ಲಖನೌ: ಐದು ವರ್ಷಗಳ ಹಿಂದೆ ದಾಖಲಾದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಸಿಬಿಐ ವಿಚಾರಣೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುರುವಾರ ಹಾಜರಾಗುವ ಸಾಧ್ಯತೆಯಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯು ಆಗಿರುವ ಅವರು ಇಲ್ಲಿನ ಪಕ್ಷದ ಕಚೇರಿಯಲ್ಲಿ ಪಿಡಿಎ “ಪಿಚ್ಡಾ (ಹಿಂದುಳಿದ ವರ್ಗಗಳು), ದಲಿತ ಮತ್ತು ಅಲ್ಪಸಂಖ್ಯೆಯ (ಅಲ್ಪಸಂಖ್ಯಾತರು)” ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ, ಹಾಗಾಗಿ ಇಲ್ಲಿಯವರೆಗೆ ಎಲ್ಲಿಯೂ ಹೋಗುವ ಯೋಜನೆ ಹಾಕಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಮಾಜವಾದಿ ಪಕ್ಷದ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷ ರಾಜ್‌ಪಾಲ್ ಕಶ್ಯಪ್, “ಅಖಿಲೇಶ್ ಅವರು ಇಂದು ಪಕ್ಷದ ಕಚೇರಿಯಲ್ಲಿ ಪಿಡಿಎ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಮಾತನಾಡಿ “ಅವರು ಲಕ್ನೋದಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲಿಗೂ ಹೋಗುತ್ತಿಲ್ಲ” ಎಂದು ಹೇಳಿದ್ದಾರೆ.
ಇದನ್ನೂಓದಿ: ಈ ಹಿಂದೆ ಗುಹೆಗೆ, ಈಗ ನೀರಿಗೆ, ಮುಂದಿನ ಬಾರಿ ಚಂದ್ರನಲ್ಲಿಗೆ – ಪ್ರಕಾಶ ರೈ
ಅಖಿಲೇಶ್ ಯಾದವ್ ಅವರಿಗೆ ಸಿಬಿಐ ನೋಟಿಸ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ನನ್ನ ಬಳಿ ವಿವರವಾದ ಮಾಹಿತಿ ಇಲ್ಲ, ಆದರೆ ಅವರು ಇಂದು ದೆಹಲಿಗೆ ಹೋಗುತ್ತಿಲ್ಲ ಎಂಬುದು ಖಚಿತವಾಗಿದೆ” ಎಂದು ಹೇಳಿದ್ದಾರೆ.
ಸಿಆರ್‌ಪಿಸಿಯ ಸೆಕ್ಷನ್ 160 ರ ಅಡಿಯಲ್ಲಿ ನೀಡಲಾದ ನೋಟಿಸ್‌ನಲ್ಲಿ, ಫೆಬ್ರವರಿ 29 ರಂದು ತನ್ನ ಮುಂದೆ ಹಾಜರಾಗುವಂತೆ ಸಿಬಿಐ ಅಖಿಲೇಶ್ ಯಾದವ್ ಅವರಿಗೆ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಆರ್‌ಪಿಸಿಯ ಈ ಸೆಕ್ಷನ್‌ನ ಈ ವಿಭಾಗವು ಪೊಲೀಸ್ ಅಧಿಕಾರಿಗೆ ತನಿಖೆಯಲ್ಲಿ ಸಾಕ್ಷಿಗಳನ್ನು ಕರೆಸಿಕೊಳ್ಳಲು ಅವಕಾಶ ನೀಡುತ್ತದೆ. “ಅವರು ಆರೋಪಿಯಲ್ಲ, ಸಾಕ್ಷಿ ಮಾತ್ರ” ಎಂದು ಬೆಳವಣಿಗೆಯ ಬಗ್ಗೆ ತಿಳಿದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂಓದಿ: ಸುಳ್ಳು ಹೇಳಿದ ಬಿಜೆಪಿ ನಾಯಕರು; ಅದನ್ನು ಹರಡಿದ ಪ್ರಜಾವಾಣಿ ಸಹಿತ ಕನ್ನಡದ ಮಾಧ್ಯಮಗಳು!
ಇ-ಟೆಂಡರ್ ಪ್ರಕ್ರಿಯೆಯ ಉಲ್ಲಂಘನೆಯ ಆರೋಪದಲ್ಲಿ ಗಣಿಗಾರಿಕೆ ಗುತ್ತಿಗೆಯನ್ನು ನೀಡುವುದಕ್ಕೆ ಸಂಬಂಧಿಸಿ ಅಖಿಲೇಶ್ ಯಾದವ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು. ಅವರು ಮುಖ್ಯಮಂತ್ರಿಯಾಗಿದ್ದ 2012 -16ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ್ದರು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗಣಿಗಾರಿಕೆಗೆ ನಿಷೇಧ ಹೇರಿದ್ದರೂ ಅಕ್ರಮವಾಗಿ ಪರವಾನಗಿ ನವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
2019ರಲ್ಲಿ ದಾಖಲಾದ ಪ್ರಕರಣಗಳ ಈ ನೋಟಿಸ್‌ಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2019 ರಲ್ಲಿ ಲೋಕಸಭೆ ಚುನಾವಣೆ ಇದ್ದ ಕಾರಣ ಕೆಲವು ವಿಷಯಗಳಲ್ಲಿ ನನಗೆ ನೋಟಿಸ್ ಬಂದಿತ್ತು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿರುವಾಗ ಮತ್ತೊಮ್ಮೆ ನೋಟಿಸ್ ಬರುತ್ತಿದೆ ಎಂದು ಹೇಳಿದ್ದರು. ಸಮಾಜವಾದಿ ಪಕ್ಷವನ್ನು ಬಿಜೆಪಿ ಭಾರಿ ಗುರಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. “ನನಗೆ ಗೊತ್ತು, ಚುನಾವಣೆ ಬಂದಾಗ, ನೋಟಿಸ್ ಸಹ ಬರುತ್ತದೆ, ಏಕೆ ಈ ಆತಂಕ? ಕಳೆದ 10 ವರ್ಷಗಳಲ್ಲಿ ನೀವು (ಬಿಜೆಪಿ) ಸಾಕಷ್ಟು ಕೆಲಸ ಮಾಡಿದ್ದರೆ, ನೀವು ಯಾಕೆ ನರ್ವಸ್ ಆಗಿದ್ದೀರಿ?” ಎಂದು ಕೇಳಿದ್ದಾರೆ.
ವಿಡಿಯೊ ನೋಡಿ: ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್ ಇದೆ: ಜಸ್ಟೀಸ್ ಎಚ್.ಎನ್ ನಾಗಮೋಹನದಾಸ್ Janashakthi Media