ರಾಜಕೀಯ ಬಿಕ್ಕಟ್ಟಿಗೆ ತೆರೆ: ಬಹುಮತ ಗೆದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಮುಂಬೈ: ಕಳೆದ 2 ವಾರಗಳಿಂದ ನಡೆಯುತ್ತಿದ್ದ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ತಾತ್ಕಾಲಿಕ ಶಮನಗೊಂಡಿದ್ದು, ವಿಶ್ವಾಸಮತ ಗೆದ್ದು ತಮ್ಮ ಮುಖ್ಯಮಂತ್ರಿ ಸ್ಥಾನ ಭದ್ರಪಡಿಸಿಕೊಂಡಿರುವ ಏಕನಾಥ್‌ ಶಿಂಧೆ ಗೆಲುವಿನ ನಗೆ ಬೀರಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇಂದು(ಜುಲೈ 04) ನಡೆದ ವಿಧಾನಸಭೆ ಅಧಿವೇಶನದಲ್ಲಿ ತಮ್ಮ ಪರ 164 ಮತ ಪಡೆದು ಸರ್ಕಾರದ ಬಹುಮತವನ್ನು ಸಾಬೀತುಪಡಿಸಿದ್ದಾರೆ.

ಏಕನಾಥ್ ಶಿಂಧೆ ಪರವಾಗಿ 164 ಮತಗಳು ಬಂದರೆ, ವಿರುದ್ಧವಾಗಿ 99 ಮತಗಳು ಚಲಾವಣೆಯಾದವು. ಅಂತಿಮವಾಗಿ ಸರ್ಕಾರದ ರಚನೆಗೆ ಬೇಕಾದ ಬಹುಮತವನ್ನು ಪಡೆದುಕೊಂಡ ಶಿಂಧೆ ತಮ್ಮ ಕುರ್ಚಿ ಭದ್ರಪಡಿಸಿಕೊಂಡರು.

ನೆನ್ನೆ ಬೆಳವಣಿಗೆಯೊಂದರಲ್ಲಿ ವಿಧಾನಸಭಾಧ್ಯಕ್ಷರ ಚುನಾವಣೆಯಲ್ಲಿ ಪ್ರತಿಪಕ್ಷಗಳು 107 ಮತಗಳನ್ನು ಪಡೆದುಕೊಂಡಿತು. ಆದರೆ, ಇಂದು ಒಬ್ಬರು ಶಿಂಧೆ ಪಾಳಯಕ್ಕೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಹಲವು ಹಲವಾರು ಶಾಸಕರು ಮತ ಚಲಾಯಿಸಲು ಬರಲಿಲ್ಲ ಹಾಜರಿರಲಿಲ್ಲ.

ಕಾಂಗ್ರೆಸ್‌ನ ವಿಜಯ್ ವಾಡೆತ್ತಿವಾರ್, ಜೀಶನ್ ಸಿದ್ದಿಕಿ ಮತ್ತು ಧೀರಜ್ ದೇಶಮುಖ್ ಇಂದು ಗೈರುಹಾಜರಾಗಿದ್ದರು. ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಮತದಾನದ ನಂತರ ಆಗಮಿಸಿದರು. ಎನ್‌ಸಿಪಿಯ ಸಂಗ್ರಾಮ್ ಜಗತಾಪ್ ಕೂಡ ಸದನದಲ್ಲಿ ಇರಲಿಲ್ಲ. ಈ ನಾಲ್ವರೂ ನೆನ್ನೆ ಅಧಿವೇಶನದಲ್ಲಿ  ಹಾಜರಾಗಿದ್ದರು. ಸಮಾಜವಾದಿ ಪಕ್ಷದ ಅಬು ಅಜ್ಮಿ ಮತ್ತು ರೈಸ್ ಶೇಖ್ ಮತ್ತು ಎಐಎಂಐಎಂನ ಶಾ ಫಾರೂಖ್ ಅನ್ವರ್ ಮತದಾನದಿಂದ ದೂರ ಉಳಿದಿದ್ದರು.

ಉದ್ಧವ್‌ ಠಾಕ್ರೆ ತಂಡದ ಶಾಸಕ ಸಂತೋಷ್ ಬಂಗಾರ್ ವಿಶ್ವಾಸ ಮತಕ್ಕೆ ನಿಮಿಷಗಳ ಮೊದಲು ಏಕನಾಥ್ ಶಿಂಧೆ ಬಣವನ್ನು ಸೇರಿಕೊಂಡರು. ಶಿಂಧೆ ಪಾಳಯದಲ್ಲಿ ಈಗ ಒಟ್ಟು 40 ಶಿವಸೇನೆ ಶಾಸಕರಿದ್ದಾರೆ.

ಬಿಜೆಪಿಯ ರಾಹುಲ್ ನಾರ್ವೆಕರ್ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ಒಂದು ದಿನದ ನಂತರ ಬಲಾಬಲ ಪರೀಕ್ಷೆ ನಡೆದಿದೆ .ಆದರೆ ಹೊಸ ಮುಖ್ಯಮಂತ್ರಿ ಸೇರಿದಂತೆ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಶಿವಸೇನೆ ನೀಡಿರುವ ನೋಟಿಸು ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಬಾಕಿಯಿದೆ.

ರಾಹುಲ್ ನಾರ್ವೆಕರ್ ಕಳೆದ ರಾತ್ರಿ ಏಕನಾಥ್ ಶಿಂಧೆ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿ ಮರುಸ್ಥಾಪಿಸಿದರು ಮತ್ತು  ಗೊಗಾವಾಲೆ ಅವರನ್ನು ಶಿವಸೇನೆಯ ಮುಖ್ಯ ಸಚೇತಕರಾಗಿ ನೇಮಕ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *