ಎಪ್ಪತ್ತೈದರ ಹರೆಯದಲ್ಲಿ ನಮ್ಮ ಸಂವಿಧಾನಕ್ಕೆ ಮುತ್ತಿಗೆ

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುತ್ತಿರುವವರು ಅದರ ತತ್ವಗಳನ್ನು ಬುಡಮೇಲು ಮಾಡುತ್ತಿದ್ದಾರೆ.

– ಬೃಂದಾ ಕಾರಟ್

ಭಾರತದ ಸಂವಿಧಾನವು ತನ್ನ ಎಪ್ಪತ್ತರ ಹರೆಯದಲ್ಲಿ ಮನೆ ಮಾತಾಗಿದೆ. ಸಂಸತ್ತಿನ ಚರ್ಚೆಗಳಲ್ಲಿ, ಚುನಾವಣೆಗಳ ಭಾಷಣಗಳಲ್ಲಿ, ಎಲ್ಲಾ ಪಕ್ಷಗಳ ರಾಜಕೀಯ ಧುರೀಣರು ತಮ್ಮ ಭಾಷಣಗಳಲ್ಲಿ ಅದು ಚರ್ಚೆಯ ಪ್ರಧಾನ ವಿಷಯವಾಗಿದೆ. ಅದು ಕಾಲದ ಪರೀಕ್ಷೆಯನ್ನು ಎದುರಿಸಿದೆ ಅಷ್ಟೇ ಅಲ್ಲ, ಇಂದು ಅದು ತನ್ನ ಪ್ರಮುಖ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಕೂಡ ಅದು ತೀರಾ ಅಗತ್ಯವಾದ ದೇಶಭಕ್ತಿಯ ಕರ್ತವ್ಯವಾಗಿ ಹೊರಹೊಮ್ಮಿದೆ, ಅದರ ಹೆಗ್ಗಳಿಕೆ ಆ ಸಂವಿಧಾನವನ್ನು ರಚಿಸಿದ ಸ್ಥಾಪಕ ಸದಸ್ಯರಿಗೆ ಸಲ್ಲಬೇಕು. ಎಪ್ಪತ್ತೈದರ 

ಅಂದ ಮಾತ್ರಕ್ಕೆ ಭಾರತದ ಜನರು ಈ ಸಂವಿಧಾನದಿಂದ ಸಮವಾಗಿ ಪ್ರಯೋಜನ ಪಡೆದಿದ್ದಾರೆ ಎಂಬರ್ಥವಲ್ಲ. ಅದರಲ್ಲಿರುವ ಹಕ್ಕುಗಳನ್ನು ದೋಷಪೂರಿತವಾಗಿ ಮತ್ತು ಅಸಮವಾಗಿ ಜಾರಿಮಾಡಲಾಗಿದೆ. ಏಕೆಂದರೆ ಸಂವಿಧಾನವನ್ನು ತರ್ಕಹೀನವಾಗಿ ಮತ್ತು ಏಕಪಕ್ಷೀಯವಾಗಿ ಎರಡು ಭಾಗಗಳಾಗಿ ನ್ಯಾಯಸಮ್ಮತ ಮತ್ತು ನ್ಯಾಯಸಮ್ಮತವಲ್ಲದ ಭಾಗಗಳಾಗಿ ವಿಭಜಿಸಲಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕೆ ಸಂಬಂಧಪಟ್ಟ ಬಹು ಮುಖ್ಯ ವಿಷಯಗಳನ್ನು ನಿರ್ದೇಶಕ ತತ್ವಗಳಡಿಯಲ್ಲಿ (ಡೈರೆಕ್ಟಿವ್‌ ಪ್ರಿನ್ಸಿಪಲ್ಸ್) ನ್ಯಾಯಸಮ್ಮತವಲ್ಲದ ವಿಭಾಗದಲ್ಲಿ ಕೆಳದರ್ಜೆಗೆ ಸೇರಿಸಲಾಗಿದೆ. ಹೀಗೆ ಎಲ್ಲಾ ನಾಗರಿಕರಿಗೂ ಸಮಾನ ಹಕ್ಕುಗಳನ್ನು ಖಾತರಿಪಡಿಸಿರುವ ಮಾದರಿ ಸಂವಿಧಾನದ ಭಾರತವೆಂದು ಪರಿಗಣಿಸಲ್ಪಡುತ್ತಿರುವಾಗ್ಯೂ, ಸಂವಿಧಾನದ ಚೌಕಟ್ಟಿನೊಳಗಡೆ, ಅದು ಅತ್ಯಂತ ಅಸಮಾನ ಸಮಾಜವಾಗಿ ಬೆಳೆದಿದೆ. ಸಂವಿಧಾನ ಸಭೆಯಲ್ಲಿ ಸಂವಿಧಾನವನ್ನು ರಚಿಸುವ ಸಮಯದಲ್ಲೇ ಕೆಲವು ಸದಸ್ಯರ ಆತಂಕಗಳು, ಸ್ವಯಂಘೋಷಿತ ಸಮಾಜವಾದಿ ಎಂದು ಹೇಳಿಕೊಂಡಿರುವ ಕೆ ಟಿ ಶಾ ಅವರ ಮಾತಿನಲ್ಲಿ ಹೇಳಬೇಕಾದರೆ ಅಂತಹ ವಿಭಜನೆಗಳು ಬ್ಯಾಂಕುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹಣ ನಗದು ಮಾಡುಬಹುದಾದ ಚೆಕ್ಕನ್ನು ನೀಡಿದಂತೆ’ ಎಂಬ ಮಾತು ಈಗ ನಿಜವಾಗಿ ಪರಿಣಮಿಸಿವೆ. ಸಂವಿಧಾನ ರಕ್ಷಣೆಯ ಮಾತನ್ನಾಡುವಾಗ ಅದು ಆರ್ಥಿಕ ಸಮಾನತೆ ಹಾಗೂ ನ್ಯಾಯವನ್ನೂ ಒಳಗೊಂಡ ನಿರ್ದೇಶಕ ತತ್ವಗಳನ್ನು ಜಾರಿ ಮಾಡಬೇಕು ಎನ್ನುವುದನ್ನು ಒಳಗೊಂಡಿರಬೇಕು. ಎಪ್ಪತ್ತೈದರ

“ಸಂವಿಧಾನ ಸಭೆಯು ನಿರ್ಧರಿಸಿದ ಸಂವಿಧಾನವನ್ನು ಅಂಗೀಕರಿಸಬೇಕು” ಎಂದು ಸಂವಿಧಾನ ಸಭೆಯ ಅಧ್ಯಕ್ಷ, ರಾಜೇಂದ್ರ ಪ್ರಸಾದ್ ಅವರು ನವಂಬರ್ 26, 1949 ರಂದು ಮಂಡನೆ ಮಾಡಿದಾಗ ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದಾಗ ಬಹಳ ಹೊತ್ತಿನ ವರೆಗೆ ಹರ್ಷೋದ್ಗಾರವಾಯಿತು. ಸಭೆಯ ಹೊರಗಡೆಯಲ್ಲಿ, ಸಂವಿಧಾನವು ಮನುಸ್ಮೃತಿಯಂತಹ ಧಾರ್ಮಿಕ ಗ್ರಂಥಗಳ ಆಧಾರದಲ್ಲಿ “ಭಾರತೀಯ” ಪರಂಪರೆಗೆ ಅನುಗುಣವಾಗಿ ಇಲ್ಲ ಎಂದು ಆರ್.ಎಸ್.ಎಸ್. ವಿರೋಧ ವ್ಯಕ್ತಪಡಿಸಿತು. ರಾಷ್ಟ್ರೀಯತೆ ಹಾಗೂ ನಾಗರಿಕ ಹಕ್ಕುಗಳು ಹಿಂದೂ ನಂಬಿಕೆಗಳನ್ನು ಅನುಸರಿಸುವ ಬಹುಸಂಖ್ಯಾತ ಧಾರ್ಮಿಕ ಅಸ್ಮಿತೆಗೆ ತಳಕು ಹಾಕಿಕೊಂಡಿರಬೇಕು ಮತ್ತು ಈ ಬಹುಸಂಖ್ಯಾತರಿಗೆ ಇತರರು” ಎರಡನೇ ದರ್ಜೆಯವರಾಗಿ ಅಧೀನರಾಗಿಲ್ಲದಿದ್ದರೆ, ಅವರನ್ನು ಸಮಾನ ನಾಗರಿಕರೆಂದು ಪರಿಗಣಿಸುವ ಹಕ್ಕು ಇರಬಾರದು ಎಂದು ಆರ್.ಎಸ್.ಎಸ್.ನವರು ವಾದ ಮಾಡಿದರು. ಇಂತಹ ವಿಭಜಕ ವಾದಗಳನ್ನು ತಿರಸ್ಕರಿಸಿದ ಭಾರತವು ಸಂವಿಧಾನವನ್ನು ಅಂಗೀಕರಿಸಿತು. ನಿಜ ಹೇಳಬೇಕೆಂದರೆ, ಆರ್.ಎಸ್.ಎಸ್. ನ ಈ ಧಾರ್ಮಿಕ ಅಸ್ಮಿತೆಯ ಆಧಾರಿತ ರಾಷ್ಟ್ರೀಯತೆಯ ವಾದವನ್ನು ಪಾಕಿಸ್ತಾನವು ಒಪ್ಪಿಕೊಂಡಿತು ಮತ್ತು ಅದಕ್ಕೆ ಅನುಗುಣವಾಗಿ ಪಾಕಿಸ್ತಾನವು ತನ್ನ ಸಂವಿಧಾನವನ್ನು ಮತ್ತು ಸರ್ಕಾರದ ಸ್ವರೂಪವನ್ನು ಜಾರಿಗೆ ತಂದಿತು. ಎಪ್ಪತ್ತೈದರ 

ಇದನ್ನೂ ಓದಿ : ಧಾರ್ಮಿಕ ಸ್ಥಳಗಳ ಬಗ್ಗೆ ಕಾನೂನು ವಿವಾದಗಳನ್ನು ನಿಲ್ಲಿಸಲು ಸುಪ್ರಂ ಕೋರ್ಟ್ ಮಧ್ಯಪ್ರವೇಶಿಸಬೇಕು: ಸಿಪಿಐ(ಎಂ)

ಸಮಸ್ಯೆ ಇರುವುದು 75 ವರ್ಷಗಳ ನಂತರವೂ, ಹಿಂದೂರಾಷ್ಟ್ರ ಸ್ಥಾಪಿಸುವ ತನ್ನ ಕಾರ್ಯಸೂಚಿಯನ್ನು ಮತ್ತು ತನ್ನ ನಂಬಿಕೆಯನ್ನು ಆರ್.ಎಸ್.ಎಸ್. ಹಾಗೆಯೇ ಉಳಿಸಿಕೊಂಡು ಬಂದಿದೆ. ಇನ್ನೂ ದೊಡ್ಡ ಸಮಸ್ಯೆಯೆಂದರೆ ಭಾರತವನ್ನು ಈಗ ಆಳುತ್ತಿರುವವರು ಚುನಾವಣೆ ಗೆಲ್ಲಲು ಆರ್.ಎಸ್.ಎಸ್ ನ ಸಂಘಟನಾ ಜಾಲದ ಮೇಲೆಯೇ ಅವಲಂಬಿತರಾಗಿದ್ದಾರೆ. ಆರ್.ಎಸ್.ಎಸ್. ಹೊರತಾದ ಅಸ್ಮಿತೆಯನ್ನು ಹೊಂದಿದ್ದೇವೆ ಎನ್ನುವುದು ಈಗ ಇತಿಹಾಸವಾಗಿದೆ. ಕಳೆದ 10 ವರ್ಷಗಳ ಬಿಜೆಪಿ ಆಡಳಿತವು ಆರ್.ಎಸ್.ಎಸ್. ನ ಕಾರ್ಯಸೂಚಿಗೆ ಬದ್ಧವಾಗಿರುವುದನ್ನು ಪ್ರತಿಫಲಿಸುತ್ತದೆ. ಅಬ್ಬರದ ಮುಸ್ಲಿಂ-ವಿರೋಧಿ ನೀತಿಗಳು ಮತ್ತು ಮುಸ್ಲಿಂದ್ವೇಷದ ಕಾನೂನುಗಳನ್ನು ರೂಪಿಸುವುದರಲ್ಲಿ ಅದು ಎದ್ದುಕಾಣುತ್ತಿದೆ; ಕರಾಳ ಕಾನೂನುಗಳನ್ನು ಬಳಸುವ ಮೂಲಕ ವಿಪಕ್ಷಗಳು ಹಾಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧ ಅನೈತಿಕ ದಾಳಿಗಳನ್ನು ನಡೆಸಲಾಗುತ್ತಿದೆ; ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ವಿರುದ್ಧ ನಿರಂಕುಶ ಕೇಂದ್ರಾಧಿಕಾರವನ್ನು ಚಲಾಯಿಸುತ್ತಿದೆ; ಇತಿಹಾಸ ಹಾಗೂ ಸಂಸ್ಕೃತಿಗಳ ವಿಕೃತ ದೃಷ್ಟಿಕೋನವನ್ನು ಹೇರಲಾಗುತ್ತಿದೆ; ಮನುವಾದಿ ಹಿಂದುತ್ವವನ್ನು ಪ್ರೋತ್ಸಾಹಿಸುತ್ತಾ ಜಾತಿ ವ್ಯವಸ್ಥೆಯನ್ನು ಮರೆಮಾಚಲು ಹವಣಿಸುತ್ತಿದೆ; ಸ್ವಾಯತ್ತ ಸಂಸ್ಥೆಗಳ ನಿಯಮಗಳನ್ನು ಬುಡಮೇಲು ಮಾಡಿ ತನ್ನ ಸೈದ್ಧಾಂತಿಕ ನಿಷ್ಠೆಗೆ ಬದ್ಧರಾದವರನ್ನು ನೇಮಕ ಮಾಡುತ್ತಿದೆ. ಸಂವಿಧಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಸಂವಿಧಾನದ ಮೂಲಭೂತ ಸಂರಚನೆಗಳಾದ ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನೀತಿಗಳನ್ನು ಅನುಸರಿಸುತ್ತಿರುವ ಸನ್ನಿವೇಶವನ್ನು ಇಂದಿನ ಭಾರತ ಕಾಣುತ್ತಿದೆ.

ಒಬ್ಬ ನಿರ್ದಿಷ್ಟ ವ್ಯಕ್ತಿಯ ಅಧಿಕಾರದಾಹದ ಮನೋಭಾವದಿಂದಾಗಿ ಹೀಗಾಗುತ್ತಿದೆ ಎಂದು ಭಾವಿಸುವುದು ಸಂಪೂರ್ಣವಾಗಿ ತಪ್ಪಾಗುತ್ತದೆ. ಒಬ್ಬ ವ್ಯಕ್ತಿಯು ಸಂವಿಧಾನ -ವಿರೋಧಿ ರಾಜಕೀಯದ ಅತ್ಯಂತ ಪರಿಣಾಮಕಾರಿ ಪ್ರತಿನಿಧಿಯಾಗಿರಬಹುದು, ಆದರೆ ಅದು ವ್ಯಕ್ತಿಯನ್ನು ಮೀರಿದ ರಾಜಕೀಯವಾಗಿದ್ದು, ಅದರ ಬೇರುಗಳು ಸಾಮಾಜಿಕ ಹಾಗೂ ವರ್ಗ ರಾಜಕೀಯದ ಆಳದಲ್ಲಿ ಅಡಗಿದೆ.

ತುರ್ತು ಪರಿಸ್ಥಿತಿಯ ರೂಪದಲ್ಲಿ ಈ ಹಿಂದೆ ಸಂವಿಧಾನದ ಮೇಲೆ ನಡೆದ ದಾಳಿಗಳು ಹಾಗೂ ಅದರ ಅನುಭವಗಳು ನಮಗೆ ಹೆಚ್ಚು ಉಪಯುಕ್ತವಾಗುತ್ತವೆ. ಆ ಸಮಯದ ನಾಗರಿಕ ಸ್ವಾತಂತ್ರ್ಯ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ಹರಣವನ್ನು ಪ್ರಬಲ ಬಂಡವಾಳಶಾಹಿಗಳು ಬೆಂಬಲಿಸಿದ್ದರು; ಕಾರ್ಮಿಕ ವರ್ಗವನ್ನು ಪಳಗಿಸಲು ಅದು ತೀರಾ ಅಗತ್ಯವಾದ ಕ್ರಮವಾಗಿತ್ತು ಎನ್ನುವುದು ಅವರ ಧೋರಣೆಯಾಗಿತ್ತು; ಅಗತಾನೇ ರೈಲ್ವೇ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಐತಿಹಾಸಿಕ ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದರು. ಆಗ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾರವರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದರು: “ಪರಿಸ್ಥಿತಿ ತೀರಾ ಹದಗೆಟ್ಟುಹೋಗಿದೆ. ಎಲ್ಲಿ ನೋಡಿದರೂ ಮುಷ್ಕರಗಳು, ಪ್ರತಿಭಟನೆಗಳು, ಮತಪ್ರದರ್ಶನಗಳೇ ತಾಂಡವವಾಡುತ್ತಿವೆ . . ಏನು ನಡೆಯುತ್ತಿದೆ ಎಂದು ಊಹಿಸುವುದೇ ಕಷ್ಟವಾಗಿದೆ . ಸಂಸದೀಯ ವ್ಯವಸ್ಥೆ ನಮ್ಮ ಅಗತ್ಯಗಳಿಗೆ ಹೊಂದುವುದಿಲ್ಲ * ಸಂವಿಧಾನದ ಮೇಲಿನ ಇಂದಿರಾ ಗಾಂಧಿಯವರ ದಾಳಿ ಅವರ ಸ್ವಂತ ಹಿತಾಸಕ್ತಿ ಅಥವಾ ಅವರ ಪಕ್ಷದ ಹಿತಾಸಕ್ತಿಗಾಗಿ ಮಾತ್ರ ಮಾಡಿದ್ದಲ್ಲ, ಭಾರತದ ಬಂಡವಾಳಶಾಹಿ ವರ್ಗಗಳ ಬೇಡಿಕೆಗಳ ಈಡೇರಿಕೆಯ ಗುರಿ ಹೊಂದಿತ್ತು. ಎಪ್ಪತ್ತೈದರ  ಎಪ್ಪತ್ತೈದರ 

ಇವತ್ತಿನ ಪರಿಸ್ಥಿತಿಯಲ್ಲಿ, ಇವತ್ತಿನ ಆಳುವ ವರ್ಗಗಳ ನಿಷ್ಠೆಯು ಪ್ರಸ್ತುತ ಆಳ್ವಿಕೆಯ ಪರವಾಗಿರುವುದನ್ನು ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಸರ್ಕಾರಗಳು ಯಾವುದೇ ಅಧಕಾರಕ್ಕೆ ಬರಲಿ, ಆಳುವ ಸರ್ಕಾರದೊಂದಿಗೆ ಶ್ರೀಮಂತ ಹಾಗೂ ಬಂಡವಾಳಶಾಹಿ ವರ್ಗಗಳು ಕೊಡು ಕೊಳ್ಳುವ ವ್ಯವಹಾರದ ಮೂಲಕ ನಿಷ್ಠೆ ಬದಲಾಯಿಸುವ ಸಂಗತಿ ಅಸಹಜವೇನಲ್ಲ. ಆದರೆ ಪ್ರಮುಖ ಕೈಗಾರಿಕೋದ್ಯಮಿಗಳು ನಾಗಪುರ ಪ್ರಧಾನ ಕಛೇರಿಗೆ ತಲೆ ಬಾಗಿಸುತ್ತಿರುವ ವಿಷಯವು ನಾಜಿ ಆಡಳಿತಕ್ಕೆ ಅಂದಿನ ದೊಡ್ಡ ಬಂಡವಾಳಶಾಹಿಗಳು ತಲೆಬಾಗಿ ವಂದಿಸಿದ ಉದಾಹರಣೆಯನ್ನು ನೆನಪಿಸುತ್ತದೆ. ಕಾರ್ಪೊರೇಟ್ ಭಾರತ ಹಾಗೂ ಇವತ್ತಿನ ಆಳ್ವಿಕೆದಾರರು ಪರಸ್ಪರ ಒಬ್ಬರನ್ನೊಬ್ಬರು ಕೈಹಿಡಿದು ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಕೆಲವು ಆಪ್ತರು ಇರುವುದನ್ನೂ ನೋಡುತ್ತಿದ್ದೇವೆ, ತಮ್ಮ ವರ್ಗ ಹಿತಾಸಕ್ತಿಗಾಗಿ ಯಾರ ಸೇವೆಗೂ ಸಿದ್ಧರಾಗುತ್ತಾರೆ ಎನ್ನುವುದನ್ನೂ ಕಾಣುತ್ತಿದ್ದೇವೆ. ಅವರ ಪರವಾಗಿ ಮೋದಿ ಸರ್ಕಾರ ಏನೆಲ್ಲಾ ಮಾಡುತ್ತಿದೆ ಮತ್ತು ಮಾಡಲು ಸಿದ್ಧವಿದೆ ಎನ್ನುವುದನ್ನೂ ಜನ ಕುತೂಹಲದಿಂದ ಗಮನಿಸುತ್ತಿದ್ದಾರೆ. ನಾಲ್ಕು ಸಂಹಿತೆಗಳ ಮೂಲಕ ಕಾರ್ಮಿಕ ಹಕ್ಕುಗಳನ್ನು ಕಸಿಯುವ, ಮೂರು ಕಾಯಿದೆಗಳ ಮೂಲಕ ರೈತ ಸಮುದಾಯದ ಹಕ್ಕುಗಳನ್ನು ಕಿತ್ತುಕೊಳ್ಳಲು ಮಾಡಿದ ಪ್ರಯತ್ನ, ದೊಡ್ಡ ಗಣಿ ಕೈಗಾರಿಕೋದ್ಯಮಿಗಳ ಹಾಗೂ ಖಾಸಗೀ ವಲಯದ ಹಿತಾಸಕ್ತಿಯನ್ನು ಕಾಪಾಡಲು ಆದಿವಾಸಿಗಳ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಿರುವ ವಿದ್ಯಮಾನಗಳು ಮೋದಿ ಸರ್ಕಾರದ ರೈತ ಕಾರ್ಮಿಕ ವಿರೋಧಿ ಧೋರಣೆಯನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿವೆ.

ಸಂವಿಧಾನವನ್ನು ಗುರಿಯಾಗಿಸಿದ ಬಿಜೆಪಿ ಸರ್ಕಾರದ ಅವಳಿ ಫಿರಂಗಿಗಳು ಒಂದು ಬಹುಸಂಖ್ಯಾತವಾದ ಮತ್ತೊಂದು ಕಾರ್ಪೊರೇಟ್ ಹಿತಾಸಕ್ತಿಗಳು, ಪರಸ್ಪರ ಒಂದನ್ನೊಂದಕ್ಕೆ ತಳಕು ಹಾಕಿಕೊಂಡಿವೆ. ಸಂವಿಧಾನ ಅಂಗೀಕಾರದ 75 ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಪ್ರತಿರೋಧ ಹಾಗೂ ರಕ್ಷಣೆಯು ಈ ಎರಡು ಆಯಾಮಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಎಪ್ಪತ್ತೈದರ 

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

ಇದನ್ನೂ ನೋಡಿ : ಒಂದು ದೇಶ, ಒಂದು ಚುನಾವಣೆ | ಸಂವಿಧಾನದ ಮೂಲಭೂತರಚನೆಗೆ ಗಂಡಾಂತರ – ಕೆ.ಎನ್. ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *