ಚಂಡೀಗಢ | ಬಹುಮತವಿದ್ದರೂ ಕೈ ತಪ್ಪಿದ ಮೇಯರ್‌ ಸ್ಥಾನ – ಕೋರ್ಟ್ ಕದ ತಟ್ಟಿದ ಕಾಂಗ್ರೆಸ್ & ಎಎಪಿ

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಟ್ಯಾಂಪರಿಂಗ್ ನಡೆದಿದೆ ಎಂದು ಆರೋಪಿಸಿ ಎಎಪಿ ಕೌನ್ಸಿಲರ್ ಕುಲದೀಪ್ ಕುಮಾರ್ ಸಲ್ಲಿಸಿದ ಅರ್ಜಿಯನ್ನು ತುರ್ತು ಪಟ್ಟಿ ಮಾಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅನುಮತಿ ನೀಡಿದೆ. ಮಂಗಳವಾರ ನಡೆದ ಮತದಾನದಲ್ಲಿ ಬಹುಮತವಿಲ್ಲದಿದ್ದರೂ ಬಿಜೆಪಿ ಕೌನ್ಸಿಲರ್ ಮನೋಜ್ ಸೋಂಕರ್ ಗೆಲುವು ಸಾಧಿಸಿದ್ದರು.

ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಚುನಾವಣೆ ನಡೆಸಲಾಗಿದೆ ಎಂದು ಕುಲದೀಪ್ ಕುಮಾರ್ ಆರೋಪಿಸಿದ್ದು, ಮತ್ತೊಮ್ಮೆ ಚುನಾವಣೆ ನಡೆಸುವಂತೆ ವಿನಂತಿಸಿದ್ದಾರೆ. ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರ ಪೀಠದ ಮುಂದೆ ಈ ಪ್ರಕರಣವನ್ನು ಮಂಗಳವಾರ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸೌಹಾರ್ದತೆಗಾಗಿ ಮಾನವ ಸರಪಳಿ ರಚಿಸಿದ ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು

ಚುನಾವಣಾ ಅಧಿಕಾರಿ “ಅತ್ಯಂತ ದುರ್ಬಲ ರೀತಿಯಲ್ಲಿ” ಚುನಾವಣೆಗೆ ಸ್ಪರ್ಧಿಸುವ ಪಕ್ಷಗಳಿಂದ ನಾಮನಿರ್ದೇಶನಗೊಂಡ ಸದಸ್ಯರಿಂದ ಯಾವುದೇ ಸಹಾಯವನ್ನು ಬಯಸುವುದಿಲ್ಲ ಮತ್ತು ತಾನೆ ಮತ ಎಣಿಕೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ ಎಂದು ಕುಲದೀಪ್ ಕುಮಾರ್ ಅವರು ಹೇಳಿದ್ದಾರೆ. ರಾಜಕೀಯ ಪಕ್ಷಗಳ ಆಕ್ಷೇಪಣೆಗಳ ಹೊರತಾಗಿಯೂ, ನಿಗದಿತ ಪ್ರಾಧಿಕಾರ, ಅಂದರೆ ಡೆಪ್ಯೂಟಿ ಕಮಿಷನರ್ ಮತ್ತು ಸದನದ ಕಾರ್ಯದರ್ಶಿ ಮಧ್ಯಪ್ರವೇಶಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಡೆಪ್ಯೂಟಿ ಕಮಿಷನರ್ ಮತ್ತು ಸದನದ ಕಾರ್ಯದರ್ಶಿ ಸೇರಿ ಇಬ್ಬರೂ ಬಿಜೆಪಿ ಆಡಳಿತದಲ್ಲಿರುವ ಹರಿಯಾಣ ಕೇಡರ್‌ನ ಅಧಿಕಾರಿಗಳಾಗಿದ್ದಾರೆ ಎಂದು ಕುಲದೀಪ್ ಕುಮಾರ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಚುನಾವಣಾ ಅಧಿಕಾರಿ ಮುಂದೆ ಮೂರು ಬುಟ್ಟಿಗಳಿದ್ದವು, ಒಂದು ಎಎಪಿ ಅಭ್ಯರ್ಥಿಗೆ, ಇನ್ನೊಂದು ಬಿಜೆಪಿ ಅಭ್ಯರ್ಥಿಗೆ ಮತ್ತು ಮೂರನೇಯದು ಅಸಿಂಧು ಮತಗಳಿಗೆ, ಆದರೆ ಅವರು ಒಂದು ಬುಟ್ಟಿಯಿಂದ ಚಲಾವಣೆಯಾದ ಮತಗಳನ್ನು ಕಲಬೆರಕೆ ಮಾಡಿರುವುದು ವೀಡಿಯೊಗ್ರಫಿಯಿಂದ ಸ್ಪಷ್ಟವಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಯುಪಿ | ವರನಿಲ್ಲದೆ, ತಮಗೆ ತಾವೇ ಹಾರ ಹಾಕಿ ವಿವಾಹವಾದ ವಧುಗಳು!; ಸರ್ಕಾರದ ಅನುದಾನಕ್ಕಾಗಿ ಹೀಗೊಂದು ವಂಚನೆ

ಗೊಂದಲವನ್ನು ಸೃಷ್ಟಿಸುವ ಏಕ ಮಾತ್ರ ಉದ್ದೇಶದಿಂದ ಅವರು ಮತ್ತೊಂದು ಬುಟ್ಟಿಗೆ ನಕಲಿ ಮತ್ತು ತಿರುಚುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಂಚನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಕುಲದೀಪ್ ಅವರು ಆರೋಪಿಸಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಕೇಂದ್ರದ ಆಡಳಿತಾರೂಢ ರಾಜಕೀಯ ಪಕ್ಷಕ್ಕೆ ಸೇರಿದ ಅಭ್ಯರ್ಥಿಗಳ ನಡುವೆ “ಸ್ಪಷ್ಟವಾದ ಪರಸ್ಪರ ಪಿತೂರಿ” ಇದರಲ್ಲಿ ನಡೆದಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಸೋಂಕರ್ ಗೆಲುವು ಸಾಧಿಸಿದ್ದರು. ಇದು ಪ್ರತಿಪಕ್ಷಗಳ ಮೈತ್ರಿ ಕೂಟವಾದ ‘ಇಂಡಿಯಾ’ ಮತ್ತು ಬಿಜೆಪಿ ನಡುವಿನ ಮೊದಲ ಚುನಾವಣಾ ಸಮರವಾಗಿತ್ತು. ಮೈತ್ರಿಕೂಟದ ಅಭ್ಯರ್ಥಿಯ 8 ಮತಗಳು ಅಸಿಂಧುವಾದ ಕಾರಣ ಎಎಪಿ-ಕಾಂಗ್ರೆಸ್ ಜಂಟಿ ಅಭ್ಯರ್ಥಿ ಕುಲದೀಪ್ ಸಿಂಗ್ ಅವರು ಚುನಾವಣೆ ಸೋತಿದ್ದರು.

ಪದನಿಮಿತ್ತ ಸದಸ್ಯರಾದ ಸಂಸದೆ ಕಿರಣ್ ಖೇರ್ ಅವರ ಮತ ಸೇರಿದಂತೆ ಒಟ್ಟು ಚಲಾವಣೆಯಾದ 36 ಮತಗಳಲ್ಲಿ ಮನೋಜ್ ಸೋಂಕರ್ 16 ಮತಗಳನ್ನು ಗಳಿಸಿದರೆ, 8 ಮತಗಳು ಅಸಿಂಧು ಎಂದು ಘೋಷಿಸಲ್ಪಟ್ಟವು. ಹೀಗಾಗಿ ಇಂಡಿಯಾ ಅಭ್ಯರ್ಥಿ ಕುಲದೀಪ್ ಸಿಂಗ್ 12 ಮತಗಳನ್ನು ಪಡೆದು ಸೋತಿದ್ದರು. 8 ಮತಗಳನ್ನು ಅಸಿಂಧು ಎಂದು ಘೋಷಿಸುವ ನಿರ್ಧಾರವನ್ನು ವಿರೋಧಿಸಿ  ಎಎಪಿ-ಕಾಂಗ್ರೆಸ್ ಪ್ರತಿಭಟಿಸುತ್ತಿದ್ದಂತೆ ಸದನದಲ್ಲಿ ಗೊಂದಲ ಉಂಟಾಗಿತ್ತು.

ಇದನ್ನೂ ಓದಿ: ಇ.ಡಿ. ಮತ್ತು ಧನಬಲದ ಭ್ರಷ್ಟ ಕಾಕ್‍ ಟೇಲನ್ನು ಮುಖಾಮುಖಿಯಾಗಿ ಎದುರಿಸಬೇಕಾಗಿದೆ-ಯೆಚುರಿ

ಚಂಡೀಗಢದ ಮೇಯರ್ ಚುನಾವಣೆಯ ಇಂಡಿಯಾ ಮೈತ್ರಿ ಕೂಟಕ್ಕೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿತ್ತು. ಕಳೆದ ಎಂಟು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಮುನ್ಸಿಪಲ್ ಕಾರ್ಪೋರೇಷನ್‌ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡಿತ್ತು. ಎಎಪಿ ಮೇಯರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿಗಳು ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಪಾತ್ರಗಳಿಗೆ ಸ್ಪರ್ಧಿಸಿದ್ದಾರೆ.

35 ಸ್ಥಾನಗಳಿಗೆ ನಡೆದ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ನ ಚುನಾವಣೆಯಲ್ಲಿ ಬಿಜೆಪಿ 14 ಮತ್ತು ಎಎಪಿ 13 ಕೌನ್ಸಿಲರ್‌ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಏಳು ಸ್ಥಾನಗಳನ್ನು ಪಡೆದರೆ, ಸಿರೋಮಣಿ ಅಕಾಲಿದಲ್ 1 ಸ್ಥಾನ ಪಡೆದಿತ್ತು.

ವೀಡಿಯೊ ನೋಡಿ: ಸೌಹಾರ್ದತೆಗಾಗಿ ಮಾನವ ಸರಪಳಿ : ರಾಜ್ಯವ್ಯಾಪಿ ಕೈ ಕೈ ಬೆಸೆದ ಶಾಂತಿಪ್ರಿಯ ಮನಸ್ಸುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *