ಬೆಂಗಳೂರು: ಅತಿದೊಡ್ಡ ಐಷಾರಾಮಿ ಮಾಲ್ ಗಳಿಂದ ಹಿಡಿದು ಸಣ್ಣ ಪುಟ್ಟ ಅಂಗಡಿಗಳ ವರೆಗೂ ಗೂಗಲ್ ಪೇ, ಫೋನ್ ಪೇ ರೀತಿಯ ಯು.ಪಿ.ಐ ಅಪ್ಲಿಕೇಶನ್ ಗಳು ಪ್ರಚಲಿತಕ್ಕೆ ಬಂದಿದ್ದೇ ತಡ ಪ್ರತಿಯೊಬ್ಬ ವ್ಯಾಪಾರಸ್ಥರೂ ಕೂಡ ತಮ್ಮ ಅಂಗಡಿಗೆ ಹೀಗೆ ಸ್ಕ್ಯಾನರ್ ಹಾಕಿಸ್ತಿರ್ತಾರೆ. ಆದ್ರೆ ಈಗ ಈ ರೀತಿಯ ಸಣ್ಣ ವ್ಯಾಪಾರಿಗಳಿಗೆ ಶಾಕ್ ಎದುರಾಗಿದೆ.
ಕಾಫಿ – ಟೀ ಅಂಗಡಿಗಳು, ಇತರೆ ಸಾಮಾನ್ಯ ವ್ಯಾಪಾರಸ್ಥರಿಗೆ ಸೇರಿದಂತೆ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ಆದಾಯ ತೆರಿಗೆ ವಿಭಾಗದ ಕಡೆಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಹೀಗೆ ನೋಟೀಸ್ ಸ್ವೀಕರಿಸಿರುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಪೌರಸೇವಾ ನೌಕರರಿಗೂ ಆಯೋಗದ ಸೌಲಭ್ಯ ವಿಸ್ತರಣೆಗೆ ಆಗ್ರಹ: ಮುಷ್ಕರ ಮುಂದುವರಿಕೆ
ಕಳೆದ ಎರಡ್ಮೂರು ವರ್ಷಗಳಿಂದ ಹೀಗೆ ಸ್ಕ್ಯಾನರ್ ಹಾಕಿಸಿಕೊಂಡು ವ್ಯಾಪಾರ ನಡೆಯುತ್ತಿದ್ದ ವ್ಯಾಪಾರಿಗಳುಗೆ ವಾಣಿಜ್ಯ ತೆರಿಗೆ ಕಟ್ಟುವಂತೆ ಇದೀಗ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್ ಜಾರಿ ಮಾಡಲಾಗಿದೆ.ಈ ಹಿಂದಿನ ವರ್ಷಗಳಿಗೂ ಸೇರಿದಂತೆ ಟ್ಯಾಕ್ಸ್ ಕಟ್ಟಲು ಸೂಚಿಸಲಾಗಿದ್ದು,ಕೆಲವರಿಗಂತೂ ಲಕ್ಷಾಂತರ ರೂಪಾಯಿ ಪಾವತಿಸುವಂತೆ ಸೂಚಿಸಲಾಗಿದೆ.
ಈ ನೋಟಿಸ್ ಗಳನ್ನು ಕಂಡ ವ್ಯವರಸ್ಥರು ಕಂಗಾಲಾಗಿದ್ದು, ಏನೋ ಚಿಲ್ಲರೆ ಸಮಸ್ಯೆ ಬಗೆಹರಿಯುತ್ತಲ್ಲಾ ಅಂತ ಯುಪಿಐ ಹಾಕಿಸಿಕೊಂಡವರು ಈಗ ವಾಣಿಜ್ಯ ತೆರಿಗೆಯ ನೋಟೀಸ್ ನೋಡಿ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಇದನ್ನೂ ನೋಡಿ: ಉದ್ಯೋಗ ಸಂಬಂಧಿತ ಪ್ರೋತ್ಸಾಹ ಯೋಜನೆ(ELI) ಎನ್ನುವ ವಂಚನೆಯ ಆಳ ಅಗಲ.. Janashakthi Media
