ಕಲಬುರಗಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಗುರುವಾರ (ಏಪ್ರಿಲ್ 3ರಂದು) ಕಲಬುರಗಿ ನಗರದ ಪಶುಪಾಲನಾ ಇಲಾಖೆಯ ಜಿಲ್ಲಾ ಕಚೇರಿಗೆ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಎಲ್ಲಾ ವಿಭಾಗಗಳಲ್ಲಿನ ಎಕ್ಸ್ ರೇ ಕೋಣೆ, ಶಸ್ತ್ರಚಿಕಿತ್ಸೆ ಕೋಣೆ, ಚಿಕಿತ್ಸಾ ಕೋಣೆ, ಪ್ರಯೋಗಾಲಯ ಹಾಗೂ ಇತರೆ ವಿಭಾಗಗಳನ್ನು ಪರಿವೀಕ್ಷಣೆ ಮಾಡಿ ಸೂಪರ್ ಸ್ಪೆಶಾಲಿಟಿ ಪಾಲಿಕ್ಲಿನಿಕ್ನಲ್ಲಿ ಜಾನುವಾರುಗಳಿಗೆ ನೀಡುವ ಚಿಕಿತ್ಸೆ ಹಾಗೂ ಇತರ ಸೌಲಭ್ಯ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದನ್ನು ಓದಿ :-ವಿ.ವಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ – ಲಿಂಗಯ್ಯ ಬಿ. ಹಿರೇಮಠ
ನಂತರ ಅವರು ಕ್ಲಿನಿಕ್‍ಗೆ ಚಿಕಿತ್ಸೆಗಾಗಿ ತಮ್ಮ ಜಾನುವಾರುಗಳೊಂದಿಗೆ ಬಂದ ರೈತರೊಂದಿಗೆ ಮಾತನಾಡಿದರು. ನಂತರ ಅವರು ರೈತರು ತಂದಿರುವ ಜಾನುವಾರುಗಳನ್ನು ಕೂಡಲೇ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸ್ಥಳದಲ್ಲಿದ್ದ ಪಶು ಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನು ಓದಿ :-ಇಬ್ಬರ ನಡುವಿನ ಜಗಳ ಮೂರನೇಯವನ ಕೊಲೆಯಲ್ಲಿ ಅಂತ್ಯ – ರೌಡಿಶೀಟರ್ ಸೇರಿ 6 ಮಂದಿ ಅರೆಸ್ಟ್.
ಈ ಭೇಟಿ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಹಾಗೂ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.