ಒಬಿಸಿ ಪಟ್ಟಿ ರೂಪಿಸುವ ಅಧಿಕಾರ ರಾಜ್ಯಗಳಿಗೆ ಅವಕಾಶ: ಕೇಂದ್ರ ಸಂಪುಟ ನಿರ್ಧಾರ

ದೆಹಲಿ: ದೇಶದ ವಿವಿಧ ರಾಜ್ಯಗಳು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿ ರೂಪಿಸಿಕೊಳ್ಳವ ಅವಕಾಶ ಮಾಡಿಕೊಡುವ ಮಸೂದೆ ಸಂಸತ್ತಿನ ಅಧಿವೇಶನದಲ್ಲಿ ಮಂಡನೆ ಮಾಡುವ ಬಗ್ಗೆ ಕೇಂದ್ರವು ನಿರ್ಧರಿಸಿದ್ದು ಈ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡಿದ್ದು, ಪ್ರಸಕ್ತ ಮುಂಗಾರು ಅಧಿವೇಶನದಲ್ಲಿಯೇ ಮಸೂದೆ ಮಂಡಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ.

ಮಹಾರಾಷ್ಟ್ರದ ಮರಾಠ ಮೀಸಲಾತಿ ರದ್ದುಪಡಿಸಿದ್ದಕ್ಕೆ ಪರಿಹಾರ ರೂಪದಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಿದ್ದು ಸಂಸತ್ತಿನ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯುಲು ಪ್ರಯತ್ನದಲ್ಲಿ ಕೇಂದ್ರ ಸರಕಾರ ಮುಂದಾಗಿದೆ.

ಸಂವಿಧಾನದ 127ನೇ ತಿದ್ದುಪಡಿಯ ಈ ಮಸೂದೆಗೆ ಉಭಯ ಸದನಗಳ ಅನುಮೋದನೆ ದೊರೆತರೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೇ ಮುಂದಿನ ದಿನಗಳಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಒಬಿಸಿ ಪಟ್ಟಿ ರಚಿಸಿಕೊಳ್ಳಲು ಅವಕಾಶ ಸಿಗಲಿದೆ. ಸುಪ್ರೀಂಕೋರ್ಟ್ ಮೇ 5ರಂದು ನೀಡಿದ ಆದೇಶದಂತೆ ಒಬಿಸಿ ಪಟ್ಟಿ ರಚಿಸುವ ಹಕ್ಕು ರಾಜ್ಯ ಸರ್ಕಾರಗಳ ಅಧಿಕಾರವಿಲ್ಲ ಅದು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ ಎಂದು ಹೇಳಿತ್ತು.

ಇದನ್ನು ಓದಿ: ಕರ್ಷಕ ಸಮುದಾಯವನ್ನು ವಿಭಜಿಸಲಿಕ್ಕಾಗಿಯೇ ಒಬಿಸಿ ಮೀಸಲಾತಿಯನ್ನು ದುರ್ಬಲಗೊಳಿಸುವ ಪ್ರಯತ್ನ

ಸಂವಿಧಾನದ 342-ಎ ಮತ್ತು 366 (26) ಸಿ ಪರಿಚ್ಛೇದಗಳ ತಿದ್ದುಪಡಿಗೆ ಸಂಸತ್ತು ಒಪ್ಪಿಕೊಂಡ ನಂತರ ರಾಜ್ಯ ಸರ್ಕಾರಗಳಿಗೆ ಒಬಿಸಿ ಪಟ್ಟಿ ಸಿದ್ಧಪಡಿಸುವ ಅಧಿಕಾರ ಸಿಗುಲಿದೆ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅಗತ್ಯಕ್ಕೆ ತಕ್ಕಂತೆ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸವಲತ್ತು ನೀಡಲು ಪಟ್ಟಿ ಸಿದ್ಧಪಡಿಸಬಹುದಾಗಿದೆ.

ಸಂವಿಧಾನದ 366 (26ಸಿ) ಪರಿಚ್ಛೇದಕ್ಕೆ ತಿದ್ದುಪಡಿ ಮಾಡುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯು ಈಗಾಗಲೇ ಕೇಂದ್ರ ಅಥವಾ ಇತರ ರಾಜ್ಯಗಳು 342ಎ ಪರಿಚ್ಛೇದದ ಅನ್ವಯ ಸೇರ್ಪಡೆಯಾಗಿರುವ ಸಮುದಾಯಗಳನ್ನೂ ಪ್ರತ್ಯೇಕವಾಗಿ ಪರಿಷ್ಕರಿಸಲು ಅವಕಾಶ ಸಿಗಲಿದೆ.

ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರ ವಾದಿಸಿದಂತೆ ಕೆಲ ಅಂಶಗಳು ಈ ಮಸೂದೆಯ ಕರಡಿನಲ್ಲಿ ಪ್ರಸ್ತಾಪವಾಗಿವೆ. ಸಂವಿಧಾನದ 15 (4), 15 (5) ಮತ್ತು 15 (4) ಪರಿಚ್ಛೇದಗಳ ಅನ್ವಯ ರಾಜ್ಯಗಳಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳನ್ನು ಗುರುತಿಸುವ ಅಧಿಕಾರವಿದೆ. ಕಳೆದ 68 ವರ್ಷಗಳಿಂದ ರಾಜ್ಯಗಳು ಹೀಗೆಯೇ ನಡೆದುಕೊಳ್ಳುತ್ತಿವೆ. ಸಂವಿಧಾನದ 342 (2) ವಿಧಿಯ ಅನ್ವಯ ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಯಾವುದೇ ಸಮುದಾಗಿ ಹೊಸದಾಗಿ ಸೇರ್ಪಡೆಯಾದರೆ ರಾಷ್ಟ್ರಪತಿ ಆ ಪ್ರಸ್ತಾವವನ್ನು ಅನುಮೋದಿಸಬೇಕಾಗುತ್ತದೆ. ಇದು ಕೇಂದ್ರ ಸರ್ಕಾರ ರೂಪಿಸುವ ಪಟ್ಟಿಗೆ ಮಾತ್ರ ಅನ್ವಯವಾಗುತ್ತದೆ. ಈ ನಿಯಮವನ್ನೇ ಮುಂದಿಟ್ಟು ರಾಜ್ಯ ಸರ್ಕಾರಗಳಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಹಿಂದುಳಿದ ವರ್ಗಗಳ ಪಟ್ಟಿ ರೂಪಿಸುವ ಅಧಿಕಾರವಿಲ್ಲ ಎಂದು ಹೇಳಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರದ ವಾದವಾಗಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ಮಾಡುವ ಮೂಲಕ 342ಎ ಪರಿಚ್ಛೇದವನ್ನು ಸೇರ್ಪಡೆ ಮಾಡಿತ್ತು. ಇದರಿಂದ ರಾಜ್ಯಗಳ ಅಧಿಕಾರಕ್ಕೆ ಧಕ್ಕೆಯಾಗುತ್ತದೆ ಎಂದು ಹಿಂದೆಯೂ ವಿರೋಧ ಪಕ್ಷಗಳು ಎಚ್ಚರಿಸಿದ್ದವು. ಈ ಬೆಳವಣಿಗೆ ನಡೆದ ಸುಮಾರು 2 ವರ್ಷಗಳ ನಂತರ ಸುಪ್ರೀಂಕೋರ್ಟ್​ ಮರಾಠ ಸಮುದಾಯಕ್ಕೆ ಒಬಿಸಿ ಸೌಲಭ್ಯ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ತಳ್ಳಿಹಾಕಿತ್ತು. ಸಂವಿಧಾನದ 342ಎ ಪರಿಚ್ಛೇದದ ಅನ್ವಯ ಕೇಂದ್ರ ಸರ್ಕಾರಕ್ಕೆ ಮಾತ್ರ ಒಬಿಸಿ ಪಟ್ಟಿ ರೂಪಿಸಲು ಅಧಿಕಾರವಿದೆ ಎನ್ನುವ ನಿಲುವನ್ನು ಸುಪ್ರೀಂಕೋರ್ಟ್ ತಳೆದಿತ್ತು.

ಇದನ್ನು ಓದಿ: ಮುಂಗಾರು ಅಧಿವೇಶನ: ಪ್ರತಿಪಕ್ಷಗಳ ತೀವ್ರ ಗದ್ದಲದಿಂದ ಕೆಲಕಾಲ ಎರಡೂ ಸದನಗಳು ಮುಂದೂಡಿಕೆ

ಸಂಸತ್ತಿನಲ್ಲಿ ಅಂಗೀಕಾರ ಪಡೆಯಲು ಸಂವಿಧಾನದ ತಿದ್ದುಪಡಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದ್ದರೂ, ಹೆಚ್ಚಿನ ಪಕ್ಷಗಳು ಮಸೂದೆ ಪರವಾಗಿ ನಿಲುವ ತಳೆಯುವ ಅವಕಾಶವಿದೆ ಎಂದು ಸಾಧ್ಯತೆಗಳು ತಿಳಿದು ಬಂದಿವೆ.

2018ರಲ್ಲಿ ಅಂಗೀಕರಿಸಲಾದ ಸಂವಿಧಾನ ತಿದ್ದುಪಡಿ ವಿಧೇಯಕದಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಬೆಂಬಲವನ್ನು ನೀಡುತ್ತದೆ, ಇದನ್ನು ವಿಶೇಷ ಅಧಿಕಾರಗಳೊಂದಿಗೆ ಸಕ್ರಿಯಗೊಳಿಸುತ್ತದೆ ಎಂದು ಹೇಳಲಾಗಿತ್ತು. ಕಾನೂನನ್ನು ಅಂಗೀಕರಿಸುವ ಮೊದಲು ಚರ್ಚೆಯ ಸಮಯದಲ್ಲಿ, ವಿರೋಧ ಪಕ್ಷಗಳು ತಮ್ಮ ಸ್ವಂತ ಪಟ್ಟಿಯನ್ನು ಮಾಡಲು ರಾಜ್ಯದ ಹಕ್ಕುಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿತ್ತು. ಆದರೆ ಕೇಂದ್ರವು ಈ ನಿರ್ಧಾರದೊಂದಿಗೆ ಮುಂದುವರಿಯಿತು.

ಕೇಂದ್ರ ಸಚಿವ ಸಂಪುಟದ ನಿರ್ಧಾರವು ಒಬಿಸಿ ಪಟ್ಟಿಯನ್ನು ರಚಿಸುವ ಹಕ್ಕು ರಾಜ್ಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡುವ ಅವಕಾಶವಾದ ಮಸೂದೆ ಕಾನೂನಾದಲ್ಲಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಒಬಿಸಿ ಪಟ್ಟಿಯನ್ನು ರಚಿಸುವ ಅಧಿಕಾರ ಪಡೆದುಕೊಳ್ಳಲಿದೆ. ಅದು ಕೇಂದ್ರ ಪಟ್ಟಿಯಿಂದ ಭಿನ್ನವಾಗಿರಬಹುದು. ಕಳೆದ 68 ವರ್ಷಗಳಿಂದ ಈ ಪದ್ಧತಿ ಇದೆ ಎಂದು ತಿದ್ದುಪಡಿಯು ನಿರ್ದಿಷ್ಟಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *