ನವದೆಹಲಿ: ಸಿಐಟಿಯು ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಸಿಐಟಿಯು ಮಾಜಿ ಖಜಾಂಚಿ ಮತ್ತು ಸಂಚಾಲಕಿ, ಆಶಾ ವರ್ಕರ‍್ಸ್‌ನ ಅಖಿಲ ಭಾರತ ಸಮನ್ವಯ ಸಮಿತಿ(ಸಿಐಟಿಯು) ಸಂಘಟನೆಯ ರಂಜನಾ ನುರುಲ್ಲಾ ಅವರು ಇಂದು ನಿಧನರಾಗಿದ್ದಾರೆ.
ಅವರು ಸಮಾನತೆಯ ಸಮಾಜಕ್ಕಾಗಿ ಅಮೆರಿಕಾದಲ್ಲಿ ಅಂಗವಿಕಲ, ಮೂಕ ಮಕ್ಕಳ ನಡುವೆ ತನ್ನನ್ನು ತೊಡಗಿಸಿಕೊಂಡು ಭಾರತದಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆಯ ಮೇರೆಗೆ ನೇರವಾಗಿ ದೆಹಲಿಯಲ್ಲಿದ್ದ ಸಿಪಿಐ(ಎಂ) ಪಕ್ಷದ ಕಛೇರಿಗೆ ಹೋಗಿ ಪಕ್ಷದಲ್ಲಿ ದುಡಿಯುವ ಇಚ್ಛೆಯನ್ನು ವ್ಯಕಪಡಿಸಿದರು. ಸುಮಾರು ಐದು ದಶಕಗಳಿಂದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ರಂಜನಾ ಅವರು ಸಿಐಟಿಯು, ಟ್ರೇಡ್ ಯೂನಿಯನ್ ಚಳವಳಿ ಮತ್ತು ಸಿಪಿಐ(ಎಂ)ನ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದರು. ಸಿಪಿಐ(ಎಂ) ಒಟ್ಟಿಗೆ ಐದು ದಶಕಗಳ ಹೋರಾಟ ಮತ್ತು ತ್ಯಾಗ ಇವರದಾಗಿದೆ, ದೆಹಲಿಯ ಜನವಾದಿ ಮಹಿಳಾ ಸಮಿತಿಯ ಸ್ಥಾಪಕ ಸದಸ್ಯೆಯೂ ಆಗಿದ್ದಾರು.
ಇದನ್ನು ಓದಿ: ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್.ಗೌರಿ ಅಮ್ಮ ನಿಧನ
ರಂಜನಾ ಅವರು ಎಪ್ಪತ್ತರ ದಶಕದ ಆರಂಭದಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಿದ ನಂತರ ಹಿಂದಿರುಗಿದ ತಕ್ಷಣವೇ ರಾಜಕೀಯ ಚಟುವಟಿಕೆಯಲ್ಲಿ ಮುಳುಗಿದರು. ಟ್ರೇಡ್ ಯೂನಿಯನ್ ಜೊತೆ ಒಡನಾಟ ಹೊಂದಿದ್ದ ರಂಜನಾ ಅವರು ವಿವಿಧ ಸರ್ಕಾರಗಳ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳು ಮತ್ತು ಅವರ ತೀಕ್ಷ್ಣವಾದ ಭಾಷಣಗಳು ಮತ್ತು ಲೇಖನಗಳ ಮೂಲಕ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸುತ್ತಿದ್ದರು.
ಅಖಿಲ ಭಾರತ ಸಮನ್ವಯ ಸಮಿತಿಯು ಕಾರ್ಯನಿರತ ಮಹಿಳೆಯರ ʻವಾಯ್ಸ್ ಆಫ್ ದಿ ವರ್ಕಿಂಗ್ ವುಮೆನ್ʼ ಅನ್ನು ಪ್ರಕಟಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಕಟಣೆಗೆ ಲೇಖನಗಳನ್ನು ಪಡೆಯುವಲ್ಲಿ ಅವರು ಉತ್ತಮ ಮನವೊಲಿಸುವ ಕೌಶಲ್ಯವನ್ನು ಹೊಂದಿದ್ದರು ಮತ್ತು ಯಾರೂ ಅವರ ಮಾತನ್ನು ನಿರಾಕರಿಸುತ್ತಿರಲಿಲ್ಲ. ಸಾಂಸ್ಥಿಕ ರಚನೆಗಳ ಒಳಗೆ ಮತ್ತು ಹೊರಗೆ ನಿರ್ಭಯವಾಗಿ ಮಾತನಾಡಲು ಅವರು ಕಿರಿಯ ಒಡನಾಡಿಗಳನ್ನು ಪ್ರೋತ್ಸಾಹಿಸುತ್ತಿದ್ದರು.
ಇದನ್ನು ಓದಿ: ಎಡ ಚಿಂತಕಿ ಗೌರಿ ಅಮ್ಮ ಬೀದಿ ಬೀದಿಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಮೊಳಗಿಸಿದವರು
ʻಸತ್ಯವು ನಿಮ್ಮ ಕಡೆ ಇದ್ದರೆ, ಒಬ್ಬರೇ ಆದರೂ ಮಾತನಾಡಲು ಯಾಕೆ ಭಯಪಡಬೇಕು?ʼ ಅವರ ಈ ಮಾತು ಸದಾಕಾಲ ಬೆರೆತುಕೊಂಡಿದ್ದವು. ಸ್ನೇಹಪರ, ಹರ್ಷಚಿತ್ತದ ಸ್ವಭಾವದಿಂದಾಗಿ ಸಮಸ್ತರೊಂದಿಗೆ ಬೆರೆಯುತ್ತಿದ್ದರು.
ರಂಜನಾ ಅವರು ಆರ್‌ಎಂಎಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಮತ್ತು ಹೆಚ್ಚಿನ ಚಿಕಿತ್ಸೆಗೆ ಒಳಗಾಗಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.