ಬಾಗಲಕೋಟೆ: ಬಾಗಲಕೋಟೆ ನವನಗರದ ಬ್ಯಾಂಕ್ನ ಸಿಬ್ಬಂದಿ ಸಂತೋಷ ಕಬಾಡೆ ಎಂಬುವವರು 1 ಕೋಟಿ 60 ಲಕ್ಷ ರೂಪಾಯಿ ಲಪಟಾಯಿಸಿ ಪತ್ನಿ ಹಾಗೂ ತಾಯಿ ಮತ್ತು ತನ್ನ ಖಾತೆಗೆ ಜಮಾ ಮಾಡಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎಸ್ಬಿಐ ಬ್ಯಾಂಕ್ ಕ್ಯಾಶಿಯರ್ ಸಂತೋಷ ಕಬಾಡೆ ಬಂಧಿತ ವ್ಯಕ್ತಿ. ಈತ ಟೆಲ್ಲರ್ ಐಡಿ ನಂಬರ್ ಬಳಸಿ ತನ್ನ ಪತ್ನಿ ಪೂಜಾ ಹಾಗೂ ತಾಯಿ ಜನಾಬಾಯಿ ಖಾತೆಗೆ 1.60 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ. ಬಳಿಕ ಎಚ್ಡಿಎಫ್ಸಿಯ ತನ್ನ ಖಾತೆಗೆ ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿರುವುದು ದಾಖಲೆಗಳ ಮೂಲಕ ತಿಳಿದು ಬಂದಿದೆ. ಕ್ಯಾಷಿಯರ್ನಿಂದಲೇ ವಂಚನೆ ಆಗಿರುವ ಬ್ಯಾಂಕ್ ವ್ಯವಸ್ಥಾಪಕ ಅಲ್ಲಪ್ಪ ಲಕ್ಷೆಟ್ಟಿ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದೇಗೆ?: ಎಸ್ಬಿಐ ಬ್ಯಾಂಕ್ ಆಂತರಿಕ ನಿಯಮಗಳ ಪ್ರಕಾರ ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಖಾತೆಗಳಿಗೆ ಹಣ ಸಂದಾಯವಾಗಿದ್ದರೆ ಮೇಲಧಿಕಾರಿಗಳಿಗೆ ಅಲರ್ಟ್ ಮೆಸೇಜ್ ಹೋಗುತ್ತದೆ. ಜೂನ್ 4ರಂದು ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಪೂಜಾ ಸಂತೋಷ ಕಬಾಡಿ ಅವರ ಖಾತೆಗೆ ಹೆಚ್ಚಿನ ಹಣ ಸಂದಾಯ ಆಗಿರುವುದು ಕಂಡು ಬಂದಿದೆ. ತಕ್ಷಣವೇ ಬ್ಯಾಂಕ್ ಅಧಿಕಾರಿಯು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಸೇರಿ ಪರಿಶೀಲನೆ ನಡೆಸಿದಾಗ ಬ್ಯಾಂಕ್ ಕ್ಯಾಷಿಯರ್, ಸಹಾಯಕ ವ್ಯವಸ್ಥಾಪಕ ಸಂತೋಷ ಕಬಾಡಿ ಬ್ಯಾಂಕ್ಗೆ ದ್ರೋಹ ಮಾಡಿರುವುದನ್ನು ಬೆಳಕಿಗೆ ಬಂದಿದೆ.
ಕ್ಯಾಷಿಯರ್ ಆಗಿರುವ ಸಂತೋಷ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಹುದ್ದೆ ಹೊಂದಿದ್ದು, ಕರೆನ್ಸಿ ಚಸ್ಟ್ ನಿರ್ವಹಣೆ ಮಾಡುತ್ತಿದ್ದ. ತನಗೆ ನೀಡಿದ್ದ ಟೆಲ್ಲರ್ ಐಡಿ ನಂಬರ್ ಬಳಸಿ ಬ್ಯಾಂಕ್ಗೆ ಮೋಸ ಮಾಡಿರುವುದು ಅಧಿಕಾರಿಗಳ ಪರಿಶೀಲನೆಯಿಂದ ತಿಳಿದು ಬಂದಿದೆ. ಬ್ಯಾಂಕ್ಗೆ ವಂಚಿಸಿ ದೋಚಿದ 1.60 ಕೋಟಿ ರೂಪಾಯಿಯನ್ನು ಸಂತೋಷ, ಸ್ಟಾಕ್ ಮಾರ್ಕೆಟ್ಗೆ ಸುರಿದಿದ್ದು, ಅಲ್ಲಿ ನಷ್ಟ ಅನುಭವಿಸಿದ್ದ ಎಂದು ತಿಳಿದು ಬಂದಿದೆ.
Such bank officials should be hanged in public so that it will be a lesson to such fraud persons