ಬೆಂಗಳೂರು: ನಗರದಲ್ಲಿ ಮೊದಲೇ ರಸ್ತೆಗಳ ಪರಿಸ್ಥಿತಿ ಸರಿಯಿಲ್ಲ. ಇದೀಗ ಬೆಂಗಳೂರಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳಪೆ
ಹೀಗಾಗಿ ಬೆಂಗಳೂರಿನ ನಾಗರಿಕರೊಬ್ಬರು ರಸ್ತೆಗಳ ಫಜೀತಿಯಿಂದ ಹೈರಾಣಾಗಿದ್ದು, ಕಳಪೆ ರಸ್ತೆಯಲ್ಲಿ ದಿನನಿತ್ಯ ವಾಹನ ಚಲಾಯಿಸಿ ತಮಗೆ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿದ್ದು, ಇದಕ್ಕೆ ಪರಿಹಾರವಾಗಿ ಬಿಬಿಎಂಪಿ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಲೀಗಲ್ ನೋಟಿಸ್ ನೀಡಿದ್ದಾರೆ.
ಬೆಂಗಕೂರಿನ ರಿಚ್ಮಂಡ್ ಟೌನ್ ನಿವಾಸಿ ದಿವ್ಯ ಕಿರಣ್ ಈ ರೀತಿ ನೋಟೀಸ್ ನೀಡಿದ್ದಾರೆ. ಬಿಬಿಎಂಪಿ ನಗರದ ಮೂಲಭೂತ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇದನ್ನೂ ಓದಿ: ಬೆಂಗಳೂರು ಮಳೆ: ಊಬರ್ನ ಟೈಟಾನಿಕ್ ಟ್ರೋಲ್ ವೈರಲ್!
ಹೀಗಾಗಿ ನಾನು ದೈಹಿಕ ಮತ್ತು ಮಾನಸಿಕ ಯಾತನೆ ಅನುಭವಿಸುವಂತಾಗಿದ್ದು ನನ್ನ ಆರೋಗ್ಯ ಹದಗೆಡಲು ಬಿಬಿಎಂಪಿ ಕಾರಣ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಟ್ಟ ರಸ್ತೆಗಳ ಪರಿಣಾಮ ತಮಗೆ ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆಯಾಗಿದೆ. ಹೀಗಾಗಿ ನಾನು ಆಸ್ಪತ್ರೆಗಳಿಗ ಅಲೆಯುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ, ಮಾತ್ರವಲ್ಲ ಕಾನೂನು ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.
ತಾವು ಬೆಂಗಳೂರಿನ ನಾಗರಿಕನಾಗಿದ್ದು ತೆರಿಗೆಯನ್ನು ಪಾವತಿಸುತ್ತಿದ್ದೇನೆ. ನಮಗೆ ಉತ್ತಮ ರಸ್ತೆಗಳನ್ನು ಒದಗಿಸುವುದು ಬಿಬಿಎಂಪಿಯ ಜವಾಬ್ದಾರ. ಆದ್ರೆ ಬಿಬಿಎಂಪಿ ವಿಫಲವಾಗಿದೆ. ಹೀಗಾಗಿ ನೋಟಿಸ್ ಕಳುಹಿಸಿದ್ದೇನೆ. ಮುಂದಿನ 15 ದಿನಗಳ ಒಳಗಡೆ ನನಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಮುಸ್ಲಿಮರ ಒಪ್ಪಿಗೆ ಇಲ್ಲದ ಕಾನೂನುಗಳು ಮುಸ್ಲಿಂ ಪರ ಆಗುವುದಿಲ್ಲ – ಬಿ.ಎಂ. ಹನೀಫ್ Janashakthi Media