“ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳನ್ನು ನಿಯೋಜಿಸುವಾಗ ‘ಜಾತಿವಾದಿ ಒಲವು’ ಕಾಣಿಸಿದೆ.” ಎಂಬ ಲೇಖನ ಪ್ರಕಟಿಸಿದ್ದ ಕಾರಣ ಪತ್ರಕರ್ತನ ವಿರುದ್ಧ ಉತ್ತರ ಪ್ರದೇಶ ಪೋಲಿಸರು ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರ
ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟಿನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್.ಭಟ್ಟಿ ತಮ್ಮ ಆದೇಶದಲ್ಲಿ ಹೀಗೆ ಹೇಳಿದ್ದಾರೆ: “ಪ್ರಜಾಸತ್ತಾತ್ಮಕ ದೇಶಗಳಲ್ಲಿ, ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇರುವ ಸ್ವಾತಂತ್ರ್ಯವನ್ನು ಗೌರವಿಸಲಾಗುತ್ತದೆ. ಪತ್ರಕರ್ತರ ಹಕ್ಕುಗಳನ್ನು ಸಂವಿಧಾನದ ಪರಿಚ್ಛೇದ 19(1)ಎ ಅಡಿಯಲ್ಲಿ ಸಂರಕ್ಷಿಸಲಾಗಿದೆ. ಪತ್ರಕರ್ತರ ಬರಹಗಳು ಸರ್ಕಾರದ ಟೀಕೆ ಎಂದು ಪರಿಭಾವಿಸಿದ ಮಾತ್ರಕ್ಕೆ, ಬರಹಗಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಜಡಿಯಲಾಗದು.”
ಆ ಲೇಖನದಿಂದಾಗಿ ಉತ್ತರ ಪ್ರದೇಶ ಪೋಲಿಸರು ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವಾರು ನಿಬಂಧನೆಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿ ಅಪರಾಧಗಳು) ರ ಅಡಿಯಲ್ಲಿ ‘ಕ್ಷುಲ್ಲಕ’ ಎಫ್.ಐ.ಆರ್. ದಾಖಲಿಸಿದ್ದಾರೆ.
ಇದನ್ನು ಓದಿ : ಹರಿಯಾಣ ವಿಧಾನಸಭೆ ಚುನಾವಣೆ ; ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಗೆಲುವು
“ಇಂದಿನ ಮುಖ್ಯಮಂತ್ರಿಯನ್ನು ಅದರಲ್ಲಿ ದೇವರ ಅವತಾರಕ್ಕೆ ಹೋಲಿಸಲಾಗಿದೆ ಮತ್ತು ಅದರಿಂದಾಗಿ ಅವರ ಆಡಳಿತವು ಜಾತಿ ವ್ಯವಸ್ಥೆಯ ವಿಮರ್ಶಾತ್ಮಕ ವಿಶ್ಲೇಷಣೆಯಿಂದ ಹೊರತಾಗಿದೆ” ಎಂದು ಆ ಎಫ್.ಐ.ಆರ್.ನ ಮುನ್ನುಡಿಯಲ್ಲಿಯೇ ಹೇಳಲಾಗಿದೆ.
ಆ ಎಫ್.ಐ.ಆರ್. ನಲ್ಲಿ ಮುಖ್ಯಮಂತ್ರಿಯವರ ಕುರಿತು ಹೀಗೆ ವಿವರಿಸಲಾಗಿದೆ:”ಗೌರವಾನ್ವಿತ ಯೋಗಿ ಆದಿತ್ಯನಾಥ್ ಮಹಾರಾಜ್ ಜೀ ಯವರು ದೇವರ ಅವತಾರದಂತಿದ್ದಾರೆ. ಜನಪ್ರಿಯತೆಯಲ್ಲಿ ನಮ್ಮ ದೇಶದ ಬೇರಾವ ಮುಖ್ಯಮಂತ್ರಿಗಳೂ ಅವರ ಸಮಕ್ಕೆ ಬರಲಾರರು. ಭಾರತದ ಬೇರಾವ ಮುಖ್ಯಮಂತ್ರಿಗಳಿಗಿಂತಲೂ ಹೆಚ್ಚು ಅನುಯಾಯಿಗಳನ್ನು ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಹೊಂದಿದ್ದಾರೆ. ಆ ಮಹಾರಾಜ್ ಜೀಯವರು ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶವು ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ಭಾರತದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದೆ. ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶವು ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಂಗಗಳಲ್ಲಿ ಅತ್ಯುತ್ತಮ ಸ್ಥಾನ ಗಳಿಸಿದೆ. ಅವರು ಲೌಕಿಕ ಜೀವನವನ್ನು ತ್ಯಜಿಸಿರುವುದರಿಂದ ಅವರು ಯಾವ ಜಾತಿಗೂ ಸೇರಿದವರಲ್ಲ, ಅವರೊಬ್ಬ ಕೇವಲ ಸನ್ಯಾಸಿ ಅಷ್ಟೆ . .”
“ಸತ್ಯವನ್ನು ರಕ್ಷಿಸುವುದು ಪತ್ರಕರ್ತರ ಕರ್ತವ್ಯವಾಗಿರುತ್ತದೆ, ಅವರು ತಮ್ಮ ಕ್ರಿಯೆಗೆ ಉತ್ತರದಾಯಿಯಾಗಿರಬೇಕು, ಮತ್ತು ಯಾವುದೇ ಭಯ ಅಥವಾ ಒಲವಿಲ್ಲದೇ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು” ಎಂದು ಪತ್ರಕರ್ತರು ಆ ಅರ್ಜಿಯಲ್ಲಿ ತಿಳಿಸಿದ್ದಾರೆ. ಸರ್ಕಾರ
(ಸುದ್ದಿ ಮೂಲ: ದಿ ಹಿಂದು 05.10.2024 ಪುಟ 12)
ಇದನ್ನು ನೋಡಿ : ಪ್ಯಾಲೆಸ್ಟೀನ್ ಪರವಾಗಿ ಧ್ವನಿಯೆತ್ತುವುದು ಅಪರಾಧವೇ? ಪ್ರತಿಭಟನೆಕಾರರ ಪ್ರಶ್ನೆ Janashakthi Media