ಬೆಂಗಳೂರು: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ದಂಡ ಸಹಿತ ಪಾವತಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ, ಜೂನ್ 7 ಕ್ಕೆ ವಿಚಾರಣೆ ಮುಂದೂಡಿದೆ. ಸಿಐಟಿಯು
ಕಳೆದ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಕಾನೂನು ವಿದ್ಯಾರ್ಥಿನಿ ಅಂಕಿತಾ ಹಾಗೂ ಆಕೆಯ ತಂದೆ ಹರೀಶ್ ಕುಮಾರ್ ಮತ್ತು ಎಂಬಿಎ ವಿದ್ಯಾರ್ಥಿನಿ ಅಮೃತಾ ಹಾಗೂ ಆಕೆಯ ತಂದೆ ಮಂಜೇಗೌಡ ಇವರು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು. ಸಿಐಟಿಯು
ಕಳೆದ ಏಪ್ರಿಲ್ ಏಪ್ರಿಲ್ 8 ರಂದು ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಾಜ್ಯ ಸರ್ಕಾರ ಹಾಗೂ ಕಲ್ಯಾಣ ಮಂಡಳಿಗೆ ನೋಟೀಸ್ ಜಾರಿ ಮಾಡಿತ್ತು ಮತ್ತು ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರು ಪಾವತಿಸಿರುವ ಶೈಕ್ಷಣಿಕ ಧನಸಹಾಯ ಮರುಪಾವತಿಗೆ ಅಗತ್ಯವಿರುವ ಕ್ರಮವಹಿಸಿ ಎಂದು ಸರ್ಕಾರಕ್ಕೆ ಹಾಗೂ ಕಲ್ಯಾಣ ಮಂಡಳಿ ವಕೀಲರಿಗೆ ಮೌಖಿಕ ಆದೇಶ ನೀಡಿ ವಿಚಾರಣೆಯನ್ನು ಏಪ್ರಿಲ್23 ಕ್ಕೆ ಮುಂದೂಡಿತ್ತು.
ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಈ ಪ್ರಕರಣವನ್ನು ಏಪ್ರಿಲ್ 23 ರಂದು ಕೈಗೆತ್ತಿಕೊಂಡಿತ್ತು. ವಕೀಲರಾದ ಆದಿತ್ಯ ಚಟರ್ಜಿ ಅರ್ಜಿದಾರರ ಪರವಾದ ಸಲ್ಲಿಸಿ ಮಕ್ಕಳಿಗೆ ಆಗಿರುವ ತೊಂದರೆ ಹಾಗೂ ಶಿಕ್ಷಣದ ಮುಂದುವರಿಕೆ ಕುರಿತು ವಾದ ಸಲ್ಲಿಸಿದರು.ಅಲ್ಲದೇ ಶೈಕ್ಷಣಿಕ ಧನಸಹಾಯಕ್ಕಾಗಿ ಮನವಿ ಮಾಡಿದಾಗ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿವಾದಿ ಪರವ ವಕೀಲರು ನ್ಯಾಯಾಲಯದ ಆದೇಶದ ಅನ್ವಯ ಇಬ್ಬರೂ ವಿದ್ಯಾರ್ಥಿಗಳ ಖಾತೆಗೆ ಹಣ ಪಾವತಿಸಲು ಯಾವುದೇ ಕ್ರಮವಹಿಸಲಿಲ್ಲ ಈ ಅಂಶವನ್ನು ಮಕ್ಕಳ ಪೊಷಕರ ಬ್ಯಾಂಕ್ ಖಾತೆ ವಿವರಸಹಿತ ದಾಖಲೆಗಳನ್ನು ಅರ್ಜಿದಾರ ವಕೀಲರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಇದನ್ನು ಓದಿ : ಹಾಸನ ಪೆನ್ ಡ್ರೈವ್ ಪ್ರಕರಣ: ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಿ: ಕುಶಾಲಾ ಸ್ವಾಮಿ
ಆದರೆ ಮಂಡಳಿಪರವಾಗಿ ಹಾಜರಿದ್ದ ವಕೀಲರು ಮಂಡಳಿ ಹಿಂದಿನ ತೀರ್ಮಾನದಂತೆ ಕೇವಲ ರೂ 10 ಹಾಗೂ 11 ಸಾವಿರ ರುಪಾಯಿಗಳನ್ನು ಮಾತ್ರವೇ ಪಾವತಿಸಲು ಸಾಧ್ಯ ಎನ್ನುವ ಅಭಿಪ್ರಾಯ ಮಂಡಿಸಿದರು. ಈ ಹಿಂದಿನಂತೆಯೇ ಧನಸಹಾಯ ಮಾಡಬೇಕೆಂದು ಹೇಳಿದಾಗ, ನ್ಯಾಯಮೂರ್ತಿ ನಾಗಪ್ರಸನ್ನ ಇದಕ್ಕೆ ವಿರೋಧ ವ್ಯಕ್ತಪಡಿಸಿ, 10 ತಿಂಗಳ ಮೊದಲೇ ಸಲ್ಲಿಸಿದ್ದ ಅರ್ಜಿ ಕೋಲ್ಡ್ ಸ್ಟೋರೇಜ್‌ನಲ್ಲಿತ್ತು. ಹೀಗಾಗಿ ತಡವಾಗಿ ವಿಚಾರಣೆಗೆ ಬಂದಿದೆ. ಆದರೂ ಇದನ್ನುಹಿಂದಿನ ಅರ್ಜಿಯೆಂದೇ ಪರಿಗಣಿಸಲಾಗುವುದು. ಹೀಗಾಗಿ ಹಳೆಯ 2021 ರ ಅಧಿಸೂಚನೆ ಅನ್ವಯವೇ ಅರ್ಜಿದಾರರಿಗೆ ರೂ 30000 ಹಾಗೂ ರೂ 35000. ಜತೆಗೆ ಕಾನೂನು ವೆಚ್ಚವಾಗಿ ರೂ 25000 ಗಳನ್ನು ಅರ್ಜಿದಾರ ಇಬ್ಬರು ವಿದ್ಯಾರ್ಥಿನಿಯರಿಗೆ ಪಾವತಿಸಲು ನ್ಯಾಯಮೂರ್ತಿಗಳು ಕಲ್ಯಾಣ ಮಂಡಳಿಗೆ ಆದೇಶಿಸಿದರು
ಅಲ್ಲದೇ ಹಳೆ ಕಲ್ಯಾಣ ಮಂಡಳಿಯು ದಂಡ ಸಹಿತ ಈ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ನಿಗದಿತ ಅವಧಿಯೊಳಗೆ ಪಾವತಿಸಲು ವಿಫಲವಾದರೆ, ಪ್ರತಿದಿವಸಕ್ಕೂ ಐದು ನೂರು ರುಪಾಯಿಗಳಂತೆ ಪ್ರತಿ ವಿದ್ಯಾರ್ಥಿನಿಯರಿಗೆ ದಂಡವಾಗಿ ಮಕ್ಕಳ ಖಾತೆಗೆ ಪಾವತಿಸಬೇಕು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಸೂಚಿಸಿದರು.
ಅಲ್ಲದೇ ಮಧ್ಯಂತರ ಆದೇಶದಲ್ಲಿ ಮಂಡಳಿಯ ಅಧಿಕಾರಶಾಹಿತನವನ್ನು ಮತ್ತು ಬಡ ಕಾರ್ಮಿಕರು ಹಾಗೂ ಅವರ ಮಕ್ಕಳು ತಮಗೆ ದೊರಕಬೇಕಾದ ನ್ಯಾಯಬದ್ಧ ಶೈಕ್ಷಣಿಕ ಧನಸಹಾಯ ಪಡೆಯಲು ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿದ ಕಲ್ಯಾಣ ಮಂಢಳಿ ಕ್ರಮವನ್ನುಅತ್ಯಂತ ಖಾರವಾಗಿ ನ್ಯಾಯಮೂರ್ತಿಗಳು ಟೀಕಿಸಿ,ವಿಚಾರಣೆಯ ಮಧ್ಯಂತರ ಆದೇಶ ಹೊರಡಿಸಿ ಮುಂದಿನ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದರು.
ಇದರಿಂದಾಗಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ನಡೆಸಿದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದಂತಾಗಿದ್ದು, ಕಾರ್ಮಿಕರ ಮಕ್ಕಳ ಪರ ಹೋರಾಟಕ್ಕೆ ಜಯ ಸಂದಂತಾಗಿದೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದ್ದಾರೆ.
ಇದನ್ನು ನೋಡಿ : ಮೋದಿಯವರ ‘ಮುಸ್ಲಿಂ, ಮೊಘಲ್, ಮಟನ್’ ಎನ್ನುವ ಅಪಾಯಕಾರಿ ಸಿದ್ಧಾಂತ. Janashakthi Media