ಭಾರತದ ಸಾಮಾಜಿಕ ಸಮಸ್ಯೆಗಳಲ್ಲಿ ನಿರುದ್ಯೋಗದ ಸಮಸ್ಯೆಯು ಒಂದು. ಈ ಸಮಸ್ಯೆ ಇಂದಿನ ಅಥವಾ ಇತ್ತೀಚನ ಸಮಸ್ಯೆಯಲ್ಲ ಜಾಗತೀಕರಣ,ಖಾಸಗೀಕರಣ ಆದಾಗಲಿಂದಲೂ ಕಾಡುತ್ತಿದೆ. ಇತ್ತೀಚೆಗೆ ಕೋವಿಡ್ ನಂತಹ ಸಾಂಕ್ರಮಿಕ ರೋಗಗಳಿಂದ ಭಾರತದ ಆರ್ಥಿಕತೆಗೆ ಭಾರಿ ನಷ್ಟ ಉಂಟಾಗಿದೆ.
ಭಾರತದ ಒಟ್ಟಾರೆ ನಿರುದ್ಯೋಗ ದರವು ಏಪ್ರಿಲ್ ಮತ್ತು ಮಾರ್ಚ್ ನಲ್ಲಿ ಒಟ್ಟು ನಿರುದ್ಯೋಗ ದರವು 7.60%ಯಿಂದ 7.80% ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕೋವಿಡ್ ನಂತಹ ಸಾಂಕ್ರಮಿಕ ರೋಗಗಳು ಹರಡುವ ಮುನ್ನವೆ ಕಾರ್ಮಿಕರು,ಕಾರ್ಮಿಕ ಬಲದಿಂದ ಹೊರಗುಳಿದಿದ್ದಾರೆ.ಇಂದು ಈ ಕಾರ್ಮಿಕರ ನಿರ್ಗಮನವು ನಿರುದ್ಯೋಗ ದರದಲ್ಲಿ ಕುಸಿತವನ್ನು ಉಂಟುಮಾಡುತ್ತದೆ, ಎಂದು ” ಭಾರತದ ಆರ್ಥಿಕತೆ ಮೇಲ್ವಿಚಾರಣೆಯ ಕೇಂದ್ರದ ಮುಖ್ಯಸ್ಥ ಮಹೇಶ್ ವ್ಯಾಸ್ ತಿಳಿಸಿದ್ದಾರೆ.
ಭಾರತದ ಆರ್ಥಿಕತೆ ಹಾಗೂ ನಿರುದ್ಯೋಗದಲ್ಲಿ ಏರಿಳಿತವಿದ್ದರೂ ಸಹ ಸ್ವಿಗ್ಗಿ, ಝೋಮಾಟೊ, ಒಲಾ, ಊಬರ್, ಪಿಕ್ಲಿನಂತಹ ಗಿಗ್ ಉದ್ಯೋಗಿಗಳು ಇಂದು ಹೆಚ್ಚು ಬಳಕೆಯಲ್ಲಿದ್ದಾರೆ. ಕಲಿತವರು ಕಲಿಯದೇ ಇರುವವರಿಗೆ ನಿರುದ್ಯೋಗದ ಸಮಸ್ಯೆ ಹೊಗಾಲಾಡಿಸಲು ದೇಶದ ಆರ್ಥಿಕತೆ ಹೆಚ್ಚಿಸಲು ಇದೊಂದು ಭಾರತೀಯ ಪ್ರಜೆಗಳಿಗೆ ಸರಿಯಾದ ಸವಾವಕಾಶ.
ಸರ್ಕಾರಿ ಕೆಲಸಗಳನ್ನು ಅಕ್ರಮವಾಗಿ ವಂಚಿಸಿ ಹುದ್ದೆ ಗಿಟ್ಟಿಸಿಕೊಳ್ಳುತ್ತಿರುವುದು ತಿಳಿದೇ ಇದೆ ಅದೇ ಸಾಲಿನಲ್ಲಿ ಬಿಹಾರ್ ಮತ್ತು ಉತ್ತರ್ ಪ್ರದೇಶದಲ್ಲಿ ಉದ್ಯೋಗದ ನೇಮಕಾತಿ ಹಿಂಸಾಚಾರಕ್ಕೆ ತಿರುಗಿತು. ಇಂತಹ ಸಂಧರ್ಭದಲ್ಲಿ ಇನ್ನು ಅನಕ್ಷರಸ್ಥರ ಪಾಡೇನಾಗಬೇಕು?
ಫೆಬ್ರವರಿಯಲ್ಲಿ ಘೋಷಿಸಲಾದ ಸರ್ಕಾರದ ಬಜೆಟ್ ಮುಂದಿನ ಆರು ವರ್ಷಗಳಲ್ಲಿ 6ಮಿಲಿಯನ್ನ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದ್ದರು ಇಂದು ಉದ್ಯೋಗಕ್ಕಾಗಿ ಹಾತೊರೆಯುತ್ತಿರುವವರ ಸಂಖ್ಯೆ ಹೆಚ್ಚು.
ಭಾರತದಲ್ಲಿ ಪದವೀಧರನ್ನಾಗಿ ಮಾಡುವ 5 ವಿಶ್ವವಿದ್ಯಾಲಯಗಳಲ್ಲಿ ಒಬ್ಬ ವಿದ್ಯಾರ್ಥಿಯಾದರು ನಿರುದ್ಯೋಗಿಯಾಗಿರುತ್ತಾನೆ.ಇದರ ಕುರಿತು ಹೇಳಿದ ವಿದ್ಯಾರ್ಥಿ ಪ್ರಮೋದ್ ಲಾಲ್ ಆಡಳಿತ ವ್ಯವಹಾರ ಶಾಸ್ತ್ರದಲ್ಲಿ ಪದವೀಧರರಾಗಿ.ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿತಾವು ತಿಳುವಳಿಕೆ ಪಡೆದಿದ್ದಾರೆಂದು ಭಾವಿಸಿ ಕೆಲವೊಂದು ಸಂದರ್ಶನಗಳಿಗೆ ಭೇಟಿ ನೀಡಿದ್ದಾರೆ. “ಶಿಕ್ಷಣವು ಉದ್ಯೋಗ ಗಿಟ್ಟಿಸಿ ಕೊಡುತ್ತದೆಂಬ ಯಾವ ಗ್ಯಾರೆಂಟಿಯು ಇಲ್ಲ.ನಾನೆ ಎಷ್ಟೋ ಕಂಪನಿಗಳಿಗೆ ಸಂದರ್ಶನಕ್ಕೆ ಭೇಟಿ ನೀಡಿ ನಿರಾಶಿತನಾಗಿದ್ದೇನೆ” ಎಂದು ತಿಳಿಸಿದ್ದಾರೆ .
ಚೀನಾದಲ್ಲಿ 60% ಕ್ಕಿಂತ ಹೆಚ್ಚು ಉದ್ಯೋಗದಲ್ಲಿ ತೊಡಗಿದ್ದಾರೆ.ಭಾರತದಲ್ಲಿ, ಮೋದಿ ಅಧಿಕಾರಕ್ಕೆ ಬಂದಾಗ, ಸರಿಸುಮಾರು 1 ಶತಕೋಟಿ ಜನಸಂಖ್ಯೆಯಲ್ಲಿ ಸುಮಾರು 46% ಜನರು ಮಾತ್ರ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಭಾರತದ ಆರ್ಥಿಕತೆಯು ತುಂಬಾ ಮಂದಗತಿಯಲ್ಲಿದೆ, ಜನರು ಉದ್ಯೋಗ ಮಾರುಕಟ್ಟೆಯಿಂದ ಹೊರಗುಳಿದಿದ್ದಾರೆ. ನಿರುದ್ಯೋಗ ದರವು ಶೇಕಡಾವಾರು ಪಾಯಿಂಟ್‌ನಿಂದ ಕಡಿಮೆಯಾಗುವುದರಿಂದ ಜನರು ಉದ್ಯೋಗ ಮಾರುಕಟ್ಟೆಯಿಂದ ಹೊರಬಿದ್ದರೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಆರ್ಥಿಕ ವಿಶ್ಲೇ಼ಷಕ ವೇಣು ಹೇಳಿದರು.