ದೇವನಹಳ್ಳಿ: ಆಸ್ತಿ ವಿಚಾರದಲ್ಲಿ ಅಕ್ಕ ತಮ್ಮನ ನಡುವೆ ಕಲಹ ಉಂಟಾಗಿದ್ದು, ಅಕ್ಕನನ್ನು ಮನೆಯಿಂದ ಹೊರಹಾಕರುವಂತಹ ಘಟನೆ ದೇವನಹಳ್ಳಯಲ್ಲಿ ನಡೆದಿದೆ. .
ಬೆಂಗಳೂರು ಉತ್ತರ ತಾಲೂಕಿನ ಮಾದೇನಹಳ್ಳಿ ನಿವಾಸಿಯಾದ ಶಾರದಮ್ಮ, ಕಳದ 25 ವರ್ಷಗಳ ಹಿಂದೆ ಗಂಡ ತೀರಿಕೊಂಡ ಅಂತ ಗಂಡನ ಮನೆಯಿಂದ ತವರು ಮನೆಗೆ ಬಂದು ಸೇರಿಕೊಂಡಿದ್ದು, ತವರು ಮನೆಯವರು ನೀಡಿದ ಜಮೀನಿನಲ್ಲಿ ಮನೆಯನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಈ ನಡುವೆ ಆಸ್ತಿ ವಿಚಾರಕ್ಕೆ ಶುರುವಾದ ಕಲಹದಿಂದ ಏಕಾಏಕಿ ಮನೆಗೆ ನುಗ್ಗಿದ ತಮ್ಮ ಮನೆಯಲ್ಲಿನ ವಸ್ತುಗಳನ್ನು ಹೊರ ಹಾಕಿ ಮನೆಗೆ ಬೀಗ ಜಡಿದಿದ್ದಾನೆ.
ಇದನ್ನೂ ಓದಿ : ಆದಾಯತೆರಿಗೆ ಪಾವತಿದಾರರೆಂದು ಪರಿಗಣಿಸಿ ದಂಡ ಶುಲ್ಕ ಕಟ್ಟಿದವರ ಬಿಪಿಎಲ್ ಕಾರ್ಡ್ ರದ್ದು
ಈ ನಡುವೆ ಶಾರದಮ್ಮ ಮತ್ತು ಆಕೆಯ ಸಹೋದರ ರಾಜ ನಡುವೆ ವೈಮನಸ್ಸು ಶುರುವಾಗಿದ್ದು, ಅ ವಿಚಾರವಾಗಿ ಕೋರ್ಟ್ ಮೆಟ್ಟಿಲು ಸಹ ಏರಿದಂತ ಹೀಗಾಗಿ ಅಕ್ಕನ ಮನೆಯವರು ಕೋರ್ಟ್ ಮೆಟ್ಟಿಲೇರಿದರು ಅಂತ ತಮ್ಮ ರಾಜ 25 ವರ್ಷಗಳಿಂದ ಶಾರದಮ್ಮ ವಾಸಿಸುತ್ತಿದ್ದ ಮನೆಗೆ ಜನರನ್ನು ಕರೆದುಕೊಂಡು ಬಂದು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಹೊರಗಡೆ ಹಾಕಿದ್ದಾನೆ. ಜೊತೆಗೆ ಮನೆ ನಾನು ಕಟ್ಟಿಕೊಂಡಿರುವುದು ಅಂತ ಮನೆಯಲ್ಲೇ ಕೂತ ಅಕ್ಕನನ್ನು ಬಲವಂತವಾಗಿ ಮನೆಯಿಂದ ಹೊರಗಡೆ ಹಾಕಿದ್ದು, ಇರುವುದಕ್ಕೆ ಸೂರಿಲ್ಲದೆ ಕುಟುಂಬದವರು ಕಂಗಾಲಾಗಿದ್ದಾರೆ.
ಮೊದಲಿಗೆ ಅಕ್ಕ-ತಮ್ಮ ಜೊತೆಯಲ್ಲಿದ್ದಾಗ ಗಂಡನ ಮನೆಯಿಂದ ಬಂದಿದ್ದ ಹಣದಲ್ಲಿ ಮನೆ ಕಟ್ಟಿಕೊಂಡಿದ್ದ ಶಾರದಮ್ಮ, ಮನೆಯ ದಾಖಲೆಗಳನ್ನು ಮಾತ್ರ ತನ್ನ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ. ಜೊತೆಗೆ ಕೇಳಿದಾಗಲೆಲ್ಲಾ ಸಹೋದರ ನನ್ನ ಮೇಲೆ ನಂಬಿಕೆಯಿಲ್ಲವ ಅಂತ ಹೇಳಿದ್ದು, ತಮ್ಮನೇ ಅಲ್ವಾ ಏನಾಗುತ್ತೆ ಅಂತ ಸುಮ್ಮನಾಗಿದ್ದರಂತೆ. ಆದರೆ ಇತ್ತೀಚೆಗೆ ಅಕ್ಕ ತಮ್ಮನ ನಡುವೆ ತವರು ಮನೆಯ ಆಸ್ತಿ ವಿಚಾರಕ್ಕೆ ಕಲಹ ಶುರುವಾಗಿ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಇದೀಗ ಮನೆ ನನ್ನ ಹಸರಲ್ಲಿದೆ ಅಂತ ತಮ್ಮ ಅಕ್ಕನ ವಿರುದ್ಧ ದಬ್ಬಾಳಿಕೆ ಮಾಡ್ತಿದ್ದಾನೆ ಅಂತ ಶಾರದಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನೂ ಕುಟುಂಬಸ್ಥರು ಮನೆಯಿಂದ ಹೊರಗಡೆ ದಿನಪೂರ್ತಿ ಕಣ್ಣೀರು ಹಾಕಿದ್ದನ್ನು ಕಂಡ ಗ್ರಾಮದ ಮುಖಂಡ ಪುಟ್ಟಣ ಸ್ಥಳಕ್ಕೆ ಬಂದು ರಾಜಿ ಸಂಧಾನ ಮಾಡಿಸಿದ್ದಾರೆ. ಅಲ್ಲದೆ ಗ್ರಾಮದ ಹೆಣು ಮಗಳಿಗೆ ಅನ್ಯಾಯವಾಗಬಾರದು ಅಂತ ಎರಡು ಕಡೆಯವರಿಗೂ ಬುದ್ಧಿವಾದ ಹೇಳಿದ್ದು ಲಾಕ್ ಆಗಿದ್ದ ಮನೆಯ ಬೀಗ ತೆಗೆಸಿ ಬೀದಿಯಲ್ಲಿದ್ದ ಕುಟಂಬದವರನ್ನು ಮನೆ ಒಳಗಡೆ ಕಳಿಸಿದ್ದಾರೆ.
ಇದನ್ನೂ ನೋಡಿ : ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Janashakthi Media