ ಆಗದ ಪರಿಣಾಮ ಹಲವು ಗುತ್ತಿಗೆದಾರರು ಊರು ಬಿಟ್ಟಿದ್ದಾರೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ನಮ್ಮ ಸಮಸ್ಯೆಯನ್ನು ಕೆಂಪಣ್ಣ ತೆರೆದಿಟ್ಟಿದ್ದಾರೆ.
ಇದನ್ನೂ ಓದಿ:ಗುತ್ತಿಗೆದಾರರ ಹೋರಾಟಕ್ಕೆ ಮತ್ತೆ ಜೀವ : ಸಿದ್ದರಾಮಯ್ಯ ಭೇಟಿ ಮಾಡಿದ ಕೆಂಪಣ್ಣ
ಒಂದು ತಿಂಗಳೊಳಗೆ ಎಲ್ಲಾ ಇಲಾಖೆಗಳಲ್ಲೂ ಕನಿಷ್ಟ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಕೆಲ ಗುತ್ತಿಗೆದಾರರಿಗೆ ಶಿಫಾರಸು ಪತ್ರ ತಂದರೆ ಕಮಿಷನ್ ಪಡೆದು ರಾತ್ರೋರಾತ್ರಿ ಚೆಕ್ ನೀಡುತ್ತಿದ್ದಾರೆ. ಕೆಲ ಗುತ್ತಿಗೆದಾರರು ಸಾಲ-ಸೋಲ ಮಾಡಿ, ಇನ್ನೂ ಕೆಲವರು ಖಾಸಗಿ ಲೇವಾದೇವಿಗಳ ಬಳಿ ಅಸ್ತಿ ಪತ್ರ ಅಡವಿಟ್ಟು ಕಾಮಗಾರಿ ಮಾಡಿದ್ದಾರೆ. ಅದೆಷ್ಟೋ ಗುತ್ತಿಗೆದಾರರು ಸಾಲಗಾರರ ಕಾಟಕ್ಕೆ ಊರು ಬಿಟ್ಟಿದ್ದಾರೆ. ಸರ್ಕಾರ ಒಂದು ತಿಂಗಳಲ್ಲಿ ಬಾಕಿ ಮೊತ್ತ ಶೇ 50 ರಷ್ಟು ಬಿಡುಗಡೆ ಮಾಡಬೇಕು. ಇಲ್ಲವಾದರೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.
ವಿಡಿಯೋ ನೋಡಿ:ಪ್ರಧಾನಿಯ 24 ಗಂಟೆ ಕೆಲಸ! ಲೆಕ್ಕಾಚಾರ ಹೀಗಿದೆ!!….#narendramodi #janashakthimedia #karnatakanews