ಹುಬ್ಬಳ್ಳಿ : ಪ್ರಜಾಪ್ರಭುತ್ವದಲ್ಲಿ ಪೌರತ್ವ ಮಹತ್ವ, ಪ್ರತಿಯೊಬ್ಬರು ಯಾವ ರೀತಿ ಬದುಕಬೇಕು ಸ್ಥಳೀಯ ಸಮಸ್ಯೆಗಳ ಬಗ್ಗೆ ಗುರುತಿಸಿ ಅದರ ಪರಿಹಾರಕ್ಕೆ ತಾವು ಎನು ಪಾತ್ರವಹಿಸಬೇಕು ಇದರಲ್ಲಿ ಗ್ರಾಮದ ಜನರಿಗೆ, ನಗರದ ಜನರಿಗೆ ಹೇಗೆ ಇದರ ಕುರಿತು ಅರಿವು ಮೂಡಿಸುವುದು ಎಂಬುದರ ಕುರಿತು ಶಾಲಾ ಮಕ್ಕಳಲ್ಲಿ ಪ್ರಾಯೋಗಿಕವಾಗಿ ಶಿಕ್ಷಣ ನೀಡುತ್ತಿರುವ ದೇಶ ಅಪ್ನಾಯೇನ್ ಸಹಯೋಗ ಫೌಂಡೇಷನ್ ಕೆಲಸ ಮಾಡುತ್ತಿದೆ.
ಅದರ ಭಾಗವಾಗಿ ಹುಬ್ಬಳಿಯ ವೀರಾಪೂರ ಓಣಿಯ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆಯಲ್ಲಿ ಮಕ್ಕಳು ದೇಶ ಅಪ್ನಾಯೇನ್ ಸಹಯೋಗ ಫೌಂಡೇಷನ್ ಚಟುವಟಿಕೆಯಲ್ಲಿ ಕಲಿತ ವಿಷಯಗಳ ಆಸಕ್ತಿಯಿಂದ ತಮ್ಮ ಶಾಲೆಯ ಸುತ್ತಮುತ್ತಲಿನ ಸಮಸ್ಯೆಯ ಕುರಿತು ಪಟ್ಟಿಮಾಡಿ ಸ್ಥಳೀಯ ನಗರ ಪಾಲಿಕೆಯ ಸದಸ್ಯರಿಗೆ ತಾವೇ ಸ್ವತ ಮನವಿ ಸಲ್ಲಿಸಿ ಸಮಸ್ಯೆಗಳ ಕುರಿತು ಪರಿಹಾರಕ್ಕೆ ಬೇಡಿಕೆಗಳನ್ನೂ ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿದ ನಗರ ಪಾಲಿಕೆಯ ಸದಸ್ಯರು ಆದಷ್ಟು ಬೇಗ ಸಮಸ್ಯೆಗೆ ಪರಿಹರಿಸುವ ಭರವಸೆ ನಿಡಿದರು.
ಇದನ್ನೂ ಓದಿ: ಹಾಸನ | ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಒತ್ತಾಯಿಸಿ SFI ಪ್ರತಿಭಟನೆ
ಇಂದು ಈ ಚಟುವಟಿಕೆಯ ಪರಿಣಾಮ ಹುಬ್ಬಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಾಪುರ ಓಣಿಯಲ್ಲಿ 6 ನೇ ತರಗತಿಯ ವಿದ್ಯಾರ್ಥಿಗಳು, ಒಂದು ಅಣಕು ಪಂಚಾಯತ್ ಚಟುವಟಿಕೆಯ ನಂತರ, ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ ಮತ್ತು ನೀರಿನ ಪೂರೈಕೆಯ ಕೊರತೆ ಎದ್ದು ಕಂಡಿದೆ. ಇದು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಿದರು. ಅವರು ಈ ಸಮಸ್ಯೆಗಳನ್ನು ಸ್ಥಳೀಯ ಮಹಾನಗರ ಪಾಲಿಕೆಗೆ ತಿಳಿಸಿದರು. ಅದರ ಪರಿಣಾಮ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಯಲಾಯಿತು, ನೀರು ಸರಬರಾಜು ಸುಧಾರಿಸಿದೆ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಈಗ ಶಾಲೆಗೆ ಬಣ್ಣ ಹಾಗೂ ಬೋರವೇಲ್ ಮಂಜುರಾಗಿದೆ ಈಗ ಶಾಲೆಗೆ ಬಣ್ಣ ಬಳಿಯಲಾಗಿದೆ. ಇದು ಸ್ಥಳೀಯರಲ್ಲಿ ಮತ್ತು ಮಕ್ಕಳಲ್ಲಿ ಸಂತಸ ತಂದಿದೆ.
ಇದನ್ನೂ ನೋಡಿ: ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media
