ಮಿಜೋರಾಂ, ಛತ್ತೀಸ್‌ಘಡ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಸೇರಿ ಪಂಚರಾಜ್ಯಗಳ ಚುನಾವಣೆ ಈಗಾಗಲೆ ನಿಗದಿಯಾಗಿದೆ. ಇಡೀ ದೇಶವೆ ಈ ಚುನಾವಣೆಯನ್ನು ಎದುರುನೋಡುತ್ತಿದೆ. ಯಾಕೆಂದರೆ ಮುಂದಿನ ವರ್ಷ ನಡೆಯಲಿರುವ 2024ರ ಲೋಕಸಭೆ ಚುನಾವಣೆಗೆ ಈ ಚುನಾವಣೆಗಳು ದಿಕ್ಸೂಚಿ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಛತ್ತೀಸ್‌ಘಡದಲ್ಲಿ ಮಾತ್ರ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ನಕ್ಸಲ್ ಪೀಡಿತ ಜಿಲ್ಲೆಗಳಿರುವ ಛತ್ತೀಸ್‌ಘಡದಲ್ಲಿ ವಿಧಾನಸಭೆ ಚುನಾವಣೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಏಕಸದಸ್ಯ ರಾಜ್ಯ ಶಾಸಕಾಂಗವಿರುವ ದೇಶದ ಹಲವು ರಾಜ್ಯಗಳಲ್ಲಿ ಛತ್ತೀಸ್‌ಘಡ ಕೂಡಾ ಒಂದಾಗಿದ್ದು, ಇಲ್ಲಿ ವಿಧಾನಸಭೆ ಮಾತ್ರವೆ ಕಾರ್ಯನಿರ್ವಹಿಸುತ್ತದೆ. ರಾಜ್ಯದಲ್ಲಿ ವಿಧಾನ ಪರಿಷತ್ ಶಾಸಕಾಂಗ ಇಲ್ಲ. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ಇದನ್ನೂ ಓದಿ: ಮಿಜೋರಾಂ ವಿಧಾನಸಭೆ ಚುನಾವಣೆ-2023 | ರಾಜ್ಯದ ರಾಜಕೀಯ ಸ್ಥಿತಿಗತಿ ಹೀಗಿದೆ!
ವಿಧಾನಸಭೆಯು 91 ಸ್ಥಾನಗಳನ್ನು ಹೊಂದಿದ್ದು ಅದರಲ್ಲಿ 90 ಕ್ಷೇತ್ರಗಳ ಶಾಸಕರು ನೇರ ಮತದಾನದ ಮೂಲಕ ಚುನಾಯಿತರಾಗುತ್ತಾರೆ ಮತ್ತು ಒಬ್ಬರು ನಾಮನಿರ್ದೇಶನದ ಮೂಲಕ ಆಯ್ಕೆಯಾಗುತ್ತಾರೆ. ರಾಜ್ಯದಲ್ಲಿ 33 ಜಿಲ್ಲೆಗಳಿದ್ದು, ಒಟ್ಟು 11 ಲೋಕಸಭಾ ಕ್ಷೇತ್ರಗಳಿವೆ. ರಾಜ್ಯಸಭೆಯು ರಾಜ್ಯದಿಂದ ಐದು ಸದಸ್ಯರನ್ನು ಹೊಂದಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜೊತೆಗೆ ಛತ್ತೀಸ್‌ಘಡ ಗಡಿಯನ್ನು ಹೊಂದಿದೆ.
ಛತ್ತೀಸ್‌ಘಡ ಒಂದು ಪಕ್ಷಿ ನೋಟ
2000ನೇ ಇಸವಿಯ ವರೆಗೆ ಮಧ್ಯಪ್ರದೇಶದ ಭಾಗವಾಗಿದ್ದ ಛತ್ತೀಸ್‌ಘಡವನ್ನು, “ಮಧ್ಯಪ್ರದೇಶ ಮರುಸಂಘಟನೆ ಕಾಯಿದೆ-2000” ರ ಮೂಲಕ 2000ದ ಆಗಸ್ಟ್ 25ರಂದು ರಾಯ್‌ಪುರವನ್ನು ರಾಜಧಾನಿಯನ್ನಾಗಿ ಮಾಡಿ ಹೊಸ ರಾಜ್ಯವನ್ನು ರಚಿಸಲಾಯಿತು. ಪ್ರಸ್ತುತ ನವಿ ರಾಯ್‌ಪುರ ಎಂಬ ರಾಜಧಾನಿಯನ್ನು ನಿರ್ಮಾಣ ಮಾಡುತ್ತಿದ್ದು ಅದರ ಉದ್ಘಾಟನೆ 2025ರಂದು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಛತ್ತೀಸ್‌ಗಢವು ಭಾರತದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ನೈಸರ್ಗಿಕ ಸಂಪನ್ಮೂಲಗಳು ಸಮೃದ್ಧವಾಗಿರುವ ರಾಜ್ಯಳಲ್ಲಿ ಇದು ಒಂದಾಗಿದ್ದು, ದೇಶದಲ್ಲಿ ಮೂರನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ. 100 ವರ್ಷಗಳಿಗೂ ಹೆಚ್ಚು ಕಾಲ ಕಲ್ಲಿದ್ದಲು ಲಭ್ಯವಾಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯವು ದೇಶದ ಉಳಿದ ಭಾಗಗಳಿಗೆ ವಿದ್ಯುತ್, ಕಲ್ಲಿದ್ದಲು ಮತ್ತು ಉಕ್ಕನ್ನು ಒದಗಿಸುತ್ತದೆ. ಇದು ಮಧ್ಯಪ್ರದೇಶ ಮತ್ತು ಅರುಣಾಚಲ ಪ್ರದೇಶದ ನಂತರ ದೇಶದ ಮೂರನೇ ಅತಿ ದೊಡ್ಡ ಅರಣ್ಯ ಪ್ರದೇಶವನ್ನು ಛತ್ತೀಸ್‌ಘಡ ಹೊಂದಿದೆ. ಅಂದರೆ ರಾಜ್ಯದ 40% ಕ್ಕಿಂತ ಹೆಚ್ಚು ಭಾಗ ಅರಣ್ಯಗಳಿಂದ ಆವೃತವಾಗಿದೆ.
ಅದಾಗ್ಯೂ, ದೇಶದ ಅತೀ ಹೆಚ್ಚು ಉಷ್ಣತೆ ಇರುವ ರಾಜ್ಯಗಳಲ್ಲಿ ಇದೂ ಒಂದಾಗಿದೆ. ಬೇಸಿಗೆಯಲ್ಲಿ ಇಲ್ಲಿ 49°C ವರಗೆ ಇಲ್ಲಿ ಉಷ್ಣತೆಯಿರುತ್ತದೆ. ರಾಜ್ಯದ ಜನಸಂಖ್ಯೆಯ ಸುಮಾರು 80% ಜನರು ಕೃಷಿ ಮತ್ತು ಕೃಷಿ ಆಧಾರಿತ ಸಣ್ಣ ಕೈಗಾರಿಕೆಯನ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ಬರ ಪರಿಹಾರ ಪ್ರಸ್ತಾವನೆಗೆ ಸ್ಪಂದಿಸುತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ವಿಸ್ತಾರದಲ್ಲಿ ದೇಶದ ಒಂಬತ್ತನೇ ಅತೀ ದೊಡ್ಡ ರಾಜ್ಯವಾಗಿದ್ದು ಅಂದಾಜು 3.15 ಕೋಟಿ ಜನರು ರಾಜ್ಯದಲ್ಲಿದ್ದಾರೆ. ಜನಸಂಖ್ಯೆ ಆಧಾರದಲ್ಲಿ ದೇಶದಲ್ಲಿ ಹದಿನೇಳನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಈಶಾನ್ಯದ ಗುಡ್ಡಗಾಡು ರಾಜ್ಯಗಳನ್ನು ಹೊರತುಪಡಿಸಿ, ಛತ್ತೀಸ್‌ಘಡವು ಪರಿಶಿಷ್ಟ ಪಂಗಡ (ST) ಜನಸಂಖ್ಯೆಯ ಅತಿ ಹೆಚ್ಚು ಜನರನ್ನು ಹೊಂದಿದೆ. ಭಾರತದ ಸುಮಾರು 10% ST ಪರಿಶಿಷ್ಟ ಪಂಗಡದ ಜನರು ಛತ್ತಿಸ್‌ಘಡದಲ್ಲಿ ವಾಸಿಸುತ್ತಿದ್ದಾರೆ.
ರಾಜ್ಯದ ಜನಸಂಖ್ಯೆಯಲ್ಲಿ 30.62% ಜನರು ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಾರೆ. ಆದಿವಾಸಿಗಳು ರಾಜ್ಯದ ಪ್ರಮುಖ ಸಮುದಾಯವಾಗಿದ್ದು, ಮುಖ್ಯವಾಗಿ ರಾಜ್ಯದ ಬಸ್ತಾರ್ ಮತ್ತು ದಕ್ಷಿಣ ಛತ್ತೀಸ್‌ಗಢದ ಇತರ ಜಿಲ್ಲೆಗಳ ದಟ್ಟವಾದ ಕಾಡುಗಳಲ್ಲಿ ವಾಸಿಸುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದ 12.8% ಜನರು ಇಲ್ಲಿದ್ದಾರೆ. ಉಳಿದಂತೆ ಒಬಿಸಿಗಳು 38% ಇದ್ದು, ಸಾಮಾನ್ಯ ವರ್ಗದ ಜನಸಂಖ್ಯೆ 16% ಇದೆ. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ಹೊಸದಿಲ್ಲಿ: ಛತ್ತೀಸ್‌ಗಢ, ಮಣಿಪುರ, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್, ಬಿಹಾರ ಮತ್ತು ಅಸ್ಸಾಂ ಬಡ ರಾಜ್ಯಗಳಲ್ಲಿ ಶೇ.40 ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಸಿ ರಂಗರಾಜನ್ ಸಮಿತಿ ತಿಳಿಸಿದೆ.
ಭಾರತದ ಪ್ರಧಾನ ಮಂತ್ರಿಗೆ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಸಿ ರಂಗರಾಜನ್ ನೇತೃತ್ವದ ಸಮಿತಿಯ ವರದಿಯ ಪ್ರಕಾರ, 2011-12ರಲ್ಲಿ ಛತ್ತೀಸ್‌ಗಢದಲ್ಲಿ 47.9% ಜನರು ಬಡವರಾಗಿದ್ದರೆ. ಅದರಲ್ಲೂ 40% ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ರಾಜ್ಯದ ಹೆಚ್ಚಿನ ಬುಡಕಟ್ಟು ಸಮುದಾಯವು ವಾಮಾಚಾರವನ್ನು ನಂಬುತ್ತಾರೆ ಹಾಗೂ ಮಾಟಗಾತಿ ಎಂದು ಮಹಿಳೆಯರನ್ನು ಬಲಿ ಪಡೆಯುವುದು ಇಲ್ಲಿನ ಸಮಾಜಿಕ ಪಿಡುಗಾಗಿದೆ.
ಧಾರ್ಮಿಕ ಜನಸಂಖ್ಯೆಯ ಬಗ್ಗೆ ಹೇಳಬಹುದಾದರೆ 93.25% ಜನರು ಹಿಂದೂ ಧರ್ಮವನ್ನು ಪಾಲಿಸುತ್ತಾರೆ. ಇಸ್ಲಾಂ ಇಲ್ಲಿನ ಎರಡನೇ ಅತಿ ದೊಡ್ಡ ಧರ್ಮವಾಗಿದ್ದು 2.02% ಜನರು ಆಚರಿಸುತ್ತಾರೆ. ಹೆಚ್ಚಿನ ಮುಸ್ಲಿಂ ಜನಸಂಖ್ಯೆಯು ನಗರ ಕೇಂದ್ರಿತವಾಗಿದೆ. ಕ್ರಿಶ್ಚಿಯನ್ ಧರ್ಮ 1.92%, ಬೌದ್ಧಧರ್ಮ 0.28%, ಸಿಖ್ ಧರ್ಮ 0.27%, ಜೈನ ಧರ್ಮ 0.24%, ಬುಡಕಟ್ಟು ಧರ್ಮ 1.94% ಹಾಗೂ ಈ ಯಾವುದೂ ಅಲ್ಲದ 0.09% ಜನಸಂಖ್ಯೆ ರಾಜ್ಯದಲ್ಲಿದ್ದಾರೆ.
ಇದನ್ನೂ ಓದಿ: ಯೆಚುರಿಯವರಿಗೆ ‘ಪ್ರಭುತ್ವ-ಪ್ರಾಯೋಜಿತ ದಾಳಿ’ಯ ಆಪಲ್ ಅಲರ್ಟ್ ಇದು ಪ್ರಜಾಪ್ರಭುತ್ವವೋ, ಗೂಢಚಾರಿ ಪ್ರಭುತ್ವವೋ- ಪ್ರಧಾನಿ ಪತ್ರ
ರಾಜ್ಯದ ಅಧೀಕೃತ ಭಾಷೆ ಛತ್ತೀಸ್‌ಗಢಿ ಮತ್ತು ಹಿಂದಿಯಾಗಿದ್ದ ಕ್ರಮವಾಗಿ 61.90%ಮ ಮತ್ತು 10.61% ಜನರು ಮಾತನಾಡುತ್ತಾರೆ. ಸುರ್ಗುಜಿಯಾ 6.80%, ಗೊಂಡಿ 3.95%, ಹಲ್ಬಿ 2.76%, ಒಡಿಯಾ 2.68%, ಸದ್ರಿ 2.53%, ಕುರುಖ್ 2.02%, ಬಂಗಾಳಿ 0.95% ಹಾಗೂ ಇತರೆ ಭಾಷೆಯನ್ನು ಮಾತನಾಡುವ 5.80% ಜನರು ಇಲ್ಲಿದ್ದಾರೆ.
ಛತ್ತೀಸ್‌ಘಡ ರಾಜಕೀಯ
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಬಹುಜನ ಸಮಾಜ ಪಕ್ಷ(ಬಿಎಸ್‌ಪಿ), ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೆಸಿಸಿ) ಪ್ರಮುಖ ಪಕ್ಷವಾಗಿದೆ. ರಾಜ್ಯದ 91 ವಿಧಾನಸಭೆ ಸ್ಥಾನಗಳಲ್ಲಿ, ಪ್ರಸ್ತುತ ಕಾಂಗ್ರೆಸ್ 71 ಸ್ಥಾನಗೊಂದಿಗೆ ಅಧಿಕಾರದಲ್ಲಿದೆ. ಬಿಜೆಪಿ 15 ಸ್ಥಾನಗಳನ್ನು ಹೊಂದಿದ್ದು, ಬಿಎಸ್‌ಪಿ 2 ಸ್ಥಾನ ಮತ್ತು ಜೆಸಿಸಿ 1 ಸ್ಥಾನದಲ್ಲಿದೆ. ಒಂದು ಕ್ಷೇತ್ರ ತೆರವುಗೊಂಡಿದೆ.
ರಾಜ್ಯದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕ್ರಮವಾಗಿ 10 ಮತ್ತು 34 ಸ್ಥಾನಗಳನ್ನು ವಿಧಾನಸಭಾ ಕ್ಷೇತ್ರದಲ್ಲಿ ಮೀಸಲಿಡಲಾಗಿದೆ.
1998ರ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ, ಛತ್ತೀಸ್‌ಘಡದ ಶಾಸಕರನ್ನೆ ಸೇರಿಸಿ 2000ರಲ್ಲಿ ರಾಜ್ಯದ ಮೊದಲ ವಿಧಾನಸಭೆಯನ್ನು ರಚಿಸಲಾಗಿತ್ತು. ಈ ವೇಳೆ ಕಾಂಗ್ರೆಸ್ ಅಧಿಕಾರ ಹಿಡಿದು, ಅಜಿತ್ ಜೋಗಿ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅದರ ನಂತರ 2003, 2008 ಹಾಗೂ 2013ರಲ್ಲಿ ಸತತವಾಗಿ ಬಿಜೆಪಿ ಸುಮಾರು 49-50 ಸ್ಥಾನಗಳನ್ನು ಪಡೆಯುತ್ತಾ ಅಧಿಕಾರ ಹಿಡಿಯಿತು. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ಇದನ್ನೂ ಓದಿ: 68ನೇ ಕರ್ನಾಟಕ ರಾಜ್ಯೋತ್ಸವ| ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ಅದಾಗ್ಯೂ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಿನಾಯ ಸೋಲು ಕಂಡಿತು. ಅಂದಿನ ಚುನಾವಣೆಯಲ್ಲಿ ಸುಮಾರು 35 ಸ್ಥಾನಗಳನ್ನು ಕಳೆದುಕೊಂಡದ ಬಿಜೆಪಿ 15 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಕಾಂಗ್ರೆಸ್ ಬರೋಬ್ಬರಿ 68 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ವಿಜಯ ಸಾಧಿಸಿತು. ಬಿಜೆಪಿ ಆಡಳಿತದ ವೇಳೆ ಸಸತ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ರಮಣ ಸಿಂಗ್ ಅವರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದರು ಹಾಗೂ 15 ವರ್ಷಗಳ ನಂತರ ವಿರೋಧ ಪಕ್ಷ ಕಾಂಗ್ರೆಸ್ ಸರ್ಕಾರವನ್ನು ರಚಿಸಿತು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಅಲ್ಲದೆ, ಬಹುಜನ ಸಮಾಜ ಪಕ್ಷ 1 ಸ್ಥಾನವನ್ನು ಗೆದ್ದುಕೊಂಡರೆ, ರಾಜ್ಯದ ಮೊದಲ ಮುಖ್ಯಮಂತ್ರಿ, ಕಾಂಗ್ರೆಸ್ ಮಾಜಿ ನಾಯಕ ಅಜಿತ್ ಜೋಗಿ ಅವರ ಜನತಾ ಕಾಂಗ್ರಸ್ ಛತ್ತೀಸ್‌ಘಡ 5 ಸ್ಥಾನವನ್ನು ಪಡೆದುಕೊಂಡಿತ್ತು. 2018ರ ಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಜೆಸಿಸಿ ಮೈತ್ರಿಮಾಡಿಕೊಂಡು ಜೋಗಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಈ ಮೈತ್ರಿಗೆ ಸಿಪಿಐ ಕೂಡಾ ಬೆಂಬಲ ನೀಡಿತ್ತು.
ಛತ್ತೀಸ್‌ಗಢ ಮತ್ತು ನಕ್ಸಲ್ ಚಳವಳಿ ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ನಕ್ಸಲ್ ಚಳವಳಿ 1960 ರ ದಶಕದ ಉತ್ತರಾರ್ಧದಲ್ಲಿ ಛತ್ತೀಸ್‌ಗಢದಲ್ಲಿ ಪ್ರಾರಂಭವಾಯಿತು. ರಾಜ್ಯದ ದಕ್ಷಿಣ ಭಾಗದಲ್ಲಿ ಬೀಳುವ ಬಸ್ತಾರ್‌ನ ಕಣಿವೆಯಲ್ಲಿ ಭೋಪಾಲ್‌ಪಟ್ಟಣಂ ಮೂಲಕ ಅದು ರಾಜ್ಯವನ್ನು ಪ್ರವೇಶಿಸಿತು. ರಾಜ್ಯದ 40% ಕ್ಕೂ ಹೆಚ್ಚಿನ ಭಾಗವು ಅರಣ್ಯವಾಗಿರುವುದರಿಂದ ನಕ್ಸಲ್ ಚಳವಳಿಗೆ ಇದು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ನಕ್ಸಲ್ ಚಳವಳಿ ಪಶ್ಚಿಮ ಬಂಗಾಳದ ನಕ್ಸಲ್ ಬಾರಿಯಲ್ಲಿ ಪ್ರಾರಂಭವಾದರೂ, ತಮ್ಮ ಗಮನಾರ್ಹ ಅಸ್ತಿತ್ವವನ್ನು ಮುಂದುವರೆಸಿ, ದೊಡ್ಡ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಉಳಿಸಿಕೊಂಡಿರುವ ಭಾರತದ ಏಕೈಕ ರಾಜ್ಯವಾಗಿದೆ ಛತ್ತೀಸ್‌ಘಡ. ರಾಜ್ಯದ ದಕ್ಷಿಣ ಭಾಗದಲ್ಲಿ ನಕ್ಸಲ್ ಚಳವಳಿ ಇನ್ನೂ ನಡೆಯುತ್ತಿವೆ ಎಂದು ನಂಬಲಾಗಿದೆ.
ರಾಜ್ಯದ ನಾಲ್ಕು ಜಿಲ್ಲೆಗಳಾದ ಬಿಜಾಪುರ, ನಾರಾಯಣಪುರ, ಸುಕ್ಮಾ ಮತ್ತು ದಂತೇವಾಡಗಳಲ್ಲಿ ನಕ್ಸಲ್ ಚಟುವಟಿಕೆ ಇನ್ನೂ ನಡೆಯುತ್ತಿವೆ ಎನ್ನಲಾಗಿದೆ. ಹೀಗಾಗಿಯೆ ಸಣ್ಣ ರಾಜ್ಯವಾದರೂ ಎರಡು ಹಂತಗಳಲ್ಲಿ ಚನಾವಣೆಗಳನ್ನು ನಡೆಸಲಾಗುತ್ತದೆ. 2018 ರಿಂದ 2022ರ ವರೆಗೆ ನಕ್ಸಲರಿಂದಾಗಿ ದೇಶದಾದ್ಯಂತ ನಡೆದ ಹಿಂಸಾಚಾರದಲ್ಲಿ 1/3 ಘಟನೆ ಛತ್ತೀಸ್‌ಘಡದಲ್ಲೆ ನಡೆದಿದೆ.
ಇದನ್ನೂ ಓದಿ: ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು| ಸಿಎಂ ಸಿದ್ದರಾಮಯ್ಯ ಘೋಷಣೆ ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
2018 ರ ವಿಧಾನಸಭಾ ಚುನಾವಣೆಯ ವೇಳೆ ಮತದಾನದ ಕೆಲವು ದಿನಗಳ ಮೊದಲು, ಮಾವೋವಾದಿಗಳು ಆರು ದಾಳಿಗಳನ್ನು ನಡೆಸಿದ್ದರು. ಈ ಆರು ದಾಳಿಗಳಲ್ಲಿ ಮೂರು ಪ್ರಮುಖ ದಾಳಿಗಳಿಂದಾಗಿ ಪತ್ರಕರ್ತ ಸೇರಿದಂತೆ ಒಟ್ಟು 13 ಜನರು ಮೃತಪಟ್ಟಿದ್ದರು. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ನಕ್ಸಲ್ ಬೆದರಿಕೆಯ ಕಾರಣಕ್ಕೆ ಭಾರಿ ಭದ್ರತೆಗಳ ಇಲ್ಲಿ ಚುನಾವಣೆ ನಡೆಸಲಾಗುತ್ತದೆ. 2018 ರಲ್ಲಿ 18 ಸ್ಥಾನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ವರದಿಯಾಗಿದೆ. ಈ ಚುನಾವಣೆಯ ವೇಳೆ ನಕ್ಸಲರು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಅವರು ಬುಡಕಟ್ಟು ಹಳ್ಳಿಗಳಿಗೆ ತೆರಳಿ ಮತದಾನದ ವಿರುದ್ಧ ನಿರಂತರ ಎಚ್ಚರಿಕೆ ನೀಡಿದ್ದರು. ರಾಜ್ಯದ ದಾಂತೇವಾಡದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಗ್ರಾಮಸ್ಥರ ಬೆರಳುಗಳನ್ನು ಕತ್ತರಿಸುವುದಾಗಿ ಬೆದರಿಕೆಗಳನ್ನು ಹಾಗಿದ್ದರು ಎಂದು ವರದಿಯಾಗಿವೆ. ಹೀಗಾಗಿಯೆ 2018ರಲ್ಲಿ ದಾಂತೇವಾಡದಲ್ಲಿ 49% ಮತದಾನವಾಗಿತ್ತು. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ಛತ್ತೀಸ್‌ಘಡ ಪಸ್ತುತ ರಾಜಕೀಯ
2023ರ ಚುನಾವಣೆಯಲ್ಲಿ ಪ್ರಮುಖವಾಗಿ ಆಡಳಿತರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಮುಖ್ಯವಾಗಿ ಕಣದಲ್ಲಿದ್ದು, ಎಲ್ಲಾ 90 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿವೆ. ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಭಗೇಲ್ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಅವರ ನಾಯಕತ್ವದಲ್ಲಿ ಪಕ್ಷವು ಚುನಾವಣೆ ಎದುರಿಸುತ್ತಿದೆ. ಪ್ರಸ್ತುತ ವಿಪಕ್ಷ ನಾಯಕನಾಗಿರುವ ನಾರಾಯಣ ಚಾಂದೆಲ್, ರಾಜ್ಯ ಬಿಜೆಪಿ ಅಧ್ಯಕ್ಷ ಅನುಣ್ ಸಾವೊ ಹಾಗೂ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ಈ ನಡುವೆ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಅಜಿತ್ ಜೋಗಿ ಅವರು ಕಟ್ಟಿದ ಜನತಾ ಕಾಂಗ್ರೆಸ್ ಛತ್ತೀಸ್‌ಘಡ್(ಜೆಸಿಸಿ) ಕೂಡಾ ಚುನಾವಣೆಗೆ ತಯಾರಾಗಿದ್ದು, ಅವರ ಮಗ ಅಮಿತ್ ಜೋಗಿ ಅವರ ನೇತೃತ್ವದಲ್ಲಿ 60 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಘೋಷಿಸಿದೆ.
2023ರ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಗೊಂಡ್ವಾನಾ ಗಣತಂತ್ರ ಪಕ್ಷ ಮೈತ್ರಿ 90 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಕ್ರಮವಾಗಿ 53 ಮತ್ತು 37 ಕ್ಷೇತ್ರಗಲ್ಲಿ ಸ್ಪರ್ಧಿಸುತ್ತಿವೆ. ಇಷ್ಟೆ ಅಲ್ಲದೆ, ಆಮ್ ಆದ್ಮಿ ಪಕ್ಷ 57 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ. ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ಮೈತ್ರಿ ಮಾಡಿಕೊಂಡಿದ್ದು ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧಿಸುದ್ದು, ಕ್ರಮವಾಗಿ 16 ಮತ್ತು 3 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಹಾಗೆಯೆ ಸಮಾಜವಾಗಿ ಪಕ್ಷ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಕೊಪ್ಪಳ: ಬಸ್‌ನಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯೊತ್ಸವನ್ನು ಆಚರಿಸಿದ ನಿರ್ವಾಹಕ
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಕಠಿಣ ಸವಾಲೊಡ್ಡಲಿದೆಯಾದರೂ, ಅಧಿಕಾರ ಕಾಂಗ್ರೆಸ್ ಕೈಯ್ಯಲ್ಲೆ ಉಳಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅದಾಗ್ಯೂ 2018ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಅಥವಾ ಸ್ವಲ್ಪ ಅಂತರದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹಲವು ಸಮೀಕ್ಷೆಗಳು ಸೂಚಿಸಿದ್ದವು. ಆದರೆ 2018ರ ಫಲಿತಾಂಶ ತೀರಾ ವಿರುದ್ಧವಾಗಿತ್ತು, ಬಿಜೆಪಿ ಹೀನಾಯ ಸೋಲುಂಡಿತ್ತು ಹಾಗೂ ಕಾಂಗ್ರೆಸ್ ಭಾರಿ ಜನಬೆಂಬಲ ಗಳಿಸಿತ್ತು. ಛತ್ತೀಸ್‌ಘಡ ವಿಧಾನಸಭೆ ಚುನಾವಣೆ
ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ಅಲ್ಲದೆ ಅವರು ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ವರದಿಗಳು ಸೂಚಿಸಿವೆ. ಸತತ ಮೂರು ಬಾರಿ ವಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು 2018ರ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲುಣಿಸಿ ಅಧಿಕಾರಕ್ಕೆ ತಂದಿದ್ದು ಅವರಿಗೆ ಪಕ್ಷದಲ್ಲಿ ಹಿರಿಮೆಯನ್ನು ತಂದುಕೊಟ್ಟಿದೆ. 2018ರ ಚುನಾವಣೆಯಲ್ಲಿ ಭೂಪೇಶ್ ಭಗೇಲ್ ಅವರ ಮುಖವನ್ನು ಕಾಂಗ್ರೆಸ್ ಬಳಿಸಿಕೊಂಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಚುನಾವಣಾ ಪೋಸ್ಟರ್‌ಗಳಲ್ಲಿ ತನ್ನ ಸರ್ಕಾರದ ಯಶೋಗಾಥೆಗಳನ್ನು ಬಳಸುತ್ತಿದೆ.ಕಾಂಗ್ರೆಸ್ ಕೇವಲ ಮುಖ್ಯಮಂತ್ರಿಯ ಮುಖವನ್ನಲ್ಲದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದೆ.
ಇನ್ನೊಂದು ಕಡೆಯಲ್ಲಿ ಬಿಜೆಪಿ ತನ್ನ ಕೋಮು ಅಜೆಂಡಾವನ್ನು ಛತ್ತೀಸ್‌ಘಡದಲ್ಲಿಯು ಮುಂದುವರೆಸಿದೆ. ಲಿಂಚಿಂಗ್, ಹಮಾಸ್-ಇಸ್ರೇಲ್ ಯುದ್ಧ, ಮೊಘಲ್ ಚಕ್ರವರ್ತಿ ಮತ್ತು ಹಿಂದೂ-ಮುಸ್ಲಿಂ ವಿಭಜನೆಯನ್ನು ಬಿಜೆಪಿ ಅಪ್ಪಿಕೊಂಡಿದೆ. ಕರ್ನಾಟಕದಲ್ಲಿ ಮಾಡಿದಂತೆ ಪ್ರಧಾನಿ ಮೋದಿ ಅವರನ್ನು ಛತ್ತೀಸ್‌ಘಡ ಬಿಜೆಪಿ ಪ್ರಚಾರಕ್ಕಾಗಿ ಸರಣಿಯಾಗಿ ಬಳಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಛತ್ತೀಸ್‌ಘಡದ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಅವರ ಅಧಿಕಾರವಧಿ 2024 ಜನವರಿಗೆ 3ರಂದು ಕೊನೆಯಾಗುತ್ತದೆ. ನವೆಂಬರ್ 7 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಎರಡನೇ ಹಂತದ ಚುನಾವಣೆ ನವೆಂಬರ್ 17ರಂದು ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.
ವಿಡಿಯೊ ನೋಡಿ: ಬಾರಿಸು ಕನ್ನಡ ಡಿಂಡಿಮವ – ಕುವೆಂಪು – ಹಾಡಿದವರು : ಶ್ವೇತಾ ಮೂರ್ತಿ