ಚೆಗುವೆರಾ , ಹೆಸರು ಹೇಳುವುದೆ ಒಂದು ರೋಮಾಂಚನ. ಚೆಗುವೆರಾ ಹುಟ್ಟಿದ್ದು 1928 ಜೂನ್ 14 ರಂದು ದಕ್ಷಿಣ ಅಮೇರಿಕಾದ ಅರ್ಜೆಂಟೈನಾ ದಲ್ಲಿ , ಆತ ಹುಟ್ಟುತ್ತಲೆ ಅಸ್ತಮಾ ರೋಗಿ , ಆದರೆ ಆತ ರೋಗ ಎಂಬುದು ಮನಸ್ಸಿಗಲ್ಲ ದೇಹಕಷ್ಟೆ ಎಂದು ತೋರಿಸಿಕೊಟ್ಟವನು. ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು. ಜಗತ್ತಿನ ಡೊಂಕ ತಿದ್ದಿದ ಅದಮ್ಯ ಚೇತನ. ಮಣ್ಣಿಗೆ ಮಣ್ಣಿನ ಕ್ರಾಂತಿಯ ಘಮಸಿಂಪಡಿಸಿ ಜಗತ್ತೇ ಹೆಮ್ಮೆಯಿಂದ ತಿರುಗಿ ನೋಡೋ ಹಾಗೆ ಮಾಡಿದ ಚೇ ಕುರಿತಾದ ರೋಚಕ ಮಾಹಿತಿಗಳನ್ನು ತಿಳಿಯೋಣ.
ನಾನು ಎಂದಿಗೂ ಸೋತು ಮನೆಗೆ ಹಿಂತಿರುಗುವುದಿಲ್ಲ. ಸೋಲಿಗಿಂತ ಸಾವನ್ನೆ ಹೆಚ್ಚು ಇಚ್ಛಿಸುತ್ತೇನೆ’ ಎಂದು ಕ್ಯೂಬ ಬಿಡುವ ಮೊದಲು ಹೇಳಿದ ಮಾತಿನಂತೆಯೇ ನಿರಂತರವಾಗಿ ಹೋರಾಟದಲ್ಲೇ ತಮ್ಮ ಜೀವನವನ್ನು ಸವೆದು ಸೋಲಲು ಇಚ್ಛಿಸಿದೆ ತನನ್ನು ಸಾವಿಗೆ ಒಡ್ಡಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೊ ಚೆಗುವೆರಾ.
ಚೆಗುವಾರ 1948 ರಲ್ಲಿ ವೈದ್ಯಕೀಯ ಕಲಿಕೆಗಾಗಿ ಬ್ಯೂನಸ್ ಐರ್ಸ್ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಾನೆ. ಆಗ ಆತ ನಿಗೆ 19 ವರ್ಷ. ಅಲ್ಲಿನ ಅಧ್ಯಯನ ಚೆಗೆವೆರಾಗೆ ರುಚಿಸೋದಿಲ್ಲ. ಆಗ 1951ರಲ್ಲಿ ವಿಶ್ವವಿದ್ಯಾಲಯದಿಂದ ಒಂದು ವರ್ಷ ರಜೆ ಪಡೆದು ತನ್ನ ಆಪ್ತಮಿತ್ರ ಅಲ್ಬರ್ಟೊ ಗ್ರೆನಡೋ ಜೊತೆಗೂಡಿ ಮೋಟರ್ ಸೈಕಲ್ ಮೇಲೆ ದಕ್ಷಿಣ ಅಮೆರಿಕಾದ ಪ್ರವಾಸ ಹೊರಡುತ್ತಾನೆ. ಹಲವು ದೇಶಗಳನ್ನು ಸುತ್ತುತ್ತಾನೆ. ಆತ ಅನೇಕ ವಿಷಯಗಳ ಕುರಿತಾಗಿ ತಿಳಿಯುತ್ತಾನೆ. ಆ ದೇಶಗಳಲ್ಲಿ ಹಾಸುಹೊಕ್ಕಾಗಿದ್ದ ಬಡತನ , ರೋಗ , ಭ್ರಷ್ಟಾಚಾರ, ಆರ್ಥಿಕ ಶೋಷಣೆ ಇದನ್ನೆಲ್ಲ ನೋಡಿ ಅವನ ಮನಸ್ಸು ಕುದ್ದು ಹೊಗುತ್ತದೆ . ಕೆಲವು ಕುಷ್ಠರೋಗಿಗಳ ಕಾಲೋನಿಗಳಿಗೆ ಬೇಟಿ ನೀಡಿ ಅವರ ಸೇವೆ ಮಾಡುತ್ತಾನೆ.
ಪ್ರವಾಸ ಮುಗಿಸಿ ಮನೆಗೆ ಹಿಂದುರುಗಿದ ಚಿಗುವೆರಾ ವೈದ್ಯಕೀಯ ವೃತ್ತಿ ಯನ್ನು ಪೂರ್ಣಗೊಳಿಸಿದರೂ ಕೂಡ ಆತನ ಮನಸ್ಸು ಶೋಷಣೆಗೆ ಒಳಗಾದ ದಕ್ಷಿಣ ಅಮೇರಿಕಾದ ಜನರಿಗಾಗಿ ತುಡಿಯುತ್ತಿತ್ತು. ಕೊನೆಗೆ ಅಮೇರಿಕಾದ ಸಾಮ್ರಾಜ್ಯಶಾಹಿ ಯ ವಿರುದ್ದ ಹೋರಾಡಲು ನಿರ್ದರಿಸಿ, ಮದ್ಯ ಅಮೇರಿಕಾದ ಕಡೆ ಹೊರಡುತ್ತಾರೆ. ಗ್ವಾಟೆಮಾಲಾ, ಕ್ಯೂಬಾ ಹಾಗೂ ಮೆಕ್ಸಿಕೋಗಳಲ್ಲಿ ನಡೀತಿದ್ದ ದೌರ್ಜನ್ಯಗಳನ್ನ ಚೆ ಬಹಳ ಹತ್ತಿರದಿಂದ ಗಮನಿಸಿದ್ದ. ದಾಸ್ಯ ವಿಮುಕ್ತಿಗಾಗಿ ಸಾಲುಸಾಲಾಗಿ ಚಳುವಳಿಗಳೇನೋ ನಡೀತಿತ್ತು. ಆದ್ರೆ, ಅದನ್ನು ಮುನ್ನಡೆಸುವ ನಾಯಕನ ಕೊರತೆ ಇತ್ತು. ಆ ಹೋರಾಟಕ್ಕೆ ಬಲ ತುಂಬಿದ್ದ ಚೆಗುವೆರಾ.
ಸತತ ಹೋರಾಟದ ಫಲವಾಗಿ ಅಂತಿಮವಾಗಿ 1959 ಜನವರಿ 1 ರಂದು ಕ್ಯೂಬಾ ವಿಮೋಚನೆಗೊಂಡು ಸಮಾಜವಾದಕ್ಕೆ ತನ್ನನ್ನು ಅರ್ಪಿಸಿಕೊಂಡಿತು. ಮುಂದೆ ಚೆಗುವೆರಾನ ಕ್ರಾಂತಿಕಾರಿ ಮನಸ್ಸು ತೀವ್ರ ಶೋಷಣೆಗೊಳಗಾಗಿದ್ದ ಆಫ್ರಿಕಾದ ಕಾಂಗೋ ಹಾಗೂ ಲ್ಯಾಟಿನ್ ಅಮೆರಿಕಾದ ಬೊಲಿವಿಯಾದತ್ತ ಹೊರಳಿತ್ತು. ಸಿಐಎ ಕೈಗೊಂಬೆಯಾಗಿದ್ದ ಬೊಲಿವಿಯಾ ಸರ್ವಾಧಿಕಾರಿ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸ್ಕೊಂಡ. ಆ ಸಂದರ್ಭ ನಿಜಕ್ಕೂ ಅತ್ಯಂತ ಕಠೋರವಾಗಿತ್ತು. ಚೆಗುವೆರಾ ಬುದ್ದಿಬಲವನ್ನು ಬಳಿಸಿ ತನ್ನ ಜೀವವನ್ನೇ ಪಣಕ್ಕಿಟ್ಟು ಬೊಲೀವಿಯನ್ನರಿಗೆ ನೆಮ್ಮದಿಯ ಬದುಕನ್ನ ಕಟ್ಟಿಕೊಟ್ಟಿದ್ದ.
ಇದನ್ನೂ ಓದಿ : ಚೆಗೆವಾರನಿಗೂ ಭಾರತಕ್ಕೂ ಪ್ರೀತಿಯ ಸಂಬಂಧ
1958 ಡಿಸೆಂಬರ್ 31ರಂದು ಬಟಿಸ್ಟಾ ದುರಾಡಳಿತವನ್ನು ಪತನ ಮಾಡಲಾಯಿತು. 1959ರ ಜನವರಿಯಲ್ಲಿ ರಾಜಧಾನಿ ಹವಾನ ನಗರವನ್ನು ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ತೆಗೆದುಕೊಂಡ ಮೊಟ್ಟ ಮೊದಲ ಬಂಡಾಯಗಾರ ಪಿಡಲ್ ಕ್ಯಾಸ್ಟ್ರೋ ಜೊತೆ ಚೆಗೆವಾರ ಕೂಡ ಇದ್ದರು. ಚೆ ಮತ್ತು ಕ್ಯಾಸ್ಟ್ರೋ ಕ್ಯೂಬಾದ ಹೊಸ ನಾಯಕರಾದರು. ಸರ್ಕಾರದ ನೇತೃತ್ವವನ್ನು ಕ್ಯಾಸ್ಟ್ರೋ ವಹಿಸಿಕೊಂಡರು. ಮುಂದೆ ಪಿಡಲ್ ಕ್ಯಾಸ್ಟ್ರೊ ಸರ್ಕಾರದಲ್ಲಿ ಚೆ. ಕೃಷಿ ಮಂತ್ರಿಯಾಗಿ ಅನೇಕಾ ಸುಧಾರಣೆಗಳನ್ನು ತಂದರು. ಭೂಸುಧಾರಣೆಯೊಂದಿಗೆ ಚೆ ಹೊತ್ತುಕೊಟ್ಟ ಮತ್ತೊಂದು ಪ್ರಧಾನ ಕ್ಷೇತ್ರವೆಂದರೆ ‘ಶಿಕ್ಷಣಕ್ಷೇತ್ರ’ ಅವರು ರಾಷ್ಟ್ರೀಯ ಸಾಕ್ಷರತೆಗಾಗಿ ಹೆಚ್ಚು ಹೊತ್ತುಕೊಟ್ಟರು. ಅವರ ಒತ್ತಾಸೆಯಂತೆ ಕ್ಯೂಬಾ ಸಕಾರವೂ 1961ನೇ ವರ್ಷವನ್ನು ಶಿಕ್ಷಣ ವರ್ಷವೆಂದು ಘೋಷಿಸಿತು. ಇದರ ಸಲುವಾಗಿ ಹಳ್ಳಿಗಾಡುಗಳಲ್ಲಿ ಬಹುತೇಕ ಅಕ್ಷರಸ್ಥರಿಗೆ ಓದುಬರಹ ಕಲಿಸಲು ಸಾಕ್ಷರತ ಆಂದೋಲವನ್ನು ಕೈಗೊಳ್ಳಲಾಯಿತು.
ಕ್ಯೂಬಾ ದೇಶದ ಕ್ರಾಂತಿಯ ರೈಲನ್ನು ಹಳಿಯ ಮೇಲೆ ಹತ್ತಿಸಿದ್ದಾಯಿತು. ಅದು ಹಾಗೆ ಮುಂದೆ ಸಾಗುವುದನ್ನು ನೋಡಲು ಸಮರ್ಥ ಸಂಗಾತಿಗಳಿದ್ದಾರೆ. ಆದರೆ ಅಲ್ಲಿ, ಇನ್ನೂ ಎಷ್ಟೊಂದು ದೇಶಗಳಲ್ಲಿ ಜನರ ಪಾಲಿನ ಭೀಕರ ನರಕಗಳು. ಅವು ಹಾಗೇ ಉಳಿದು ಬಿಟ್ಟಿವೆಯಲ್ಲಾ !! ಎಂದುಕೊಂಡು 1965ರ ಒಂದು ದಿನ ಕ್ಯೂಬಾ ದೇಶದ ಕೈಗಾರಿಕಾ ಸಚಿವ, ಅಧಿಕಾರ ರೂಢ ಕಮ್ಯುನಿಸ್ಟ್ ಪಕ್ಷದ ಒಬ್ಬ ಅಗ್ರಗಣ್ಯ ನಾಯಕ ಚೆ ಕ್ಯೂಬಾದ ಅಧ್ಯಕ್ಷನಾದ ಫಿಡೆಲ್ ಕ್ಯಾಸ್ಟ್ರೋಗೆ ಒಂದು ಪತ್ರವನ್ನು ಬರೆದಿಟ್ಟು ಹೇಳದೇ ಕೇಳದೇ ಹೊರಟು ಬಿಡುತ್ತಾನೆ. ಕೇವಲ 37 ವರ್ಷದ ಯುವಕ ಮುದ್ದಿನ ಮಕ್ಕಳು, ಪ್ರೀತಿಯ ಹೆಂಡತಿಯನ್ನು ಬಿಟ್ಟು ಗುಡ್ಡಬೆಟ್ಟಗಳ ಕಗ್ಗಾಡಿನ ಹಾದಿಯಲ್ಲಿ ತಂಡ ಕಟ್ಟಿಕೊಂಡು ನುಗ್ಗಿ ಬಿಡುತ್ತಾನೆ. ತನ್ನ ಕ್ರಾಂತಿಯ ತುಡಿತವನ್ನು ಮುಂದುವರೆಸಲು ತೊಡಗುತ್ತಾನೆ. ಆತ ಹೋಗಿದ್ದು ದಕ್ಷಿಣ ಅಮೆರಿಕದ ಬೊಲಿವಿಯಾ ದೇಶಕ್ಕೆ. ಬೊಲಿವಿಯಾದ ಕಾಡಿನಲ್ಲಿ ಅಕ್ಟೋಬರ್ 7, 1967 ರಂದು ಸೆರೆ ಸಿಕ್ಕ `ಚೇ’ ಯನ್ನು ಅಕ್ಟೋಬರ್ 8, 1968 ರಂದು ಅಮೆರಿಕದ ಸಿಐಎ ಬೆಂಬಲಿತ ಬೊಲಿವಿಯನ್ ಸರ್ವಾಧಿಕಾರಿಯ ಸೈನಿಕರು ನಿರ್ದಯವಾಗಿ ಕೊಂದು ಹಾಕಿದರು.
ಚೆಗುವಾರ ಹುಟ್ಟಿದ್ದು ಅರ್ಜೆಂಟೈನಾದಲ್ಲಿ. ಮೋಟಾರ್ ಬೈಕಲ್ಲಿ ಸುತ್ತಿದ್ದು ಇಡೀ ದಕ್ಷಿಣ ಅಮೆರಿಕಾ ದೇಶಗಳಲ್ಲಿ. ಯಶಸ್ವಿ ಕ್ರಾಂತಿಗೆ ಹೆಗಲು ಕೊಟ್ಟದ್ದು ಕ್ಯೂಬಾದಲ್ಲಿ. ಪ್ರಾಣ ತೆತ್ತದ್ದು ನೀಚ ಸಿಐಎ ನಿರ್ದೇಶಿತ ಬೊಲಿವಿಯ ದೇಶದ ಸರ್ವಾಧಿಕಾರಿಯ ಸೈನಿಕರ ಜೊತೆ ಸೆಣಸಿದ ರಣರಂಗದಲ್ಲಿ.
ಚೆಗುವೆರಾ ಸತ್ತಾಗ ಆತನಿಗೆ 40 ವರ್ಷ, ಆತ ಸತ್ತು ಇವತ್ತಿಗೆ ಸುಮಾರು 54 ವರ್ಷಗಳೆ ಉರುಳಿದರು, ಚೆಗುವೆರಾನ ಚಿಂತನೆಗಳು , ಆತನ ಆದರ್ಷಗಳು ಇಂದಿಗೂ ಪ್ರಸ್ತುತ . ಜಗತ್ತಿನೆಲ್ಲೆಡೆ ಸಾಮ್ರಾಜ್ಯಶಾಹಿಗಳಿಂದ, ಸರ್ವಾದಿಕಾರಿಗಳಿಂದ ನಡೆಯುತ್ತಿರುವ ದಬ್ಬಾಳಿಕೆ, ಶೊಷಣೆಯ ವಿರುದ್ದ ಹೋರಾಟಕ್ಕೆ ಚೆಗುವೆರಾನೆ ಸ್ಪೂರ್ತಿ. ಆತ ಮತ್ತೊಮ್ಮೆ ಹುಟ್ಟಿ ಬರಬಾರದೆ ಅನಿಸುತ್ತದೆ . ಹ್ಯಾಪಿ ಬರ್ತಡೆ ಚೆಗುವೆರಾ. ಹೌದು ಚೆ ಎಂದರೆ ಸ್ಪೂರ್ತಿ ಅದು ಯುವ ಶಕ್ತಿಗೆ ಪ್ರೇರಣೆ.