ಬಿಬಿಎಂಪಿಯಿಂದ ಏಪ್ರಿಲ್‌ 1ರಿಂದ ಕಸಸಂಗ್ರಹ ಮತ್ತು ವಿಲೇವಾರಿ ವೆಚ್ಚ ವಸೂಲಿ

ಬೆಂಗಳೂರು: ಅತೀ ಹೆಚ್ಚು ವೇತನ ನೀಡುವ ನಗರ ಅನ್ನೋ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಆದರೆ ಅದೇ ರೀತಿ ದುಬಾರಿ ನಗರ ಎಂದು ಗುರುತಿಸಿಕೊಂಡಿದೆ. ಇದೀಗ ಬೆಂಗಳೂರು ನಗರ ಜೀವನ ಮತ್ತಷ್ಟು ದುಬಾರಿಯಾಗಿದೆ. ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಸೇರಿದಂತೆ ಒಂದಷ್ಟು ದರ ಏರಿಕೆಗಳು ಜನರನ್ನು ಕಂಗಾಲು ಮಾಡಿದೆ. ಬಿಬಿಎಂಪಿ 

ಬಿಬಿಎಂಪಿಯು ಇದೀಗ ಹೊಸ ನಿಯಮ ಜಾರಿಗೊಳಿಸುತ್ತಿದ್ದೂ, ಪ್ರತಿ ತಿಂಗಳು ಕಸಸಂಗ್ರಹ ಮತ್ತು ವಿಲೇವಾರಿ ವೆಚ್ಚ ವಸೂಲಿಗೆ ಬಿಬಿಎಂಪಿ ನಿರ್ಧಾರ ಮಾಡಿದೆ. ನಾಳೆ, ಏಪ್ರಿಲ್‌ 1ರಿಂದಲೇ ಬೆಂಗಳೂರಿನಲ್ಲಿ ಕಸದ ಸೆಸ್ ಜಾರಿಯಾಗುತ್ತಿದೆ. ಏಪ್ರಿಲ್‌

ಮತ್ತಷ್ಟು ದುಬಾರಿಯಾದ ಬೆಂಗಳೂರು

ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿ ಇದೀಗ ಪ್ರತಿ ತಿಂಗಳು ಕಸದ ಮೇಲೆ ಸೆಸ್ ವಸೂಲಿ ಮಾಡಲಿದೆ. ಹೀಗಾಗಿ ಪ್ರತಿ ತಿಂಗಳ ಖರ್ಚು ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಅಂಗಡಿ, ಹೊಟೇಲ್, ರೆಸಿಡೆನ್ಸಿಯಲ್ ಕಟ್ಟಡಗಳಿಗೆ ವಿಭಿನ್ನ ರೀತಿಯ ತೆರಿಗೆ ವಿಧಿಸಲಾಗುತ್ತಿದೆ. ಏಪ್ರಿಲ್‌

ಇದನ್ನೂ ಓದಿ: ಕಾಡ್ಗಿಚ್ಚು ಕಂಡುಬಂದರೆ ಈ ಅರಣ್ಯ ಸಹಾಯವಾಣಿಗೆ ಕೂಡಲೇ ಕರೆ ಮಾಡಿ

ಹೊಟೆಲ್‌ಗಳಿಗೆ ಈ ಮೊದಲು ಒಂದು ಕೆಜಿ ಕಸಕ್ಕೆ 5 ರೂಪಾಯಿ ನಿಗಧಿ ಮಾಡಲಾಗಿತು. ಇದೀಗ 12 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ರೆಸಿಡೆನ್ಶಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಅಲೆಕ್ಕದಲ್ಲಿ ಸೆಸ್ ದರ ನಿಗಧಿಪಡಿಸಲಾಗುತ್ತದೆ.

ಬಿಬಿಎಂಪಿ ಆಸ್ತಿ ತೆರಿಗೆಯಲ್ಲಿ ಕಸದ ತೆರಿಗೆಯನ್ನು ವಾರ್ಷಿಕವಾಗಿ ವಸೂಲಿ ಮಾಡಲಿದೆ. ಬಿಬಿಎಂಪಿಯ ಹೊಸ ನಿರ್ಧಾರದಿಂದ ವಾರ್ಷಿಕವಾಗಿ 600 ಕೋಟಿ ರೂಪಾಯಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಮೂಲಕ ಬರದಾಗುತ್ತಿರುವ ಬೊಕ್ಕಸ ತುಂಬಿಸಲು ವಿವಿಧ ಮೂಲಗಳಿಂದ ಹಣ ಸಂಗ್ರಹಿಸಲು ಮುಂದಾಗಿದೆ.

ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಸದ ತೆರಿಗೆ :

600 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ
600 ಚದರ ದಿಂದ 1000 ಚದರವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ.

1 ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ.
2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ.
3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ.
4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ

ಹೊಟೇಲ್ ಮಾಲಿಕರ ಸಂಘ ವಿರೋಧ

ಕಸದ ಮೇಲೆ ಸೆಸ್ ವಿಧಿಸುವ ಬಿಬಿಎಂಪಿ ನಿರ್ಧಾರವನ್ನು ಹೊಟೆಲ್ ಮಾಲೀಕರ ಸಂಘ ವಿರೋಧಿಸಿದೆ. ಈ ಕುರಿತು ಬಿಬಿಎಂಪಿಗೆ ಮಾಲೀಕರ ಸಂಘ ಹಲವು ಬಾರಿ ಮನವಿ ಮಾಡಿಕೊಂಡಿದೆ. ಆದರೆ ಹೊಟೆಲ್ ಮಾಲೀಕರ ಸಂಘದ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಹೊಟೆಲ್ ಮಾಲೀಕರು ಹಲವು ತೆರಿಗಳನ್ನು ಪಾವತಿಸುತ್ತಿದ್ದಾರೆ. ಇದೀಗ ಕಸದ ಮೇಲಿನ ಸೆಸ್ ಹೊರೆಯನ್ನು ಹೊಟೆಲ್ ಮಾಲೀಕರ ಮೇಲೆ ಹಾಕುವುದು ಉತ್ತಮ ನಿರ್ಧಾರವಲ್ಲ ಎಂದು ಬೆಂಗಳೂರು ಹೊಟೇಲ್ ಮಾಲಿಕರ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ

ಹಾಲಿನ ದರ ಏರಿಕೆ

ಕರ್ನಾಟಕ ಸರ್ಕಾರ ಈಗಾಗಲೇ ನಂದಿನ ಹಾಲಿನ ದರ ಏರಿಕೆ ಮಾಡಿದೆ. ಏಪ್ರಿಲ್ 1 ರಿಂದ ಪ್ರತಿ ಲೀಟರ್ ಹಾಲಿನ ಮೇಲೆ 4 ರೂಪಾಯಿ ಏರಿಕೆಯಾಗುತ್ತಿದೆ. ಮಾರ್ಚ್ 27 ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಬಾರಿ ಹಾಲಿನ ದರ ಏರಿಕೆ ನೇರವಾಗಿ ರೈತರಿಗೆ ಎಂದು ಸರ್ಕಾರ ಹೇಳಿದೆ. ಸಾಮಾನ್ಯ ಆರಂಭಿಕ ದರದ ಹಾಲು ಟೋನ್ಡ್ ಹಾಲು ಅರ್ಧ ಲೀಟರ್ ₹24 ರೂಪಾಯಿ ಆಗಿತ್ತು. ಇದೀಗ ಹೊಸ ದರ 26 ರೂಪಾಯಿ ಆಗಿದೆ. ಇನ್ನು ಟೋನ್ಡ್ ಹಾಲು ಒಂದು ಲೀಟರ್ ₹44ರಿಂದ 48 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ನೋಡಿ: ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ಭಯಾನಕ ವಿಡಿಯೋಗಳು Janashakthi Media

Donate Janashakthi Media

Leave a Reply

Your email address will not be published. Required fields are marked *