ಮೈಸೂರು: ಕೇಂದ್ರ ಸರ್ಕಾರವು ಕಾಶ್ಮೀರದ ಭದ್ರತೆ ವಿಚಾರದಲ್ಲಿ ಜನರಿಗೆ ಟೋಪಿ ಹಾಕಿದೆ ಎಂದು ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
“ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು ಆದರೆ ಅಲ್ಲಿ ಭದ್ರತೆ ವೈಫಲ್ಯ ಉಂಟಾಗಿದೆ. ಹಾಗಾದರೆ ಇವರು ಮಾಡಿದ್ದು ಬರಿ ಭಾಷಣನಾ. ಭದ್ರತೆ ವಿಚಾರದಲ್ಲಿ ಕೇಂದ್ರ ಸರಕಾರ ಜನರಿಗೆ ಟೋಪಿ ಹಾಕಿದೆ” ಎಂದು ಕಿಡಿಕಾರಿದರು.
ಘಟನೆ ನಡೆದ ಬಳಿಕ ಏನೇ ಕ್ರಮಕೈಗೊಂಡರು ಹೋದ 26 ಜೀವ ಮತ್ತೆ ವಾಪಸ್ ತರಲು ಸಾಧ್ಯನಾ. ಪುಲ್ವಾಮ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು, ಯಾರಿಗೆ ಗೊತ್ತಿದೆ ಹೇಳಿ. ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯ ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದೆ, ನನ್ನ ಮಾತು ನಿಜವಾಗಿದೆ ಎಂದರು.
ಇದನ್ನೂ ಓದಿ: ಡಿ. ರೂಪಾ ಮೌದ್ಗಿಲ್‌ಗೆ ಎಡಿಜಿಪಿ ಹುದ್ದೆ: ಎರಡು ತಿಂಗಳಲ್ಲಿ ಪರಿಗಣಿಸಿ – ಹೈಕೋರ್ಟ್
ಪಾಕ್ ಪ್ರಜೆಗಳನ್ನು ವಾಪಾಸ್ ಕಳುಹಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರದ ಸೂಚನೆಗೆ ನಾವು ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನ ಪ್ರಜೆಗಳು ಇದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರದ ಸೂಚನೆಯನ್ನ ನಾವು ಪಾಲಿಸುತ್ತೇವೆ, ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಸರ್ವ ಪಕ್ಷ ಸಭೆಗೆ ಪ್ರಧಾನಿ ಗೈರು ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಅವರು ಇಂತಹ ಸಭೆಗಿಂತ ಮಹತ್ವದ ಸಭೆ ಯಾವುದಾದರೂ ಇದೆಯಾ ಹೇಳಿ. ಚುನಾವಣಾ ಪ್ರಚಾರದ ಭಾಷಣ ಮುಖ್ಯನಾ, ಸಭೆ ಮುಖ್ಯನಾ, ಇವರಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿದ್ಯಾ? ಎಂದು ಕಿಡಿಕಾರಿದರು.
ಯುದ್ಧ ಅನಿವಾರ್ಯ ಇಲ್ಲ:
ಉಗ್ರರ ದಾಳಿಗೆ ಸಂಬಂಧಿಸಿ ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ ಎಂದು ಹೇಳಿದ ಸಿಎಂ ನಾವು ಯಾವತ್ತು ಯುದ್ಧದ ಪರ ಇಲ್ಲ. ಯುದ್ಧದ ಬದಲು ಭದ್ರತೆಯನ್ನ ಬಿಗಿ ಮಾಡಿಕೊಳ್ಳಬೇಕಿದೆ. ನಾವು ಯಾವತ್ತು ಶಾಂತಿಯ ಪರ. ಯುದ್ಧದ ಬಗ್ಗೆ ಯೋಚನೆ ಬೇಡ. ಭದ್ರತೆಯನ್ನ ಬಿಗಿ ಮಾಡಿ ಎಂದು ಹೇಳಿದರು.
ಇದನ್ನೂ ನೋಡಿ: IPL 2025 | ಪ್ಲೇಆಫ್ ಲೆಕ್ಕಾಚಾರ ಶುರು: ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? Janashakthi Media