ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು

ಡಿಜಿಟಲ್‍ ಪ್ರಚಾರ ಮತ್ತು ನಿಧಿ ಸಂಗ್ರಹ ಕುರಿತು ಚುನಾವಣಾ ಆಯೋಗಕ್ಕೆ ಯೆಚುರಿ ಪತ್ರ ದೆಹಲಿ:  ಚುನಾವಣೆಗಳು ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುವಂತೆ…

ಅದಾನಿಗೆ ತಿರುವನಂತಪುರಂ ಏರ್‌ಪೋರ್ಟ್‌ ಹಸ್ತಾಂತರಕ್ಕೆ ಭಾರಿ ವಿರೋಧ

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನೂ ಕಡೆಗಣಿಸಲಾಗಿದೆ: ಪಿಣರಾಯಿ ವಿಜಯನ್‍   ತಿರುವನಂತಪುರಂ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಯಮಿ ಗೌತಮ್‌…

ಫೇಸ್ಬುಕ್ “ರಾಜಕೀಯ ತಾರತಮ್ಯದ” ಸುತ್ತಮುತ್ತ

ಫೇಸ್ಬುಕ್ ಭಾರತದಲ್ಲಿ ರಾಜಕೀಯ ನೀತಿಗಳಲ್ಲಿ ತಾರತಮ್ಯ ಅನುಸರಿಸುತ್ತಿದೆ: ಆರೋಪ ನವದೆಹಲಿ: ಸಾಮಾಜಿಕ  ಜಾಲ ತಾಣಗಳಲ್ಲಿ ದ್ವೇಷ ಭಾಷಣಗಳ ಬಗ್ಗೆ ಅಮೆರಿಕದ ‘ವಾಲ್‍…

ಕ್ಷಮೆ ಕೇಳುವುದಿಲ್ಲ, ಯಾವ ಮನವಿಯನ್ನೂ ಮಾಡುವುದಿಲ್ಲ: ಪ್ರಶಾಂತ್ ಭೂಷಣ್

ನ್ಯಾಯಾಲಯವು ನೀಡುವ ಯಾವುದೇ ಶಿಕ್ಷೆಯನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ ನವ ದೆಹಲಿ:  ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂಧನೆ ಪ್ರಕರಣದಲ್ಲಿ ಅವರನ್ನು…

ವಿಚಾರಣೆ ಮುಂದೂಡುವಂತೆ ಭೂಷಣ್‌ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ತೀರ್ಪು ಪರಿಶೀಲನೆ ಅರ್ಜಿ ಪರಿಗಣಿಸುವವರೆಗೂ ವಿಚಾರಣೆ ಮುಂದೂಡಲು ಮನವಿ ಮಾಡಿದ್ದ ಭೂಷಣ್‌ ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನ ವಿರುದ್ಧ ಸುಪ್ರೀಂ…

ಅದಾನಿ ಗ್ರೂಪ್ ಗೆ ದೇಶದ 3 ವಿಮಾನ ನಿಲ್ದಾಣ ಗುತ್ತಿಗೆ: ಕೇಂದ್ರ ಸಂಪುಟ ಒಪ್ಪಿಗೆ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ   ನವದೆಹಲಿ: ಸಾರ್ವಜನಿಕ ಖಾಸಗಿ ಸಹಭಾಗಿತ್ವದ(ಪಿಪಿಪಿ) ಮೂಲಕ ಭಾರತದ…

ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಸಿಇಟಿ ನಡೆಸಲು ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪನೆ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಕಂಪ್ಯೂಟರ್ ಆಧಾರಿತ…

ಗಾಂಧಿ ಕುಟುಂಬದ ಹೊರತಾದವರು ಅಧ್ಯಕ್ಷರಾಗಲಿ: ಪ್ರಿಯಾಂಕಾ ಗಾಂಧಿ

ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಾವು ನಮ್ಮ ನಾಯಕ (ಬಾಸ್) ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ: ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಘಾತಕಾರಿ ಸೋಲನುಭವಿಸಿದ…

ಪ್ರಶಾಂತ್ ಭೂಷಣ್ ದೋಷಿ : ಪ್ರಜ್ಞಾವಲಯದಿಂದ ವ್ಯಾಪಕ ಆಕ್ರೋಶ

  “ಆತಂಕಕಾರಿ” ತೀರ್ಪು:  ಸೀತಾರಾಮ್ ಯೆಚೂರಿ ಸಿಪಿಐಎಂ  ಪ್ರಧಾನ ಕಾರ್ಯದರ್ಶಿ  ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ…

ಫೇಸ್‌ಬುಕ್‌’ ವಿರುದ್ಧ ತನಿಖೆಗೆ ಒತ್ತಾಯಿಸಿ ಜುಕರ್ ಬರ್ಗೆಗೆ ಕಾಂಗ್ರೆಸ್‌ ಪತ್ರ

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದ ಕಾಂಗ್ರೆಸ್ ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಫೇಸ್ ಬುಕ್ ಸಂಬಂಧದ ಕುರಿತು…

ಫೇಸ್ಬುಬಕ್-ಬಿಜೆಪಿ ನಂಟಿನ ತನಿಖೆಗೆ ಜೆಪಿಸಿ ರಚಿಸುವಂತೆ ಸಿಪಿಐ(ಎಂ) ಆಗ್ರಹ

ಹಗೆತನ ಉತ್ತೇಜನೆಯ ವಿರುದ್ಧ ತನ್ನದೇ ನೀತಿಯನ್ನು ಭಾರತದಲ್ಲಿ ಅನುಸರಿಸದ ಫೇಸ್‍ಬುಕ್ ದೆಹಲಿ: ಅಮೆರಿಕಾದ ‘ವಾಲ್‍ ಸ್ಟ್ರೀಟ್ ಜರ್ನಲ್’ ಪತ್ರಿಕೆ ಜಗತ್ತಿನ ಸಾಮಾಜಿಕ…

ಫೇಸ್‌ಬುಕ್‌ ಕುರಿತ ಮಾಧ್ಯಮ ವರದಿ ನಂತರ ಬೆದರಿಕೆ: ದೂರು

ದೆಹಲಿ ಪೊಲೀಸರಿಗೆ ಫೇಸ್‌ಬುಕ್‌ನ ಇಂಡಿಯಾದ ಉನ್ನತ ಅಧಿಕಾರಿ ಅಂಕಿ ದಾಸ್  ದೂರು ನವದೆಹಲಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಮುಖಂಡರ ದ್ವೇಷ…

 NEET-JEE ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಕಾರ

ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡುವುದು ಸರಿಯಲ್ಲ   ನವದೆಹಲಿ: ಕೊರೋನಾ ವೈರಸ್ ಇರುವ ಕಾರಣ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ NEET…

ಪ್ರಶಾಂತ ಭೂಷಣ ಕುರಿತ ತೀರ್ಪು: ಅಸಹಿಷ್ಣುತೆಯ ಪ್ರದರ್ಶನ -ಸಿಪಿಐ(ಎಂ) ಪೊಲಿಟ್ ಬ್ಯುರೊ

ತೀರ್ಪನ್ನು ಮರುಪರಿಶೀಲಿಸುವುದು, ಶಿಕ್ಷೆ ವಿಧಿಸದಿರುವುದು ಒಳ್ಳೆಯದು ನವದೆಹಲಿ: ಹಿರಿಯ ವಕೀಲ ಪ್ರಶಾಂತ ಭೂಷಣ ಅವರು ನ್ಯಾಯಾಲಯದ ನಿಂದನೆ ಮಾಡಿದ್ದಾರೆ ಎಂದುಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಕೊಟ್ಟಿರುವ…

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮಹೇಂದ್ರ ಸಿಂಗ್‍ ಧೋನಿ, ಸುರೇಶ್‍ ರೈನಾ ವಿದಾಯ

ನವದೆಹಲಿ: ಭಾರತ ಕ್ರಿಕೆಟ್‍ ತಂಡದ ಯಶಸ್ವಿ ನಾಯಕನೆಂದೇ ಖ್ಯಾತವಾಗಿರುವ ಮಹೇಂದ್ರಸಿಂಗ್‍ ಧೋನಿ  ಮತ್ತು ಎಡಗೈ ಬ್ಯಾಟ್ಸ್‍ಮನ್‍ ಸುರೇಶ್‍ ರೈನಾ  ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

ಎಂ.ಎಸ್‍.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಣೆ ಮಾಡಲಿದ್ದಾರೆ ಎಂದು ಎರಡು ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು. ಆದರೆ ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದ ಧೋನಿ ಈಗ ವಿದಾಯ ಘೋಷಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ https://www.instagram.com/p/CD6ZQn1lGBi/ ವಿಡಿಯೊವನ್ನು ಪೋಸ್ಟ್‌ ಮಾಡಿರುವ ಧೋನಿ,

ನಿಮ್ಮ ಪ್ರೀತಿ, ಅಭಿಮಾನ ಮತ್ತು ಬೆಂಬಲಕ್ಕೆ ನನ್ನ ಧನ್ಯವಾದಗಳು. ಇಂದು (ಶನಿವಾರ) ಸಂಜೆ 7.29ಕ್ಕೆ ಕ್ಕೆ ನಾನು ನಿವೃತ್ತಿ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಎಸ್ ಧೋನಿ ಪಾದಾರ್ಪಣೆ ಮಾಡಿದ್ದರು. ಧೋನಿ ನೇತೃತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಕಪ್ ಗೆದ್ದು ಬೀಗಿತ್ತು.ಭಾರತಕ್ಕೆ ಎರಡು ಬಾರಿ ವಿಶ್ವಕಪ್ ತಂದುಕೊಂಡ ಕೀರ್ತಿ ಧೋನಿಗೆ ಸಲ್ಲುತ್ತದೆ. ಧೋನಿ ಕೊನೆಯ ಬಾರಿ 2019 ವಿಶ್ವಕಪ್​ನಲ್ಲಿ ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು.

2019 ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ರಂಗದಿಂದ ದೂರವುಳಿದಿದ್ದರು. ಸುದೀರ್ಘ ವಿಶ್ರಾಂತಿಯಲ್ಲಿದ್ದ ಮಹಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡುತ್ತಾರ ಅಥವಾ ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು. ಅಲ್ಲದೆ ಟಿ-20 ವಿಶ್ವಕಪ್‌ನಲ್ಲೂ ಭಾಗವಹಿಸುವರೇ ಎಂಬುದು ಅನುಮಾನವೆನಿತ್ತು. ಈ ಮಧ್ಯೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದದಿಂದಲೂ ವಿಶ್ವಕಪ್ ವಿಜೇತ ಮಾಜಿ ನಾಯಕರನ್ನು ಹೊರಗಿಡಲಾಗಿತು. ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಿಕೆಟ್ ರಂಗದಿಂದ ದೂರವುಳಿದಿದ್ದ 38ರ ಹರೆಯದ ಮಹೇಂದ್ರ ಸಿಂಗ್ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸುವ ಮೂಲಕ ಭಾರತ ತಂಡದಿಂದ ದೂರ ಸರಿದಿದ್ದಾರೆ.

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಎಸ್ ಧೋನಿ ಪದಾರ್ಪಣೆ ಮಾಡಿದ್ದರು. ಧೋನಿ ನೇತೃತ್ವದಲ್ಲಿ ಭಾರತ 2007ರ ಟಿ-20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಕಪ್ ಗೆದ್ದು ಬೀಗಿತ್ತು. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಎಂಎಸ್ ಧೋನಿ ಅವರು ಐಪಿಎಲ್ ನಲ್ಲಿ ಮಾತ್ರ ಆಡಲಿದ್ದಾರೆ. ’ಕ್ಯಾಪ್ಟನ್ ಕೂಲ್‘ ಎಂದೇ ಖ್ಯಾತರಾಗಿರುವ ಧೋನಿ ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವರು. ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲು ಅವರು ಶುಕ್ರವಾರ ಚೆನ್ನೈಗೆ ಬಂದಿಳಿದ್ದಾರೆ

ಜಾರ್ಖಂಡ್ ರಾಜಧಾನಿ ರಾಂಚಿಯ ಧೋನಿ ಹೆಚ್ಚಾಗಿ ಬ್ಯಾಟಿಂಗ್ ಮಾಡಿದ್ದು 5 ಅಥವಾ 7ನೇ ಕ್ರಮಾಂಕದಲ್ಲಿ. ಆದರೂ 350 ಏಕದಿನ ಪಂದ್ಯಗಳಿಂದ 10773 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ10 ಶತಕ ಮತ್ತು 73 ಅರ್ಧಶತಕಗಳು ಇವೆ.90 ಟೆಸ್ಟ್‌ಗಳಲ್ಲಿ 4876 ರನ್‌ ಗಳನ್ನು ಕಲೆಹಾಕಿದ್ದರು. ಅದರಲ್ಲಿ ಆರು ಶತಕ, ಒಂದು ದ್ವಿಶತಕ ಮತ್ತು 33 ಅರ್ಧಶತಕಗಳು ಸೇರಿವೆ.ಟಿ20 ಕ್ರಿಕೆಟ್‌ನಲ್ಲಿ 98 ಪಂದ್ಯಗಳನ್ನು ಆಡಿ 4432 ರನ್‌ಗಳನ್ನು ಗಳಿಸಿದ್ದಾರೆ. ಎರಡು ಅರ್ಧಶತಕಗಳು ಇವೆ.

ವಿಶ್ವಾಸ ಗೆದ್ದ ಅಶೋಕ್ ಗೆಹ್ಲೋಟ್ ಸರ್ಕಾರ

ಆಂತರಿಕ ಭಿನ್ನಮತದಿಂದ ಬಂಡಾಯವೆದ್ದಿದ್ದ ಸಚಿನ್ ಪೈಲಟ್ ರಾಹುಲ್, ಪ್ರಿಯಾಂಕ, ಹಿರಿಯ ಕಾಂಗ್ರೆಸ್ಸಿಗರ ಮನವೊಲಿಕೆಯಿಂದ ಮರಳಿದ್ದ ಸಚಿನ್ ಪೈಲಟ್ ವಿಶ್ವಾಸಮತ ಯಾಚನೆ ವೇಳೆ…

ವಿಪಕ್ಷಗಳ ಸಾಲಿನ ಪಕ್ಕದಲ್ಲಿ ಕುಳಿತ ಬಂಡಾಯಗಾರ ಸಚಿನ್ ಪೈಲಟ್

–      ವಿಶ್ವಾಸಮತ ಕೋರಲು ಸಜ್ಜಾಗಿರುವ ಕಾಂಗ್ರೆಸ್ ಸರ್ಕಾರ –      ತಾವು ಕಾಂಗ್ರೆಸ್‌ ಪಕ್ಷದ ಅತ್ಯಂತ ನಿಷ್ಠಾವಂತ ಕಟ್ಟಾಳು ಎಂದ ಪೈಲಟ್ ಜೈಪುರ:…

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ದೋಷಿ: ಸುಪ್ರೀಂ ಕೋರ್ಟ್

ಕಳೆದ ಆರು ವರ್ಷಗಳಲ್ಲಿ ‘ಭಾರತದ ಪ್ರಜಾಪ್ರಭುತ್ವದ ನಾಶ’ದಲ್ಲಿ ಸುಪ್ರೀಂ ಕೋರ್ಟ್ ಪಾತ್ರ ವಹಿಸಿದೆ ಎಂದು ಟ್ವೀಟ್‌ ಮಾಡಿದ್ದ ಪ್ರಶಾಂತ್ ಭೂಷಣ್  …

ಅಂಡಮಾನ್ -ನಿಕೋಬಾರ್ ನಲ್ಲಿ ಕೊರೊನಾ ಗಂಭೀರ: ತುರ್ತು ಕ್ರಮಕ್ಕೆ ಯೆಚೂರಿ ಆಗ್ರಹ

  • ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಿ- ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ನವದೆಹಲಿ: ಕೊರೊನಾ ಸೋಂಕು ಬಹಳ ಅಪಾಯಕಾರಿಯಾಗಿ ಹರಡುತ್ತಿರುವ ಅಂಡಮಾನ್‌  ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ  ತುರ್ತುಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್‌ ಹಲವಾರು ದ್ವೀಪಗಳಿರುವ ಪ್ರದೇಶ. ಒಂದು ದ್ವೀಪದಿಂದ ಇನ್ನೊಂದಕ್ಕೆ ಹೋಗಲು ಬಹಳ ಸಮಯ ತಗಲುತ್ತದೆ. ಈ ದ್ವೀಪಸಮೂಹದ ಜನಸಂಖ್ಯೆಯ ಅರ್ಧದಷ್ಟು ಉತ್ತರ ಅಂಡಮಾನಿನಲ್ಲಿದೆ. ಇಡೀ ದ್ವೀಪ ಪ್ರದೇಶದಲ್ಲಿ ಪೋರ್ಟ್‍ ಬ್ಲೇರ್ ನಲ್ಲಿ ಮಾತ್ರವೇ ಒಂದೇ ಒಂದು ಕೋವಿಡ್‍ ತಪಾಸಣೆ ಕೇಂದ್ರ ಮತ್ತು ಆಸ್ಪತ್ರೆ ಇರುವುದು. ಅಲ್ಲಿಂದ ಪೋರ್ಟ್‍ ಬ್ಲೇರ್ ಗೆ ಬರಲು ಹಲವು ದಿನಗಳೇ ಹಿಡಿಸುತ್ತವೆ.  ಯಾವುದೇ ಕೊವಿಡ್‍ ತಪಾಸಣೆಯ ಫಲಿತಾಂಶ ಬರಲು ಎಂಟು ದಿನಗಳಾಗುತ್ತವೆ. ಆ ವೇಳೆಗೆ ರೋಗಿಯ ಸ್ಥಿತಿ ಸಂಪೂರ್ಣ ಹದಗೆಟ್ಟಿರುತ್ತದೆ. ಅಲ್ಲದೆ ಈ ಆಸ್ಪತ್ರೆಯ 18 ಡಾಕ್ಟರುಗಳಿಗೆ ಕೊವಿಡ್‍ ಸೋಂಕು ತಗಲಿದೆ ಎಂದೂ ವರದಿಯಾಗಿದೆ. ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಇದು ಇಲ್ಲಿ ಬಹಳ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.   ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಪ್ರದೇಶವು ಕೇಂದ್ರಾಡಳಿತ ಪ್ರದೇಶವಾಗಿದ್ದು,  ನೇರವಾಗಿ ಕೇಂದ್ರ ಗೃಹ ಮಂತ್ರಾಲಯದ ನಿಯಂತ್ರಣದಲ್ಲಿದೆ.  ಆದ್ದರಿಂದ ಕೋವಿಡ್-19 ಸೋಂಕು  ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಜನಗಳಿಗೆ ತುರ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೆಚೂರಿ ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರಧಾನಮಂತ್ರಿಗಳು ಈ ದ್ವೀಪಸಮೂಹದಲ್ಲಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ದ್ವೀಪಗಳಿಗೆ ಉನ್ನತ ವೇಗದ ಬ್ರಾಡ್‍ ಬ್ಯಾಂಡ್‍ ಸಂಪರ್ಕ ನೀಡುವುದಾಗಿ ಪ್ರಕಟಿಸಿದ್ದಾರೆಂದು ವರದಿಯಾಗಿದೆ. ಇದು ಹೊಸದೇನಲ್ಲ. ಹಲವು ವರ್ಷಗಳ ಹಿಂದೆಯೇ ಭಾರತ ಸರಕಾರ ಜಾರಿಗೊಳಿಸಿರುವ ಯೋಜನೆ.  ಈಗಾಗಲೇ ಚೆನ್ನೈನಿಂದ ನೀರಿನಡಿಯಲ್ಲಿ ಕೇಬಲ್‍ಗಳನ್ನು ಹಾಕುವ ಕೆಲಸವೂ ಆರಂಭವಾಗಿದೆ ಎನ್ನಲಾಗಿದೆ. ಅದೇನೇ ಇರಲಿ, ಈ ದ್ವೀಪಗಳ ಜನಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ಯಾವುದೇ ಕ್ರಮ ಸ್ವಾಗತಾರ್ಹ.  ಆದರೆ ಈಗ ತುರ್ತಾಗಿ ಕೇಂದ್ರ ಸರಕಾರ ಜನಗಳ ಬದುಕನ್ನು ಕಾಪಾಡಲು ಮತ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಮ್ಮ ಪತ್ರದಲ್ಲಿ ಯೆಚೂರಿ ಒತ್ತಾಯಿಸಿದ್ದಾರೆ.

ಕೊವಿಡ್‍ ತಪಾಸಣಾ ಕೇಂದ್ರಗಳನ್ನು ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿಸಬೇಕು, ಕೋವಿಡ್‍ ರೋಗಿಗಳ ಆರೈಕೆಗೆ ಹೆಚ್ಚು ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು, ಮತ್ತು ಜನಗಳಿಗೆ ಪರಿಹಾರಗಳನ್ನು ಯುದ್ಧೋಪಾದಿಯಲ್ಲಿ ತಲುಪಿಸಬೇಕಾಗಿದೆ. -ಸೀತಾರಾಮ್‍ ಯೆಚುರಿ

ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬೇರೆ ಚುನಾಯಿತ ಸಂಸ್ಥೆಗಳಿಲ್ಲ. ಆದ್ದರಿಂದ ಜನಗಳು ಕೇಂದ್ರ ಗೃಹ ಮಂತ್ರಾಲಯದತ್ತವೇ ನೋಡಬೇಕಾಗುತ್ತದೆ. ಆದ್ದರಿಂದ “ನಿಮ್ಮ ಸರಕಾರದ ನೇರ ಹತೋಟಿಗೆ ಬರುವ ಇಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು, ಮತ್ತು ಮೇಲೆ ಹೇಳಿದ ಅತ್ಯಗತ್ಯ ಕ್ರಮಗಳನ್ನಾದರೂ ಯುದ್ಧಸ್ತರದಲ್ಲಿ ಕೈಗೊಳ್ಳಬೇಕು” ಎಂದು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸೀತಾರಾಮ್‍ ಯೆಚುರಿ ಮನವಿ ಮಾಡಿದ್ದಾರೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ಬರೆದಿರುವ ಪತ್ರವನ್ನು ಸಿಪಿಎಂ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. https://www.cpim.org/pressbriefs/andaman-grave-health-emergency

ಅಶೋಕ್ ಗೆಹ್ಲೋಟ್ – ಸಚಿನ್ ಪೈಲಟ್ ಭೇಟಿ

–      ಒಂದು ತಿಂಗಳ ಹಿಂದೆ ಅಶೋಕ್ ಗೆಹ್ಲೋಟ್ ವಿರುದ್ಧ  ಬಂಡಾಯವೆದ್ದಿದ್ದ ಸಚಿನ್ ಪೈಲಟ್   ಜೈಪುರ: ರಾಜಸ್ಥಾನ ರಾಜಕಾರಣದಲ್ಲಿ ಗುರುವಾರ ಕ್ಷಿಪ್ರಗತಿಯಲ್ಲಿ…