- ಹರಿಯಾಣ ಮತ್ತು ದೆಹಲಿ ಸರ್ಕಾರಗಳ ವಿರುದ್ಧ ಐಎಲ್‌ಒ ಗೆ ದೂರು ನೀಡಿದ ಸಿಐಟಿಯು
- ಹಿಂಬಡ್ತಿಯನ್ನು ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ದೆಹಲಿ ಹೈಕೋರ್ಟ್‌ನ ಮೊರೆ
ನವದೆಹಲಿ: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ನಿರತರಾಗಿದ್ದ 975 ಮತ್ತು ನಿವೃತ್ತಿ ಅಂಚಿನಲ್ಲಿದ್ದ 991 ಅಂಗನವಾಡಿ ಕಾರ್ಯಕರ್ತೆಯರನ್ನು ವಜಾಗೊಳಿಸಿದ್ದಕ್ಕಾಗಿ ಹರಿಯಾಣ ಮತ್ತು ದೆಹಲಿ ಸರ್ಕಾರಗಳ ವಿರುದ್ಧ ಸಿಐಟಿಯು ಕೇಂದ್ರ ಸಮಿತಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ (ಐಎಲ್‌ಒ) ದೂರು ನೀಡಿದೆ.
ಈ ಕುರಿತು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಅವರು ಐಎಲ್‌ಒದ ಬ್ಯೂರೋ ಫಾರ್ ವರ್ಕರ್ಸ್ ಆಕ್ಟಿವಿಟೀಸ್ (ACTRAV) ನಿರ್ದೇಶಕಿ ಮರಿಯಾ ಹೆಲೆನಾ ಆಂಡ್ರೆ ಅವರಿಗೆ ನೀಡಿದ ದೂರಿನಲ್ಲಿ ಕೇಂದ್ರ ಸರಕಾರದ ಕುಮ್ಮಕ್ಕು ಮತ್ತು ಪ್ರಚೋದನೆಯ ಅಡಿಯಲ್ಲಿ” ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಐಎಲ್‌ಒ ಶಿಫಾರಸುಗಳು ಮತ್ತು ಘೋಷಣೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ತಪನ್ ಸೇನ್ ವಾದಿಸಿದ್ದಾರು. ಮುಷ್ಕರಗಳ ಕಾನೂನು ಬಾಹಿರತೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ಸರ್ಕಾರ ಮಾಡಬಾರದು ಎಂದು ಸಂಘದ ಸ್ವಾತಂತ್ರ್ಯ ಸಮಿತಿಯ ಅವಲೋಕನವನ್ನು ಸರ್ಕಾರಗಳು ನಿರ್ಲಕ್ಷಿಸುತ್ತವೆ, ನೈಸರ್ಗಿಕ ನ್ಯಾಯದ ತತ್ವವನ್ನು ಅನುಸರಿಸದೆ ಕಾರ್ಮಿಕರನ್ನು ವಜಾಗೊಳಿಸಿದ್ದಾರೆ. ತಿಂಗಳುಗಟ್ಟಲೆ ವೇತನವನ್ನು ನೀಡದೆ ಕಾರ್ಮಿಕರನ್ನು ಬಡತನ ಮತ್ತು ಹಸಿವಿನಿಂದ ನರಳುವಂತೆ ಮಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಹೆಚ್ಚುವರಿ ವೇತನ ಅಥವಾ ಅಪಾಯ ಭತ್ಯೆ ಇಲ್ಲದೆ ಸಂಬಂಧಪಟ್ಟ ಆರೋಗ್ಯ ಇಲಾಖೆಗಳ ಸಮನ್ವಯದೊಂದಿಗೆ ಮುಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ, ಅವರ ಸೇವೆಯನ್ನು ಸರಿಯಾಗಿ ಪರಿಗಣಿಸಿ ಅವರಿಗೆ ವೇತನ ನೀಡುತ್ತಿಲ್ಲ. ಭಾರತ ಸರ್ಕಾರವು 2018 ರಲ್ಲಿ ಕೊನೆಯ ಸಂಭಾವನೆಯನ್ನು ಹೆಚ್ಚಿಸಿದೆ. ಆದರೆ ದೆಹಲಿ ಮತ್ತು ಹರಿಯಾಣ ರಾಜ್ಯಗಳು ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಈ ಹೆಚ್ಚಳವನ್ನು ಜಾರಿಗೆ ತಂದಿಲ್ಲ. ಇದಲ್ಲದೆ, ಹರ್ಯಾಣ, ದೆಹಲಿ, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಲವಾರು ತಿಂಗಳುಗಳ ವೇತನ ಮತ್ತು ಭತ್ಯೆಗಳನ್ನು ಪಾವತಿಸಲಾಗಿಲ್ಲ, ”ಎಂದು ದೂರಿನಲ್ಲಿ ಹೇಳಲಾಗಿದೆ.