ರಾಯಚೂರು: ಜಿಲ್ಲೆಯಲ್ಲಿ ಬೆಕ್ಕು ಜ್ವರ ಹೆಚ್ಚಾಗಿದ್ದು ಕಳೆದ 15 ದಿನಗಳಲ್ಲಿ ಸುಮಾರು 38 ಬೆಕ್ಕುಗಳು ಸಾವನ್ನಪ್ಪಿವೆ. ರಾಜ್ಯದಲ್ಲೆಡೆ ಬೆಕ್ಕುಗಳಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಎಫ್ಪಿವಿ ವೈರಾಣು ಈ ಬಾರಿ ರಾಯಚೂರಿನ ಬೆಕ್ಕುಗಳನ್ನ ಹೆಚ್ಚು ಬಾಧಿಸುತ್ತಿದೆ. ರಾಯಚೂರು
ಇದನ್ನೂ ಓದಿ:ಮಹಾನಗರ ಪಾಲಿಕೆಯ 35 ಸದಸ್ಯರ ಸದಸ್ಯತ್ವ ಅನರ್ಹ: ಕಲಬುರಗಿ ಹೈಕೋರ್ಟ್
ರಾಯಚೂರಿನಲ್ಲಿ ಇದುವರೆಗೆ 100 ಕ್ಕೂ ಹೆಚ್ಚು ಬೆಕ್ಕುಗಳಲ್ಲಿ ಫಿಲೈನ್ ಪ್ಯಾನ್ ಲೀಕೊಪೇನಿಯಾ ವೈರಸ್ ಪತ್ತೆಯಾಗಿದೆ. ಇದರಲ್ಲಿ 62 ಬೆಕ್ಕುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿವೆ. ಕಾಯಿಲೆಗೆ ನಿರ್ಧಿಷ್ಟ ಚಿಕಿತ್ಸೆ ಇಲ್ಲದಿದ್ದರೂ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಬೆಕ್ಕುಗಳು ಸಾವನ್ನಪ್ಪುತ್ತಿವೆ. ಹೈ ಫೀವರ್, ವಾಂತಿ, ಬೇಧಿ, ನಿರ್ಜಲೀಕರಣದಿಂದ ಬೆಕ್ಕುಗಳ ಸಾಯುತ್ತಿವೆ. ಬೆಕ್ಕಿನಿಂದ ಬೇರೆ ಪ್ರಾಣಿಗಳಿಗೆ, ಮನುಷ್ಯರಿಗೆ ವೈರಸ್ ಹರಡುವುದಿಲ್ಲ ಅನ್ನೋದು ಸಮಾಧಾನಕರ ಸಂಗತಿ.
ಇದನ್ನೂ ಓದಿ:ನವದೆಹಲಿ| 1 ಲಕ್ಷ ಕೋಟಿ ರೂ ಮೌಲ್ಯದ 2025-26ನೇ ಬಜೆಟ್ ಮಂಡನೆ
ಮೊದಲೆಲ್ಲಾ ಪರ್ಷಿಯನ್ ಬೆಕ್ಕುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ, ಈಗ ಎಲ್ಲಾ ಬೆಕ್ಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಕ್ರಾಸ್ ಬ್ರೀಡ್ ಬೆಕ್ಕುಗಳಲ್ಲಿ ಹೆಚ್ಚಾಗಿ ವೈರಸ್ ಕಂಡು ಬರುತ್ತಿದೆ.ವಾಕ್ಸಿನ್ ಹಾಕಿಸದ ಬೆಕ್ಕುಗಳು ವೈರಸ್ ಬಾಧೆಗೆ ತುತ್ತಾಗುತ್ತಿವೆ. ಪ್ರತೀ ವರ್ಷಕ್ಕಿಂತ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿದ್ದು ಬೆಕ್ಕು ಪ್ರೀಯರು ಆತಂಕಕ್ಕೊಳಗಾಗಿದ್ದಾರೆ.
ಇದನ್ನೂ ನೋಡಿ : ತರಬೇತಿ! ತರಬೇತಿ! ಕಲಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಶಿಕ್ಷಕ! – ಸಿ.ಆರ್.ಬಾಬುಖಾನ್ ಮತ್ತು ಗುರುರಾಜ ದೇಸಾಯಿ ಮಾತುಕತೆ