ಹೊಸಕೋಟೆ | ನಂದಗುಡಿಯ ಪಿಎಂಶ್ರೀ ಶಾಲೆಯಲ್ಲಿ ಅನುಭವಾತ್ಮಕ ಕಲಿಕೆಗೆ ಚಿಣ್ಣರ ಸಂತೆ

ಹೊಸಕೋಟೆ : ತಾಲ್ಲೂಕಿನ ನಂದಗುಡಿಯ ಪಿಎಂಶ್ರೀ ಕೆಪಿಎಸ್ ಶಾಲಾ ಆವರಣದಲ್ಲಿ ಚಿಣ್ಣರ ಮಕ್ಕಳ ಸಂತೆ ನಡೆಯಿತು.

ಕೋಸು, ಬದನೆ, ತೆಂಗಿನಕಾಯಿ, ಪಪ್ಪಾಯಿ, ಕೊತ್ತಂಬರಿ, ವಿವಿಧ ತರಕಾರಿ, ಸೊಪ್ಪು ಮಾರಾಟ ಜೋರಾಗಿ ನಡೆಯಿತು.  ಮಕ್ಕಳು ವಿವಿಧ ತಿಂಡಿ ತಿನಿಸು ಮಾಡಿಸಿಕೊಂಡು ಸಂತೆಗೆ ಬಂದ ವ್ಯಾಪಾರದ ಕೈಚಳಕ ತೋರಿದರು.

ಇದನ್ನೂ ಓದಿ : ಹುಬ್ಬಳ್ಳಿ | ಶವ ಹಸ್ತಾಂತರಕ್ಕೂ ಹಣ ಬೇಡಿಕೆ? ಹುಬ್ಬಳ್ಳಿ ಕಿಮ್ಸ್ ವಿರುದ್ಧ ಆರೋಪ

ಸಾಂಸ್ಕೃತಿಕ ಚಟುವಟಿಕೆ ಜೊತೆಯಲ್ಲಿ ಸಾರ್ವಜನಿಕರ ಜೊತೆ ಬೆರೆತು ಕಲಿಯಲು ಸಹಕಾರಿಯಾಗುತ್ತದೆ ಹಾಗೂ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾದರೆ ಸಾಲದು, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿದಾಗ ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ. ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ಮುನಿಸ್ವಾಮಯ್ಯ ತಿಳಿಸಿದರು.

ಗ್ರಾ.ಪಂ ಸದಸ್ಯ ಎನ್.ಎನ್. ಮಂಜುನಾಥ್, ಎಸ್‌ಡಿಎಂಸಿ ಉಪಾಧ್ಯಕ್ಷ ಎನ್. ಗಂಗಾಧರ್, ಸದಸ್ಯರಾದ ಜಿ.ಮೂರ್ತಿ, ಸಿಆರ್‌ಪಿ ಸತೀಶ್‌ಕುಮಾರ್, ಮುಖ್ಯ ಶಿಕ್ಷಕರಾದ ಡಿ.ಕೃಷ್ಣಪ್ಪ ಇದ್ದರು.

ಇದನ್ನೂ ನೋಡಿ : ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media

Donate Janashakthi Media

Leave a Reply

Your email address will not be published. Required fields are marked *